ಎರಡೂವರೆ ವರ್ಷದ ಬಾಲಕಿಗೆ ಕಿರುಗುಳ ನೀಡಲೆತ್ನ: ಆರೋಪಿ ಸೆರೆ

ಕಾಸರಗೋಡು: ಕಾಸರಗೋಡು ಪೊಲೀಸ್ ಠಾಣೆಗೊಳಪಟ್ಟ ಪ್ರದೇಶದ ಎರಡೂವರೆ ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ  ಆ ಬಾಲಕಿಯ ಸಂಬಂಧಿಕನಾದ ೫೦ ವರ್ಷದ ಆರೋಪಿಯನ್ನು ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ನವಂಬರ್ ೨೦ರಂದು ಆರೋಪಿ ಬಾಲಕಿಯ ಮನೆಯಲ್ಲಿ ಆಕೆಗೆ ಕಿರುಕುಳ ನೀಡಲೆತ್ನಿಸಿರುವುದಾಗಿ ಆರೋಪಿಸಿ ಬಾಲಕಿಯ ತಾಯಿ ಪೊಲೀಸರಿಗೆ ದೂರು  ನೀಡಿದ್ದರು. ಅದರಂತೆ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಮತ್ತೆ ಅಬ್ಬರಿಸತೊಡಗಿದ ಮಳೆ

ತಿರುವನಂತಪುರ: ದಕ್ಷಿಣ ಭಾರತದ ಕರಾವಳಿ ರಾಜ್ಯಗಳಾದ ಕೇರಳ, ಪುದುಚ್ಚೇರಿ, ಕರ್ನಾಟಕ ಮತ್ತು ಕರ್ನಾಟಕದ ಹಲವೆಡೆಗಳಲ್ಲಿ ಭಾರೀ ಮಳೆ ಸುರಿಯತೊಡಗಿದ್ದು, ಇದು ನವಂಬರ್ ೨೯ರ ವರೆಗೆ  ಮುಂದುವರಿಯುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಈ ಅವಧಿಯಲ್ಲಿ ಭಾರೀ ಮಳೆ ಸುರಿದು ಜಲಪ್ರಳಯ ಸೃಷ್ಟಿಗೂ ದಾರಿಮಾಡಿಕೊಡಲಿದೆಯೆಂದು ಇಲಾಖೆ  ಮುನ್ನೆಚ್ಚರಿಕೆ  ನೀಡಿದೆ. ಆದ್ದರಿಂದ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಪುದುಚ್ಚೇರಿ ರಾಜ್ಯಗಳಲ್ಲಿ ಕಟ್ಟೆಚ್ಚರ ಸೂಚನೆ ನೀಡಲಾಗಿದೆ. ಪುದುಚ್ಚೇರಿಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದರ ಹೊರತಾಗಿ ಆಂಧ್ರಪ್ರದೇಶ ದಲ್ಲೂ …

ಶಬರಿಮಲೆಯಲ್ಲಿ ಬಾಲಕಿಗೆ ಹಾವಿನ ಕಡಿತ

ಶಬರಿಮಲೆ: ಶಬರಿಮಲೆ ಕ್ಷೇತ್ರ ದರ್ಶನಕ್ಕೆ ತಲುಪಿದ ಆರರ ಹರೆಯದ ಬಾಲಕಿಗೆ ಹಾವಿನ ಕಡಿತವುಂಟಾಗಿದೆ. ಕಾಟಾಕಡದಿಂದ ತಲುಪಿದ ಬಾಲಕಿಗೆ ಹಾವಿನ ಕಡಿತವುಂಟಾಗಿದ್ದು, ಅದೃಷ್ಟವಶಾತ್ ಆರೋಗ್ಯ ಸ್ಥಿತಿ ಉತ್ತಮವಾಗಿದೆಯೆಂದು ತಿಳಿದು ಬಂದಿದೆ. ಸ್ವಾಮಿ ಅಯ್ಯಪ್ಪನ್ ರಸ್ತೆಯಲ್ಲಿ ಪ್ರಥಮ ತಿರುವಿನಲ್ಲಿ ಘಟನೆ ನಡೆದಿದೆ. ಬಾಲಕಿಯನ್ನು ಕೋಟ್ಟಯಂ ಮೆಡಿಕಲ್ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಲಾಯಿತು. ಈ ಬಾರಿಯ  ತೀರ್ಥಾಟನೆಗೆ ಕ್ಷೇತ್ರ ಬಾಗಿಲು ತೆರೆದ ಬಳಿಕ ಇದು ಎರಡನೆ ಘಟನೆಯಾಗಿದೆ.

ಕಾರ್ಯಕ್ರಮದಲ್ಲಿ ಸಿಹಿ ಹಂಚುತ್ತಿದ್ದಾಗ  ಕುಸಿದುಬಿದ್ದು ಗೃಹಣಿ ಮೃತ್ಯು

ಕುಂಬಳೆ: ಮೊಮ್ಮಗಳ ಕೂದಲು ಕತ್ತರಿಸುವ ಕಾರ್ಯಕ್ರಮದ ಬಳಿಕ ಅತಿಥಿಗಳಿಗೆ ಸಿಹಿ ಹಂಚುತ್ತಿದ್ದಾಗ ಗೃಹಿಣಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಉಳುವಾರು ಜುಮಾ ಮಸೀದಿ ಬಳಿಯ ನಿವಾಸಿ ಸಿ.ಟಿ. ಅಬ್ದುಲ್ ರಹ್ಮಾನ್ ಎಂಬವರ ಪತ್ನಿ ಹಾತಿಕ  (೫೩) ಮೃತಪಟ್ಟ  ದುರ್ದೈವಿಯಾ ಗಿದ್ದಾರೆ.  ನಿನ್ನೆ ಇವರ ಮನೆಯಲ್ಲಿ ಮಗಳ ಮಗವಿನ ಕೂದಲು ಕತ್ತರಿಸುವ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರ ಮದ ಬಳಿಕ ಮಧ್ಯಾಹ್ನ ಅತಿಥಿಗಳಿಗೆ ಸಿಹಿ ಹಂಚುತ್ತಿದ್ದಾಗ ಹಾತಿಕ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ  ಜೀವ ರಕ್ಷಿಸಲಾಗಲಿಲ್ಲ. …

ಮಜೀರ್‌ಪಳ್ಳದಲ್ಲಿ ಭಾರತ್ ಲಾಟರಿ ಏಜೆನ್ಸಿ ಮಾರಾಟ ಮಾಡಿದ ಟಿಕೆಟ್‌ಗೆ ೧೨ ಕೋಟಿ ರೂ.

ಉಪ್ಪಳ: ರಾಜ್ಯ ಪೂಜಾ ಬಂಪರ್ ಲಾಟರಿಯ ಪ್ರಥಮ ಬಹುಮಾನ ೧೨ ಕೋಟಿ ರೂ. ಮಜೀರ್‌ಪಳ್ಳದ ಭಾರತ್ ಲಾಟರಿ ಏಜೆನ್ಸಿಯಿಂದ ಮಾರಾಟ ಮಾಡಿದ ಟಿಕೆಟ್ ನಂಬ್ರ ಜೆಸಿ ೨೫೩೧೯೯ಕ್ಕೆ ಲಭಿಸಿದೆ. ಜತೆಗೆ ದ್ವಿತೀಯ ಬಹುಮಾನವಾದ ಒಂದು ಕೋಟಿ ರೂ. ಲಭಿಸಿದ ಟಿಕೆಟ್‌ನ್ನು ಕೂಡಾ ಇವರೇ ಮಾರಾಟ ಮಾಡಿದ್ದಾರೆ. ಮೂಲತಃ ಕಣ್ಣೂರು ಮಣಕಡವ್ ನಿವಾಸಿಗಳಾದ ಜೋಜೋ ಜೋಸಫ್- ಮೇರಿ ಕುಟ್ಟಿ ದಂಪತಿ ಕಳೆದ ೧೩ ವರ್ಷದಿಂದ ಮೊರತ್ತಣೆ ಬಟ್ಟಿಪದವುನಲ್ಲಿ ವಾಸಿಸುತ್ತಿದ್ದು, ೫ ವರ್ಷದಿಂದ ಲಾಟರಿ ಮಾರಾಟಕ್ಕೆ ತೊಡಗಿದ್ದಾರೆ. ಇವರು ವಾಹನದಲ್ಲಿ …

ಗುದದ್ವಾರದಲ್ಲಿ  ಬಚ್ಚಿಟ್ಟು ಸಾಗಿಸಿದ ೧.೯೫ ಕಿಲೋ ಚಿನ್ನ ವಶ

ಕಣ್ಣೂರು: ಯುವಕನೋರ್ವ ಒಂದು ಕಿಲೋ ೯೫ ಗ್ರಾಂ ಚಿನ್ನವನ್ನು ಗುದದ್ವಾರದೊಳಗೆ ಬಚ್ಚಿಟ್ಟು ಸಾಗಿಸಲೆತ್ನಿಸಿ ಸೆರೆಗೀಡಾದ ಘಟನೆ ನಡೆದಿದೆ. ಚಪ್ಪರಪದವು ಕೂವೇರಿಯ ಹಮೀದ್ ಮುಹಮ್ಮದ್ ಎಂಬಾತ ನನ್ನು ಇಂದು ಬೆಳಿಗ್ಗೆ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಸೆರೆಹಿಡಿದಿದೆ. ಇಂದು ಬೆಳಿಗ್ಗೆ ದುಬಾಯಿಯಿಂದ ಈತ ತಲುಪಿದ್ದನು. ವಿಮಾನ ನಿಲ್ದಾಣದಲ್ಲಿ ತಪಾಸಣೆ ಬಳಿಕ ಅಲ್ಲಿಂದ ಹೊರಬಂದ ಈತನ ಮೇಲೆ ಸಂಶಯಗೊಂಡು   ನಡೆಸಿದ ತಪಾಸಣೆ ವೇಳೆ ಚಿನ್ನವನ್ನು  ಮಾತ್ರೆ ರೂಪದಲ್ಲಾಗಿಸಿ ಗುದದ್ವಾರದಲ್ಲಿ ಬಚ್ಚಿಟ್ಟಿರುವುದು ತಿಳಿದುಬಂ ದಿದೆ. ವಶಪಡಿಸಿದ ಚಿನ್ನಕ್ಕೆ ೬೬.೭೭ ಲಕ್ಷ …

ನೇಪಾಳದಲ್ಲಿ ಮತ್ತೆ ಭೂಕಂಪ

ಕಾಠ್ಮಂಡು: ನೇಪಾಳದಲ್ಲಿ ಇಂದು ಮುಂಜಾನೆ ಮತ್ತೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ೪.೫ ತೀವ್ರತೆ ದಾಖಲಾಗಿದೆ ಎಂದು ನೇಪಾಳ ಭೂಕಂಪ ಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ನೇಪಾಳದ ಮಕ್ವಾನ್ಪುರ ಜಿಲ್ಲೆಯ ಚಟ್ಲಾಂಗ್ನೆನಲ್ಲಿ ಭೂಕಂಪ ಸಂಭವಿಸಿದೆ. ಯಾವುದೇ ಸಾವು ನೋವು ವರದಿಯಾಗಿಲ್ಲ. ನವೆಂಬರ್ ೩ರಂದು ಇಡೀ ನೇಪಾಳವನ್ನೇ ನಡುಗಿಸಿದ ೬.೪ ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದರಲ್ಲಿ ಭಾರೀ ಜೀವ ಹಾನಿ ಮತ್ತು ಆಸ್ತಿ ನಷ್ಟಉಂಟಾಗಿತ್ತು. ಅದರ ಬೆನ್ನಲ್ಲೇ ಇಂದು ಮತ್ತೆ ಭೂಕಂಪ ಉಂಟಾಗಿದೆ.

ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ: ನಾಲ್ವರು ಡಿವೈಎಫ್‌ಐ ಕಾರ್ಯಕರ್ತರ ಸೆರೆ, ನ್ಯಾಯಾಂಗ ಬಂಧನ

ಪಳಯಂಗಾಡಿ: ನವಕೇರಳ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಚಿವರುಗಳು ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಕಪ್ಪು ಪತಾಕೆ ಬೀಸಿ ಪ್ರತಿಭಟನೆ ನಡೆಸಿದ ಯೂತ್ ಕಾಂಗ್ರೆಸ್ ಮತ್ತು ಕೆಎಸ್‌ಯು ಸೇರಿದ ಏಳು ಮಂದಿ ಕಾರ್ಯಕರ್ತರ ಮೇಲೆ ಕಳೆದ ಸೋಮವಾರದಂದು ಸಂಜೆ ಪಳಯಂಗಾಡಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಡಿವೈಎಫ್‌ಐಯ ನಾಲ್ವರು ಕಾರ್ಯಕರ್ತರನ್ನು ಪಳಯಂಗಾಡಿ ಪೊಲೀಸರು ಬಂಧಿಸಿದ್ದರು. ಇವರು ನಿನ್ನೆ ಪೊಲೀಸ್ ಠಾಣೆಯಲ್ಲಿ ನೇರವಾಗಿ ಹಾಜರಾಗಿದ್ದಾರೆ. ಡಿವೈಎಫ್‌ಐಯ ಮಾಡಾಯಿ ಬ್ಲೋಕ್ ಜತೆ ಕಾರ್ಯದರ್ಶಿ ಪಿ. …

ನಕಲಿ ಆಪ್ ಮೂಲಕ  ೫೫ ಲಕ್ಷ ರೂ. ಲಪಟಾವಣೆ

ಕಾಸರಗೋಡು: ನಕಲಿ ಆಪ್ ಮೂಲಕ ಬ್ಯಾಂಕ್ ಖಾತೆಯಿಂದ ೫೫ ಲಕ್ಷ ರೂ. ಲಪಟಾಯಿಸಿರುವ ಬಗ್ಗೆ  ಪೊಲೀಸರಿಗೆ ದೂರು ನೀಡಲಾಗಿದೆ. ನೀಲೇಶ್ವರ ಚಿರಪುರಂ ಅಲನ್ ಕೇಳನ್ ನಿವಾಸಿ  ಕೆ.ಜೆ. ಜೋಸೆಫ್ ಈ ಬಗ್ಗೆ ನೀಲೇಶ್ವರ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ಸೈಬರ್ ಸೆಲ್‌ನ ಸಹಾಯದಿಂದ ತನಿಖೆ ಆರಂಭಿಸಿದ್ದಾರೆ. ಎಸ್‌ಬಿಐ ಸಿಬ್ಬಂದಿಗಳಾಗಿರುವ ಎಚ್‌ಆರ್‌ಎಂ ಸೈಟ್‌ನ ನಕಲಿ ಅಪ್ಲಿಕೇಶನ್ ತಯಾರಿಸಿ ತನ್ನ ಎರಡು ಬ್ಯಾಂಕ್  ಖಾತೆಗಳಿಂದಾಗಿ ತನಗೆ ತಿಳಿಯದೆ ಹಣ ಎಗರಿಸಲಾಗಿದೆ. ಕಳೆದ ಎಪ್ರಿಲ್ ೭ರಂದು …

ನಕಲಿ ಗುರುತು ಚೀಟಿ ಬಳಕೆ ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷರ ತನಿಖೆ

ತಿರುವನಂತಪುರ: ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ನಕಲಿ ಗುರುತು ಚೀಟಿ ಬಳಸ ಲಾಗಿದೆಯೆಂಬ ಪ್ರಕರಣಕ್ಕೆ ಸಂ ಬಂಧಿಸಿ ನೂತನ ರಾಜ್ಯ ಅಧ್ಯಕ್ಷ ರಾಹುಲ್ ಮಾಂಕುಟ್ಟತ್ತಿಲ್‌ರನ್ನು ಪೊಲೀಸರು ಇಂದು ತನಿಖೆಗೊಳ ಪಡಿಸಲಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಅಡೂರ್ ನಿಂದ ಕಸ್ಟಡಿಗೆ ತೆಗೆದ ನಾಲ್ವರು ಯೂತ್ ಕಾಂಗ್ರೆಸ್ ಕಾರ್ಯ ಕರ್ತರ ಬಂಧನ ದಾಖಲಿ ಸಲಾಗಿದೆ. ಅಭಿವಿಕ್ರಂ, ಬಿನಿಲ್ ಬಿನು, ಫೈನಿ ನೈನಾನ್, ವಿಕಾಸ್ ಕೃಷ್ಣ ಎಂಬಿವರು ಬಂಧಿತ ವ್ಯಕ್ತಿಗಳಾಗಿ ದ್ದಾರೆ. ಇವರಿಂದ೨೪ ನಕಲಿ ಗುರುತು ಚೀಟಿಗಳನ್ನು ಪತ್ತೆಹಚ್ಚಿರು ವುದಾಗಿ ಪೊಲೀಸರು …