ಕಾರ್ಯಕ್ರಮದಲ್ಲಿ ಸಿಹಿ ಹಂಚುತ್ತಿದ್ದಾಗ  ಕುಸಿದುಬಿದ್ದು ಗೃಹಣಿ ಮೃತ್ಯು

ಕುಂಬಳೆ: ಮೊಮ್ಮಗಳ ಕೂದಲು ಕತ್ತರಿಸುವ ಕಾರ್ಯಕ್ರಮದ ಬಳಿಕ ಅತಿಥಿಗಳಿಗೆ ಸಿಹಿ ಹಂಚುತ್ತಿದ್ದಾಗ ಗೃಹಿಣಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಉಳುವಾರು ಜುಮಾ ಮಸೀದಿ ಬಳಿಯ ನಿವಾಸಿ ಸಿ.ಟಿ. ಅಬ್ದುಲ್ ರಹ್ಮಾನ್ ಎಂಬವರ ಪತ್ನಿ ಹಾತಿಕ  (೫೩) ಮೃತಪಟ್ಟ  ದುರ್ದೈವಿಯಾ ಗಿದ್ದಾರೆ.  ನಿನ್ನೆ ಇವರ ಮನೆಯಲ್ಲಿ ಮಗಳ ಮಗವಿನ ಕೂದಲು ಕತ್ತರಿಸುವ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರ ಮದ ಬಳಿಕ ಮಧ್ಯಾಹ್ನ ಅತಿಥಿಗಳಿಗೆ ಸಿಹಿ ಹಂಚುತ್ತಿದ್ದಾಗ ಹಾತಿಕ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ  ಜೀವ ರಕ್ಷಿಸಲಾಗಲಿಲ್ಲ.

ಮೃತರು ಮಕ್ಕಳಾದ ರೌಫ್, ಮೊಹಮ್ಮದ್, ರಸೀನ, ಹಾಜಿರ, ತಾಹಿರ, ಖದೀಜ, ಅಳಿಯಂದಿರಾದ ಹನೀಫ, ಸಿದ್ದಿಕ್, ಅಬ್ದುಲ್ ಖಾದರ್, ಸಹೋದರ-ಸಹೋದರಿಯರಾದ ಅಬ್ದುಲ್ ರಹ್ಮಾನ್, ಮರಿಯಮ್ಮ, ಬೀಫಾತ್ತಿಮ, ಸೈನಬಿ, ಮೊಹಮ್ಮದ್,   ಯೂಸಫ್ ನಫೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page