ಕೆ. ಸುರೇಂದ್ರನ್‌ರ ಪ್ರಚಾರ ಬೋರ್ಡ್ ಪಟಾಕಿ ಸಿಡಿಸಿ ನಾಶಗೊಳಿಸುವ ದೃಶ್ಯ: ಗಲಭೆ ಸೃಷ್ಟಿಗೆ ಯತ್ನ ಆರೋಪದಂತೆ ಕೇಸು ದಾಖಲು
ಕುಂಬಳೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಕೆ. ಸುರೇಂದ್ರನ್‌ರ ಚುನಾವಣಾ ಪ್ರಚಾರ ಬೋರ್ಡನ್ನು ಪಟಾಕಿ ಸಿಡಿಸಿ ನಾಶಗೊಳಿಸಿ ಬಳಿಕ ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ ಆರೋಪದಂತೆ ಕುಂಬಳೆ ಪೊಲೀಸರು ಸ್ವಯಂ ಕೇಸು ದಾಖಲಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನ ‘ವಲಿಯೇಟನ್’ ಎಂಬ ಖಾತೆದಾರನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಚುನಾವಣಾ ಪ್ರಚಾರ ಬೋರ್ಡ್‌ನಲ್ಲಿ ವ್ಯಕ್ತಿ ಹತ್ಯೆ ನಡೆಸುವ ರೀತಿಯ ವಾಕ್ಯಗಳನ್ನು ಬರೆದ ಬಳಿಕ ಸೋಮವಾರ ರಾತ್ರಿ 1 ಗಂಟೆ ಹಾಗೂ ಮಂಗಳವಾರ ಸಂಜೆ 6 ಗಂಟೆ …