ಕೇರಳದ ಅರ್ಜಿ ಪರಿಗಣಿಸಿ ಸುಪ್ರೀಂಕೋರ್ಟ್ ನಿರ್ದೇಶ: ಎಸ್‌ಐಆರ್ ಸಮಯ ವ್ಯಾಪ್ತಿ ಇನ್ನೂ ಎರಡು ವಾರಗಳ ತನಕ ವಿಸ್ತರಣೆ
ತಿರುವನಂತಪುರ: ಮತದಾರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆಗಾಗಿ ಕೇರಳದಲ್ಲಿ ನಿಗದಿಪಡಿಸಲಾಗಿರುವ ಸಮಯಾವ ಕಾಶವನ್ನು ಇನ್ನೂ ಎರಡು ವಾರಗಳ ತನಕ ವಿಸ್ತರಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶ ನೀಡಿದೆ. ಎಸ್‌ಐಆರ್ ವಿಷಯದಲ್ಲಿ ಜನರು ಎದುರಿಸುತ್ತಿರುವ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಕೇರಳ ಸೇರಿದಂತೆ ಇತರ ರಾಜ್ಯದಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಸುಪ್ರೀಂಕೋರ್ಟ್ ಈ ನಿರ್ದೇಶ ನೀಡಿದೆ. ಎಸ್‌ಐಆರ್ ಕ್ರಮಗಳನ್ನು ಈ ತಿಂಗಳ 22ರೊಳಗೆ ಪೂರ್ತೀಕರಿಸುವಂತೆ ಆಯೋಗ ಈ ಹಿಂದೆ ಅಂತಿಮ ಗಡು ನೀಡಿತ್ತು. ಈಗ ಸುಪ್ರೀಕೋರ್ಟ್ ನೀಡಿರುವ ನಿರ್ದೇಶ …