ಉಪ್ಪಳದಲ್ಲಿ ಅಪಾರ್ಟ್‌ಮೆಂಟ್‌ನಿಂದ ಮಲಿನ ಜಲ ಸಾರ್ವಜನಿಕ ಸ್ಥಳಕ್ಕೆ ಹರಿದುಬಿಡುವುದರ ವಿರುದ್ಧ ಕ್ರಿಯಾ ಸಮಿತಿಯಿಂದ ಮಾರ್ಚ್
ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕಟ್ಟಡ ನಿರ್ಮಾಣಗಳು ಅಧಿಕಾರಿಗಳ ನಿರ್ಲಕ್ಷ್ಯ ಕ್ರಮದಿಂದಾಗಿ ಅವೈಜ್ಞಾನಿಕವಾಗಿವೆ. ಪಂಚಾಯತ್ ಹಾಗೂ ಆರೋಗ್ಯ ಇಲಾಖೆ ಇವುಗಳನ್ನು ನೋಡಿ ನಿಂತಿರುವುದರ ಫಲವಾಗಿ ಇದೀಗ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದಿದೆಯೆಂದು ಮಾನವ ಹಕ್ಕು ಕಾರ್ಯಕರ್ತ ಕೂಕಲ್ ಬಾಲಕೃಷ್ಣನ್ ಆರೋಪಿಸಿದ್ದಾರೆ. ಉಪ್ಪಳ ಕೈಕಂಬದ ಅಪಾರ್ಟ್‌ಮೆಂಟ್‌ವೊಂದರಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಪರಿಸರ ಪ್ರದೇಶಕ್ಕೆ ಮಲಿನ ಜಲ ಹರಿದುಬಿಡುವುದರ ವಿರುದ್ಧ ನಿನ್ನೆ ನಡೆಸಿದ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಫ್ಲಾಟ್‌ನ ಮುಂಭಾಗದಲ್ಲಿ ಪೊಲೀಸರು ಮಾರ್ಚ್‌ಗೆ ತಡೆಯೊಡ್ಡಿದ್ದಾರೆ. ಬಹುಜನ ಮುನ್ನಡೆ ಕ್ರಿಯಾ ಸಮಿತಿ …