ಗುದದ್ವಾರದಲ್ಲಿ  ಬಚ್ಚಿಟ್ಟು ಸಾಗಿಸಿದ ೧.೯೫ ಕಿಲೋ ಚಿನ್ನ ವಶ

ಕಣ್ಣೂರು: ಯುವಕನೋರ್ವ ಒಂದು ಕಿಲೋ ೯೫ ಗ್ರಾಂ ಚಿನ್ನವನ್ನು ಗುದದ್ವಾರದೊಳಗೆ ಬಚ್ಚಿಟ್ಟು ಸಾಗಿಸಲೆತ್ನಿಸಿ ಸೆರೆಗೀಡಾದ ಘಟನೆ ನಡೆದಿದೆ.

ಚಪ್ಪರಪದವು ಕೂವೇರಿಯ ಹಮೀದ್ ಮುಹಮ್ಮದ್ ಎಂಬಾತ ನನ್ನು ಇಂದು ಬೆಳಿಗ್ಗೆ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಸೆರೆಹಿಡಿದಿದೆ. ಇಂದು ಬೆಳಿಗ್ಗೆ ದುಬಾಯಿಯಿಂದ ಈತ ತಲುಪಿದ್ದನು. ವಿಮಾನ ನಿಲ್ದಾಣದಲ್ಲಿ ತಪಾಸಣೆ ಬಳಿಕ ಅಲ್ಲಿಂದ ಹೊರಬಂದ ಈತನ ಮೇಲೆ ಸಂಶಯಗೊಂಡು   ನಡೆಸಿದ ತಪಾಸಣೆ ವೇಳೆ ಚಿನ್ನವನ್ನು  ಮಾತ್ರೆ ರೂಪದಲ್ಲಾಗಿಸಿ ಗುದದ್ವಾರದಲ್ಲಿ ಬಚ್ಚಿಟ್ಟಿರುವುದು ತಿಳಿದುಬಂ ದಿದೆ. ವಶಪಡಿಸಿದ ಚಿನ್ನಕ್ಕೆ ೬೬.೭೭ ಲಕ್ಷ ರೂಪಾಯಿ ಮೌಲ್ಯ ಅಂದಾ ಜಿಸಲಾಗಿದೆ. ಚಿನ್ನದ ಬೆಲೆ ಗಗನಕ್ಕೇ ರುತ್ತಿರುವಾಗ ಅನಧಿಕೃತವಾಗಿ ಚಿನ್ನ ಸಾಗಾಟ ವ್ಯಾಪಕಗೊಂಡಿರುವುದಾಗಿ ತಿಳಿದುಬಂದಿದೆ. ಕಣ್ಣೂರು, ಕಲ್ಲಿ ಕೋಟೆ, ನೆಡುಂಬಾಶ್ಶೇರಿ, ತಿರು ವನಂತಪುರ ವಿಮಾನ ನಿಲ್ದಾಣ ಗಳಲ್ಲಿ ಇತ್ತೀಚೆಗೆ  ಭಾರೀ ಪ್ರಮಾ ಣದ ಚಿ ನ್ನ ವಶಪಡಿಸಲಾಗಿದೆ.

RELATED NEWS

You cannot copy contents of this page