ಗಾಳಿಯಡ್ಕದ ಲಾರಿ ಚಾಲಕ ಆಸೀಫ್‌ನ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಸರ್ಕಾರ ವಿಫಲ-ಕಾಂಗ್ರೆಸ್

ಪೈವಳಿಕೆ: ಕಳೆದ ಜನವರಿ ತಿಂಗಳಲ್ಲಿ ಬಾಯಾರು ಧರ್ಮಡ್ಕದಲ್ಲಿ ಅಸಹಜ ರೀತಿಯಲ್ಲಿ ಅಕ್ರಮಣಕ್ಕೊ ಳಗಾಗಿ ಕಂಡುಬಂದ ಬಳಿಕ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮೃತಪಟ್ಟ ಬಾಯಾರು ಗಾಳಿಯಡ್ಕದ ಲಾರಿ ಚಾಲಕ ಮೊಹ್ಮದ್ ಆಸೀಫ್‌ರ ಸಾವಿನ ಬಗೆಗಿನ ತನಿಖೆಯಲ್ಲಿ ತಿಂಗಳು ಎಂಟು ಆದರೂ ಯಾವುದೇ ಪ್ರಗತಿ ಇಲ್ಲದಿರುವುದು ನಮ್ಮ ರಾಜ್ಯದ ಪೊಲೀಸ್ ಇಲಾಖೆಯ ಸಾಮರ್ಥ್ಯದ ಕೈಗನ್ನಡಿಯಾಗಿದೆಯೆಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್ ಹೇಳಿದರು. ಈ ವಿಚಾರದಲ್ಲಿ  ಸರಕಾರ ತುರ್ತಾಗಿ ಸ್ಪಂದಿಸಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡದೇ ಇದ್ದಲ್ಲಿ ಪಕ್ಷ ಚಳವಳಿಗೆ ಸಿದ್ಧರಾಗಬೇಕಾದೀತು …

ತಿರುವನಂತಪುರದಲ್ಲಿ ಕನ್ನಡ ಕೃತಿ ‘ಗುರುದರ್ಶನ’ ಬಿಡುಗಡೆ

ತಿರುವನಂತಪುರ: ಲೇಖಕ ಶಿವಾನಂದ ಕೋಟ್ಯಾನ್ ಕಟಪಾಡಿ ಅವರು ನಾರಾಯಣ ಗುರುಗಳ ಕುರಿತು ಬರೆದ ಗುರುದರ್ಶನ ಕನ್ನಡ ಕೃತಿಯನ್ನು ಕೇರಳದ ತಿರುವನಂತ ಪುರದಲ್ಲಿ ಬಿಡುಗಡೆಗೊಳಿ ಸಲಾಯಿತು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಬಿಕಾರ, ಕರ್ನಾಟಕ ಸರಕಾರ, ಭಾರತ್ ಭವನ ತಿರುವನಂತಪುರ ಕೇರಳ ಸರಕಾರಗಳ ಆಶ್ರಯದಲ್ಲಿ ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ ಸಮಾರೋಪ ಸಮಾರಂಭದಲ್ಲಿ ರಾಜ್ಯ ಶಿಕ್ಷಣ ಸಚಿವ ಶಿವನ್ ಕುಟ್ಟಿ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ನಾರಾಯಣ ಗುರುಗಳ ತತ್ವಾದ ರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅವರ ಜೀವನ ಚರಿತ್ರೆಯನ್ನು ಮುಂದಿನ …

ಉಳಿಯತ್ತಡ್ಕದಲ್ಲಿ ಓಣಂ ಮಾರಾಟ ಮಳಿಗೆ ಆರಂಭ

ಮಧೂರು: ಮಧೂರು ಅಗ್ರಿಕಲ್ಚರಿಸ್ಟ್ ಸಹಕಾರಿ ಸಂಘದ ವತಿಯಿಂದ ನಡೆಸುವ ಓಣಂ ಮಾರಾಟ ಮಳಿಗೆಯನ್ನು ಸಂಘದ ಅಧ್ಯಕ್ಷ ಎಂ. ಕೆ.ರವೀಂದ್ರನ್ ಉದ್ಘಾಟಿಸಿದರು.ಉಪಾಧ್ಯಕ್ಷ ಎಂ ಅಶೋಕ ರೈ ಅಧ್ಯಕ್ಷತೆ ವಹಿಸಿದರು.ಮಾಜಿ ಅಧ್ಯಕ್ಷ ಎ.ರವೀಂದ್ರನ್, ತುಳು ಅಕಾಡೆಮಿ ಸದಸ್ಯ ಕೆ ಬುಜಂಗ ಶೆಟ್ಟಿ, ಪಂಚಾಯತ್ ಸದಸ್ಯರಾದ ಸಿ ಉದಯ್ ಕುಮಾರ್, ಪಿ ಎಂ ಬಶೀರ್, ಮೊಹಮ್ಮದ್ ಅಸ್ಲಾಂ ಶುಭ ಹಾರೈಸಿದರು. ಕಾರ್ಯದರ್ಶಿ. ರಾಜಶ್ರೀ ಸ್ವಾಗತಿಸಿ, ನಿರ್ದೇಶಕ ಶ್ರೀ ಸುಬ್ರಮಣ್ಯ ತಂತ್ರಿ ವಂದಿಸಿದರು.

ಮಂಜೇಶ್ವರ ತಾಲೂಕು ಮಟ್ಟದ ಓಣಂ ಸಂತೆ ಉದ್ಘಾಟನೆ

ಸೀತಾಂಗೋಳಿ:  ಮಂಜೇಶ್ವರ ತಾಲೂಕು ಮಟ್ಟದ ಓಣಂ ಸಂತೆಯ ಉದ್ಘಾಟನೆ ಎಡನಾರು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ನೇತೃತ್ವದಲ್ಲಿ ಸೀತಾಂಗೋಳಿಯಲ್ಲಿ ನಡೆಯಿತು. ಬ್ಯಾಂಕ್‌ನ ಅಧ್ಯಕ್ಷ ಶ್ಯಾಮರಾಜ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ಉದ್ಘಾಟಿಸಿ ಮಾತನಾಡಿದರು. ಅಸಿಸ್ಟೆಂಟ್ ರಿಜಿಸ್ಟ್ರಾರ್ ರವೀಂದ್ರ ಎ. ಓಣಂ ಕಿಟ್‌ನ ಪ್ರಥಮ ವಿತರಣೆಯ ಮಾಡಿದರು. ವಿವಿಧ ಬ್ಯಾಂಕ್‌ಗಳ ಅಧ್ಯಕ್ಷರು, ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿ ದ್ದರು. ಬ್ಯಾಂಕಿನ ನಿರ್ದೇಶಕರು ಹಾಗೂ ಸರ್ಕಲ್ ಸಹಕಾರಿ ಯೂನಿಯನ್‌ನ ನಿರ್ದೇಶಕರು ಆಗಿರುವ ಶ್ರೀಕೃಷ್ಣ ಪ್ರಸಾದ …

ನಾಡಿನಾದ್ಯಂತ ಗಣೇಶೋತ್ಸವ ಸಂಭ್ರಮ

ಕಾಸರಗೋಡು: ವಿದ್ಯಾ ಬುದ್ಧಿ ಸಿದ್ಧಿದಾಯಕ ಪ್ರಥಮ ವಂದ್ಯಾ ಸಿದ್ದಿವಿನಾಯಕನ ಜನ್ಮದಿನವಾದ ಗಣೇಶ ಚತುರ್ಥಿ ಹಬ್ಬಕ್ಕೆ ಅಬ್ಬರದ ಮಳೆಯ ನಡುವೆಯೂ ವೈಭವದ ಕಳೆ ಕಂಡು ಬರುತ್ತಿದೆ. ವಿಘ್ನ ನಿವಾರಕನಾದ ವಿಘ್ನೇಶ್ವರನ ಉತ್ಸವಾಚರಣೆಯ ಸಂಭ್ರಮಕ್ಕೆ ತೊಡಕೆಂದೂ ಉಂಟಾಗಲ್ಲ ಎಂಬ ಭಕ್ತರ ಮನೋಭಿಲಾಷೆಗೆ ಸೋನೆ ಮಳೆಯು ಹೂಮಳೆಯಾಗಿ ಪರಿಣಮಿಸಿದೆ. ನಾಡಿನ ಪ್ರಸಿದ್ಧ ಗಣಪತಿ ದೇವಾಲಯಗಳಾದ ಮಧೂರು, ಶರವು, ಸೌತಡ್ಕ,  ಹಟ್ಟಿಯಂಗಡಿ, ಇಡಗುಂಜಿ, ಕುಂಭಾಶಿ, ಗೋಕರ್ಣ ಮೊದಲಾದ ದೇವಸ್ಥಾನಗಳಲ್ಲದೆ ಸ್ಥಳೀಯ ಹೆಚ್ಚಿನ ದೇವಸ್ಥಾನಗಳಿಗೆ ಭಕ್ತರು ಭೇಟಿ ನೀಡಿ ಸೇವೆ ಸಲ್ಲಿಸಿ ಸಂತೃಪ್ತಿ ಪಡೆದುಕೊಳ್ಳುತ್ತಿದ್ದಾರೆ. …

ಕುಂಬಳೆ ಭಾಸ್ಕರನಗರದಲ್ಲಿ ಕಾರು ಅಪಘಾತ: ನಾಲ್ಕು ಮಂದಿಗೆ ಗಾಯ

ಕುಂಬಳೆ: ಕುಂಬಳೆ- ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ ಕುಂಬಳೆ ಸಮೀಪ ಭಾಸ್ಕರನಗರದಲ್ಲಿ ಇಂದು ಬೆಳಿಗ್ಗೆ ಕಾರು ಅಪಘಾತವುಂಟಾಗಿದೆ. ಕಾರಿನಲ್ಲಿದ್ದ ನಾಲ್ಕು ಮಂದಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಕುಂಬಳೆಯಿಂದ ಮುಳ್ಳೇರಿಯ ಭಾಗಕ್ಕೆ ತೆರಳುತ್ತಿದ್ದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ಮೋರಿಸಂಕದ ಕೆಳಗಿನ ಹೊಂಡಕ್ಕೆ ಮಗುಚಿ ಬಿದ್ದಿದೆ. ಬೆಳ್ಳೂರು ನಿವಾಸಿಗಳಾದ ಇಬ್ರಾಹಿಂ, ನೌಶಾದ್, ಉನೈಸ್ ಸಹಿತ ನಾಲ್ಕು ಮಂದಿ ಕಾರಿನಲ್ಲಿದ್ದರು. ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಘಟನೆ ತಿಳಿದು ತಲುಪಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳು ಕುಂಬಳೆಯ ಆಸ್ಪತ್ರೆಯಲ್ಲಿ …

ಧರ್ಮಸ್ಥಳ ಒಳಸಂಚು ಪುರಾವೆ ಗಳುಳ್ಳ ಫೋನ್ ಪತ್ತೆ-ಎಸ್‌ಐಟಿ

ಬೆಳ್ತಂಗಡಿ: ಧರ್ಮಸ್ಥಳಕ್ಕೆ ಸಂಬಂಧಿಸಿ ನಡೆದ ಒಳಸಂಚಿನ ಬಗ್ಗೆ ನಿರ್ಣಾಯಕ ಪುರಾವೆಗಳು ಲಭಿಸಿವೆ ಎಂದು ಪ್ರತ್ಯೇಕ ತನಿಖಾ ತಂಡ ತಿಳಿಸಿದೆ. ಚಿನ್ನಯ್ಯ ಉಪಯೋಗಿಸಿರುವ ಸಹಿತ ಆರು ಫೋನ್‌ಗಳನ್ನು ಪತ್ತೆಹಚ್ಚಲಾಗಿದೆ. ಒಳಸಂಚು ಸಾಬೀತುಪಡಿಸುವ ವೀಡಿಯೋಗಳು ಫೋನ್‌ನಲ್ಲಿ ಇದೆ ಎಂದು ಎಸ್‌ಐಟಿ ತಿಳಿಸುತ್ತಿದೆ.  ಇದೇ ವೇಳೆ ಚಿನ್ನಯ್ಯನನ್ನು ಮಹೇಶ್ ತಿಮರೋಡಿಯ ಮನೆಗೆ ತಲುಪಿಸಿ ಮಾಹಿತಿ ಸಂಗ್ರಹಿಸಲಾಗಿದೆ. ಅಲ್ಲದೆ ಪುತ್ರಿ ನಾಪತ್ತೆಯಾಗಿದ್ದಾಳೆಂದು ತಿಳಿಸಿದ್ದ ಸುಜಾತಾ ಭಟ್‌ನ್ನು ಇಂದು ಮತ್ತೆ ತನಿಖೆಗೊಳಪಡಿಸಲು ಎಸ್‌ಐಟಿ ನಿರ್ಧರಿಸಿದೆ. ಚಿನ್ನಯ್ಯ ನೀಡಿದ ಹೇಳಿಕೆಯಲ್ಲಿ ಕಂಡುಬಂದ ಸಂಶಯವೇ ಆರೋಪ ಸುಳ್ಳಾಗಿದೆ …

ಜಮ್ಮು-ಕಾಶ್ಮೀರ ವೈಷ್ಣೋದೇವಿ ಯಾತ್ರೆ ಮಾರ್ಗದಲ್ಲಿ ಭೂಕುಸಿತ: ಸಾವಿನ ಸಂಖ್ಯೆ 30ಕ್ಕೇರಿಕೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಯಿಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳಲ್ಲಿರುವ ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 30ಕ್ಕೇರಿದೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಮಾತಾ ವೈಷ್ಣೋದೇವಿ ದೇಗುಲಕ್ಕೆ ಸಾಗುವ ಮಾರ್ಗದಲ್ಲಿ ಅರ್ಧ ಕುಮರಿಯ ಇಂದ್ರಪ್ರಸ್ತ ಭೋಜನಾಲಯ ಬಳಿ ನಿನ್ನೆ ಸಂಜೆ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ಅವಶೇಷ ಗಳಡಿ ಇನ್ನೂ ಹಲವರು ಸಿಲುಕಿಕೊಂಡಿ ರುವ ಶಂಕೆ ಉಂಟಾಗಿದ್ದು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಂದಾಗಿ ಜಮ್ಮು-ಕಾಶ್ಮೀರದ ಇತರ …

ವೇದಮೂರ್ತಿ ಬಜೆ ಗೋಪಾಲಕೃಷ್ಣ ಭಟ್ ನಿಧನ

ಬೋವಿಕ್ಕಾನ: ಇರಿಯಣ್ಣಿ ಸಮೀಪ ಪಯ ನಿವಾಸಿ ವೇದ ಮೂರ್ತಿ ಶ್ರೀ ಬಜೆ ಗೋ ಪಾಲಕೃಷ್ಣ ಭಟ್ (82) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನಹೊಂದಿದರು. ಪ್ರಸಿದ್ಧ ಪುರೋಹಿತರೂ, ಧಾರ್ಮಿಕ ಪಂಡಿತರೂ ಆಗಿದ್ದ ಇವರು ಊರ ಹಾಗೂ ಪರವೂರ ಕ್ಷೇತ್ರಗಳಲ್ಲಿ, ಮನೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ  ಪೌರೋಹಿತ್ಯದ ನೇತೃತ್ವ ವಹಿಸುತ್ತಿದ್ದರು. ಮೃತರು ಪತ್ನಿ ಸರಸ್ವತಿ ಭಟ್, ಮಕ್ಕಳಾದ ಶ್ರೀಕೃಷ್ಣ ಭಟ್ (ನ್ಯಾಯವಾದಿ ಮಂಗಳೂರು), ಈಶ್ವರಿ ಭಟ್, ಶಾರದಾ ಭಟ್, ಶ್ಯಾಮ ಭಟ್ (ಪುರೋಹಿತರು), ಅಳಿಯ ರಾಮಕೃಷ್ಣ ಭಟ್ (ಪುನೂರುಕಜೆ ಸುಳ್ಯ), ಸೊಸೆಯಂದಿರಾದ  …

ರಿಕ್ಷಾದಲ್ಲಿ ಸಾಗಿಸುತ್ತಿದ್ದ ಗಾಂಜಾ ವಶ:  ಓರ್ವ ಸೆರೆ; ಇನ್ನೋರ್ವ ಪರಾರಿ

ಬದಿಯಡ್ಕ: ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ 1 ಕಿಲೋ 312 ಗ್ರಾಂ ಗಾಂಜಾವನ್ನು ಬದಿಯಡ್ಕ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಅಂಗಡಿಮೊಗರು ಪೆರ್ಲಾಡಂ ನಿವಾಸಿ ರಿಫಾಯಿ ಬಿ.ಎಂ.(42) ಎಂಬಾತನನ್ನು ಬಂಧಿಸಲಾಗಿದೆ. ಈತನ ಜತೆಗಿದ್ದ ಬಾಪಲಿಪೊನ ನಿವಾಸಿ ಬಿ.ಎಂ. ಸಹದ್ ಯಾನೆ ಅದ್ದು ಎಂಬಾತ ಓಡಿ ಪರಾರಿಯಾಗಿದ್ದಾನೆ. ನಿನ್ನೆ ರಾತ್ರಿ ಚರ್ಲಡ್ಕ ಬಸ್ ನಿಲ್ದಾಣ ಬಳಿ ಬದಿಯಡ್ಕ ಎಸ್.ಐ. ಅಖಿಲ್ ನೇತೃತ್ವದಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಗೋಕುಲ್, ಶಶಿ, ಸಿ.ಪಿ.ಒ.ಗಳಾದ ಶ್ರೀನೇಶ್, ಅಭಿಲಾಶ್ ಎಂಬಿವರು ಗಸ್ತು ನಡೆಸುತ್ತಿದ್ದ ವೇಳೆ ಬಂದ …