ಸುಬ್ರಹ್ಮಣ್ಯದಲ್ಲಿ ಅಂಗಡಿ ಕಳವು: ಮಂಜೇಶ್ವರ ನಿವಾಸಿ ಸೆರೆ
ಮಂಜೇಶ್ವರ: ಸುಬ್ರಹ್ಮಣ್ಯ ಬಳಿ ಅಂಗಡಿಗಳಲ್ಲಿ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ನಿವಾಸಿಯಾದ ಯುವಕನನ್ನು ಬಂಧಿಸಲಾಗಿದೆ. ಸತೀಶ್ (40) ಎಂಬಾತನನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ. ಸುಬ್ರಹ್ಮಣ್ಯದ ಐನೆಕಿದು ಬಸ್ ನಿಲ್ದಾಣದಲ್ಲಿರುವ ಹಾಲು ಉತ್ಪಾದಕ ಸಹಕಾರಿ ಸಂಘದ ಕಚೇರಿ ಹಾಗೂ ಸಮೀಪದ ಅಂಗಡಿಗಳಲ್ಲಿ ಕಳವು ನಡೆದಿತ್ತೆನ್ನಲಾಗಿದೆ. ಸೋಮವಾರ ಇದು ಅರಿವಿಗೆ ಬಂದಿತ್ತು. ಈ ಬಗ್ಗೆ ಲಭಿಸಿದ ದೂರಿನಂತೆ ಸುಬ್ರಹ್ಮಣ್ಯ ಎಸ್‌ಐ ಕಾರ್ತಿಕ್ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿದೆ. ಆರೋಪಿ ಯ ಕೈಯಿಂದ 3057 ರೂ. ವಶಪಡಿಸ ಲಾಗಿದೆ. …
Read more “ಸುಬ್ರಹ್ಮಣ್ಯದಲ್ಲಿ ಅಂಗಡಿ ಕಳವು: ಮಂಜೇಶ್ವರ ನಿವಾಸಿ ಸೆರೆ”