ಎರಡು ಉದ್ಘಾಟನೆ ನಡೆದರೂ ರಾಷ್ಟ್ರೀಯ ಹೆದ್ದಾರಿ ಟೋಲ್‌ಗೇಟ್ ಬೋರ್ಡ್‌ಗಳ ತೆರವಿಗೆ ಕ್ರಮವಿಲ್ಲ: ವಾಹನ ಚಾಲಕರಿಗೆ ಗೊಂದಲ
ಕುಂಬಳೆ: ದೂರವ್ಯಾಪ್ತಿಯನ್ನು ಉಲ್ಲಂಘಿಸಿ ಸ್ಥಾಪಿಸಿದ ಕುಂಬಳೆ ಆರಿಕ್ಕಾಡಿ ಟೋಲ್‌ಗೇಟ್ ಮುಚ್ಚುಗಡೆಗೊಳಿಸಿದರೂ ರಾಷ್ಟ್ರೀಯ ಹೆದ್ದಾರಿಯ ವಿವಿಧೆಡೆ ಸ್ಥಾಪಿಸಿದ ಟೋಲ್‌ಗೇಟ್ ಸೂಚನಾ ಫಲಕಗಳು ಅದೇ ರೀತಿ ಉಳಿದುಕೊಂಡಿವೆ. ಆರಿಕ್ಕಾಡಿಯಲ್ಲಿ ಹಾಗೂ ಕುಂಬಳೆ ಬದರ್ ಸುಮಾ ಮಸೀದಿ ಸಮೀಪ ಟೋಲ್‌ಗೇಟ್‌ನ ಸೂಚನಾ ಫಲಕಗಳನ್ನು ಸ್ಥಾಪಿಸಲಾಗಿದೆ. ಟೋಲ್ ಬೂತ್ ರದ್ದುಗೊಳ್ಳುವುದರೊಂದಿಗೆ ಫಲಕಗಳನ್ನು ತೆರವುಗೊಳಿಸಬೇಕಾಗಿತ್ತು. ಆದರೆ ಅಧಿಕಾರಿಗಳು ಅದಕ್ಕೆ ಸಿದ್ಧವಾಗದಿರುವುದು ವಾಹನ ಚಾಲಕರಿಗೆ ಗೊಂದಲ ಸೃಷ್ಟಿಸುತ್ತಿದೆ. ಕಳೆದ ವಾರ ಕಾಮಗಾರಿ ಪೂರ್ತಿಗೊಳಿಸಿದ ತಲಪಾಡಿ -ಚೆಂಗಳ ರೀಚ್ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಕೊಚ್ಚಿಯಲ್ಲಿ …