ಮಂಜೇಶ್ವರ ಚುನಾವಣಾ ತಕರಾರು ಪ್ರಕರಣ: ಮರುಪರಿಶೀಲನಾ ಅರ್ಜಿ ಹಿಂತೆಗೆದುಕೊಂಡ ರಾಜ್ಯ ಸರಕಾರ ; ಕೆ. ಸುರೇಂದ್ರನ್ ಮತ್ತಿತರರಿಗೆ ನಿರಾಳ

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ೨೦೨೧ರಲ್ಲಿ ನಡೆದ ಚುನಾವಣೆಯಲ್ಲಿ ಲಂಚ ನೀಡಲಾಗಿದೆಯೆಂದು ಆರೋಪಿಸಿ ಬಿಜೆಪಿ ಮಾಜಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಮತ್ತ್ತಿತರರ ವಿರುದ್ಧ ಹೂಡಲಾಗಿದ್ದ ಪ್ರಕರಣದಲ್ಲಿ ಅವರನ್ನು ದೋಷಮುಕ್ತಗೊಳಿಸಿ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ  ಸಲ್ಲಿಸಲಾಗಿದ್ದ  ಅರ್ಜಿಯನ್ನು ರಾಜ್ಯ ಸರಕಾರ ಹಿಂತೆಗೆದುಕೊಂಡಿದೆ. ಇದರಿಂದಾಗಿ ಈ ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲಾಗಿದ್ದ ಕೆ. ಸುರೇಂದ್ರನ್, ಬಿಜೆಪಿಯ  ಕಾಸರಗೋಡಿನ ಇತರ ಐವರು ನೇತಾರರನ್ನು ನಿರಾಳಗೊಳಿಸುವಂತೆ ಮಾಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಉಮೇದ್ವಾರರಾಗಿ ಮಂಜೇಶ್ವರದಲ್ಲಿ …

ಮಾಜಿ ಆಂಬುಲೆನ್ಸ್ ಚಾಲಕ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಆಂಬುಲೆನ್ಸ್ ಮಾಜಿ ಚಾಲಕ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಬಲ್ಲಾ ಕಡಪ್ಪುರ ನಿವಾಸಿ ಅಬ್ದುಲ್ಲ (53) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ 8.15 ರ ವೇಳೆ ಇವರು ಕಾಞಂಗಾಡ್ ರೈಲ್ವೇ ನಿಲ್ದಾಣ ಸಮೀಪ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವಿಷಯ ತಿಳಿದು ಹೊಸದುರ್ಗ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾವಕ್ಕೆ ತಲುಪಿಸಿದ್ದಾರೆ. ಅಬ್ದುಲ್ಲ ಅರಿಮಲ ಹಾಸ್ಪಿಟಲ್‌ನ ಮಾಜಿ ಆಂಬುಲೆನ್ಸ್ ಚಾಲಕರಾಗಿದ್ದರು.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸ್ಥಳದಿಂದ ಕಬ್ಬಿಣದ ಸಾಮಗ್ರಿಗಳನ್ನು ಕದ್ದು ಸಾಗಿಸಿದ ತಂಡದ ಮೂವರ ಸೆರೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸ್ಥಳದಿಂದ ಕಬ್ಬಿಣದ ಸಾಮಗ್ರಿಗಳನ್ನು ಕದ್ದು ಸಾಗಿಸಿದ ತಂಡಕ್ಕೆ ಸೇರಿದ ಮೂವರನ್ನು ಮೇಲ್ಪರಂಬ ಪೊಲೀಸ್ ಠಾಣೆಯ ಎಸ್‌ಐ ಎ.ಎನ್. ಸುರೇಶ್ ಕುಮಾರ್ ನೇತೃತ್ವದ ಪೊಲೀ ಸರ ತಂಡ ಬಂಧಿಸಿದೆ. ಪೆರಿಯ ಚೆಕ್ಕಿ ಪಳ್ಳದ ಎಂ.ಮನ್ಸೂರ್(31), ಕುಣಿಯ ಪ್ಪಾರ ಹೌಸ್‌ನ ಮೊಹಮ್ಮದ್ ರಿಸಾದ್ (26) ಮತ್ತು ಕುಣಿಯ ಕುಂಡೂರ್ ಹೌಸ್‌ನ ಕೆ.ಎಚ್. ಅಲಿ ಅಸ್ಕರ್ (26) ಬಂಧಿತರಾದ ಆರೋಪಿಗಳು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಎರಡನೇ ರೀಚ್‌ಗೆ ಸೇರಿದ ಚೆಂಗಳ-ನೀಲೇಶ್ವರ ವಲಯದ ಪೊಯಿನಾಚಿ ಸೌತ್‌ನಿಂದ …

ಕಾಲೇಜು ಯೂನಿಯನ್ ಚುನಾವಣೆ: ಕಾಸರಗೋಡಿನಲ್ಲಿ ಎಸ್‌ಎಫ್‌ಐ, ಮಂಜೇಶ್ವರದಲ್ಲಿ ಎಬಿವಿಪಿ ಗೆಲುವು

ಕಾಸರಗೋಡು: ಕಣ್ಣೂರು ವಿವಿ ಅಧೀನದಲ್ಲಿರುವ ಕಾಲೇಜುಗಳ ವಿದ್ಯಾರ್ಥಿ ಯೂನಿಯನ್ ಚುನಾವಣೆಯಲ್ಲಿ  ಜಿಲ್ಲೆಯಲ್ಲಿ ಎಸ್‌ಎಫ್‌ಐ  ಮುನ್ನಡೆ ಸಾಧಿಸಿದೆ. ಐದು ಸರಕಾರಿ ಕಾಲೇಜುಗಳ ಪೈಕಿ ನಾಲ್ಕರಲ್ಲಿ ಎಸ್‌ಎಫ್‌ಐ, 1ರಲ್ಲ್ಲಿ ಎಬಿವಿಪಿ ಗೆಲುವು ಸಾಧಿಸಿದೆ. ಮೂರು ಐಡೆಡ್ ಕಾಲೇಜುಗಳ ಪೈಕಿ 2ರಲ್ಲಿ ಎಸ್‌ಎಫ್‌ಐ, 1ರಲ್ಲಿ ಯುಡಿಎಸ್‌ಎಫ್ ಗೆಲುವು ಸಾಧಿಸಿದೆ. ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಎಸ್‌ಎಫ್‌ಐ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಎಬಿವಿಪಿ ಗೆಲುವು ಸಾಧಿಸಿದೆ.

ಹಿಂದಕ್ಕೆ ಚಲಿಸಿದ ಟೆಂಪೋ ಟ್ರಾವಲರ್ ಬೈಕ್‌ಗೆ ಢಿಕ್ಕಿ ವಿದ್ಯಾರ್ಥಿ ಮೃತ್ಯು

ಕಾಸರಗೋಡು: ಪೆಟ್ರೋಲ್ ಪಂಪ್‌ನಿಂದ ಹಿಂದಕ್ಕೆ ಚಲಿಸಿದ ಟೆಂಪೋ ಟ್ರಾವಲರ್ ಬೈಕ್‌ಗೆ ಢಿಕ್ಕಿ ಹೊಡೆದು ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ. ಕಾರಮಲ ನಿವಾಸಿಯೂ ಮಂಗಳೂರಿನಲ್ಲಿ ವಿದ್ಯಾರ್ಥಿಯಾಗಿರುವ ಕಂಡತ್ತಿಲ್ ಅಲ್ಬರ್ಟ್ ಜೋಯಿಸ್ (20) ಎಂಬವರು ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ನಿನ್ನೆ ಸಂಜೆ ೫ ಗಂಟೆಗೆ ಮಲೆನಾಡು ಹೆದ್ದಾರಿಯಲ್ಲಿ ಚಿಟ್ಟಾರಿಕಲ್ ನಾಯರ ಪೆಟ್ರೋಲ್ ಪಂಪ್ ಸಮೀಪ ಅಪಘಾತವುಂ ಟಾಗಿದೆ. ಗಂಭೀರ ಗಾಯಗೊಂಡ ಅಲ್ಬರ್ಟ್‌ರನ್ನು ಚೆರುಪುಳದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ. ಕಾರಮಲ ನಿವಾಸಿ ದಿ| ಕಂಡತ್ತಿಲ್ ಜೋಯಿಸ್‌ರ ಪುತ್ರನಾದ ಮೃತರು …

ಸಯ್ಯದ್ ಎಪಿಎಸ್ ಆಟಕೋಯ ತಂಙಳ್ ನಿಧನ

ಕುಂಬಳೆ: ಕುಂಬೋಲ್ ಸಯ್ಯದ್ ಕುಂಞಿಕೋಯ ತಂಙಳ್‌ರ ಸಹೋದರಿ ಪುತ್ರಿಯ ಪತಿ ಸಯ್ಯದ್ ಎಪಿಎಸ್ ಆಟಕೋಯ ತಂಙಳ್ (65) ನಿಧನಹೊಂದಿದರು. ಆದೂರು ಸಯ್ಯದ್ ಮುತ್ತುಕೋಯ ತಂಙಳ್‌ರಪುತ್ರನಾದ ಮೃತರು ಪತ್ನಿ ಖದೀಜಬೀವಿ, ಮಕ್ಕಳಾದ  ರೈಹಾ ನತ್ ಬೀವಿ, ಬುಸ್ರಾ ಬೀವಿ,ಸಯ್ಯದ್ ಅಶ್ರಫ್ ತಂಙಳ್, ಸಾಜಿದ ಬೀವಿ, ಅಳಿಯಂದಿರಾದ ಸಯ್ಯದ್ ಜಲೀಲ್ ತಂಙಳ್ ಕಾರೆಕ್ಕಾಡ್, ಸಯ್ಯದ್ ಜಾಫರ್ ಶಿಹಾಬ್ ತಂಙಳ್ ಕಾಞಂಗಾಡ್, ರವುಲ್ಲಾಬೀವಿ ವಳಪಟ್ಟಣಂ ಹಾಗೂ ಅಪಾರ ಬಂಧ-ಮಿತ್ರರನ್ನು ಅಗಲಿದ್ದಾರೆ.

ಜನರಲ್ ಆಸ್ಪತ್ರೆ ಅವಗಣನೆ: ಡಿಫಿಯಿಂದ ನಗರಸಭೆಗೆ ಮಾರ್ಚ್

ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯನ್ನು ನಗರಸಭೆ ಅವಗಣಿಸುತ್ತಿದೆ ಎಂದು ಆರೋಪಿಸಿ, ಜನರಲ್ ಆಸ್ಪತ್ರೆಯ ರೋಗಿಗಳಿಗೆ ನೀಡುತ್ತಿದ್ದ ಹಾಲು ವಿತರಣೆಯನ್ನು ಪುನರಾರಂಭಿಸಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ಕಾಸರಗೋಡು ಬ್ಲೋಕ್ ಸಮಿತಿ ನೇತೃತ್ವದಲ್ಲಿ ನಗರಸಭೆಗೆ ಮಾರ್ಚ್ ನಡೆಸಲಾಯಿತು. ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಳ್ಳಾಡ್ ಉದ್ಘಾಟಿಸಿದರು. ಬ್ಲೋಕ್ ಅಧ್ಯಕ್ಷ ವಿ. ಮಿಥುನ್‌ರಾಜ್ ಅಧ್ಯಕ್ಷತೆ ವಹಿಸಿದರು. ಕೋಶಾಧಿಕಾರಿ ಪ್ರವೀಣ್ ಪಾಡಿ, ಅಜಿತ್ ಪಾರೆಕಟ್ಟೆ, ವಿನಯನ್ ಚಾತಪ್ಪಾಡಿ, ಸಬೀನ್ ಬಟ್ಟಂಪಾರೆ, ಮಾರ್ಟಿನ್ ಇ., ಅಶ್ವತಿ ಮಾತನಾಡಿ ದರು. ಬ್ಲೋಕ್ ಕಾರ್ಯದರ್ಶಿ ಸುಭಾಶ್ ಪಾಡಿ ಸ್ವಾಗತಿಸಿದರು.

ಬಣ್ಣದ ಮಹಾಲಿಂಗ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಯಕ್ಷಗಾನ ಬಯಲಾಟ ಪೆರ್ಣೆಯಲ್ಲಿ ನಾಳೆ

ಸೀತಾಂಗೋಳಿ: ಯಕ್ಷಗಾನದಲ್ಲಿ ಬಣ್ಣದ ವೇಷದಲ್ಲಿ 7 ದಶಕಗಳ ಕಾಲ ಮಿಂಚಿದ ಬಣ್ಣದ ಮಹಾಲಿಂಗ ಸಂಪಾಜೆ ಯವರ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಯಕ್ಷಗಾನ ಬಯಲಾಟ ನಾಳೆ ಬೆಳಿಗ್ಗೆ 10ರಿಂದ ಪೆರ್ಣೆ ಶ್ರೀ ಸಾಯಿತನ್ವಿ ನಿವಾಸದಲ್ಲಿ ಜರಗಲಿದೆ. 10ಗಂಟೆಗೆ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ಉದ್ಯಮಿ, ಪ್ರಾಯೋಜಕರಾದ ಶಿವಶಂಕರ ನೆಕ್ರಾಜೆ ದಂಪತಿ ಕಾರ್ಯಕ್ರಮ ಉದ್ಘಾಟಿಸು ವರು. ಯಕ್ಷಗಾನ ಕಲಾವಿದ ಜಯಾ ನಂದ ಸಂಪಾಜೆ ಸಂಸ್ಮರಣೆ ನಡೆಸುವರು. ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ, ಕರ್ನಾಟಕ ಯಕ್ಷಗಾನ ಅಕಾಡೆಮಿ …

ಐಎಚ್‌ಆರ್‌ಡಿ ಕುಂಬಳೆ: 4ನೇ ಬಾರಿ ಎಬಿವಿಪಿ ಗೆಲುವು

ಕುಂಬಳೆ: ಕಾಲೇಜ್ ಆಫ್ ಅಪ್ಲೈಡ್ ಸಯನ್ಸ್ ಮಂಜೇಶ್ವರ, ಕುಂಬಳೆ ಐಎಚ್ ಆರ್‌ಡಿ ಕಾಲೇಜು ಯೂನಿಯನ್ ಚುನಾವಣೆಯಲ್ಲಿ ಎಬಿವಿಪಿಯ ಅಭ್ಯರ್ಥಿಗಳು ಸ್ಪರ್ಧಿಸಿದ 6 ಮೇಜರ್, 5 ಮೈನರ್ ಸೀಟಿನಲ್ಲಿ ವಿಜಯಿಸಿದ್ದು, ನಾಲ್ಕನೇ ಬಾರಿ ಯೂನಿಯನ್ ಪಡೆಯುವಲ್ಲಿ ಎಬಿವಿಪಿ ಸಫಲವಾಗಿದೆ. ಎಬಿವಿಪಿಯ ಯೂನಿಯನ್ ಅಧ್ಯಕ್ಷೆ ಸ್ಥಾನದಲ್ಲಿ ಸ್ಪರ್ಧಿಸಿದ ಮನೀಶಾ ಕೆ, ಉಪಾಧ್ಯಕ್ಷೆ ಸಂಚಿತ ಕೆ. ಎಸ್., ಸಹ ಕಾರ್ಯದರ್ಶಿ ಲೀಲಾ, ಯುಯುಸಿ ರಾಜೇಶ್, ಸ್ಪೋರ್ಟ್ಸ್ ಕ್ಯಾಪ್ಟನ್ ನಿಶಾಂತ್, ಮ್ಯಾಗಜಿನ್ ಎಡಿಟರ್ ಶರತ್ ಕುಮಾರ್ ವಿಜಯಿಸಿದ್ದು, ಎಸ್‌ಎಫ್‌ಐಗೆ ಎರಡು ಮೇಜರ್ ಸೀಟು …

ಪ್ರತಾಪನಗರ: ವಿಗ್ರಹ ಶೋಭಾಯಾತ್ರೆ ನಾಳೆ

ಮಂಗಲ್ಪಾಡಿ: ಪ್ರತಾಪನಗರದಲ್ಲಿ ನಡೆಯುತ್ತಿರುವ 42ನೇ ವರ್ಷದ ಶ್ರೀಗೌರಿ ಗಣೇಶೋತ್ಸವದ ಶೋಭಾಯಾತ್ರೆ ನಾಳೆ ನಡೆಯಲಿದೆ. ಬೆಳಿಗ್ಗೆ ಪೂಜೆ, 108 ಕಾಯಿಗಳ ಗಣಯಾಗ, ಭಜನೆ, ಅಶ್ವತ್ಥಪೂಜೆ, ಮಹಾಪೂಜೆ, ಮಧ್ಯಾಹ್ನ 1.30ರಿಂದ ಉತ್ತರ ಪೂಜೆ, ಸಮಾರೋಪ ಸಮಾರಂಭ, ಶೋಭಾಯಾತ್ರೆ ಆರಂಭ ಬಳಿಕ ಸಂಜೆ ಶಿವಾಜಿ ನಗರದ ಸಿಂಧೂ ಸಾಗರದಲ್ಲಿ ಜಲಸ್ತಂಭನೆ ನಡೆಯಲಿದೆ.