ಬೆಂಕಿ ತಗಲಿ ಚಿಕಿತ್ಸೆಯಲ್ಲಿದ್ದ ವೃದ್ದೆ ಮೃತ್ಯು

ಹೊಸದುರ್ಗ: ಹಿತ್ತಿಲಲ್ಲಿ  ಬೆಂಕಿ ತಗಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವೃದ್ದೆ ಮೃತಪಟ್ಟರು. ಪಿಲಿಕ್ಕೋಡ್‌ವಯಲ್‌ನ ಮೀನು ಕಾರ್ಮಿಕೆ ಪುದಿಯಡವನ್ ಮಾಧವಿ (73) ಮೃತಪಟ್ಟವರು. ಈ ತಿಂಗಳ ೨ರಂದು ಸಂಜೆ ಮನೆ ಹಿತ್ತಿಲಿನಲ್ಲಿ ಇವರಿಗೆ ಬೆಂಕಿ ತಗಲಿತ್ತು. ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ಇವರು ಮೃತಪಟ್ಟರು. ಚಂದೇರ ಪೊಲೀಸರು  ಮಹಜರು ನಡೆಸಿದರು. ಮೃತರು ಪುತ್ರ ಪಿ. ಚಂದ್ರನ್, ಸೊಸೆ ಎಂ. ಉಷಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಪತಿ ಕಾರ್ಯತ್ ಕಣ್ಣನ್ ಈ …

ಅಕ್ರಮ ಭೂ ಕಬಳಿಕೆ: ಕಬಳಿಸಿದ್ದು 1341 ದೇವಸ್ಥಾನಗಳ 24,693 ಎಕ್ರೆ ಜಮೀನು, ಮೀಸಲು ಫಂಡ್ ಅಕೌಂಟ್ ಸಮಿತಿ ಹೊರಬಿಟ್ಟ ಸ್ಫೋಟಕ ಮಾಹಿತಿ

ಕಾಸರಗೋಡು: ಮಲಬಾರ್ ಮುಜರಾಯಿ ಮಂಡಳಿಗೆ ಸೇರಿದ 1341 ದೇವಸ್ಥಾನಗಳಿಗೆ ಸೇರಿದ 24,693 ಎಕ್ರೆ ಜಮೀನನ್ನು ಅಕ್ರಮವಾಗಿ ಕಬಳಿಸಲಾಗಿದೆಯೆಂಬ ಸ್ಫೋಟಕ ಮಾಹಿತಿಯನ್ನು ವಿಧಾನಸಭೆಯ ಲೋಕಲ್ ಫಂಡ್ ಅಕೌಂಟ್ಸ್ ಸಮಿತಿ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.ಅAದರೆ ಮಲಬಾರ್ ಮುಜರಾಯಿ ಮಂಡಳಿ ವ್ಯಾಪ್ತಿಗೊಳಪಟ್ಟ ದೇವಸ್ಥಾನ ಗಳಿಗೆ ಸೇರಿದ ಒಟ್ಟು ಜಮೀನಿನ ಪೈಕಿ ಶೇ. 87ರಷ್ಟನ್ನು ಈ ರೀತಿ ಅಕ್ರಮವಾಗಿ ಕಬಳಿಸಲಾಗಿದೆ. ಆದರೆ ಇದನ್ನು ಮರು ಸ್ವಾಧೀನಪಡಿಸುವ ವಿಷಯದಲ್ಲಿ ಮುಜರಾಯಿ ಮಂಡಳಿ ನಿರ್ಲಕ್ಷ್ಯ ಹಾಗೂ ನಿರಾಸಕ್ತಿ ತೋರಿದೆಯೆಂದೂ ಸಮಿತಿಯ ವರದಿಯಲ್ಲಿ ಹೇಳಲಾಗಿದ್ದು, ಈ ವಿಷಯವನ್ನು ಸರಕಾರದ …

ನಿಧನ

ಮಂಜೇಶ್ವರ: ವರ್ಕಾಡಿ ಉಜಾರ್‌ಪದವು ನಿವಾಸಿ ದಿ| ಸೂರ್ಯಮೂರ್ತಿ ಮಾಸ್ತರ್ ರವರ ಪುತ್ರ ಸುಮಂತ್‌ರಾಜ್ (44) ನಿಧನ ಹೊಂದಿದರು. ಒಂದು ವರ್ಷದಿಂದ ಅಸೌಖ್ಯದಿಂದ ಬಳಲುತ್ತಿದ್ದ ಇವರು ಕಳೆದ ಒಂದೂವರೆ ತಿಂಗಳಿAದ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದರು. ಬಸ್ ಚಾಲಕರಾಗಿ ದುಡಿಯುತ್ತಿದ್ದರು. ಮೃತರು ಪತ್ನಿ ಗೀತಾ, ಮಕ್ಕಳಾದ ಧನುಶ್ರೀ, ಅನುಶ್ರೀ, ಆದಿತ್ಯಮೂರ್ತಿ, ಅಳಿಯ ಶರತ್, ಸಹೋದರಿ ಸ್ಮಿತಾರಾಣಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಾಯಿ ಶಾಂತಲ ಈ ಹಿಂದೆ ನಿಧನರಾಗಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ: ಮಂಗಲ್ಪಾಡಿ ಪಂ.ಗೆ ಲಕ್ಷಾಂತರ ರೂ. ವೆಚ್ಚದಲ್ಲಿ ಖರೀದಿಸಿದ ಜನರೇಟರ್ ತುಕ್ಕು ಹಿಡಿದು ನಾಶ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್‌ಗೆ ಬೆಳಕು ನೀಡಲು ಖರೀದಿಸಿದ ಜನರೇಟರ್ ಈಗ ತುಕ್ಕು ಹಿಡಿದು ನಾಶವಾಗುತ್ತಿದೆ. 2022ರಲ್ಲಿ 4.98 ಲಕ್ಷ ರೂ. ವೆಚ್ಚದಲ್ಲಿ ಪಂಚಾಯತ್‌ಗೆ ಜನರೇಟರ್ ಖರೀದಿಸಲಾಗಿದೆ. ವಿದ್ಯುತ್ ಮೊಟಕುಗೊಂಡಾಗ ಉಪಯೋಗಿಸಲೆಂದು ಖರೀದಿಸಿದ ಜನರೇಟರ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಲೆಗುಂಪಾಗಿ  ತುಕ್ಕು ಹಿಡಿದು ನಾಶವಾಗುತ್ತಿದೆ. ಖರೀದಿಸಿದ ಬಳಿಕ ಬಿಸಿಲು,  ಮಳೆಗೆ ಅದನ್ನು ಇರಿಸಲಾಗಿದ್ದು, ಇದುವರೆಗೂ ಉಪಯೋಗಿಸಲಾಗಿಲ್ಲ. ಜನರೇಟರ್‌ನ ಉಪಯೋಗಕ್ಕಾಗಿ ಮಾಡಬೇಕಾದ ವಯರಿಂಗ್ ನಡೆಸದಿರುವುದೇ 4.98 ಲಕ್ಷ ರೂ. ಈ ರೀತಿ ತುಕ್ಕು ಹಿಡಿಯಲು ಕಾರಣವೆಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ಈ …

ವಿವಾದ ಸೃಷ್ಟಿಸುತ್ತಿರುವುದು ಭಾರತಮಾತೆ ಎಂಬ ಸಂಕಲ್ಪವನ್ನು ಅರಗಿಸಿಕೊಳ್ಳಲಾಗದವರು- ನವ್ಯಾ ಹರಿದಾಸ್

ಕಾಸರಗೋಡು: ವಂದೇ ಭಾರತ್ ರೈಲಿನಲ್ಲಿ ದೇಶಭಕ್ತಿ ಗಾನಾಲಾಪನೆಯನ್ನು ವಿವಾದ ಮಾಡುತ್ತಿರುವವರು ಭಾರತ ಮಾತೆ ಎಂಬ ಸಂಕಲ್ಪವನ್ನು ಅರಗಿಸಿಕೊಳ್ಳಲು ಸಾಧ್ಯವಾಗದವರಾಗಿ ದ್ದಾರೆಂದು,  ಈ ಮೊದಲು ಭಾರತಮಾತೆಯ ಛಾಯಾಚಿತ್ರದ ಮುಂದೆ ಪುಷ್ಪಾರ್ಚನೆಯನ್ನು ವಿವಾದಗೊಳಿಸಿರುವುದು ಇದೇ ಗುಂಪು ಎಂದು ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ನವ್ಯಾ ಹರಿದಾಸ್ ನುಡಿದರು. ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೇಂದ್ರ ಸರಕಾರ ಜ್ಯಾರಿಗೊಳಿಸುವ ಮಹಿಳಾ ಕಲ್ಯಾಣ ಯೋಜನೆಗಳ ಪಿತೃತ್ವವನ್ನು ವಹಿಸಿಕೊಳ್ಳಲು ಮಾತ್ರವೇ ಪಿಣರಾಯಿ ವಿಜಯನ್ ಸರಕಾರ ಯತ್ನಿಸುತ್ತಿರುವುದು. ಕಳೆದ ಒಂದು ವಾರದಲ್ಲಿ …

ಹವ್ಯಕ ವಲಯದಿಂದ ಮಧೂರು ಕ್ಷೇತ್ರಕ್ಕೆ ಕಸದ ಬುಟ್ಟಿ ಕೊಡುಗೆ

ಕಾಸರಗೋಡು: ಮುಳ್ಳೇರಿಯ ಹವ್ಯಕ ಮಂಡಲಾಂತರ್ಗತ ಹವ್ಯಕ ವಲಯ, ಕಾಸರಗೋಡು, ನೇತೃತ್ವದಲ್ಲಿ ಮನ್ನಿಪ್ಪಾಡಿ ಘಟಕದ ಗುರಿಕ್ಕಾರ ಮಹಾಲಿಂಗೇಶ್ವರ ಭಟ್‌ರ ಪ್ರಾಯೋಜಕತ್ವದಲ್ಲಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ 27 ಕಸ ಹಾಕುವ ಬುಟ್ಟಿಗಳನ್ನು ಕೊಡುಗೆಯಾಗಿ ಸಮರ್ಪಣೆ ಮಾಡಲಾಯಿತು.ಕ್ಷೇತ್ರದ ಅರ್ಚಕ ಕೃಷ್ಣಮೂರ್ತಿ ಕಲ್ಲೂರಾಯ ಪ್ರಾರ್ಥನೆ ನಡೆಸಿದರು. ಕಾಸರಗೋಡು ಹವ್ಯಕ ವಲಯದ ಅಧ್ಯಕ್ಷ ಗೋವಿಂದ ಭಟ್ ವೈ ಕೆ, ಕಾರ್ಯದರ್ಶಿ ಡಿ.ಎನ್ ಮಹೇಶ ಮನ್ನಿಪ್ಪಾಡಿ, ಪ್ರಾಯೋಜಕ ಮಹಾಲಿಂಗೇಶ್ವರ ಭಟ್ ಮನ್ನಿಪ್ಪಾಡಿ, ಪ್ರೇಮ್ ಪ್ರಕಾಶ್ ಮನ್ನಿಪ್ಪಾಡಿ , ಬಿ. ಮಹಾಬಲ ಭಟ್, ಉಳುವಾನ …

ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಕುಲಾಲ್‌ರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಮಂಗಳೂರು :ಕನ್ನಡ ರಾಜ್ಯೋ ತ್ಸವ ಆಚರಣಾ ಸಮಿತಿ ಕಲ್ಕೂರ ಪ್ರತಿಷ್ಠಾನ ಸಹಯೋಗದಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋ ತ್ಸವದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮುಂದಾಳು, ವಾಗ್ಮಿ, ಬದಿಯಡ್ಕ ತುಳುವೆರೆ ಆಯನೊ ಕೂಟದ ಅಧ್ಯಕ್ಷ, ಉಪ್ಲೇರಿ ಶ್ರೀಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಅವರಿಗೆ ಕಲ್ಕೂರ ರಾಜ್ಯೋತ್ಸವ ಪುರಸ್ಕಾರ ಪ್ರದಾನ ಮಾಡಲಾಯಿತು.ಮಂಗಳೂರು ಡಾನ್‌ಬಾಸ್ಕೋ ಹಾಲ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಖಿಲ ಭಾರತ ತುಳು ಒಕ್ಕೂಟದ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಶಾರದ ವಿದ್ಯಾ ಸಂಸ್ಥೆಗಳ ಮುಖ್ಯಸ್ಥ ಎಂ.ಬಿ. …

ಮಜೀರ್ಪಳ್ಳಕಟ್ಟೆ ಶ್ರೀ ಅಯ್ಯಪ್ಪ ಭಜನಾಮಂದಿರ ಭಜನೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಸೀತಾಂಗೋಳಿ : ನೀರ್ಚಾಲು ಮಜಿರ್ಪಳ್ಳಕಟ್ಟೆ, ಶಾಸ್ತಾನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕ ಭಜನೋತ್ಸವ ಡಿ. ೨೦ರಂದು ಜರಗಲಿದೆ. ಇದರ ಪೂರ್ವಭಾವಿಯಾಗಿ ತಿಂಗಳ ಮಹಾಸಭೆ ಮಂದಿರ ಪರಿಸರದಲ್ಲಿ ಜರಗಿತು. ಸಮಿತಿಯ ಅಧ್ಯಕ್ಷ ನವಿನಾಶ್ ಅಧ್ಯಕ್ಷತೆ ವಹಿಸಿದ್ದರು. ಗುರುಸ್ವಾಮಿ ರವಿ ಮಣಿಯಂಪಾರೆ ಮಾರ್ಗದರ್ಶನ ನೀಡಿದರು. ಹಿರಿಯ ಸದಸ್ಯರಾದ ಸೂರ್ಯ ನಿಡುಗಳ, ಐತ್ತಪ್ಪ ಕುಲಾಲ್, ಸೀತಾರಾಮ, ಶೇಖರ, ರಾಘವ, ಸುಧಾಕರ ಮಜಿರ್ಪಳ್ಳಕಟ್ಟೆ, ಲೋಕೇಶ್ ಮುಂಡಾನ್‌ತ್ತಡ್ಕ ಮಾತನಾಡಿದರು.ಇದೇ ಸಂಧರ್ಭದಲ್ಲಿ ಭಜನೋತ್ಸವದ ಆಮಂತ್ರಣ ಪತ್ರವನ್ನು ಗುರುಸ್ವಾಮಿ ರವಿ ಮಣಿಯಂಪಾರೆ ಹಿರಿಯ ಸದಸ್ಯ ಐತ್ತಪ್ಪ …

ರೈಲು ನಿಲ್ದಾಣದಲ್ಲಿ ನಿವೃತ್ತ ಎಸ್‌ಐ ಕುಸಿದು ಬಿದ್ದು ನಿಧನ

ಕಾಸರಗೋಡು: ಕೊಡಕ್ಕಾಡ್‌ನ ನಿವೃತ್ತ ಎಸ್‌ಐ ಪಾಲಕ್ಕಾಡ್ ರೈಲ್ವೇ ನಿಲ್ದಾಣದಲ್ಲಿ ಕುಸಿದು ಬಿದ್ದು ನಿಧನ ಹೊಂದಿದರು. ಕೊಡಕ್ಕಾಡ್ ವೇಂಙ ಪ್ಪಾರ ತನ್ನಿಮಂಗಲತ್ ಗೋವಿಂದ ವಾರ್ಯರ್‌ರ ಪುತ್ರ ರಾಮಚಂದ್ರ ವಾರ್ಯರ್ (65) ನಿಧನ ಹೊಂದಿದವರು. ನಿನ್ನೆ ಸಂಜೆ ಘಟನೆ ನಡೆದಿದೆ. ಪ್ಲಾಟ್ ಫಾರ್ಮ್‌ನಲ್ಲಿ ಕುಸಿದು ಬಿದ್ದ ರಾಮಚಂದ್ರ ವಾರ್ಯರ್‌ರನ್ನು ಆಸ್ಪತ್ರೆಗೆ ಕೊಂಡೊಯ್ಯಲಾ ಯಿತಾದರೂ ನಿಧನ ಸಂಭವಿಸಿದೆ. ಕಾಞಂಗಾಡ್, ಪಯ್ಯನ್ನೂರು ಸಹಿತ ವಿವಿಧ ಕಡೆಗಳಲ್ಲಿ ಎಸ್‌ಐ, ಎಎಸ್‌ಐ ಆಗಿ ಸೇವೆ ಸಲ್ಲಿಸಿದ್ದರು.

ಮೀಂಜ ಪಂಚಾಯತ್ ಬಿಜೆಪಿ ಕಚೇರಿ ಉದ್ಘಾಟನೆ

ಉಪ್ಪಳ: ಬಿಜೆಪಿ ಮೀಂಜ ಪಂಚಾಯತ್ ಸಮಿತಿ ಕಚೇರಿಯನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ ಎಲ್ ದೀಪ ಬೆಳಗಿಸಿ ಉದ್ಘಾ ಟಿಸಿ ದರು. ಚಂದ್ರಹಾಸ ಬೆಜ್ಜ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ, ಮುಖಂಡರಾದ ಸುನಿಲ್ ಪಿ.ಆರ್, ಮಾಧು ಒಳಪಿಲ್, ಮಣಿ ಕಂಠ ರೈ, ಎ.ಕೆ ಕಯ್ಯಾರ್, ಲೋಕೇಶ್, ಕೃಷ್ಣ ನಾವಡ, ಬೆಜ್ಜ ಕೃಷ್ಣ, ನಾರಾಯಣ ನಾಯ್ಕ್, ಶಾಲಿನಿ, ಜ್ಯೋತಿ, ಸಂತೋಷ್ ದೈಗೋಳಿ, ಪದ್ಮನಾಭ ರೈ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಯತೀರಾಜ್ ಶೆಟ್ಟಿ ಸ್ವಾಗತಿಸಿ, ಕೆ.ವಿ. …