ಕೇಂದ್ರ ಸಚಿವ ಸುರೇಶ್‌ಗೋಪಿ ಕಚೇರಿಯ ನಾಮಫಲಕಕ್ಕೆ ಕರಿ ಆಯಿಲ್ ಸುರಿದ ದುಷ್ಕರ್ಮಿಗಳು: ಬಿಜೆಪಿಯಿಂದ ವ್ಯಾಪಕ ಪ್ರತಿಭಟನೆ
ತೃಶೂರು: ಕೇಂದ್ರ ಸಚಿವ ಸುರೇಶ್ ಗೋಪಿಯವರ ಕಚೇರಿಯ ನಾಮಫಲ ಕಕ್ಕೆ ದುಷ್ಕರ್ಮಿಗಳು ಕರಿ ಆಯಿಲ್ ಸುರಿದು ವಿಕೃತಗೊಳಿ ಸಿದ್ದಾರೆ. ಇದನ್ನು ಪ್ರತಿಭಟಿಸಿ ಬಿಜೆಪಿ ಇಂದು ರಾಜ್ಯ ವ್ಯಾಪಕವಾಗಿ ಪ್ರತಿಭಟನೆ ಆರಂಭಿಸಿದೆ. ತೃಶೂರಿನ ಚೇರೂರ್‌ನಲ್ಲಿ ಸುರೇಶ್‌ಗೋಪಿಯ ಎಂ.ಪಿ ಕಚೇರಿ ಇದ್ದು ಅದರ ನಾಮಫಲಕಕ್ಕೆ ನಿನ್ನೆ ಸಂಜೆ ಕರಿ ಆಯಿಲ್ ಪ್ರಯೋಗ ನಡೆಸಲಾಗಿದೆ. ಇದು ಸಿಪಿಎಂ ನಡೆಸಿದ ದುಷ್ಕೃತ್ಯವಾಗಿದೆಯೆಂದು ಬಿಜೆಪಿ ಆರೋಪಿಸಿದೆ. ಅದರ ವಿರುದ್ಧ ತೃಶೂರಿನಾದ್ಯಂತ ಭಾರೀ ಪ್ರತಿಭಟನೆ ನಡೆಸಿದೆ. ಪ್ರತಿಭಟನಾ ಮೆರವಣಿಗೆ ಘರ್ಷಣೆಗೂ ದಾರಿ ಮಾಡಿಕೊಟ್ಟಿತು. ಅದರಲ್ಲಿ ಬಿಜೆಪಿ …