ಮೀನು ಕಾರ್ಮಿಕ ನಿಗೂಢ ನಾಪತ್ತೆ: ಮೂರು ದಿನಗಳಿಂದ ತೀವ್ರ ಶೋಧ

ಮಂಜೇಶ್ವರ:  ಮೀನು ಕಾರ್ಮಿಕನೋರ್ವ ಕಳೆದ ಮೂರು ದಿನಗಳಿಂದ ನಿಗೂಢವಾಗಿ   ನಾಪತ್ತೆ ಯಾದ ಬಗ್ಗೆ ದೂರಲಾಗಿದ್ದು, ಇದರಿಂದ ಅವರಿಗಾಗಿ ಶೋಧ ತೀವ್ರಗೊಳಿಸ ಲಾಗಿದೆ. ಮಂಜೇಶ್ವರ ಚರ್ಚ್ ಬೀಚ್ ರಸ್ತೆ ಬಳಿಯ ನಿವಾಸಿ ದಿ| ಫೆಲಿಕ್ಸ್ ಮೊಂತೇರೋರ ಪುತ್ರ ರೋಷನ್ ಮೊಂತೇರೋ(೪೨) ನಾಪತ್ತೆಯಾದ ವ್ಯಕ್ತಿ. ಕಳೆದ ಶನಿವಾರ ರಾತ್ರಿ ೧೧.೪೫ರ ವರೆಗೆ ಇವರು ಮನೆಯಲ್ಲಿ ಇದ್ದರು. ಅನಂತರ  ಇವರು ನಾಪತ್ತೆಯಾಗಿದ್ದಾರೆ.    ಸಾಮಾನ್ಯವಾಗಿ ರಾತ್ರಿ ಹೊತ್ತಿನಲ್ಲಿ   ಮೀನುಗಾರಿಕೆಗೆ ತೆರಳುತ್ತಿದ್ದುದರಿಂದ ಅಂದು ಕೂಡಾ ಮೀನುಗಾರಿಕೆಗಾಗಿ ಹೋಗಿರಬಹುದೆಂದು ಮನೆಯವರು ಭಾವಿಸಿದ್ದರು.ಇದೇ ವೇಳೆ ಅವರ ಚಪ್ಪಲಿ ಹಾಗೂ ಮೊಬೈಲ್ ಫೋನ್ ಮನೆ ಯಲ್ಲೇ ಕಂಡುಬಂದಿದೆ.  ಆದಿತ್ಯವಾರ ಬೆಳಿಗ್ಗಿನಿಂದ ಇವರಿಗಾಗಿ ಶೋಧ ನಡೆಸಲಾಯಿತಾದರೂ ಪತ್ತೆ ಹಚ್ಚಲಾಗಲಿಲ್ಲ. ಇದರಿಂದ   ಪತ್ನಿ   ರೇಖಾ ಮೊಂತೇರೋ ಮಂಜೇಶ್ವರ  ಪೊಲೀಸರಿಗೆ  ದೂರು ನೀಡಿದ್ದಾರೆ.ಚಪ್ಪಲಿ ಹಾಗೂ ಮೊಬೈಲ್ ಫೋನ್ ಮನೆಯಲ್ಲೇ ಬಿಟ್ಟು ರೋಷನ್ ಮೊಂತೇರೋ ಎಲ್ಲಿಗೆ  ಹೋಗಿರಬಹುದೆಂದು   ತಿಳಿದು ಬಂದಿಲ್ಲ. ಮನೆ ಮಂದಿ ಹಾಗೂ ಸಂಬಂಧಿಕರು ವಿವಿಧ ಕಡೆ ಹುಡುಕಾಡಿದರೂ ಇದುವರೆಗೆ ಪತ್ತೆ ಹಚ್ಚಲು  ಸಾಧ್ಯವಾಗಿಲ್ಲ. ಕರಾವಳಿ ಪೊಲೀಸರಿಗೂ ಮಾಹಿತಿ ನೀಡಲಾಗಿ ದ್ದು, ಮನೆ ಮಂದಿಯ ಆತಂಕದ ನಡುವೆ  ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

RELATED NEWS

You cannot copy contents of this page