ಉಪ್ಪಳದಲ್ಲಿ ರೆಸ್ಟೋರೆಂಟ್ ಬೆಂಕಿಗಾಹುತಿ

ಉಪ್ಪಳ: ಉಪ್ಪಳ ಚೆಕ್‌ಪೋಸ್ಟ್ ಬಳಿಯಿರುವ ರೆಸ್ಟೋರೆಂಟ್‌ಗೆ ಬೆಂಕಿ ತಗಲಿದ ಘಟನೆ ನಡೆದಿದೆ. ಇಲ್ಲಿನ ಕುಳಿಮಂದಿ ಎಂಬ ರೆಸ್ಟೋರೆಂಟ್‌ಗೆ ನಿನ್ನೆ ಬೆಳಿಗ್ಗೆ 11.30ರ ವೇಳೆ ಬೆಂಕಿ ತಗಲಿದೆ. ಘಟನೆ ವೇಳೆ ಇಬ್ಬರು ನೌಕರರು ಮಾತ್ರವೇ ರೆಸ್ಟೋರೆಂಟ್‌ನೊಳಗಿದ್ದರು. ಇವರು  ಅಪಾಯದಿಂದ ಪಾರಾಗಿದ್ದಾರೆ. ರೆಸ್ಟೋರೆಂಟ್‌ನ ಎದುರು ಭಾಗದಿಂದ ಬೆಂಕಿ ಹತ್ತಿಕೊಂಡಿದೆ. ವಿಷಯ ತಿಳಿದು ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ಬೆಂಕಿ ನಂದಿಸಿದೆ. ಫ್ಯಾನ್, ಫ್ರಿಡ್ಜ್ ಸಹಿತ ವಿವಿಧ ಸಾಮಗ್ರಿಗಳು ಉರಿದು ನಾಶಗೊಂಡಿದ್ದು, ಇದರಿಂದ ಭಾರೀ ನಷ್ಟ ಸಂಭವಿಸಿದೆ ಎಂದು ರೆಸ್ಟೋರೆಂಟ್ ಮಾಲಕ ವರ್ಕಾಡಿಯ …

ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಕೋವಿಡ್ ಕಾಲದಲ್ಲಿ ಗಲ್ಫ್ ಉದ್ಯೋಗ ಕಳೆದುಕೊಂಡು ಊರಿಗೆ ಬಂದಿದ್ದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನೆಟ್ಟಣಿಗೆ ಬಳಿಯ ಬೆಳೇರಿ ನಿವಾಸಿ ಬಿ. ವಿನೋದ್ ಕುಮಾರ್ (40) ಮೃತ ಯುವಕ. ಮೊನ್ನೆ ಸಂಜೆ ಮನೆ ಬಳಿಯಿರುವ ಹಳೆಯ ಮನೆಯೊಳಗೆ ಇವರು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಸಹೋದರ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸುಧಾಮ ಮಣಿಯಾಣಿ- ದಿ| ರಾಜೀವಿ ದಂಪತಿ ಪುತ್ರನಾದ ಮೃತರು ಸಹೋದರರಾದ ವಸಂತ, ಬಾಲಕೃಷ್ಣ, …

ಧಾರ್ಮಿಕ ಮುಂದಾಳು, ಹಿರಿಯ ವ್ಯಾಪಾರಿ ನಿಧನ

ಕುಂಬಳೆ: ಶೇಡಿಕಾವು ನಿವಾಸಿ ಧಾರ್ಮಿಕ ಮುಂದಾಳು ಹಾಗೂ ಹಿರಿಯ ವ್ಯಾಪಾರಿ ಸುಬ್ಬ ಪೂಜಾರಿ [ 96] ಶನಿವಾರ ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದರು. ಆರಿಕ್ಕಾಡಿ ಶ್ರೀ ಧೂಮಾವತಿ ದೈವಸ್ಥಾನ ಮತ್ತು ಕುಂಬಳೆ ಚಾವಡಿ ಶ್ರೀ ಧೂಮಾವತಿ ದೈವಸ್ಥಾನದ ಮುಖ್ಯಸ್ಥರಾಗಿದ್ದರು. ಅಲ್ಲದೆ ಕುಂಬಳೆ ಶ್ರೀ ಅಯ್ಯಪ್ಪ ಮಂದಿರ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ಗುರು ಸ್ವಾಮಿಯಾಗಿದ್ದರು. ಕುಂಬಳೆ ಮೀನು ಮಾರುಕಟ್ಟೆ ಬಳಿಯಲ್ಲಿ ಹಿರಿಯ ವ್ಯಾಪಾರಿಯಾಗಿದ್ದರು. ಮೃತರು ಮಕ್ಕಳಾದ ಹರಿಶ್ಚಂದ್ರ, ಮಾಲತಿ, ಗಣೇಶ, ಕೋಟಿ, ಚೆನ್ನಯ್ಯ, ರೋಹಿಣಿ, ರೇವತಿ, ಶಶಿ, …

ಪ್ರೀತಿಯ ನಾಟಕವಾಡಿ 10ಪವನ್ ಚಿನ್ನ ವಂಚಿಸಿದ ಪ್ರಕರಣ: ಯೂತ್ ಕಾಂಗ್ರೆಸ್ ನೇತಾರ ಸೆರೆ

ಕಾಸರಗೋಡು: ಪ್ರೀತಿಯ ನಾಟಕವಾಡಿ ಮನೆಯೊಡತಿಯಿಂದ 10 ಪವನ್ ಚಿನ್ನದೊಡವೆ ಪಡೆದು ಬಳಿಕ ವಂಚಿಸಿದ ಪ್ರಕರಣದ ಆರೋಪಿಯಾಗಿ ಯೂತ್ ಕಾಂಗ್ರೆಸ್ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಯೂತ್ ಕಾಂಗ್ರೆಸ್ ಕಾರ್ಯಕರ್ತ, ನೀಲೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ಐಎನ್‌ಟಿಯುಸಿ ನೇತಾರನೂ ಆಗಿರುವ ನೀಲೇಶ್ವರ ಮಾರ್ಕೆಟ್ ಬಳಿಯಕಾಟಿ ಕುಳದ ಶನೀರ್ ಬಂಧಿತ ಆರೋಪಿ. ಈತನನ್ನು ಕಲ್ಲಿಕೋಟೆ ವೈದ್ಯಕೀಯ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ. ಬೈಜು ನೇತೃತ್ವದ ಪೊಲೀಸರು ನೀಲೇಶ್ವರ ಪೊಲೀಸರ ಸಹಾಯದಿಂದ ಬಂಧಿಸಿದ್ದಾರೆ. ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ …

ಸೊಸೆ ಮೃತಪಟ್ಟ 3ನೇ ದಿನ ಅತ್ತೆ ನಿಧನ

ಬದಿಯಡ್ಕ: ಸೊಸೆ ಹೃದಯಾಘಾತದಿಂದ ಸಾವಿಗೀಡಾದ ಬೆನ್ನಲ್ಲೇ ಅತ್ತೆಯೂ ಮೃತಪಟ್ಟ ಘಟನೆ ನಡೆದಿದೆ. ದಿ| ಕಣ್ಣನ್ ಬೆಳ್ಚಪ್ಪಾಡರ ಪತ್ನಿಯೂ, ಕುಂಬ್ಡಾಜೆ ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಭಂಡಾರ ಮನೆಯಲ್ಲಿ ವಾಸಿಸುವ ಕಲ್ಯಾಣಿ ಅಮ್ಮ (92) ನಿನ್ನೆ ವೃದ್ದಾಪ್ಯ ಸಹಜ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಇವರ ಪುತ್ರ ಕೃಷ್ಣರ ಪತ್ನಿ ಹರಿಣಾಕ್ಷಿ (47) ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿ ದ್ದರು. ಮರಣಾನಂತರ ಕಾರ್ಯಗಳು ನಡೆಯುತ್ತಿರುವಂ ತೆಯೇ ಅತ್ತೆ ಕಲ್ಯಾಣಿ ಅಮ್ಮ ನಿಧನರಾಗಿದ್ದಾರೆ.  ಮೃತ ಕಲ್ಯಾಣಿ ಅಮ್ಮ  ಮಕ್ಕಳಾದ ಅಂಬಾಡಿ ಕಾರ್ನವರ್ …

ವರದಕ್ಷಿಣೆ ಕಿರುಕುಳ: ಪತಿ ಸಹಿತ ಸಂಬಂಧಿಕರ ವಿರುದ್ಧ ಕೇಸು

ಮಂಜೇಶ್ವರ:  ಹೆಚ್ಚುವರಿ ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪತಿ ಸಹಿತ ೫ ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಂಗಳೂರು ಜೆಪ್ಪು ನಿವಾಸಿ ತನಿಶಾ (25) ನೀಡಿದ ದೂರಿನಂತೆ ಪಚ್ಲಂಪಾರೆ ನಿವಾಸಿಗಳಾದ ಪತಿ ಅಬ್ದುಲ್ ಮಾಹಿನ್ (30), ಸಂಬಂಧಿಕರಾದ ಅಬ್ದುಲ್ ಮತ್ತೀನ್, ಹಸೀನಾಬಾನು, ಲತೀಫ್, ಉಪ್ಪಳ ಫಿರ್‌ದೋಸ್ ನಗರದ ಅಕ್ಬರ್ ಎಂಬ ವರ ವಿರುದ್ಧ ಕೇಸು ದಾಖಲಿಸಲಾಗಿದೆ. 2024 ಅಗೋಸ್ತ್ 4ರಂದು  ಇವರ ವಿವಾಹ ಧಾರ್ಮಿಕ ಪದ್ಧತಿಯ ಪ್ರಕಾರ ನಡೆದಿದೆ. ಮದುವೆಯ ಬಳಿಕ …

ಒಂದೂವರೆ ವರ್ಷ ಹಿಂದೆ ಕಂಚಿಕಟ್ಟೆ ಸೇತುವೆಯ ಎರಡೂ ಭಾಗದಲ್ಲಿ ನಿರ್ಮಿಸಿದ ಗೋಡೆ ನಾಶ: ವಾಹನ ಸಂಚಾರ ಆರಂಭ

ಕುಂಬಳೆ: ಅಪಾಯಭೀತಿಯೊ ಡ್ಡುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮುಚ್ಚುಗಡೆಗೊಳಿಸಿದ್ದ ಕಂಚಿಕಟ್ಟೆ ಸೇತುವೆಯ ಎರಡೂ ಭಾಗದಲ್ಲಿ ಸ್ಥಾಪಿಸಿದ್ದ ಕಾಂಕ್ರೀಟ್ ಗೋಡೆಯನ್ನು ಕೆಡವಲಾಗಿದೆ. ಒಂದೂವರೆ ವರ್ಷದಿಂದ ಸೇತುವೆಗೆ ಅಡ್ಡವಾಗಿ ನಿರ್ಮಿಸಿದ್ದ ಗೋಡೆಯನ್ನು ಕೆಡವುದರೊಂದಿಗೆ ಲಾರಿ ಸಹಿತ ವಿವಿಧ ವಾಹನಗಳು ಸೇತುವೆ ಮೂಲಕ ಸಂಚರಿ ಸತೊಡಗಿವೆ. ಸೇತುವೆ ಅಪಾಯಭೀತಿಯ ಲ್ಲಿದೆಯೆಂದು ನಾಗರಿಕರು ತಿಳಿಸಿದ ಹಿನ್ನೆಲೆಯಲ್ಲಿ ಒಂದೂವರೆ ವರ್ಷ ಹಿಂದೆ ಜಿಲ್ಲಾಧಿಕಾರಿ, ಮೈನರ್ ಇರಿಗೇಶನ್, ಲೋಕೋಪಯೋಗಿ ವಿಭಾಗಗಳ ಅಧಿಕಾರಿಗಳು, ಸೇತುವೆಯನ್ನು ಸಂದರ್ಶಿಸಿದರು. ಯಾವುದೇ ಕ್ಷಣದಲ್ಲಿ ಸೇತುವೆ ಕುಸಿಯಲು ಸಾಧ್ಯತೆ ಇದೆಯೆಂದೂ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿತ್ತು. …

ಶಬರಿಮಲೆ ಚಿನ್ನದ ಕವಚ ನಿಗೂಢವಾಗಿ ಸಾಗಿಸಿದ ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕು- ಶೋಭಾ ಸುರೇಂದ್ರನ್

ಬದಿಯಡ್ಕ: ಶಬರಿಮಲೆ ದೇಗುಲದ ಚಿನ್ನದ ಕವಚವನ್ನು ನಿಗೂಢವಾದ ರೀತಿಯಲ್ಲಿ ಸಾಗಿಸಿದ ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಆಗ್ರಹಪಟ್ಟಿದ್ದಾರೆ. ಜನಪ್ರತಿನಿಧಿಯಾಗಿ ೨೫ ವರ್ಷ ಪೂರ್ತೀಕರಿಸಿದ ಡಿ. ಶಂಕರರಿಗೆ ಬದಿಯಡ್ಕ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ನಡೆಸಲಾದ  ಅಭಿನಂದನಾ ಕಾರ್ಯಕ್ರಮ ಮತ್ತು  ಬಿಜೆಪಿ ಕಾರ್ಯಕರ್ತ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಶಬರಿಮಲೆ ದೇಗುಲದ ಚಿನ್ನದ ಕವಚವನ್ನು ನಿಗೂಢವಾದ ರೀತಿಯಲ್ಲಿ ಸಾಗಿಸಿದ ಘಟನೆ ಬಗ್ಗೆ ವಿಪಕ್ಷ ತಾಳುತ್ತಿರುವ ಮೌನ ಭಾರೀ ಶಂಕೆಗೆ ದಾರಿ …

ಹಮಾಸ್‌ನ್ನು ಬೆಂಬಲಿಸಿ ಸ್ಪರ್ಧೆ ಪ್ರದರ್ಶಿಸಲು ಮಕ್ಕಳನ್ನು ಒತ್ತಾಯಿಸಿದವರು ಯಾರು-ಶೋಭಾ ಸುರೇಂದ್ರನ್

ಕಾಸರಗೋಡು: ಕುಂಬಳೆ ಶಾಲಾ ಕಲೋತ್ಸವದಲ್ಲಿ ಹಮಾಸ್‌ನ್ನು ಬೆಂಬಲಿಸಿ ಮೂಕಾಭಿನಯ ಪ್ರದರ್ಶಿಸಲು  ಮಕ್ಕಳನ್ನು ಒತ್ತಾಯಿಸಿದವರು ಯಾರೆಂದು ಶಿಕ್ಷಣ ಸಚಿವ ತನಿಖೆ ನಡೆಸಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಒತ್ತಾಯಿಸಿದ್ದಾರೆ. ಕಾಸರಗೋಡಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಕಲೋತ್ಸವದಲ್ಲಿ ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸುವುದು ಗುರಿಯಾಗಿದೆ. ಅಲ್ಲದೆ ಉಗ್ರಗಾಮಿ ಸಂಘಟನೆಯೆಂದು ಇಡೀ ಪ್ರಪಂಚವೇ ಆರೋಪಿಸುವ  ಹಮಾಸನ್ನು ಬೆಂಬಲಿಸಿ ಸ್ಪರ್ಧೆ ಪ್ರದರ್ಶಿಸುವುದು ಸರಿಯೇ ಎಂದು ಶೋಭಾ ಸುರೇಂದ್ರನ್ ಪ್ರಶ್ನಿಸಿದ್ದಾರೆ. ದೇಶ ಅನುಸರಿಸುವ ವಿದೇಶ ನೀತಿಯನ್ನು ಪ್ರಶ್ನಿಸಲು ಯಾವ ವಿದ್ಯಾಭ್ಯಾಸ ಮಂತ್ರಿಗೆ …

ಧರ್ಮ ಸಂದೇಶ ಯಾತ್ರೆಗೆ ನಾಳೆ : ಕಾಸರಗೋಡಿನಿಂದ ಚಾಲನೆ

ಕಾಸರಗೋಡು: ಮಾರ್ಗದರ್ಶಕ ಮಂಡಳಿ ಕೇರಳ ಇದರ ಆಶ್ರಯದಲ್ಲಿ ಸನ್ಯಾಸಿಗಳು ನೇತೃತ್ವ ನೀಡುವ ಧರ್ಮ ಸಂದೇಶ ಯಾತ್ರೆ ನಾಳೆ ಕಾಸರಗೋಡಿ ನಿಂದ ಪ್ರಯಾಣ ಆರಂಭಿಸಲಿದೆ. ಕಾಸರಗೋಡಿನಿಂದ ತಿರುವನಂತಪುರ ತನಕ ಪ್ರಯಾಣ ನಡೆಸಲಿರುವ ಈ ಯಾತ್ರೆಯ ಉದ್ಘಾಟನೆ ನಾಳೆ ಅಪರಾಹ್ನ ೩ ಗಂಟೆಗೆ ಕಾಸರಗೋಡು ತಾಳಿಪಡ್ಪು ಮೈದಾನದಲ್ಲಿ ನಡೆಯಲಿದೆ. ಕೊಳತ್ತೂರು ಅದ್ವೈತಂ ಆಶ್ರಮದ ಮಠಾಧೀಶ ಹಾಗೂ ಮಾರ್ಗದರ್ಶಕ ಮಂಡಳಿಯ ರಾಜ್ಯ ಅಧ್ಯಕ್ಷರೂ ಆಗಿರುವ ಸ್ವಾಮಿ ಚಿದಾನಂದಪುರಿ ಪ್ರಧಾನ ಭಾಷಣಗಾರರಾಗಿ ಮಾತನಾಡಲಿದ್ದಾರೆ. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಕೊಂಡೆವೂರು …