ಶಿವರಾತ್ರಿ ಉತ್ಸವ ಮಧ್ಯೆ ಬಿದ್ದು ಸಿಕ್ಕಿದ 5 ಪವನ್‌ನ ಚಿನ್ನದ ಸರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಮಹಿಳೆ
ಉಪ್ಪಳ: ಅಂಬಾರು ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆದ ಮಹಾ ಶಿವರಾತ್ರಿ ಮಹಾಪೂಜೆ ವೇಳೆ ಕ್ಷೇತ್ರಕ್ಕೆ ಆಗಮಿಸಿದ ಭಕ್ತೆಯೋರ್ವಳ 5 ಪವನ್ ತೂಕದ ಚಿನ್ನದ ಸರ ನಾಪತ್ತೆಯಾದ ಘಟನೆ ನಡೆದಿದ್ದು, ಅಲ್ಪ ಹೊತ್ತಿನಲ್ಲೇ ಲಭಿಸಿದ ಮಹಿಳೆ ಅದನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಮಲ್ಲಂಗೈ ನಿವಾಸಿಯಾದ ಐಶ್ವರ್ಯ ಶಿವರಾಮ ಶೆಟ್ಟಿ ಎಂಬ ವರು ನಿನ್ನೆ ಶಿವರಾತ್ರಿ ಉತ್ಸವದಲ್ಲಿ ಭಾಗವಹಿಸಲು ಕ್ಷೇತ್ರಕ್ಕೆ ಆಗಮಿಸಿ ದ್ದರು. ಈ ವೇಳೆ ಅವರ ಚಿನ್ನದ ಸರ ನಾಪತ್ತೆಯಾಗಿತ್ತು. ಕೂಡಲೇ ಅವರು ಕ್ಷೇತ್ರದ ಸಮಿತಿಯವರಲ್ಲಿ ತಿಳಿಸಿದ್ದು, ಅರ್ಚಕ …