ಸ್ನೇಹಿತೆಯ ಮದುವೆಗೆ ತೆರಳಿದ ಯುವತಿ ಮರಳಿ ಬಂದಿಲ್ಲ: ತಾಯಿಯಿಂದ ದೂರು

ಸೀತಾಂಗೋಳಿ: ಸ್ನೇಹಿತೆಯ ಮದುವೆಗೆ ಹೋದ ಯುವತಿ ಮರಳಿ ಬಂದಿಲ್ಲವೆಂದು ತಿಳಿಸಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಸೀತಾಂಗೋಳಿ ಪೆರ್ಣೆ ಎಡನಾಡಿನ ಕರುಣಾಕರರ ಪತ್ನಿ ವನಿತ ಎಂಬವರು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.  ಈ ತಿಂಗಳ 6ರಂದು ಮಧ್ಯಾಹ್ನ 1 ಗಂಟೆಗೆ ಸ್ನೇಹಿತೆಯ ಮದುವೆಗೆಂದು ತಿಳಿಸಿ ಪುತ್ರಿ ಕಾವ್ಯ (19) ಮನೆಯಿಂದ ತೆರಳಿದ್ದಳು. ಆದರೆ ಮದುವೆ ಕಳೆದು 10 ದಿನಗಳಾದರೂ ಪುತ್ರಿ ಮರಳಿ ಬಂದಿಲ್ಲವೆಂದು ತಾಯಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಹೊಸ ಸಚಿವಸಂಪುಟ ಜಿಲ್ಲೆಯ ಪಾಲಿಗೆ ನಿರಾಶೆ- ಎಂ.ಎಲ್. ಅಶ್ವಿನಿ

ಕಾಸರಗೋಡು: ಆರು ದಶಕಗಳ ಬಳಿಕ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಎಲ್ಲಾ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಿರುವಾಗ ಜಿಲ್ಲೆಯ ಪಾಲಿಗೆ ನಿರಾಶೆಯಷ್ಟೇ ಉಳಿದಿದೆ. ರಾಜ್ಯದಲ್ಲೇ ಅತ್ಯಂತ ಹಿಂದುಳಿದಿರುವ ಜಿಲ್ಲೆಗೆ ಮತ್ತೊಮ್ಮೆ ಪ್ರಾತಿನಿಧ್ಯವನ್ನು ನಿರಾಕರಿಸುವ ಮೂಲಕ, ಮುಂದಿನ ಐದು ವರ್ಷಗಳ ಕಾಲ ಜಿಲ್ಲೆಯ ಬಗ್ಗೆ ವಿ.ಡಿ ಸತೀಶನ್ ಅವರ ಸರಕಾರದ ಧೋರಣೆ ಏನಿರಲಿದೆ ಎಂಬುದು ಬಹುಮಟ್ಟಿಗೆ ಸ್ಪಷ್ಟವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಸಚಿವರನ್ನು ಆಯ್ಕೆ ಮಾಡುವುದು ಯುಡಿಎಫ್‌ನ ಆಂತರಿಕ ವಿಷಯವಾಗಿದ್ದರೂ, ಜಿಲ್ಲೆಯ ಅಭಿವೃದ್ಧಿ ಸಮಸ್ಯೆಗಳನ್ನು ಸಚಿವ …

20 ಸಚಿವರೊಂದಿಗೆ ವಿ.ಡಿ.ಎಸ್ ಅಧಿಕಾರ ಸ್ವೀಕಾರ

ತಿರುವನಂತಪುರ: ಕೇರಳದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನ ವಿ.ಡಿ. ಸತೀಶನ್ ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು. ತಿರುವನಂತಪುರದ ಸೆಂಟ್ರಲ್ ಸ್ಟೇಡಿಯಂನಲ್ಲಿ  ಇಂದು ಬೆಳಿಗ್ಗೆ ನಡೆದ ಬೃಹತ್ ಜನಸ್ತೋಮ ನೆರೆದ  ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಮುಖ್ಯಮಂತ್ರಿಯಾಗಿ  ವಿ.ಡಿ.ಸತೀಶನ್‌ರಿಗೆ ಪ್ರಮಾಣವಚನ ಬೋಧಿಸಿದರು. ವಿ.ಡಿ.ಸತೀಶನ್ ಜೊತೆಗೆ ಅವರ ನೇತೃತ್ವದ ಸಚಿವ ಸಂಪುಟದ ೨೦ ಮಂದಿ ಸದಸ್ಯರು ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು. ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಪ್ರಮಾಣವಚನ ಸ್ವೀಕರಿಸಿದ ಬಳಿಕ  ಮುಸ್ಲಿಂ ಲೀಗ್ ನೇತಾರ ಪಿ.ಕೆ ಕುಂಞಾಲಿಕುಟ್ಟಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. …

ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿ ಸೆರೆ

ಕುಂಬಳೆ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿ ಬಳಿಕ ತಲೆಮರೆಸಿಕೊಂಡಿದ್ದಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ ಶಿವಮೊಗ್ಗ ನಿವಾಸಿ ಹಲೀಸ್ ನಾಯ್ಕ್ (45) ಬಂಧಿತ ಆರೋಪಿಯಾಗಿದ್ದಾನೆ. 2019ರಲ್ಲಿ ಈತ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದನು. ಅಂದು ಈತ ಕುಂಬಳೆ ಮುಟ್ಟಂನಲ್ಲಿರುವ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದನು. ಪ್ರಕರಣದಲ್ಲಿ ಸೆರೆಗೀಡಾದ ಹಲೀಸ್ ಜಾಮೀನಿನಲ್ಲಿ ಬಿಡುಗಡೆಗೊಂಡು ಬಳಿಕ ವಿಚಾರಣೆ ವೇಳೆ ತಲೆಮರೆಸಿಕೊಂಡಿದ್ದನು. ಇದರಿಂದ ಈತನನ್ನು ನ್ಯಾಯಾಲಯ ತಲೆಮರೆಸಿಕೊಂಡ ಆರೋಪಿ ಎಂದು ಘೋಷಿಸಿತ್ತು. ಇದೀಗ ಕುಂಬಳೆ ಎಸ್‌ಐ ಅನಂತಕೃಷ್ಣನ್ ಆರ್. ಮೆನೋನ್,  ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಕಿಶೋರ್, ಪ್ರಶಾಂತ್ …

ಸೀತಾಂಗೋಳಿಯಲ್ಲಿ ಯುವಕನನ್ನು ಹೊಡೆದು ಕೊಲೆಗೈದ ಪ್ರಕರಣ: ಎರಡನೇ ಆರೋಪಿಯಾದ ವ್ಯಾಪಾರಿ ಸೆರೆ

ಸೀತಾಂಗೋಳಿ: ಸೀತಾಂಗೋಳಿ ಯಲ್ಲಿ ಯುವಕನನ್ನು ತಲೆಗೆ ಹೊಡೆದು ಕೊಲೆಗೈದ  ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಬದಿಯಡ್ಕ ನೆಕ್ರಾಜೆ ನಿವಾಸಿಯೂ ಸೀತಾಂಗೋಳಿಯಲ್ಲಿ ಸಿದ್ದಿವಿನಾಯಕ ದೀನಸು ಅಂಗಡಿಯ ಮಾಲಕನಾದ ಅರುಣ್ ಕುಮಾರ್ ಯಾನೆ ಭರತ್ (33) ಎಂಬಾತನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್, ಎಸ್‌ಐಗಳಾದ ಸಿ. ಸನತ್, ಅನಂತಕೃಷ್ಣನ್ ಆರ್. ಮೆನೋನ್ ಸೇರಿ ಸೆರೆ ಹಿಡಿದಿದ್ದಾರೆ. ಎಪ್ರಿಲ್ ೨೮ರಂದು ಸಂಜೆ ೩ ಗಂಟೆ ವೇಳೆ ನೀರ್ಚಾಲು ಬಾಪಾಲಿಪೊನ ಕುಂಟಿಕಾನದ ಸಫಾಹಿದ್ ಯಾನೆ ಶಫಾಯತ್ (35) ಎಂಬವರು ಕೊಲೆಗೀಡಾದ …

ಬಾಲಗೋಕುಲ 51ನೇ ರಾಜ್ಯ ಸಮ್ಮೇಳನ: ಸ್ವಾಗತ ಸಮಿತಿ ರೂಪೀಕರಣ

ಕಾಸರಗೋಡು: ಜುಲೈ 10,11,12 ರಂದು ಕಾಸರಗೋಡಿನಲ್ಲಿ ನಡೆಯುವ ಬಾಲಗೋಕುಲ ರಾಜ್ಯ ವಾರ್ಷಿಕ ಸಮ್ಮೇಳನದ ಸ್ವಾಗತ ಸಂಘ ರೂಪೀಕರಣ ನಡೆಯಿತು. ಕಾಸರಗೋಡು ಅಮೃತಾನಂದಮಯಿ ಮಠ ಮಠಾಧಿಪತಿ ವೇದ ವೇದ್ಯಾಮೃತ ಚೈತನ್ಯ ಸ್ವಾಮೀಜಿ ಉದ್ಘಾಟಿಸಿದರು. ರಾಜ್ಯ ಅಧ್ಯಕ್ಷ ಎಂ. ಸತ್ಯನ್ ಮಾಸ್ಟರ್ ಉಪಸ್ಥಿತರಿದ್ದರು. ಬಾಲಗೋಕುಲ ರಾಜ್ಯ ಉಪಾಧ್ಯಕ್ಷ ಎನ್.ವಿ ಪ್ರಜಿತ್ ಮಾಸ್ಟರ್ ಮುಖ್ಯ ಭಾಷಣ ಮಾಡಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಂ ಸದಾನಂದನ್, ಪ್ರಭಾಕರನ್ ಮಾಸ್ಟರ್, ಸಿ.ವಿ ಪೊದುವಾಳ್, ಜಿಲ್ಲಾ ಕಾರ್ಯದರ್ಶಿ ರಾಜೇಂದ್ರ ಮವ್ವಾರ್ ಮಾತನಾಡಿದರು. ಬಾಲಗೋಕುಲ ಜಿಲ್ಲಾ ರಕ್ಷಾಧಿಕಾರಿ ಜಯರಾಮ್ …

ಕೊಲ್ಲಂಗಾನ ಚರ್ಚ್‌ನ ಧರ್ಮಗುರು ಮಂಗಳೂರಿಗೆ  ವರ್ಗಾವಣೆ

ಕಾಸರಗೋಡು: ಕೊಲ್ಲಂಗಾನ ಸಂತ ಥೋಮಸರ ದೇವಾಲಯದ ಧರ್ಮಗುರುಗಳಾಗಿ ಕಳೆದ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಫಾ| ರಿತೇಶ್ ರೋಡ್ರಿಗಸ್ ಮಂಗಳೂರಿನ ಕಾಸ್ಟಿಯಾ ದೇವಾಲಯದ ಜವಾಬ್ದಾರಿ ವಹಿಸಲು ನಾಳೆ ತೆರಳಲಿದ್ದಾರೆ. ಕೊಲ್ಲಂ ಗಾನ ಸಂತ ಥೋಮಸರ ದೇವಾಲಯದಲ್ಲಿ 7 ವರ್ಷಗಳ ಕಾಲಸೇವೆ ಸಲ್ಲಿಸಿದ ವಂ| ಫಾ| ಡೇನಿಯಲ್ ಡಿ’ಸೋಜಾರವರು ಸಿದ್ಧಕಟ್ಟೆ  ಧರ್ಮಕೇಂದ್ರಕ್ಕೆ ವರ್ಗಾವಣೆಗೊಂಡಾಗ ಅವರ  ಸ್ಥಾನದಲ್ಲಿ ವಂ| ರಿತೇಶ್ ರೋಡ್ರಿಗಸ್ ನೇಮಕಗೊಂಡಿದ್ದರು. ಕೊಲ್ಲಂಗಾನ ಚರ್ಚ್‌ನ ೨೫ನೇ ವಾರ್ಷಿಕಾಚರಣೆ ಇವರ ನೇತೃತ್ವದಲ್ಲಿ ನಡೆದಿದ್ದು, ಬೆಳ್ಳಿಹಬ್ಬ ಚಟುವಟಿಕೆಗಳು ಒಂದು ವರ್ಷವಿಡೀ …

ಅಡೂರಿನಲ್ಲಿ ಸುಬೇದಾರ್ ಸಂಪತ್‌ಕುಮಾರ್‌ರಿಗೆ ಅಭಿನಂದನೆ

ಮುಳ್ಳೇರಿಯ: ಭಾರತೀಯ ಭೂಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಸುಬೇದಾರ್ ಸಂಪತ್ ಕುಮಾರ್ ಕೆ. ಅವರನ್ನು ಅಡೂರಿನ ವಿದ್ಯಾಭಾರತಿ ವಿದ್ಯಾಲಯ ಹಾಗೂ ಶ್ರೀರಾಮೋ ತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಅಭಿನಂದಿಸಲಾಯಿತು. ವಿದ್ಯಾಲಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತ್ಯಪ್ರೇಮ ಬಾರಿತ್ತಾಯ ಅಧ್ಯಕ್ಷತೆ ವಹಿಸಿದರು. ಡಾ. ಶ್ರೀನಿಧಿ ಸರಳಾಯ ಬದಿಯಡ್ಕ ಅಭಿನಂದನಾ ಭಾಷಣ ಮಾಡಿದರು. ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ ಸಾರ್ಜೆಂಟ್ ಬಾಲಚಂದ್ರ ಕೇಕುಣ್ಣಾಯ ಉದ್ಘಾಟಿಸಿದರು. ಅಪ್ಪಕುಂಞಿ ಮಾಸ್ತರ್, ರಾಜರಾಮ ಸರಳಾಯ, ರಾಧಾಕೃಷ್ಣ, ಲಕ್ಷ್ಮಣ ಉಪಸ್ಥಿತರಿದ್ದರು. ಈ ವೇಳೆ …

ಛಾಯಗ್ರಾಹಕ ಶ್ರೀಕಾಂತ್ ಕಾಸರಗೋಡುರಿಗೆ ಪ್ರಶಸ್ತಿ ಪ್ರದಾನ

ಕಾಸರಗೋಡು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಪ್ರಶಸ್ತಿ ಛಾಯಗ್ರಾಹಕ ಶ್ರೀಕಾಂತ್ ಕಾಸರಗೋಡು ಅವರಿಗೆ ನೀಡಲಾಯಿತು. ಕುಡಾಲುಮೇರ್ಕಳ ಸುಬ್ಬಯ್ಯಕಟ್ಟೆ ಅನುದಾನಿತ ಶಾಲೆಯಲ್ಲಿ ನಡೆದ ದತ್ತಿನಿಧಿ ಪ್ರಶಸ್ತಿ ಪ್ರದಾನ, ಕನ್ನಡ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಟಿ.ಎಂ. ಶಹೀದ್ ಪ್ರಶಸ್ತಿ ಪ್ರದಾನ ಮಾಡಿದರು. ಎ.ಆರ್. ಸುಬ್ಬಯ್ಯಕಟ್ಟೆ, ರವಿ ನಾಯ್ಕಾಪು, ಸೋಮಶೇಖರ ಜೆ.ಎಸ್., ಪ್ರದೀಪ್ ಕುಮಾರ್ ಕಲ್ಕೂರ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ರಾಧಾಕೃಷ್ಣ ಉಳಿಯತ್ತಡ್ಕ ಉಪಸ್ಥಿತರಿದ್ದರು. ಶ್ರೀಕಾಂತ್ …

ಪತ್ರಕರ್ತರ ಬಹುಮುಖ ಪ್ರಯತ್ನಗಳು ಶ್ಲಾಘನೀಯ-ಸೋಮಣ್ಣ ಬೇವಿನಮರದ

ಕುಂಬಳೆ: ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರ ಕಾಲಕಾಲಕ್ಕೆ ಅಗತ್ಯದ ಅನುದಾನಗಳನ್ನು ರಾಜ್ಯದೊಳಗಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲೂ ನೀಡಿ ಬೆಂಬಲಿಸುತ್ತಿದೆ ಎಂದು ಕರ್ನಾಟಕ ಗಡಿ ಪ್ರದೇಶಾಭಿ ವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಭಿಪ್ರಾಯ ವ್ಯಕ್ತಪಡಿಸಿದರು.ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇದರ ಜಂಟಿ ಆಶ್ರಯದಲ್ಲಿ ಪೈವಳಿಕೆ ಕುಡಾಲುಮೇ ರ್ಕಳ ಅನುದಾನಿತ ಕಿರಿಯ ಪ್ರಾಥಮಿಕ …