ನಿರಂತರ ಉಪಟಳ: ತಾಕೀತು ನೀಡಿದ ಯುವತಿಯ ಟೈಲರಿಂಗ್ ಅಂಗಡಿಯಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆ

ಕಣ್ಣೂರು: ಹಿಂದಿನಿಂದ ನಡೆದುಕೊಂಡು ಹೋಗಿ ನಿರಂತರ ಉಪಟಳ ನೀಡು ತ್ತಿರುವುದರ ವಿರುದ್ಧ ಪ್ರತಿಕ್ರಿಯಿಸಿದ ಯುವತಿಯ ಟೈಲರಿಂಗ್ ಶಾಪ್‌ಗೆ ನುಗ್ಗಿ ಯುವಕ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಇರಿಟ್ಟಿ ಕೋಳಿಕ್ಕಡವ್ ನಿವಾಸಿ ಮೋಹನನ್ (48) ಆತ್ಮಹತ್ಯೆಗೈದ ಯುವಕ. ಕೋಳಿಕ್ಕಡವ್ ನಿವಾಸಿಯ ಮಾಲಕತ್ವದಲ್ಲಿ ಕರಿಯಾಲ್‌ನಲ್ಲಿರುವ ಅಂಗಡಿಯಲ್ಲಿ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.  ಯುವತಿ ವಿವಾಹಿತೆಯಾಗಿದ್ದಾಳೆ. ಮೋಹನನ್ ಕುಟುಂಬದಿಂದ ದೂರವಿದ್ದು ವಾಸಿಸುತ್ತಿದ್ದನು. ಈ ಮಧ್ಯೆ ಟೈಲರಿಂಗ್ ಅಂಗಡಿ ಮಾಲಕಿಯಾದ ಯುವತಿಯ ಹಿಂದೆ ನಡೆದು ಉಪಟಳ ನೀಡುತ್ತಿದ್ದುದಾಗಿ ಹೇಳಲಾಗಿದೆ. …

ಕಲ್ಯೋಟ್ ಅವಳಿ ಕೊಲೆ ಪ್ರಕರಣದ ಆರೋಪಿಗಳಿಗೆ ಪರೋಲ್: ಯೂತ್ ಕಾಂಗ್ರೆಸ್‌ನ ಪ್ರತಿಭಟನಾ ಮಾರ್ಚ್‌ಗೆ ಪೊಲೀಸ್ ಅನುಮತಿ ನಿರಾಕರಣೆ

ಕಾಸರಗೋಡು: ಕಲ್ಯೋಟ್ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಹಾಗೂ ಶರತ್‌ಲಾಲ್‌ರನ್ನು ಇರಿದು ಕೊಲೆಗೈದ ಪ್ರಕರಣದ ಇಬ್ಬರು ಆರೋಪಿಗಳಿಗೆ ಪರೋಲ್ ಮಂಜೂರು ಮಾಡಿದ ಸರಕಾರದ ಕ್ರಮವನ್ನು ಪ್ರತಿ ಭಟಿಸಿ ಯೂತ್ ಕಾಂಗ್ರೆಸ್ ಘೋಷಿಸಿದ್ದ ಪ್ರತಿಭಟನಾ ಮಾರ್ಚ್‌ಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಅನುಮತಿ ಲಭಿಸದಿದ್ದರೂ ಮಾರ್ಚ್ ನಡೆಸುವು ದಾಗಿ ಯೂತ್ ಕಾಂಗ್ರೆಸ್ ತಿಳಿಸಿದೆ. ಘರ್ಷಣೆ ಸಾಧ್ಯತೆ ಇದೆ ಎಂಬ ರಹಸ್ಯ ತನಿಖಾ ವಿಭಾಗದ ವರದಿಗಳ ಹಿನ್ನೆಲೆಯಲ್ಲಿ ಪೊಲೀಸರು ಭಾರೀ ಭದ್ರತೆ ಏರ್ಪಡಿಸಿದ್ದಾರೆ. ಇದರಂಗವಾಗಿ ಕಣ್ಣೂರು ಮಾಂಙಾಟ್ ಪರಂಬ್ ಪೊಲೀಸ್ ಕ್ಯಾಂಪ್‌ನಿಂದ …

ಉಪ್ಪಳದಲ್ಲಿ ಅಗ್ನಿದುರಂತ: ಕಂಪ್ಯೂಟರ್ ಅಂಗಡಿ ಉರಿದು ನಾಶ ನಷ್ಟ

ಉಪ್ಪಳ: ಪೇಟೆಯ ರೈಲ್ವೇ ನಿಲ್ದಾಣ ರಸ್ತೆಯ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡದ ಒಂದನೇ ಮಹಡಿಯಲ್ಲಿ ಕಾರ್ಯಾಚರಿ ಸುತ್ತಿದ್ದ ಮಾಸ್ಟರ್ ಕಂಪ್ಯೂಟರ್ ಸೆಂಟರ್ ಬೆಂಕಿಗಾಹುತಿಯಾಗಿದೆ. ಕಾಸರಗೋಡು ನಿವಾಸಿ ಶಫೀಕ್ ಎಂಬವರ ಮಾಲಕತ್ವದ ಅಂಗಡಿ ನಿನ್ನೆ ಮಧ್ಯಾಹ್ನ ಬೆಂಕಿಯಿಂದ ಉರಿದು ನಾಶಗೊಂಡಿದೆ. ಅಂಗಡಿ ಮುಚ್ಚಿ ಮಾಲಕ ಹಾಗೂ ನೌಕರರು ನಮಾಜು ಮಾಡಲು ಸಮೀಪದ ಮಸೀದಿಗೆ ತೆರಳಿದ್ದರು. ಅವರು ಹಿಂತಿರುಗುವ ವೇಳೆ ಅಂಗಡಿಯೊಳಗಿಂದ  ಬೆಂಕಿ ಹಾಗೂ ಹೊಗೆ ಕಂಡು ಬಂದಿದೆ. ಕೂಡಲೇ ಅಗ್ನಿಶಾಮಕ ದಳ ತಲುಪಿ ಬೆಂಕಿ ನಂದಿಸಿದರೂ ಈ ವೇಳೆ ಅಂಗಡಿಯೊಳಗಿದ್ದ …

ತಾಯಿಯ ಚಿಕಿತ್ಸೆಗೆಂದು ಪಡೆದ ಹಣ ನೀಡದೆ ವಂಚನೆ: ಕೇಸು ದಾಖಲು

ಕಾಸರಗೋಡು: ತಾಯಿಯ ಚಿಕಿತ್ಸೆಗೆಂದು ತಿಳಿಸಿ ಯುವತಿಯ ಕೈಯಿಂದ ಪಡೆದ ೨೧ ಲಕ್ಷ ರೂಪಾ ಯಿಗಳನ್ನು ಮರಳಿ ನೀಡಿಲ್ಲವೆಂಬ ಆರೋಪದಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸೌತ್ ತೃಕರಿಪುರ  ಕುಲೇರಿ ಮಾಡಕಂಡಿ ಹೌಸ್‌ನ ಉಮರುಲ್ ಹುದಾ (39) ನೀಡಿದ ದೂರಿನಂತೆ ಮುಹಮ್ಮದ್ ರಮೀಸ್ ಎಂಬಾತನ ವಿರುದ್ಧ ಚಂ ದೇರ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ. 2024 ಸೆಪ್ಟಂಬರ್ ನಿಂದ ೨೦೨೫ ಮೇ ತಿಂಗಳ ವರೆಗಿನ ಕಾಲಾವಧಿಯಲ್ಲಿ  ಹಣ ನೀಡಿರು ವುದಾಗಿ ಉಮರುಲ್ ಹುದಾ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮೊಹಮ್ಮ ದ್ …

ಬಂದ್ಯೋಡಿನಲ್ಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ತೆಂಗಾಶಿಪಟ್ಟಣ ನಿವಾಸಿ

ಕುಂಬಳೆ: ಬಂದ್ಯೋಡಿನ ಹಳೆಯ ಕಟ್ಟಡದಲ್ಲಿ ಇತ್ತೀಚೆಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ  ತಮಿಳುನಾಡಿನ ತೆಂಗಾಶಿಪಟ್ಟಣ ನಿವಾಸಿಯೆಂದು ತಿಳಿದುಬಂದಿದೆ. ಕುಂಬಳೆ ಎಸ್‌ಐ ಪ್ರದೀಪ್ ಕುಮಾರ್, ಎಸ್‌ಸಿಪಿಒ ಸುಬಿನ್ ತೆಂಗಾಳಿಪಟ್ಟಣಕ್ಕೆ  ತೆರಳಿ ನಡೆಸಿದ ತನಿಖೆಯಲ್ಲಿ  ಈ ಬಗ್ಗೆ ಖಚಿತಗೊಂಡಿದೆ. ತೆಂಗಾಶಿ ಪಟ್ಟಣ ಬಳಿಯ ನಲುವ ಸಂಕೋಟಲ್  ನೋರ್ತ್ ಸ್ಟ್ರೀಟ್‌ನ ಗುರುಸ್ವಾಮಿ (70) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರ ಮೃತದೆಹ ಕಳೆದ ಜುಲೈ ೧೫ರಂದು ಸಂಜೆ ಬಂದ್ಯೋಡಿನ ಹಳೆಯ ಸರ್ವೀಸ್ ಸ್ಟೇಶನ್ ಕಟ್ಟಡದಲ್ಲಿ ಪತ್ತೆಯಾಗಿತ್ತು. ಜೀರ್ಣಿಸಿದ ಸ್ಥಿತಿಯಲ್ಲಿ ಕಂಡುಬಂದ ಮೃತದೇಹವನ್ನು ಕಾಸರಗೋಡು …

ರಾಹುಲ್ ಮಾಕೂಟತ್ತಿಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಆಗ್ರಹಿಸಿ ಡಿಫಿ ಪ್ರತಿಭಟನೆ

ಪೈವಳಿಕೆ: ಮಹಿಳೆಯರಿಗೆ ಲೈಂಗಿಕ ದೌರ್ಜನ್ಯಗೈದ ಆರೋಪ ಎದುರಿಸುತ್ತಿರುವ ಪಾಲಕ್ಕಾಡ್ ಶಾಸಕ, ಯೂತ್ ಕಾಂಗ್ರೆಸ್ ನೇತಾರನಾಗಿದ್ದ ರಾಹುಲ್ ಮಾಕೂಟತ್ತಿಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಡಿವೈಎಫ್‌ಐ ಬಾಯಾರು ವಿಲ್ಲೇಜ್ ಸಮಿತಿ ವತಿಯಿಂದ ಬಾಯಾರುಪದವಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಡಿಫಿ ಮಂಜೇಶ್ವರ ಬ್ಲೋಕ್ ಕಾರ್ಯದರ್ಶಿ ವಿನಯಕುಮಾರ್ ಬಾಯಾರು ಉದ್ಘಾಟಿಸಿದರು. ಕಾರ್ತಿಕ್ ಬಾಯಾರು ಅಧ್ಯಕ್ಷತೆ ವಹಿಸಿದರು. ಪುರುಷೋತ್ತಮ ಬಳ್ಳೂರು, ಆಸ್ಪೀರ್ ಬಾಯಾರು, ಆಸಿಫ್ ಬಾಯಾರು ಮಾತನಾಡಿದರು. ಝಕಾರಿಯಾ ಬಾಯಾರು ಸ್ವಾಗತಿಸಿದರು.

ಸಿ.ಎಚ್. ಸೆಂಟರ್‌ಗೆ ನೂತನ ಸಮಿತಿ ಅಬ್ದುಲ್ ಲತೀಫ್ ಉಪ್ಪಳ ಗೇಟ್ ಅಧ್ಯಕ್ಷ

ಕಾಸರಗೋಡು: ಸಾಂತ್ವನರಂಗದಲ್ಲಿ ಸ್ತುತ್ಯರ್ಹವಾದ ಚಟುವಟಿಕೆಗಳನ್ನು ನಡೆಸುವ ಕಾಸರಗೋಡು ಸಿಎಚ್ ಸೆಂಟರ್‌ನ ಅಧ್ಯಕ್ಷರಾಗಿ ಓಮನ್ ಚೇಂಬರ್ ಆಫ್ ಕಾಮರ್ಸ್ ನಿರ್ದೇಶಕ ಅಬ್ದುಲ್ ಲತೀಫ್ ಉಪ್ಪಳ ಗೇಟ್ ಹಾಗೂ ಪ್ರಧಾನ ಗೌರವಾಧ್ಯಕ್ಷರಾಗಿ  ಉದ್ಯಮಿ, ದುಬೈ ಕೆಎಂಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಹ್ಯಾ ತಳಂಗರೆ ಆಯ್ಕೆಯಾದರು. ಸಿಎಚ್ ಸೆಂಟರ್ ಮಹಾಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಗಿದ್ದು, ಇತರ ಪದಾಧಿಕಾರಿಗಳಾಗಿ ಅಬ್ದುಲ್ ಕರೀಂ ಸಿಟಿಗೋಲ್ಡ್ (ಕಾರ್ಯಾಧ್ಯಕ್ಷ), ಮಾಹಿನ್ ಕೇಳೋಟ್ (ಜನರಲ್ ಕನ್ವೀನರ್), ಎನ್.ಎ ಅಬೂಬಕ್ಕರ್ ಹಾಜಿ (ಕೋಶಾಧಿಕಾರಿ), ಅಶ್ರಫ್ ಎಡನೀರು (ಕೋ-ಆರ್ಡಿನೇಟರ್), ಖಾದರ್ ಚೆಂಗಳ …

ಸಿಪಿಐ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್. ಸುಧಾಕರ ರೆಡ್ಡಿ ನಿಧನ

ದೆಹಲಿ: ಸಿಪಿಐಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್. ಸುಧಾಕರ ರೆಡ್ಡಿ (83) ನಿಧನ ಹೊಂದಿದರು. ಅಸೌಖ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. 2012ರಿಂದ 19ರ ವರೆಗೆ ಇವರು ಸಿಪಿಐ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಎರಡು ಬಾರಿ ಆಂಧ್ರದಿಂದ ಲೋಕಸಭಾ ಸದಸ್ಯರಾ ಗಿದ್ದರು.  ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯಾಚರಿಸಿದ್ದರು.

ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ಗೇಟ್ ನಿರ್ಮಾಣ: ಬಿಜೆಪಿ ಮಂಡಲ ಸಮಿತಿಯಿಂದ ಕೇಂದ್ರ ಸಚಿವರಿಗೆ ಮನವಿ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಗತಿಯಲ್ಲಿರುವಂತೆ ಕುಂಬಳೆಯಲ್ಲಿ ನಡೆಯುತ್ತಿರುವ ತಾತ್ಕಾಲಿಕ ಟೋಲ್‌ಗೇಟ್ ನಿರ್ಮಾಣದ ವಿರುದ್ಧ ಬಿಜೆಪಿ ಕುಂಬಳೆ ಮಂಡಲ ಸಮಿತಿ ಕೇಂದ್ರ ಸಾರಿಗೆ ಇಲಾಖೆ ಸಚಿವರಿಗೆ ದೂರು ನೀಡಿದೆ. ನ್ಯಾಯಾಲಯದ ತೀರ್ಪಿನ ಮೂಲಕ ಟೋಲ್‌ಗೇಟ್ ಜ್ಯಾರಿಗೆ ಬಂದರೆ ಪ್ರಸ್ತುತ ಟೋಲ್‌ಗೇಟ್ ವ್ಯಾಪ್ತಿಯಲ್ಲಿರುವ ಕುಂಬಳೆ, ಪುತ್ತಿಗೆ, ಮಂಗಲ್ಪಾಡಿ ಪಂಚಾಯತ್‌ಗಳ ಹಾಗೂ ಇತರ ಭಾಗಗಳ ಖಾಯಂ ಪ್ರಯಾಣಿಕರ ವಾಹನಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕೆಂದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸಾರಿಗೆ ಇಲಾಖೆ ಸಚಿವ ನಿತಿನ್ ಗಡ್ಕರಿ ಯವರಲ್ಲಿ …

ಸೇವಾ ಮನೋಭಾವದಿಂದ ಸಮಾಜಕ್ಕೆ ಕೊಟ್ಟರೆ ಪುಣ್ಯಪ್ರಾಪ್ತಿ- ಒಡಿಯೂರು ಶ್ರೀ

ಮಂಜೇಶ್ವರ: ಗಳಿಸಿದ ಸಂಪತ್ತನ್ನು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿ ಸಮಾಜಕ್ಕೆ ಕೊಡುವ ಸೇವಾ ಮನೋಭಾವದಿಂದ ಪುಣ್ಯಪ್ರಾಪ್ತಿಯಾ ಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿ ದರು. ಕೊಣಿಬೈಲು ಉಳಿಪಾಡಿ ಗುತ್ತು ಮಲ್ಲಿಕಾ ಆರ್. ಚೌಟ ನಿರ್ಮಿಸಿಕೊಟ್ಟ ವೆಂಕಟೇಶ ವೈಭವ ಹಾಗೂ ಆಸ್ಟ್ರೇಲಿಯಾದ ನ್ಯೂಜರ್ಸಿಯ ಡಾ. ಬೆಳ್ಳೆ ದಿನಕರ ರೈ, ಶಕೀಲಾ ಡಿ. ರೈ ಉಳಿಪಾಡಿಗುತ್ತು ದಂಪತಿ ನಿರ್ಮಿಸಿಕೊಟ್ಟ ಶ್ರೀ ವೈಷ್ಣವಿ ಸದನದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಸ್ವಾಮೀಜಿ ಶುಭ ಹಾರೈಸಿದರು. ಉದ್ಘಾಟನಾ ಸಮಾರಂಭದಲ್ಲಿ …