ಅಗ್ನಿವೀರ್ ಆರ್ಮಿ ನೇಮಕಾತಿ ರ‍್ಯಾಲಿ ವಿದ್ಯಾನಗರದಲ್ಲಿ ಆರಂಭ

ಕಾಸರಗೋಡು: ಭಾರತೀಯ ಸೇನಾಪಡೆಗೆ ಯೋಧರ ನೇಮಕಾತಿಗಿರುವ  ಅಗ್ನಿವೀರ್ ಆರ್ಮಿ ರಿಕ್ರೂಟ್‌ಮೆಂಟ್ ರ‍್ಯಾಲಿ ವಿದ್ಯಾನಗರದ ನಗರಸಭಾ ಕ್ರೀಡಾಂಗಣದಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿತು. ರ‍್ಯಾಲಿಗೆ ಹೆಚ್ಚುವರಿ ಜಿಲ್ಲಾ ದಂಡನಾಧಿಕಾರಿ (ಎಡಿಎಂ) ಪಿ. ಅಖಿಲ್ ಧ್ವಜ ಹಾರಿಸಿ ಚಾಲನೆ ನೀಡಿದರು. ನೇಮಕಾತಿ ಇಂದಿನಿಂದ ಐದು ದಿನಗಳ ಕಾಲ ಮುಂದುವರಿಯಲಿದೆ. ಇದರಲ್ಲಿ ಕಾಸರಗೋಡಿನಿಂದ ತೃಶೂರ್ ತನಕದ  7 ಜಿಲ್ಲೆಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾದ  ಲಕ್ಷದ್ವೀಪ್, ಮಾಹಿ ಎಂಬೆಡೆಗಳ 4೦೦೦ದಷ್ಟು ಉದ್ಯೋಗಾರ್ಥಿಗಳು ಈ ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಆನ್‌ಲೈನ್ ಮೂಲಕ ನಡೆಸಲಾದ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರವೇ …

ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಯುವತಿ, ಪತಿಗೆ ತಂಡದಿಂದ ಹಲ್ಲೆ

ಕಣ್ಣೂರು: ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ ಯುವತಿ ಹಾಗೂ ಆಕೆಯ ಪತಿಗೆ ತಂಡ ವೊಂದು ಹಲ್ಲೆಗೈದ ಬಗ್ಗೆ ದೂರಲಾಗಿದೆ. ಘಟನೆಗೆ ಸಂಬಂಧಿಸಿ ೧೨ ಮಂದಿ ಸಿಪಿಎಂ ಕಾರ್ಯ ಕರ್ತರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪೆರಳಶ್ಶೇರಿ ಗ್ರಾಮ ಪಂಚಾಯತ್‌ನ ೧೩ನೇ ವಾರ್ಡ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮುಂಡಲ್ಲೂರು ವಳಪ್ಪಿಲ್‌ನ ಕೆ. ರೀಜ (38), ಪತಿ ಎನ್. ಶೈಜು (48) ಎಂಬಿವರ ಮೇಲೆ ತಂಡ ಹಲ್ಲೆಗೈದಿದೆ. ಮೊನ್ನೆ ರಾತ್ರಿ 7.30 ರ ವೇಳೆ ರೀಜರ ಮನೆಗೆ …

ಅಂಗಡಿಯಿಂದ ಹಾಡಹಗಲೇ 45,೦೦೦ ರೂ. ಕಳವುಗೈದ ಆರೋಪಿ ಬಂಧನ

ಕಾಸರಗೋಡು: ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಕುಟ್ಟಿಕ್ಕೋಲ್‌ನಲ್ಲಿ ಅಂಗಡಿಯಿಂದ ಹಾಡಹಗಲೇ 45,೦೦೦ ರೂಪಾಯಿ ಕಳವುಗೈದ ಪ್ರಕರಣದಲ್ಲಿ ಕುಖ್ಯಾತ ಆರೋಪಿಯಾದ ಇರಿಟ್ಟಿ ಪೆರಿಂಗಾರಿ ಕುರುವಿಕಾಟಿಲ್ ಸಜು ಯಾನೆ ಕುರುವಿ ಸಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪ್ರಸ್ತುತ ನೀಲೇಶ್ವರ ತೈಕಡಪ್ಪುರದಲ್ಲಿ ವಾಸಿಸುತ್ತಿದ್ದನು. ಕಳವಿನ ಹಿಂದೆ ಕುರುವಿ ಸಜು ಆಗಿದ್ದಾನೆಂದು ತಿಳಿಸಿ ಜಿಲ್ಲಾ ಪೊಲೀಸ್ ಗುಪ್ತಚರ ವಿಭಾಗ ನೀಡಿದ ವರದಿಯ ಆಧಾರದಲ್ಲಿ ಬೇಡಗಂ ಎಸ್‌ಐ ಕೆ. ಉಮೇಶ್, ಎಎಸ್‌ಐ ನಾರಾಯಣನ್, ಪೊಲೀಸರಾದ ಬಿನೀಶ್, ವಿನೀಶ್ ಎಂಬಿವರು ತೈಕಡಪ್ಪುರಕ್ಕೆ ತಲುಪಿ ಆರೋಪಿಯನ್ನು …

ಬೆಳ್ಳೂರಿನಲ್ಲಿ ಶಾಲೆಗೆ ನಿರ್ಮಿಸಿದ ಬೇಲಿ ವಿದ್ಯಾರ್ಥಿಗಳಿಂದ ನಾಶ

ಮುಳ್ಳೇರಿಯ: ಬೆಳ್ಳೂರು ಸರಕಾರಿ ಪ್ರೌಢಶಾಲೆಯ ಒಂದು ಭಾಗದಲ್ಲಿ  ಸ್ಥಳವನ್ನು ಸ್ವಾಧೀನಪಡಿಸಿ ನಿರ್ಮಿಸಿದ ತಂತಿ ಬೇಲಿ ಹಾಗೂ ಕಾಂಕ್ರೀಟ್ ಪಿಲ್ಲರ್‌ಗಳನ್ನು ವಿದ್ಯಾರ್ಥಿಗಳು ಹಾಗೂ ನಾಗರಿಕರು ಸೇರಿ ನಾಶಗೊಳಿಸಿದ್ದಾರೆ. ೧೯೪೭ ಆಗಸ್ಟ್ ೧೫ರಂದು ಸ್ಥಳೀಯ ನಿವಾಸಿಯಾದ ಸುಬ್ರಹ್ಮಣ್ಯ ಎಂಬವರು ಪ್ರಸ್ತುತ ಸ್ಥಳವನ್ನು ಶಾಲೆ ನಿರ್ಮಿಸಲು ಸರಕಾರಕ್ಕೆ ನೀಡಿದ್ದರೆಂದು ಹೇಳಲಾಗುತ್ತಿದೆ. ಪ್ರಸ್ತುತ ಸ್ಥಳದಲ್ಲಿ ಶಾಲಾ ಕಟ್ಟಡಗಳನ್ನು ನಿರ್ಮಿಸಿ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಮಧ್ಯೆ ಸ್ಥಳದ ಮಧ್ಯದಲ್ಲಾಗಿ ರಸ್ತೆ ನಿರ್ಮಿಸಲಾಗಿದೆ. ಶಾಲೆಯ ಕಿಂಡರ್‌ಗಾರ್ಟನ್ ವಿಭಾಗದಿಂದ ಎಲ್‌ಪಿ, ಯುಪಿ ವಿಭಾಗ ಹಾಗೂ ಅಡುಗೆ ಕೊಠಡಿ, …

ಶಬರಿಮಲೆ ಚಿನ್ನ ಕಳವು: ಆರೋಪಿಗೆ ನಿರೀಕ್ಷಣಾ ಜಾಮೀನು ನಕಾರ: ‘ದೇವರನ್ನಾದರೂ ನಿಮಗೆ ಸುಮ್ಮನೆ ಬಿಡಬಾರದೇ’-ಸುಪ್ರೀಂಕೋರ್ಟ್

ನವದೆಹಲಿ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ಆರೋಪಿಗಳಲ್ಲೋರ್ವನಾದ ತಿರುವಿದಾಂಕೂರು ಮುಜರಾಯಿ ಮಂಡಳಿಯ ಮಾಜಿ ಸದಸ್ಯ ಕೆ.ಪಿ. ಶಂಕರದಾಸ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು  ನ್ಯಾಯಮೂರ್ತಿಗಳಾದ ದೀಪಾಂ ಕರ್ ದತ್ತ ಮತ್ತು ಎಸ್.ಸಿ. ಶರ್ಮಾರ ನ್ನೊಳಗೊಂಡ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ವಜಾಗೈದು  ನಿರೀಕ್ಷಣಾ ಜಾಮೀನು ನಿರಾಕರಿಸಿ ತೀರ್ಪು ನೀಡಿದೆ. ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ನನ್ನ ಬಗ್ಗೆ ಕೇರಳ ಹೈಕೋರ್ಟ್ ನಡೆಸಿರುವ ಪರಾಮರ್ಶೆಗಳನ್ನು ಅದರ ಕಡತಗಳಿಂದ ಹೊರತುಪಡಿಸಬೇಕೆಂಬ ಶಂಕರ್‌ದಾಸ್ ರ ಬೇಡಿಕೆಯನ್ನೂ ಸುಪ್ರೀಂಕೋರ್ಟ್ ನಿರಾಕರಿಸಿದೆ …

ಮಂಜೇಶ್ವರ ತಾಲೂಕು ಕಚೇರಿಗೆ ಇನ್ನೂ ಮರೀಚಿಕೆಯಾದ ಸ್ವಂತ ಕಟ್ಟಡ

ಮಂಜೇಶ್ವರ: ಜನರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಮಂಜೇಶ್ವರ ತಾಲೂಕು ರೂಪಿಸಲಾ ಯಿತಾದರೂ ತಾಲೂಕು ಕಚೇರಿಗೆ ಸೂಕ್ತ ಕಟ್ಟಡ ಇಲ್ಲದ ಕಾರಣ ಜನರಿಗೆ ಸರಿಯಾದ ಪ್ರಯೋಜನ ಲಭಿಸುತ್ತಿಲ್ಲ ವೆಂದು ಸ್ಥಳೀಯರು ದೂರಿದ್ದಾರೆ. ಮಂಜೇಶ್ವರ ತಾಲೂಕು ರೂಪೀಕೃತಗೊಂಡು 11 ವರ್ಷ ಕಳೆದಿದ್ದು, ತಾಲೂಕು ಕಚೇರಿಗೆ ಸ್ವಂತ ಕಟ್ಟಡ ಇನ್ನೂ ಮರೀಚಿಕೆಯಾ ಗಿದೆ. ಉಪ್ಪಳ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಈಗ ಕಚೇರಿ ಕಾರ್ಯಾ ಚರಿಸುತ್ತಿದೆ. ಆದರೆ ಇಲ್ಲಿ ಸೌಕರ್ಯ ಗಳ ಕೊರತೆ ಜನರಿಗೆ ಸಮಸ್ಯೆಯಾಗಿದೆ. ಅಲ್ಲದೆ ಕಚೇರಿಗೆ …

ಚರಂಡಿ ನಿರ್ಮಾಣಕ್ಕೆ ಮುಹೂರ್ತ ಮಾತ್ರ : ನೀರು ಪೋಲಾಗಿ ಸ್ಥಳೀಯರಿಗೆ ತೊಂದರೆ

ಉಪ್ಪಳ: ಮಂಗಲ್ಪಾಡಿ ಪಂ.ನ 7ನೇ ವಾರ್ಡ್ ಪ್ರತಾಪನಗರ ಒಳರಸ್ತೆಯಲ್ಲಿ ಪಂಚಾಯತ್ ವತಿಯಿಂದ ಮಂಜೂರಾದ ೫ ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣಕ್ಕೆ ಮುಹೂರ್ತ ನಿಗದಿಯಾದದ್ದು ಮಾತ್ರವಲ್ಲದೆ ಕೆಲಸ ಆರಂಭಗೊಂಡಿ ಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ಮುಂಚಿತವೇ ಇಲ್ಲಿ ಚರಂಡಿ ನಿರ್ಮಿಸಲು ಗುತ್ತಿಗೆದಾರ ಹೊಂಡತೋಡಿ ಮುಹೂರ್ತ ಮಾಡಿದ್ದಾರೆ. ಆದರೆ ಇದರಿಂದಾಗಿ ಜನರಿಗೆ ಸಮಸ್ಯೆ ಮತ್ತಷ್ಟು ತೀವ್ರಗೊಂಡಿತು. ಹೊಂಡ ತೋಡುವ ವೇಳೆ ನೀರಿನ ಪೈಪ್‌ಗೆ  ಹಾನಿಯಾಗಿದ್ದು, ಇದರಿಂದ ನೀರು ಪೋಲಾಗುತ್ತಿದೆ. ಕಳೆದ ಎರಡು ತಿಂಗಳಿಂದ ಇಲ್ಲಿ ನೀರು …

ಯೂತ್ ಕಾಂಗ್ರೆಸ್‌ನಿಂದ ಕಲೆಕ್ಟ್ರೇಟ್ ಮಾರ್ಚ್: ಸಂಘರ್ಷ ಸೃಷ್ಟಿ

ಕಾಸರಗೋಡು: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣವನ್ನು ಬುಡಮೇಲುಗೊಳಿಸಲು ರಾಜ್ಯ ಸರಕಾರ ಯತ್ನಿಸುತ್ತಿದೆ, ಉದ್ಯೋಗ ಖಾತರಿ ಯೋಜನೆಯನ್ನು ಇಲ್ಲದಾಗಿಸಲು ಕೇಂದ್ರ ಸರಕಾರ  ಯತ್ನಿಸುತ್ತಿದೆ ಎಂದು ಆರೋಪಿಸಿ ಯೂತ್ ಕಾಂಗ್ರೆಸ್ ನೇತೃತ್ವದಲ್ಲಿ ಕಾಸರಗೋಡು ಕಲೆಕ್ಟ್ರೇಟ್‌ಗೆ ನಿನ್ನೆ ನಡೆಸಿದ ಮಾರ್ಚ್‌ನಲ್ಲಿ ಸಂಘರ್ಷ ಸ್ಥಿತಿ ಸೃಷ್ಟಿಯಾಯಿತು. ಈ ವೇಳೆ ಪೊಲೀಸರು ಜಲಪಿರಂಗಿ ಪ್ರಯೋಗಿಸಿದರು. ನಿನ್ನೆ ಮಧ್ಯಾಹ್ನ 12 ಗಂಟೆ ವೇಳೆ ಘಟನೆ ನಡೆದಿದೆ. ಡಿಸಿಸಿ ಕಚೇರಿ ಪರಿಸರದಿಂದ ಆರಂಭಿಸಿದ ಮಾರ್ಚ್‌ನ್ನು ಕಲೆಕ್ಟ್ರೇಟ್ ಮುಂದೆ ಡಿಸಿಸಿ ಉಪಾಧ್ಯಕ್ಷ ಬಿ.ಪಿ. ಪ್ರದೀಪ್ ಕುಮಾರ್ ಉದ್ಘಾಟಿಸಿದರು. …

ಕೆ.ಎಸ್.ಟಿ.ಎ ಕುಂಬಳೆ ಯೂನಿಟ್ ಸಮ್ಮೇಳನ: ನೂತನ ಪದಾಧಿಕಾರಿಗಳ ಆಯ್ಕೆ

ಕುಂಬಳೆ: ಕೆ.ಎಸ್. ಟಿ. ಎ. ಕುಂಬಳೆ ಯೂನಿಟ್ ಸಮ್ಮೇಳನ ಕುಂಬಳೆ ಪೈ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ವಿನೋದ್ ಯು ಅಧ್ಯಕ್ಷರು ವಹಿಸಿದರು. ಮೊಹನ್ ದಾಸ್ ಉದ್ಘಾಟಿಸಿದರು. ವಿಶೇಷ ಅತಿಥಿಯಾಗಿ ಸುರೇಶ್ ಭಟ್, ಬಾಲಕೃಷ್ಣ ಮತ್ತು ಸತೀಶ್ ಆಚಾರ್ಯ ಭಾಗವಹಿಸಿದ್ದರು.ಹಲವು ವರ್ಷಗಳಿಂದ ಕುಂಬಳೆಯಲ್ಲಿ ಟೈಲರ್ ವೃತ್ತಿಯಲ್ಲಿ ಇರುವ ಇಬ್ಬರಾದ ಲಕ್ಷ್ಮಿ ಭಟ್ ಸೂರಂಬೈಲ್ ಬಿಜೆಪಿ ಅಭ್ಯರ್ಥಿಯಾಗಿ ಹಾಗು ಬಾಲಕೃಷ್ಣ ರೈ ಪುತ್ತಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಥಳೀಯಾಡಳಿ ತ ಚುನಾವಣೆಯಲ್ಲಿ ಪುತ್ತಿಗೆ ಪಂಚಾಯತ್ ನಲ್ಲಿ ಜಯಗಳಿಸುರುತ್ತಾರೆ ಇವರನ್ನು ಅಭಿನಂದಿಸಲಾಯಿತು.ನೂತನ ಸಮಿತಿಗೆ …

ಪಂಜತ್ತೊಟ್ಟಿ ಶ್ರೀ ವಿಘ್ನೇಶ್ವರ ಭಜನಾ ಮಂದಿರದ ಪ್ರಥಮ ವಾರ್ಷಿಕೋತ್ಸವ, ಸನ್ಮಾನ

ಮಂಗಲ್ಪಾಡಿ: ಇಚ್ಲಂಗೋಡು ಬಳಿಯ ಪಂಜತೊಟ್ಟಿ ಶ್ರೀ ವಿಘ್ನೇಶ್ವರ ಭಜನಾ ಮಂದಿರದ ಪ್ರಥಮ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಇದರಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಂದಿರದ ಅಧ್ಯಕ್ಷ ಸೀತಾರಾಮ ಪಂಜತೊಟ್ಟಿ ಅಧ್ಯಕ್ಷತೆ ವಹಿಸಿದರು. ಡಾ.ಅಭಿಲಾಷ್ ಮಯ್ಯ ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಹರಿನಾಥ ಭಂಡಾರಿ ಮುಳಿಂಜ, ಕಾಂಚಾರ ಅಮ್ಮಂಗೋಡು, ಭಾಸ್ಕರ್ ಅಯ್ಯ ಉಬರಳೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಚಿತ್ರ ರಚನೆಗಾರ ಮತ್ತು ಶಿಲ್ಪಿ ಕಿರಣ್ ಕುಮಾರ್ ಚೆರುಗೋಳಿ ಇವರನ್ನು ಸನ್ಮಾನಿಸಲಾಯಿತು. ಆಶಿಕ ಮತ್ತು ಬಳಗ ಪ್ರಾರ್ಥನೆ ಹಾಡಿದರು. …