ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿ ಪಿ. ಬಿಜೋಯ್ ಅಧಿಕಾರ ಸ್ವೀಕಾರ

ಕಾಸರಗೋಡು: ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿ ಮೂಲತಃ ತಿರುವನಂತಪುರ ನಿವಾಸಿ ಪಿ ಬಿಜೋಯ್ ನಿನ್ನೆ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.

ತಿರುವನಂತಪುರ ಎಸ್.ಎಸ್.ಬಿ. ವಿಭಾಗದ ಎಸ್.ಪಿ ಆಗಿದ್ದ ಬಿಜೋಯ್‌ರನ್ನು ಕಾಸರಗೋಡಿಗೆ ವರ್ಗಾಯಿಸಲಾಗಿದೆ. ಇವರು ೧೯೯೬ರಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆಗಿಯೂ, ೨೦೧೦-೧೧ನೇ ವರ್ಷ ಕಾಸರಗೋಡು ಡಿವೈಎಸ್‌ಪಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ವಿಶೇಷ ಸೇವೆಗಾಗಿ ೨೦೧೫ರಲ್ಲಿ ಮುಖ್ಯಮಂತ್ರಿಯ ಚಿನ್ನದ ಪದಕ, ೨೦೧೮ರಲ್ಲಿ ರಾಷ್ಟ್ರಪತಿಯಿಂದ ಚಿನ್ನದ ಪದಕ ಪಿ. ಬಿಜೋಯ್‌ರಿಗೆ ಲಭಿಸಿತ್ತು. ೨೦೧೯ರಲ್ಲಿ ಅವರಿಗೆ ಐಪಿಎಸ್ ಲಭಿಸಿತ್ತು.

ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಡಾ. ವೈಭವ್ ಸಕ್ಸೇನಾರನ್ನು  ಎರ್ನಾಕುಳಂ ಗ್ರಾಮೀಣ ಎಸ್.ಪಿ.ಯಾಗಿ ವರ್ಗಾಯಿಸಲಾಗಿದೆ.

RELATED NEWS

You cannot copy contents of this page