ತೃಶೂರಿನಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾದ ಮೂರು ಮಂದಿ ಕುಂಬಳೆಯಲ್ಲಿ ಸೆರೆ : ಮನೆಯ ಟೆರೇಸ್ ಮೇಲೆ ಅವಿತುಕೊಂಡಿದ್ದ ಆರೋಪಿಗಳು ; ಕುಂಬಳೆ, ತೃಶೂರು ಪೊಲೀಸರ ಸಂಯುಕ್ತ ಕಾರ್ಯಾಚರಣೆ

ಕುಂಬಳೆ: ತೃಶೂರಿನಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾದ ಮೂವರು ರೌಡಿಗಳನ್ನು ಕುಂಬಳೆಯ ಮನೆಯೊಂದರ ಟೆರೆಸ್‌ನ ಮೇಲಿನಿಂದ  ಕುಂಬಳೆ ಹಾಗೂ ತೃಶೂರು ಪೊಲೀಸರು ನಡೆಸಿದ ಸಂಯುಕ್ತ ಕಾರ್ಯಾಚರಣೆಯಲ್ಲಿ ಅತೀ ಸಾಹಸಿಕ ರೀತಿಯಲ್ಲಿ ಸೆರೆಹಿಡಿಯಲಾಗಿದೆ.  ತೃಶೂರು ಕರಿಕ್ಕುಳಿ  ಅಶೇರಿ ಕಯಟ್ಟಂ ಪಣಿಗ ಎಂಬಲ್ಲಿನ ಡುಡು ಯಾನೆ ಇಜಾಸ್ (27),  ಕರುವನ್ನೂರು ನೆಡುಂಬೂರಕ್ಕಲ್ ನಿವಾಸಿ ನಿಯಾಸ್ (31), ಪೊರತ್ತಿಶ್ಶೇರಿ ಪುರಾಯಾಟ್ಟು ಪರಂಬಿಲ್ ನಿವಾಸಿ ಗೋಕುಲ್‌ಕೃಷ್ಣ (27) ಎಂಬಿವರನ್ನು ಸೆರೆಹಿಡಿಯಲಾಗಿದೆ. ಕೊಟೇಶನ್, ಕಾಪಾ, ಮಾದಕವಸ್ತು, ಹತ್ಯೆಯತ್ನ ಸಹಿತ ಹಲವು ಪ್ರಕರಣಗಳಲ್ಲಿ ಈ ಆರೋಪಿಗಳು …

ತೋಟದಲ್ಲಿ ಕೆಲಸ ನಿರತನಾಗಿದ್ದ ವ್ಯಕ್ತಿ ಕುಸಿದು ಬಿದ್ದು ಮೃತ್ಯು

ಸೀತಾಂಗೋಳಿ: ಮುಗು ನೀರಮಟ್ಟು ಎಂಬಲ್ಲಿನ ಪಿ. ಅಬ್ದುಲ್ ಖಾದರ್ (55) ಕೆಲಸ ನಿರತನಾಗಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟರು. ಶೇಣಿ ಬಳಿಯ ಏಳ್ಕಾನದಲ್ಲಿ ಇವರು ತೋಟದಲ್ಲಿ ಮೊನ್ನೆ ಕೆಲಸ ನಿರತನಾಗಿದ್ದ ವೇಳೆ ಕುಸಿದು ಬಿದ್ದಿದ್ದರು. ಕೂಡಲೇ ಜತೆಗಿದ್ದವರು ಉಕ್ಕಿನಡ್ಕದಲ್ಲಿರುವ ಕಾಸರಗೋಡು ಜಿಲ್ಲಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ  ಜೀವ ರಕ್ಷಿಸಲಾಗಲಿಲ್ಲ. ಮೃತರು ಪತ್ನಿ ಖೈರುನ್ನಿಸ, ಪುತ್ರ ಶಿಬಿ, ಸಹೋದರ- ಸಹೋದರಿಯರಾದ ಮುಹಮ್ಮದ್, ಹಮೀದ್, ಅಲಿಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಲೂಡೊ ಕಾಯಿನ್ ನುಂಗಿ ೮ರ ಬಾಲಕಿ ಮೃತ್ಯು

ಮಧೂರು: ಲೂಡೊ ಆಟದ ಮಧ್ಯೆ ಅದರ ಕಾಯಿನ್ ನುಂಗಿದ ಉಳಿಯತ್ತಡ್ಕ ನಿವಾಸಿಯಾದ ೮ ವರ್ಷದ ಬಾಲಕಿ ಉಸಿರುಗಟ್ಟಿ ಮೃತಪಟ್ಟಳು. ಉಳಿಯತ್ತಡ್ಕ ರಾಜೇಶ್ ಗಟ್ಟಿ- ರಾಜೇಶ್ವರಿ ದಂಪತಿ ಪುತ್ರಿಯಾದ ತನುಷ್ಕ (8) ಮೃತಪಟ್ಟ ಬಾಲಕಿ. ಕೊಲ್ಯದಲ್ಲಿ ಅಧ್ಯಾಪಿಕೆಯಾಗಿರುವ ತಾಯಿಯ ಜೊತೆ ಪುತ್ರಿ ಸಹಿತದ ಕುಟುಂಬ ವಾಸವಾಗಿದೆ. ಶನಿವಾರ ಮಧ್ಯೆ ಸಹೋದರನ ಜೊತೆ ಮನೆಯಲ್ಲಿ ಆಟವಾಡುತ್ತಿದ್ದ ಮಧ್ಯೆ ಅಜಾಗ್ರತೆಯಿಂದ ಲೂಡೊ  ಕಾಯಿನ್ ಬಾಲಕಿ ನುಂಗಿದ್ದಾಳೆ. ಉಳ್ಳಾಲದಲ್ಲಿನ ಶಾಲೆಯೊಂದರಲ್ಲಿ ಅಧ್ಯಾಪಿಕೆಯಾಗಿದ್ದಾರೆ ಬಾಲಕಿಯ ತಾಯಿ. ಇಲ್ಲಿಗೆ ಸಮೀಪದ ಬಾಡಿಕೆ ಮನೆಯಲ್ಲಿ ಇವರು ವಾಸಿಸುತ್ತಿದ್ದಾರೆ. …

ಪುತ್ತಿಗೆ ಪಂಚಾಯತ್ ಹಿಂದೂ ವಿರಾಟ್ ಸಂಗಮ: ಮನೆಮನೆ ಸಂಪರ್ಕ ಅಭಿಯಾನ

ಸೀತಾಂಗೋಳಿ: ಸೂರಂಬೈಲು ಸಾಯಿರಾಂ ನಗರದಲ್ಲಿ ಮಾರ್ಚ್ ೮ರಂದು ನಡೆಯಲಿರುವ ಪುತ್ತಿಗೆ ಪಂಚಾಯತ್ ಮಟ್ಟದ ವಿರಾಟ್ ಹಿಂದೂ ಸಂಗಮದ ಅಂಗವಾಗಿ ನಿನ್ನೆ ಮಹಾ ಸಂಪರ್ಕ ಅಭಿಯಾನ ನಡೆಯಿತು. ಶಡ್ರಂಪಾಡಿ, ಮುಗು ದೇವಸ್ಥಾನಗಳಿಂದ ಆರಂಭಗೊಂಡ ಅಭಿಯಾನ ಮುಗು, ಅನೋಡಿಪಳ್ಳ, ವಿಕಾಸ್‌ನಗರ, ಕಣ್ಣೂರು, ಸೂರಂಬೈಲು ಪ್ರದೇಶದ ಮನೆಗಳನ್ನು ಸಂಪರ್ಕಿಸಲಾ ಯಿತು. ಆಮಂತ್ರಣ ಪತ್ರ ಮತ್ತು ಓಂಕಾರ ಧ್ವಜಗಳನ್ನು ವಿತರಿಸಲಾಯಿತು. ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಕಲ್ಪೋಕ್ತ ಶ್ರೀ ಲಕ್ಷ್ಮೀ ಸತ್ಯನಾರಾಯಣ ಪೂಜೆ ವೇಳೆ ಆಮಂತ್ರಣ ಪತ್ರ ಮತ್ತು ಧ್ವಜವನ್ನು …

ಮಿಂಚಿಪದವು ಕ್ಷೇತ್ರ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ ಎಡನೀರು ಶ್ರೀಗಳಿಂದ ಉದ್ಘಾಟನೆ

ಮುಳ್ಳೇರಿಯ: ಮಿಂಚಿಪದವು ಶ್ರೀ ಕಾವೇರಿಯಮ್ಮ ಮಹಾಲಿಂಗೇಶ್ವರ ದೇಗುಲದ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದಂಗವಾಗಿ ನಿನ್ನೆ ಸಂಜೆ ನಡೆದ ಧಾರ್ಮಿಕ ಸಭೆಯನ್ನು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದಾಮೋದರ ಎಂ. ಅಧ್ಯಕ್ಷತೆ ವಹಿಸಿದರು. ಹಿಂದೂ ಐಕ್ಯವೇದಿ ರಾಜ್ಯ ಕಾರ್ಯಾಧ್ಯಕ್ಷ ವಲ್ಸನ್ ತಿಲ್ಲಂಗೇರಿ, ಧಾರ್ಮಿಕ ಚಿಂತಕ ಲಕ್ಷ್ಮೀಶ ಗಬ್ಲಡ್ಕ ಉಪನ್ಯಾಸ ನೀಡಿದರು. ತಲಶ್ಶೇರಿ ಚೀಫ್ ಜ್ಯುಡೀಶ್ಯಲ್ ಮೆಜಿಸ್ಟ್ರೇಟ್ ಕರುಣಾಕರ ಕೆ.ಕೆ.ಪುರ, ಮಾಜಿ ಶಾಸಕ ಬಾಲಕೃಷ್ಣ ಭಟ್ ಕೋಳಿಕ್ಕಜೆ, ಬ್ರಹ್ಮಕಲಶೋತ್ಸವ ಸಮಿತಿ …

ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯ ಇ. ಅಬ್ದುಲ್ಲ ಕುಂಞಿಗೆ ಗೌರವ ಡಾಕ್ಟರೇಟ್

ಕಾಸರಗೋಡು: ದೆಹಲಿ ಕೇಂದ್ರವಾಗಿ ಕಾರ್ಯಾಚರಿಸುವ ವರ್ಲ್ಡ್ ಕಲ್ಚರಲ್ ಆಂಡ್ ಎಜ್ಯುಕೇಶನಲ್ ಆರ್ಗನೈಸೇಶನ್‌ನ ಗೌರವ ಡಾಕ್ಟರೇಟ್ ಇ. ಅಬ್ದುಲ್ ಕುಂಞಿಯವರಿಗೆ ಲಭಿಸಿದೆ. ಶಿಕ್ಷಣ, ಸಾಮಾಜಿಕ ವಲಯದಲ್ಲಿ ಕೈಗೊಂಡ ಚಟುವಟಿಕೆಗಳನ್ನು ಪರಿಗಣಿಸಿ ಈ ಗೌರವ ಲಭಿಸಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಗುಲ್ಶನ್ ಗ್ರೋವರ್ ಪದವಿ ಪ್ರದಾನ ಮಾಡಿದರು. ಶಿಕ್ಷಣ, ಸಾಮಾಜಿಕ ವಲಯದಲ್ಲಿ ಇ. ಅಬ್ದುಲ್ಲ ಕುಂಞಿ ಸಕ್ರಿಯರಾಗಿದ್ದಾರೆ. ಕಾಸರಗೋಡು ಫ್ಯಾಮಿಲಿ ವೆಲ್ಫೇರ್ ಸೊಸೈಟಿ ಅಧ್ಯಕ್ಷನಾಗಿರುವ ಇವರು ರಸ್ತೆ ಅಪಘಾತಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಲು ಹಲವಾರು ಕಾರ್ಯಗಳನ್ನು …

ಕರ್ನಾಟಕ ಎಸ್.ಆರ್.ಟಿ.ಸಿ ಬಸ್-ಕಾರು ಢಿಕ್ಕಿ :ಪೈಕ ನಿವಾಸಿ ದಾರುಣ ಮೃತ್ಯು; ಪುತ್ರ ಗಂಭೀರ

ಬದಿಯಡ್ಕ: ಕೆಳಗಿನ ನೆಲ್ಲಿಕಟ್ಟೆಯಲ್ಲಿ ಇಂದು ಮುಂಜಾನೆ ಕರ್ನಾಟಕ ಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಢಿಕ್ಕಿ ಹೊಡೆದು  ತಂದೆ ಸಾವನ್ನಪ್ಪಿ ಪುತ್ರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕೆಳಗಿನ ನೆಲ್ಲಿಕಟ್ಟೆ ನಿವಾಸಿ ಹಾಗೂ ಹಿಂದೆ ಗಲ್ಫ್‌ನಲ್ಲಿ ದುಡಿಯುತ್ತಿದ್ದ ಶಂಸುದ್ದೀನ್ ಪೈಕ (68)  ಸಾವನ್ನಪ್ಪಿದ ವ್ಯಕ್ತಿ. ಈ ಅಪಘಾತದಲ್ಲಿ  ಅವರ ಪುತ್ರ ಸಲ್ಮಾನ್ ಫಾರೀಸ್ (22) ಗಂಭೀರ ಗಾಯಗೊಂಡಿದ್ದು ಅವರನ್ನು ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿದೆ. ಇಂದು ಬೆಳಿಗ್ಗೆ 6 ಗಂಟೆಗೆ ವಿದ್ಯಾನಗರ-ಬದಿಯಡ್ಕ ಠಾಣೆಯ ಗಡಿಪ್ರದೇಶವಾದ ಕೆಳಗಿನ ನೆಲ್ಲಿಕಟ್ಟೆಯಲ್ಲಿ …

ಗರ್ಭಿಣಿ ಪತ್ನಿಯನ್ನು ಡಾಕ್ಟರ್‌ಗಳ ಅನುಮತಿಯಿಲ್ಲದೆ ಡಿಸ್ಚಾರ್ಜ್ ಮಾಡಲಿಲ್ಲ: ಪರಿಯಾರಂ ಮೆಡಿಕಲ್ ಕಾಲೇಜಿನ ಲೇಬರ್ ರೂಂ ಹೊಡೆದು ಹಾನಿಗೊಳಿಸಿದ ಯುವಕ

ಪರಿಯಾರಂ: ಗರ್ಭಿಣಿಯಾದ ಪತ್ನಿಯನ್ನು ಡಾಕ್ಟರ್‌ಗಳ ಅನುಮತಿಯಿಲ್ಲದೆ ಡಿಸ್ಚಾರ್ಜ್ ಮಾಡಲು ಸಾಧ್ಯವಿಲ್ಲವೆಂಬ ನೌಕರರ  ನಿಲುವನ್ನು ಪ್ರತಿಭಟಿಸಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಲೇಬರ್ ರೂಂ ಹೊಡೆದು ನಾಶಪಡಿಸಲಾಗಿದೆ. ಘಟನೆಯಲ್ಲಿ ಕಾಞಂಗಾಡ್ ಒಳಿಂಞವಳಪ್ ನಿವಾಸಿ ರಾಶಿದ್ (24)ನನ್ನು ಪರಿಯಾರಂ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ 7.30ರ ವೇಳೆ ಘಟನೆ ನಡೆದಿದೆ. ರಾಶಿದ್‌ನ ಪತ್ನಿಯನ್ನು ಹೆರಿಗೆಗಾಗಿ ಲೇಬರ್ ಕೊಠಡಿಗೆ ಕೊಂಡೊಯ್ಯ ಲಾಗಿತ್ತು. ಈ ಮಧ್ಯೆ ತಲುಪಿದ ರಾಶಿದ್ ಪತ್ನಿಯನ್ನು ಕೂಡಲೇ ಡಿಸ್ಚಾರ್ಜ್ ಮಾಡಬೇಕೆಂದು ಆಗ್ರಹಿಸಿದ್ದನೆನ್ನ ಲಾಗಿದೆ. ಆದರೆ ಡಾಕ್ಟರ್‌ಗಳ ಅನುಮತಿ ಇಲ್ಲದೆ …

ಆರೋಗ್ಯ ಸಚಿವೆ ಮನೆ ಬಾಗಿಲಿಗೆ ಪುಷ್ಪಗುಚ್ಛವಿರಿಸಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರು

ತಿರುವನಂತಪುರ: ಆಲಪ್ಪುಳ ವಂಡಾನಂ ಮೆಡಿಕಲ್ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆ ಮಧ್ಯೆ ಯುವತಿಯ ಹೊಟ್ಟೆಯಲ್ಲಿ ಕತ್ತರಿ ಮರೆತು ಹೋದ ಘಟನೆಯಲ್ಲಿ ಯೂತ್ ಕಾಂಗ್ರೆಸ್ ತೀವ್ರ ಪ್ರತಿಭಟನೆ ಮುಂದುವರಿಸುತ್ತಿದೆ. ಇಂದು ಬೆಳಿಗ್ಗೆ 8 ಗಂಟೆ ವೇಳೆಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಆರೋಗ್ಯ ಸಚಿವೆ ವೀಣಾ ಜೋರ್ಜ್‌ರ ಮನೆ ಮುಂಭಾಗದಲ್ಲಿ ಪುಷ್ಪಗುಚ್ಚ ಇರಿಸಿದರು. ಮಾಹಿತಿ ತಿಳಿದು ಪೊಲೀಸರು ತಲುಪಿ ಕಾರ್ಯಕರ್ತರನ್ನು ಬಂಧಿಸಿ ಪುಷ್ಪಗುಚ್ಚವನ್ನು ತೆರವುಗೊಳಿಸಿದರು. ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಾಗಿ ತಲುಪುವಾಗ ಸಚಿವೆಯ ಮನೆ ಮುಂಭಾಗದಲ್ಲಿ ಮೂರು ಮಂದಿ ಪೊಲೀಸರು ಮಾತ್ರವಿದ್ದರು. ಇವರನ್ನು …

ಮಹಿಳೆಯ ಉದರದಲ್ಲಿ ಕತ್ತರಿ ಸಿಲುಕಿದ ಘಟನೆ: ಪ್ರಕರಣ ದಾಖಲಿಸಿದ್ದು ಓವೆ ವೈದ್ಯೆಯ ವಿರುದ್ಧ ಮಾತ್ರ; ಇಬ್ಬರ ಅಮಾನತು

ಆಲಪ್ಪುಳ: ಆಲಪ್ಪುಳ ವೈದ್ಯಕೀಯ ಕಾಲೇಜಿನಲ್ಲಿ ೫ ವರ್ಷ ಗಳ ಹಿಂದೆ ಶಸ್ತ್ರಕ್ರಿಯೆಗೊಳಗಾದ ಅಂಬಲಪುಳದ ಉಷಾ ಜೋಸೆಫ್ (52)ರ ಉದರದಲ್ಲಿ ಕತ್ತರಿ ಸಿಲುಕಿಕೊಂಡ ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಪ್ರಸ್ತುತ ವೈದ್ಯಕೀಯ ಕಾಲೇಜಿನಲ್ಲಿ ಅಂದು ಹೆರಿಗೆ  ವಿಭಾಗದ ಮುಖ್ಯಸ್ಥರಾಗಿದ್ದ ಡಾ| ಲಲಿತಾಂಬಿಕರ ಹೆಸರಲ್ಲಿ ಮಾತ್ರವೇ ಈ ಪ್ರಕರಣ ದಾಖಲಿಸಲಾಗಿದೆ.  ಉಷಾ ಜೋಸೆಫ್‌ರ ಸಂಬಂಧಿಕರು ನೀಡಿದ ದೂರಿನಂತೆ ಅಂಬಲಪುಳ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 2021 ಮೇ 12ರಂದು ಉಷಾ ಜೋಸೆಫ್‌ರನ್ನು ಶಸ್ತ್ರಕ್ರಿಯೆಗೊಳಪಡಿಸ ಲಾಗಿತ್ತು. ಅಂದು ಡಾ| ಲಲಿತಾಂಬಿಕೆ …