ಸರಕಾರದ ಅಂಗೀಕಾರವಿಲ್ಲದ ‘ಹೋಮ್ ಸ್ಟೇ’ಗಳಿಗೆ ಶೀಘ್ರ ಬೀಗ
ಕಾಸರಗೋಡು: ಸರಕಾರದ ಅಂಗೀಕಾರವಿಲ್ಲದೆ ಪ್ರವಾಸೀ ಕೇಂದ್ರಗಳಲ್ಲಿ ‘ಹೋಮ್ ಸ್ಟೇ’ಗಳನ್ನು ನಿರ್ಮಿಸಿ ಅದರ ಹೆಸರಲ್ಲಿ ನಡೆಸಲಾಗುವ ವ್ಯಾಪಾರಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರ ಮುಂದಾಗಿದೆ. ಪ್ರವಾಸಿಗರಿಗೆ ವಾಸ ಸೌಕರ್ಯ ಏರ್ಪಡಿಸುವ ಹೆಸರಲ್ಲಿ ‘ಹೋಮ್ ಸ್ಟೇ’ ಎಂಬ ಹೆಸರನ್ನು ಉಪಯೋಗಿಸಿ ಸರಕಾರದ ಅನುಮತಿ ಇಲ್ಲದೆ ವಸತಿ ಸೌಕರ್ಯಗಳನ್ನು ನಿರ್ಮಿಸುವುದರ ವಿರುದ್ಧ ಇನ್ನು ಕ್ರಮ ಕೈಗೊಳ್ಳಲಾಗುವುದು. ಇಂತಹ ವಸತಿ ಸಮುಚ್ಚಯಗಳನ್ನು ನಿರ್ಮಿಸಲು ಪ್ರವಾಸೋದಮ ಇಲಾಖೆಯ ಕ್ಲಾಸಿಫಿಕೇಷನ್ ಸರ್ಟಿಫಿಕೆಟ್‌ನ್ನು ಮೊದಲು ಪಡೆಯಬೇಕು. ಅದನ್ನು ಪಡೆಯದೆ ಹೋಮ್ ಸ್ಟೇ ಹೆಸರಲ್ಲಿ ವಸತಿ ಸೌಕರ್ಯ ಏರ್ಪಡಿಸಿದಲ್ಲಿ …