ತಿರುವನಂತಪುರದಲ್ಲಿ ಅನುರಣಿಸಲಿದೆ ಕನ್ನಡ ಕಲರವ: ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ 23ರಂದು

ಕಾಸರಗೋಡು: ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ, ಭಾರತ್ ಭವನ್ ತಿರುವನಂತಪುರ ಕೇರಳ ಸರಕಾರ ಇದರ ಆಶ್ರಯದಲ್ಲಿ ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ ಹಾಗೂ ಕೃತಿ ಬಿಡುಗಡೆ ಈ ತಿಂಗಳ 23ರಂದು ಬೆಳಿಗ್ಗೆ 9ರಿಂದ ತಿರುವನಂತಪುರ ತೈಕಾಡ್ ಪೌಂಡ್ ಕಾಲನಿ ಸಿ.ವಿ. ರಾಮನ್ ಪಿಳ್ಳೆ ರಸ್ತೆಯಲ್ಲಿರುವ ಭಾರತ್ ಭವನದಲ್ಲಿ ನಡೆಯಲಿದೆ. 9ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 10ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಆಹಾರ ಮತ್ತು  ನಾಗರಿಕ ಸರಬರಾಜು ಇಲಾಖೆ ಸಚಿವ ಜಿ.ಆರ್. ಅನಿಲ್ ಉದ್ಘಾಟಿಸುವರು. ಕರ್ನಾಟಕ …

ಶ್ರೀ ಕ್ಷೇತ್ರ ಧರ್ಮಸ್ಥಳ ಬಗ್ಗೆ ಅಪಪ್ರಚಾರದ ಹಿಂದೆ ಕಮ್ಯೂನಿಸ್ಟರು- ಹಿಂದೂ ಐಕ್ಯವೇದಿ ಆರೋಪ

ಕಾಸರಗೋಡು: ಹಿಂದುಗಳ ಪವಿತ್ರ ಆರಾಧನಾ ಕೇಂದ್ರವಾದ ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಕಮ್ಯುನಿಸ್ಟರು ಮತ್ತು ಇಸ್ಲಾಂ ಮತೀಯ ಸಂಘಟನೆಗಳು ಸುಳ್ಳು ಕತೆಗಳನ್ನು ಕಟ್ಟಿ ನಿರಂತರ ಅಪ ಪ್ರಚಾರ ನಡೆಸುತ್ತಿರುವುದು ಅಕ್ಷಮ್ಯ ಅಪರಾಧವೆಂದು ಹಿಂದೂ ಐಕ್ಯವೇದಿ ಮಂಜೇಶ್ವರ ತಾಲೂಕು ಸಮಿತಿ ಖಂಡಿಸಿದೆ. ಜೈನಧರ್ಮ ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಕೇರಳದ ಯೂಟ್ಯೂಬರ್‌ಗಳಲ್ಲಿ ಕೆಲವರು ನಿರಂತರವಾಗಿ ಧರ್ಮಸ್ಥಳದ ಬಗ್ಗೆ ಅಪ ಪ್ರಚಾರ ನಡೆಸುತ್ತಿದೆ ಎಂದು ಆಪಾದಿಸಿದೆ. ಕೇರಳದಲ್ಲಿ ಅಲ್ಪ ಸಂಖ್ಯಾತರು ನಡೆಸುವ ಡಿವೈನ್ ಧ್ಯಾನಕೇಂದ್ರದಲ್ಲಿ ನೂರಾರು ಜನರು ಅನುಮಾನಾಸ್ಪದವಾಗಿ ಅಸಹಜ ಸಾವು …

ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ಬಟ್ಟೆಬರೆ, ದಾಖಲೆ ಪತ್ರ ನಾಶ

ಬಾಯಾರು: ಬಾಯಾರು ಬಳಿಯ ತಲೆಂಗಳ ಬೀರ್ನಕೋಡಿ ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಉಂಟಾಗಿ ಬಟ್ಟೆ ಬರೆ ಸಹಿತ ದಾಖಲೆ ಪತ್ರ ಉರಿದು ನಾಶಗೊಂಡಿದೆ. ಕುಂಟುAಬ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದೆ. ಪೈವಳಿಕೆ ಪಂಚಾಯತ್‌ನ ಬೀರ್ನಕೋಡಿಯಲ್ಲಿ ವಾಸವಾಗಿರುವ ಚೋಮ ಎಂಬವರ ಮನೆಯಲ್ಲಿ ಮಂಗಳವಾರ ಮುಂಜಾನೆ 4.30ರ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಕೊಠಡಿಯಲ್ಲಿ ಬೆಂಕಿ ಉರಿಯುತ್ತಿರುವುದು ಮನೆಯವರ ಗಮನಕ್ಕೆ ಬಂದಿದೆ. ಕೂಡಲೇ ಚೋಮ, ಇವರ ಪತ್ನಿ ಪುಷ್ಪ, ಮಗ ಸತೀಶ, ಸೊಸೆ ಹರಿಣಾಕ್ಷಿ ಹಾಗೂ ಮೊಮ್ಮಕ್ಕಳು ಹೊರಗೆ ಓಡಿ ಹೋಗಿ …

ಕಲ್ಯೋಟ್ ಅವಳಿ ಕೊಲೆ ಪ್ರಕರಣ: ಅವಳಿ ಜೀವಾವಧಿ ಶಿಕ್ಷೆ ಲಭಿಸಿದ 4ನೇ ಆರೋಪಿಗೆ 1 ತಿಂಗಳ ಪರೋಲ್ ಮಂಜೂರು

ಕಾಸರಗೋಡು: ಪೆರಿಯ ಕಲ್ಯೋಟ್ ಅವಳಿ ಕೊಲೆ ಪ್ರಕರಣದಲ್ಲಿ ಅವಳಿ ಜೀವಾವಧಿ ಶಿಕ್ಷೆ ಲಭಿಸಿದ ನಾಲ್ಕನೇ ಆರೋಪಿಗೆ 1 ತಿಂಗಳ ಪರೋಲ್ ಮಂಜೂರು ಮಾಡಲಾಗಿದೆ. ಪೆರಿಯ ಏಚಿಲಡ್ಕ ನಿವಾಸಿ ಅನಿಲ್ ಕುಮಾರ್‌ಗೆ ಪರೋಲ್ ಮಂಜೂರು ಮಾಡಲಾಗಿದೆ. ಆಗಸ್ಟ್ 18ರಿಂದ 30 ದಿನಕ್ಕೆ ಪರೋಲ್ ಅನ್ವಯವಾಗುವುದು. ಅನಿಲ್ ಕುಮಾರ್ ಜೈಲಿನಿಂದ ಹೊರಗೆ ಬಂದಿದ್ದಾನೆ. ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸಬೇಕೆಂದು ಪ್ರತೀ ದಿನ ಬೆಳಿಗ್ಗೆ ಇನ್ಸ್‌ಪೆಕ್ಟರ್‌ರ ಮುಂದೆ ಹಾಜರಾಗಿ ಸಹಿ ಹಾಕಬೇಕೆಂಬ ವ್ಯವಸ್ಥೆಯಲ್ಲಿ ಪರೋಲ್ ಮಂಜೂರು ಮಾಡಲಾಗಿದೆ. ಬೇಕಲ ಪೊಲೀಸ್ …

ಬಡಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನವೀಕೃತ ಕಟ್ಟಡ ಉದ್ಘಾಟನೆ

ಮಂಜೇಶ್ವರ: ಪಂಚಾಯತ್ ವತಿಯಿಂದ ಬಡಾಜೆ ಶಾಲೆಗೆ ದೊರ ಕಿದ ಸುಮಾರು 10 ಲಕ್ಷ ರೂ.ನಷ್ಟು ಅನುದಾನ ಬಳಸಿ ನಿರ್ಮಿ ಸಲಾದ ಶಾಲಾ ಕಟ್ಟಡ ಮತ್ತು ಇತರ ಅಭಿವೃದ್ಧಿ ಕಾರ್ಯಗಳ ಉದ್ಘಾಟನಾ ಕಾರ್ಯ ಕ್ರಮ ಜರಗಿತು. ಪಂಚಾಯತ್ ಅಧ್ಯಕ್ಷೆ ಜೀನ್ ಲವಿನಾ ಮೊಂತೆರೋ ಉದ್ಘಾಟಿಸಿದರು. ತರಗತಿ ಕೊಠಡಿಯ ಉದ್ಘಾಟನೆಯನ್ನು ಪಂ. ಉಪಾಧ್ಯಕ್ಷ ಮೊಹಮ್ಮದ್ ಸಿದ್ದಿಕ್. ಬಿ ನಿರ್ವ ಹಿಸಿ ದರು. ಮುಖ್ಯ ಅತಿಥಿಗಳಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಯಾದವ್ ಬಡಾಜೆ, ಪಿ.ಇ.ಸಿ ಸೆಕ್ರೆಟರಿ ಶಂಕರ ನಾರಾಯಣ ಭಟ್, ರಝಾಕ್ ಕಿಟ್ಟ …

ಪಂಚಾಯತ್ ಎಂದರೆ ಹೀಗಿರಬೇಕು!: ಕುಂಬಳೆ ಪಂ.ನಲ್ಲಿ ಆಡಳಿತ-ವಿಪಕ್ಷಗಳ ಮಧ್ಯೆ ತೀವ್ರ ಸೆಣಸಾಟ: ಭೋಜನ ಸೇವಿಸುವುದರಲ್ಲಿ ಸದಸ್ಯರು ಒಗ್ಗಟ್ಟು

ಕುಂಬಳೆ: ಭ್ರಷ್ಟಾಚಾರದ ವಿರುದ್ಧ ಪಕ್ಷಗಳ ಕಾರ್ಯಕರ್ತರು ಬೀದಿ ಗಿಳಿದು ಹೋರಾಟ ನಡೆಸುತ್ತಿರುವ ಕುಂಬಳೆ ಗ್ರಾಮ ಪಂಚಾಯತ್‌ನಲ್ಲಿ ಸದಸ್ಯರು ಭೋಜನ ಸೇವಿಸುವುದರಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಭ್ರಷ್ಟಾಚಾರ ವಿರುದ್ಧ ಇತ್ತೀಚೆಗಷ್ಟೇ ಪಂಚಾಯತ್‌ನ ಒಳಗೂ ಹೊರಗೂ ಹೋರಾಟಕ್ಕೆ ನೇತೃತ್ವ ನೀಡಿದ ವಿಪಕ್ಷ ಸದಸ್ಯರೂ, ಭ್ರಷ್ಟಾಚಾರ ಆರೋಪಕ್ಕೆಡೆಯಾದ ಆಡಳಿತ ಪಕ್ಷದ ಸದಸ್ಯರು ಹಾಗೂ ಅವರ ಜೊತೆಗೆ ಇತ್ತೀಚೆಗೆ ಆಡಳಿತ ಪಕ್ಷದ ವಿರುದ್ಧ ಆರೋಪಗಳ ಸುರಿಮಳೆಗೈದಿರುವ ಪಂಚಾಯತ್ ಕಾರ್ಯದರ್ಶಿ ಸಹಿತ ನಿನ್ನೆ ಮಧ್ಯಾಹ್ನ ಕುಂಬಳೆಯ ಆಡಂಭರ ಹೋಟೆಲ್‌ನಲ್ಲಿ ಒಗ್ಗಟ್ಟಾಗಿ ಒಂದೇ ಮೇಜಿನ ಸುತ್ತ ಕುಳಿತು …

ಮನೆಯೊಳಗೆ ಭಾರೀ ಪ್ರಮಾಣದಲ್ಲಿ ಪ್ರಾಚ್ಯವಸ್ತು ಸಂಗ್ರಹ ಮೈಸೂರು ಅರಮನೆಯಿಂದ ಕಳವುಗೈದ ಖಡ್ಗವೂ ಒಳಗೊಂಡ ಶಂಕೆ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟಿಕುಳಂನಲ್ಲಿ ಮುಚ್ಚಿದ ಮನೆಯೊಂದರಲ್ಲಿ ಭಾರೀ ಪ್ರಮಾಣದಲ್ಲಿ ಪ್ರಾಚ್ಯವಸ್ತು ಸಂಗ್ರಹ ಪತ್ತೆಹಚ್ಚಲಾಗಿದೆ. ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಬೇಕಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂ.ವಿ. ಶ್ರೀದಾಸ್, ಎಸ್‌ಐ ಸವ್ಯಸಾಚಿ ಎಂಬಿವರ ನೇತೃತ್ವದಲ್ಲಿ ಮನೆಯನ್ನು ತೆರೆದು ಪರಿಶೀಲಿಸಿದಾಗ ಪ್ರಾಚ್ಯ ವಸ್ತು ಸಂಗ್ರಹ ಪತ್ತೆಯಾಗಿದೆ. ಇದರಲ್ಲಿ ಕಂಚಿನ ಪಾತ್ರೆಗಳು, ಕಾಲ್ಗೆಜ್ಜೆಗಳು, ಖಡ್ಗಗಳು ಮೊದಲಾದ ಸಾಮಗ್ರಿಗಳು ಇವೆ. ಕೆಲವು ಸಾಮಗ್ರಿಗಳಲ್ಲಿ ಅರಬೀ ಅಕ್ಷರಗಳನ್ನು ಪತ್ತೆಹಚ್ಚಲಾಗಿದೆ. ಖಡ್ಗಗಳಲ್ಲಿ ಮೈಸೂರು ಅರಮನೆಯಿಂದ ಕಳವುಗೈದ ಖಡ್ಗವು ಇರುವುದಾಗಿ ಶಂಕಿಸಲಾಗಿದೆ. ಮನೆಗೆ …

ಬೇರಿಕೆ ಸಮುದ್ರ ಕಿನಾರೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಉಪ್ಪಳ: ಶಿರಿಯ ಬಳಿ ಬೇರಿಕೆ ಸಮುದ್ರ ಕಿನಾರೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಪತ್ತೆಯಾಗಿದೆ. ಇಂದು ಬೆಳಿಗ್ಗೆ 7.30ರ ವೇಳೆ ಮೃತದೇಹ ಕಂಡು ಬಂದಿದೆ. ಈ ಬಗ್ಗೆ  ಸ್ಥಳೀಯರು ನೀಡಿದ ಮಾಹಿತಿಯಂತೆ ಕರಾವಳಿ ಪೊಲೀಸರು ತಲುಪಿ ಪರಿಶೀಲನೆ ನಡೆಸಿದರು. ಇದು ಗಂಡಸಿನ ಮೃತದೇಹವೆಂದು ಖಚಿತಗೊಂಡಿದ್ದು, ಸುಮಾರು 50 ವರ್ಷ ಪ್ರಾಯ ಅಂದಾಜಿಸಲಾಗಿದೆ. ಮೃತದೇಹದಲ್ಲಿ ಕೆಂಪು ಬಣ್ಣದ ಅಂಗಿಯಿದೆ. ಸಾವಿಗೀಡಾಗಿ ಐದು ದಿನಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ತಲುಪಿಸಲಾಗಿದೆ. ಮೃತವ್ಯಕ್ತಿ ಯಾರೆಂದು ತಿಳಿಯಲು ಪ್ರಯತ್ನ ನಡೆಯುತ್ತಿದೆ. ಈ …

ಆಟೋ ಕಾರ್ಮಿಕ ಯೂನಿಯನ್‌ನ ಜಿಲ್ಲಾ ನೇತಾರ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಆಟೋರಿಕ್ಷಾ ಕಾರ್ಮಿಕ ಯೂನಿಯನ್ (ಐಎನ್‌ಟಿಯುಸಿ)ಯ ಜಿಲ್ಲಾ ಅಧ್ಯಕ್ಷ ವಿ.ವಿ. ಸುಧಾಕರನ್ (61) ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಇವರು ನೀಲೇಶ್ವರ ಕೊಟ್ರಚ್ಚಾಲ್ ನಿವಾಸಿ ಹಾಗೂ ಹೊಸದುರ್ಗ ಸಹಕಾರಿ ಬ್ಯಾಂಕ್ ನಿರ್ದೇಶಕ, ಕಾಂಗ್ರೆಸ್‌ನ ಹೊಸದುರ್ಗ ಬ್ಲೋಕ್‌ನ ಮಾಜಿ ಕಾರ್ಯದರ್ಶಿಯೂ ಆಗಿದ್ದರು. ಇವರು ನಿನ್ನೆ ತಮ್ಮ ಸ್ನೇಹಿತರಿಗೆ ವಾಟ್ಸಪ್‌ನಲ್ಲಿ ‘ನನ್ನನ್ನು ಕ್ಷಮಿಸಿ, ನಿಮ್ಮೆಲ್ಲರ ಕ್ಷಮೆ ಯಾಚಿಸುವೆ’ ಎಂಬ ಸಂದೇಶ ರವಾನಿಸಿದ್ದರು. ಅದಾದ ಅರ್ಧ ಗಂಟೆಯ ಬಳಿಕ ಅವರು ಚಲಾಯಿಸುತ್ತಿದ್ದ ಆಟೋರಿಕ್ಷಾ ಪಡನ್ನಕ್ಕಾಡ್ ನಂಬ್ಯಾರ್‌ಕಲ್ ರಸ್ತೆ …

ಕಾರಿನಲ್ಲಿ ಗಾಂಜಾ ಸಾಗಿಸಿದ ಪ್ರಕರಣ: ಆರೋಪಿಗೆ ಸಜೆ, ಜುಲ್ಮಾನೆ

ಕಾಸರಗೋಡು: ಕಾರಿನಲ್ಲಿ ಗಾಂಜಾ ಸಾಗಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯಾ ಅವರು ಮೂರು ವರ್ಷ ಕಠಿಣ ಸಜೆ ಹಾಗೂ 20,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕಣ್ಣೂರು ಧರ್ಮಡಂ ಮೀತ್ತಲ್ ಪೀಡಿಗ ನಿವಾಸಿ ಎನ್.ಕೆ. ಸಲ್ಮಾನ್ (26) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2020 ಜೂನ್ 2ರಂದು ಮುಂಜಾನೆ ಕುಂಬಳೆ- …