ಮೀನು ಕಾರ್ಮಿಕ ನಿಗೂಢ ನಾಪತ್ತೆ: ಮೂರು ದಿನಗಳಿಂದ ತೀವ್ರ ಶೋಧ

ಮಂಜೇಶ್ವರ:  ಮೀನು ಕಾರ್ಮಿಕನೋರ್ವ ಕಳೆದ ಮೂರು ದಿನಗಳಿಂದ ನಿಗೂಢವಾಗಿ   ನಾಪತ್ತೆ ಯಾದ ಬಗ್ಗೆ ದೂರಲಾಗಿದ್ದು, ಇದರಿಂದ ಅವರಿಗಾಗಿ ಶೋಧ ತೀವ್ರಗೊಳಿಸ ಲಾಗಿದೆ. ಮಂಜೇಶ್ವರ ಚರ್ಚ್ ಬೀಚ್ ರಸ್ತೆ ಬಳಿಯ ನಿವಾಸಿ ದಿ| ಫೆಲಿಕ್ಸ್ ಮೊಂತೇರೋರ ಪುತ್ರ ರೋಷನ್ ಮೊಂತೇರೋ(೪೨) ನಾಪತ್ತೆಯಾದ ವ್ಯಕ್ತಿ. ಕಳೆದ ಶನಿವಾರ ರಾತ್ರಿ ೧೧.೪೫ರ ವರೆಗೆ ಇವರು ಮನೆಯಲ್ಲಿ ಇದ್ದರು. ಅನಂತರ  ಇವರು ನಾಪತ್ತೆಯಾಗಿದ್ದಾರೆ.    ಸಾಮಾನ್ಯವಾಗಿ ರಾತ್ರಿ ಹೊತ್ತಿನಲ್ಲಿ   ಮೀನುಗಾರಿಕೆಗೆ ತೆರಳುತ್ತಿದ್ದುದರಿಂದ ಅಂದು ಕೂಡಾ ಮೀನುಗಾರಿಕೆಗಾಗಿ ಹೋಗಿರಬಹುದೆಂದು ಮನೆಯವರು ಭಾವಿಸಿದ್ದರು.ಇದೇ ವೇಳೆ ಅವರ ಚಪ್ಪಲಿ …

ಬೇಡಡ್ಕದಲ್ಲಿ ಪೋಕ್ಸೋ ಪ್ರಕರಣ: ಇನ್ನೋರ್ವ ಸೆರೆ

ಬೇಡಗಂ: ಹದಿನೈದರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಇನ್ನೋ ರ್ವನನ್ನು ಬಂಧಿಸಲಾಗಿದೆ. ಕುಂಡುಚ್ಚಿ ನಿವಾಸಿ ಸತ್ಯ (೪೦) ಎಂಬಾತನನ್ನು  ಸ್ಪೆಷಲ್ ಮೊಬೈಲ್ ಸ್ಕ್ವಾಡ್ ಡಿವೈಎಸ್ಪಿ ನೇತೃತ್ವದ ತಂಡ ಬಂಧಿಸಿದೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ.  ಪ್ರಾಯಪೂರ್ತಿ ಯಾಗದ ಬಾಲಕಿಗೆ ಕಿರುಕುಳ ನೀಡಿದ ಸಂಬಂಧ ಈಮೊದಲು ಬೇಡಗಂ ಪೊಲೀಸರು ೧೫ ಪ್ರಕರಣಗಳನ್ನು ದಾಖಲಿಸಿ ಕೊಂಡಿದ್ದರು.  ಇದ ರಲ್ಲಿ ಆರು ಪ್ರಕರಣಗಳನ್ನು ಪರಿ ಶಿಷ್ಟ ಜಾತಿ-ವರ್ಗ  ನಿಯಮ ಪ್ರಕಾರ  ಎಸ್‌ಎಂಎಸ್‌ಗೆ ಹಸ್ತಾಂ ತರಿಸ ಲಾಗಿದೆ. ಇತರ …

ಮನೆ ಬಳಿಯಿಂದ ಬೈಕ್ ಕಳವು ಸಿಸಿ ಕ್ಯಾಮರಾದಲ್ಲಿ ಕಳ್ಳನ ಚಿತ್ರ ಪತ್ತೆ

ಉಪ್ಪಳ: ಮನೆ ಬಳಿ ನಿಲ್ಲಿಸಿದ್ದ ಬೈಕ್‌ನ್ನು ರಾತ್ರಿ ಹೊತ್ತಿನಲ್ಲಿ ಕಳವುಗೈದ ಘಟನೆ ನಡೆದಿದೆ. ಕುಂಜತ್ತೂರು ಪಳ್ಳ ನಿವಾಸಿಯೂ, ನಿವೃತ್ತ ಪೋಸ್ಟ್‌ಮೆನ್ ಭಾಸ್ಕರ ಎಂಬವರ ಪಲ್ಸರ್ ಬೈಕ್ ಈ ತಿಂಗಳ ೧೪ರಂದು ರಾತ್ರಿ ಕಳವಿಗೀಡಾಗಿದೆ. ಮನೆ ಬಳಿ ನಿಲ್ಲಿಸಿದ್ದ ಬೈಕ್ ೧೫ರಂದು ಬೆಳಿಗ್ಗೆ ನೋಡಿದಾಗ ನಾಪತ್ತೆಯಾಗಿತ್ತು. ಈ ಬಗ್ಗೆ ಭಾಸ್ಕರ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ಶೋಧ ನಡೆಸುತ್ತಿದ್ದಾರೆ. ಇದೇ ವೇಳೆ ಮನೆಯ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ೧೪ರಂದು ರಾತ್ರಿ ೧೧.೩೬ರ ವೇಳೆ ವ್ಯಕ್ತಿಯೋರ್ವ ಬೈಕ್‌ನಲ್ಲಿ …

೪೯.೫೦ ಲಕ್ಷ ರೂ. ಚಿನ್ನ ವಶ  ಕಾಸರಗೋಡು ನಿವಾಸಿ ಕಸ್ಟಡಿಗೆ

ಕಾಸರಗೋಡು: ಕಲ್ಲಿಕೋಟೆ ಕರಿಪ್ಪೂರ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ವಿಮಾನದಲ್ಲಿ ಗಲ್ಫ್‌ನಿಂದ ಬಂದಿಳಿದ ಕಾಸರಗೋಡು ನಿವಾಸಿಯಿಂದ ೪೯.೫೦ ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕಾಸರಗೋಡಿನ ಅಬ್ದುಲ್  ಜಲೀಲ್ ಎಂಬಾತನನ್ನು ಕಸ್ಟಮ್ಸ್ ತಂಡ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದೆ.

ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿ ಪಿ. ಬಿಜೋಯ್ ಅಧಿಕಾರ ಸ್ವೀಕಾರ

ಕಾಸರಗೋಡು: ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿ ಮೂಲತಃ ತಿರುವನಂತಪುರ ನಿವಾಸಿ ಪಿ ಬಿಜೋಯ್ ನಿನ್ನೆ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ. ತಿರುವನಂತಪುರ ಎಸ್.ಎಸ್.ಬಿ. ವಿಭಾಗದ ಎಸ್.ಪಿ ಆಗಿದ್ದ ಬಿಜೋಯ್‌ರನ್ನು ಕಾಸರಗೋಡಿಗೆ ವರ್ಗಾಯಿಸಲಾಗಿದೆ. ಇವರು ೧೯೯೬ರಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆಗಿಯೂ, ೨೦೧೦-೧೧ನೇ ವರ್ಷ ಕಾಸರಗೋಡು ಡಿವೈಎಸ್‌ಪಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ವಿಶೇಷ ಸೇವೆಗಾಗಿ ೨೦೧೫ರಲ್ಲಿ ಮುಖ್ಯಮಂತ್ರಿಯ ಚಿನ್ನದ ಪದಕ, ೨೦೧೮ರಲ್ಲಿ ರಾಷ್ಟ್ರಪತಿಯಿಂದ ಚಿನ್ನದ ಪದಕ ಪಿ. ಬಿಜೋಯ್‌ರಿಗೆ ಲಭಿಸಿತ್ತು. ೨೦೧೯ರಲ್ಲಿ ಅವರಿಗೆ ಐಪಿಎಸ್ ಲಭಿಸಿತ್ತು. …

ಪೊಸೋಟು ಮುಹಿಯುದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿಯಲ್ಲಿ ಆರ್ಥಿಕ ಅವ್ಯವಹಾರ ತನಿಖೆಗೆ ಅಧಿಕಾರಿಯ ನೇಮಕ

ಕುಂಬಳೆ: ಜಿಲ್ಲೆಯ ಹಳೆಯ ಮಸೀ ದಿಯಾದ ಪೊಸೋಟು ಮುಹಿಯು ದ್ದೀನ್ ಜುಮಾ ಮಸೀದಿ ಆಡಳಿತ ಸಮಿ ತಿಯಲ್ಲಿ ಭಾರೀ ಆರ್ಥಿಕ ಅವ್ಯವಹಾರ ನಡೆದಿದೆ ಯೆಂದು ದೂರಲಾಗಿದೆ. ಮಹಲ್ ನಿವಾಸಿಗಳಾದ ಅಬ್ದುಲ್ ರವೂಫ್, ಮೊಯ್ದೀನ್ ಕುಂಞಿ ಎಂಬಿವರ ನೇತೃತ್ವದಲ್ಲಿ ಕೇರಳ ರಾಜ್ಯ ವಖಫ್ ಬೋರ್ಡ್‌ಗೆ ದೂರು ನೀಡಲಾಗಿದೆ. ಅಧ್ಯಕ್ಷ ಅಬ್ದುಲ್ಲ ಎಂಬ ವ್ಯಕ್ತಿ ಆರ್.ಕೆ. ಬಾವ ಹಾಜಿ ನೇತೃತ್ವದಲ್ಲಿ ರುವ ಆಳಿತ ಸಮಿತಿ ವಿರುದ್ಧ ಆರ್ಥಿಕ ಅವ್ಯವಹಾರ ಆರೋಪಿಸಲಾಗಿದೆ. ೨೦೧೩ರಿಂದ ಸತತವಾಗಿ ಅಬ್ದುಲ್ಲ ಆರ್.ಕೆ. ಬಾವ ಹಾಜಿಯ ನೇತೃತ್ವದಲ್ಲಿ …

೫೩೫ ಪ್ಯಾಕೆಟ್ ತಂಬಾಕು ಉತ್ಪನ್ನ ವಶ

ಕಾಸರಗೋಡು: ಚೆರ್ಕಳದಲ್ಲಿ ವಿದ್ಯಾನಗರ ಪೊಲೀಸ್ ಇನ್ಸ್ ಪೆಕ್ಟರ್ ಪ್ರಮೋದ್‌ರ ನೇತೃತ್ವದ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳ ದಲ್ಲಿ ನಿಷೇಧ ಹೇರಲಾಗಿರುವ ೫೩೫ ಪ್ಯಾಕೆಟ್ ತಂಬಾಕು ಉತ್ಪ ನ್ನಗಳನ್ನು ಪತ್ತೆಹಚ್ಚಿ ವಶಪಡಿಸಿ ಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಬೇರ್ಕದ ಹಮೀದ್ (೫೧) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ರಾಜ್ಯಪಾಲರ ವಿರುದ್ಧ ಅರ್ಜಿ: ರಾಜ್ಯಪಾಲರ ಹೆಚ್ಚುವರಿ ಕಾರ್ಯದರ್ಶಿ, ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ನೋಟೀಸ್

ನವದೆಹಲಿ: ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಸಹಿ ಹಾಕಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೇರಳ ಮತ್ತು ತಮಿಳುನಾಡು ಸರಕಾರಗಳು ರಾಜ್ಯಪಾಲರ ವಿರುದ್ಧ ಸಲ್ಲಿಸಿರುವ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರ ಪೀಠ ನಿನ್ನೆ ವಿಚಾರಣೆ ಆರಂಭಿಸಿದ್ದು, ಆ ಬಗ್ಗೆ  ರಾಜ್ಯಪಾಲರ ಹೆಚ್ಚುವರಿ ಕಾರ್ಯದರ್ಶಿ ಮತ್ತು ಕೇಂದ್ರ ಸರಕಾರಕ್ಕೆ ನೋಟೀಸ್ ಜ್ಯಾರಿಗೊಳಿಸಿದೆ. ಮುಂದಿನ ಶುಕ್ರವಾರದೊಳಗೆ ಈ ನೋಟೀಸಿಗೆ ಸ್ಪಷ್ಟೀಕರಣ ನೀಡಬೇಕೆಂದು ನೋಟೀಸ್‌ನಲ್ಲಿ ನ್ಯಾಯಾಲಯ …

ಬದಿಯಡ್ಕ ಮಂಡಲ ಕಾಂಗ್ರೆಸ್‌ನಿಂದ ಇಂದಿರಾಗಾಂಧಿ ಜನ್ಮ ದಿನಾಚರಣೆ

ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ೧೦೯ನೇ ಜನ್ಮದಿನವನ್ನು ಆಚರಿಸಲಾಯಿತು. ಮಂಡಲ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನೇತಾರ ಬಡುವನ್ ಕುಂಞಿ ಗೋಳಿಯಡ್ಕ ಇಂದಿರಾಗಾಂಧಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಮಂಡಲ ಉಪಾಧ್ಯಕ್ಷ ಜಗನ್ನಾಥ ರೈ ಕರ್ಷಕ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಕಡಾರುಬೀಡು, ಕಾರಡ್ಕ ಬ್ಲಾಕ್ ಕಾರ್ಯದರ್ಶಿ ಶಾಫಿ ಗೋಳಿಯಡ್ಕ, ಮಂಡಲ ಕಾರ್ಯದರ್ಶಿ ಶಾಹುಲ್ ಹಮೀದ್, ಕೇಶವ …

ಮುಖ್ಯಮಂತ್ರಿಯ ಚರ್ಚೆಗೆ ಆಹ್ವಾನಿಸದ ಬಗ್ಗೆ ಬಸ್ ಮಾಲಕರ ಖಂಡನೆ

ಕಾಸರಗೋಡು: ನವಕೇರಳ ಸಭೆಗಾಗಿ ಜಿಲ್ಲೆಗೆ ತಲುಪಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅತಿಥಿ ಮಂದಿರದಲ್ಲಿ ನಡೆಸಿದ ಸಭೆಗೆ ಬಸ್ ಮಾಲಕರ ಸಂಘಟನೆಯನ್ನು ಆಹ್ವಾನಿಸದಿರುವುದು ಖಂಡನೀಯವೆಂದು ಜಿಲ್ಲಾ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ತಿಳಿಸಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ಉದ್ಯಮಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು, ವ್ಯಾಪಾರಿ ವ್ಯವಸಾಯಿ ಪ್ರತಿನಿಧಿಗಳ ಸಹಿತ ಹೆಚ್ಚಿನವರನ್ನು ಚರ್ಚೆಗೆ ಆಹ್ವಾನಿಸಿದ್ದರೂ ಜಿಲ್ಲಾಡಳಿತ ಬಸ್ ಮಾಲಕರ ಸಂಘವನ್ನು ಆಹ್ವಾನಿಸದಿರುವುದು ಪ್ರತಿಭಟನಾರ್ಹವೆಂದು ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ.