ಸಚಿವರಿಂದ ಕಂದಾಯ ವಿಭಾಗೀಯ ಕಚೇರಿ ಉದ್ಘಾಟನೆ

ಕಾಸರಗೋಡು: ನಗರದ ಪಿಲಿಕುಂಜೆಯಲ್ಲಿ ನೂತನವಾಗಿ ನಿರ್ಮಿಸಲಾದ ಕಂದಾಯ ವಿಭಾಗೀಯ ಕಚೇರಿ (ಆರ್.ಡಿ.ಒ)ವನ್ನು ಇಂದು ಬೆಳಿಗ್ಗೆ ನಡೆದ ಸಮಾರಂಭದಲ್ಲಿ ರಾಜ್ಯ ಕಂದಾಯ ಖಾತೆ ಸಚಿವ ಕೆ. ರಾಜನ್ ಉದ್ಘಾಟಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ರಿ-ಬಿಲ್ಡ್ ಕೇರಳ ಯೋಜನೆಯಲ್ಲಿ ಒಳಪಡಿಸಿ ಆರ್‌ಡಿಒ ಕಚೇರಿಯಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿದೆ. 2020-21ನೇ  ಆರ್ಥಿಕ ವರ್ಷದ ರೀ-ಬಿಲ್ಡ್ ಕೇರಳ ಇನ್‌ಸ್ಸೆಂಟೀವ್ ನಿಧಿಯಿಂದ ೪ ಕೋಟಿ ರೂ. ಈ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ.  ಇದು 1052.39 ಸ್ಕ್ವಾರ್ ಫೀಟ್‌ನ ದ್ವಿ ಅಂತಸ್ತಿನ ಕಟ್ಟಡವಾಗಿದೆ. …

ತಲೆಹೊರೆ ಕಾರ್ಮಿಕನ ಮೃತದೇಹ ಚರಂಡಿಯಲ್ಲಿ ಪತ್ತೆ

ಹೊಸದುರ್ಗ: ಪಯ್ಯನ್ನೂರು ಎಫ್.ಸಿ.ಐ ಗೋದಾಮಿನ ತಲೆ ಹೊರೆ ಕಾರ್ಮಿಕ ಚರಂಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಅನ್ನೂರು ಪಡಿಂಞಾರೆಕ್ಕೆ ರೆಯ ತಾಯಂಬತ್ತ್ ರಾಜೇಶ್ (45) ಮೃತಪಟ್ಟ ವ್ಯಕ್ತಿ. ಪಯ್ಯನ್ನೂರು ಮುರಿಕೊವ್ವಲ್ ಉಷಾ ರೋಡ್‌ನ ಚರಂಡಿಯಲ್ಲಿ  ಮೃತದೇಹ ಪತ್ತೆ ಯಾಗಿದೆ. ನಿನ್ನೆ ಮಧ್ಯಾಹ್ನ ಮೃತ ದೇಹ ಕಂಡ ನಾಗರಿಕರು ಪೊಲೀ ಸರಿಗೆ ಮಾಹಿತಿ ನೀಡಿದ್ದರು.  ಪಯ್ಯ ನ್ನೂರು ಪೊಲೀಸರು ತಲುಪಿ ಮೃತದೇಹವನ್ನು  ಆಸ್ಪತ್ರೆಯ ಶವಾಗಾರಕ್ಕೆ ತಲುಪಿ ಸಿದರು. ಇದೇ ವೇಳೆ ರಾಜೇಶ್‌ರ ಸಾವಿನಲ್ಲಿ ನಿಗೂಢತೆಗಳಿವೆಯೆಂದು ಸಂಬಂಧಿಕರು ಆರೋಪಿಸಿದ್ದಾರೆ. ಬಾರ್‌ನಲ್ಲಿ …

ರಾಜ್ಯದಲ್ಲಿ ಇನ್ನಷ್ಟು ವ್ಯಾಪಿಸತೊಡಗಿದ ಮೆದುಳು ಜ್ವರ: ಕೈಗೂಸು ಸೇರಿದಂತೆ ಮತ್ತೆ ಇಬ್ಬರು ಬಲಿ

ಕಲ್ಲಿಕೋಟೆ:? ರಾಜ್ಯದಲ್ಲಿ ಮೆದುಳುಜ್ವರ (ಅಮೀಬಿಕ್ ಜ್ವರ) ಇನ್ನಷ್ಟು ವ್ಯಾಪಿಸತೊಡಗಿದ್ದು ಅದರ ಪರಿಣಾಮ ಚಿಕಿತ್ಸೆಯಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಕಲ್ಲಿಕೋಟೆ ಒಮಶ್ಶೇರಿ ನಿವಾಸಿ ದಂಪತಿಯ ಮೂರು ತಿಂಗಳ ಹಸುಗೂಸು ಹಾಗೂ ಮಲಪ್ಪುರಂ ಕಣ್ಣಮಂಗಲಂ ಚೇರೂರು ಕಾಪ್ಪಿಲ್  ಕಣ್ಣೋತ್ ರಮ್ಲ (52) ಎಂಬವರು ಈ ಜ್ವರಕ್ಕೆ ಬಲಿಯಾದವರಾಗಿದ್ದಾರೆ. ಇವರಿ ಬ್ಬರನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇ ಜು ಆಸ್ಪತ್ರೆಯಲ್ಲಿ ದಾಖಲಾಗಿತ್ತು. ಇದ ರಲ್ಲಿ ಹಸುಗೂಸನ್ನು ಕಳೆದ 28 ದಿನ ಗಳಿಂದ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಾವಿ ನೀರಿನಿಂದ ಮಗುವಿಗೆ ಜ್ವರ …

ಕುಂಬಳೆಯಲ್ಲಿ ಶಾಲಾ ಅಧಿಕಾರಿಗಳು ತಿಳಿಯದೆ ಮೈದಾನ ಅಳೆದು ಕಲ್ಲುಗಳನ್ನಿರಿಸಿರುವುದಾಗಿ ಆರೋಪ

ಕುಂಬಳೆ: ಹಲವು ವರ್ಷಗಳಿಂದ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಹಾಗೂ ಜಿಎಸ್‌ಬಿಎಸ್‌ನ ಮಕ್ಕಳು ಆಟವಾಡುವ ಮೈದಾನದ ಒಂದು ಭಾಗವನ್ನು ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳು ಯಾರಿಗೂ ತಿಳಿಯದಂತೆ ಅಳೆದು ಕಲ್ಲುಗಳನ್ನಿರಿಸಿರುವುದು ಕುಂಬಳೆಯಲ್ಲಿ ಚರ್ಚೆಗೆಡೆಯಾಗಿದೆ. ಕಳೆದ ಶುಕ್ರವಾರ ಮಧ್ಯಾಹ್ನ ವೇಳೆ ಅಧಿಕಾರಿಗಳು ತಲುಪಿ ಕಲ್ಲುಗಳನ್ನಿರಿಸಿರುವುದಾಗಿ ಹೇಳಲಾಗು ತ್ತಿದೆ. ಈ ಹಿಂದೆ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದ್ದ ರೆಸ್ಟ್ ಹೌಸ್ ಭಾಗದಿಂದ ಮೈದಾನವಾಗಿ ಉಪಯೋಗಿಸುತ್ತಿದ್ದ ಸ್ಥಳವನ್ನು ಅಳತೆ ಮಾಡಿ ಕಲ್ಲುಗಳನ್ನಿರಿಸಲಾಗಿದೆ. ಇದೇ ವೇಳೆ ಶಾಲಾ ಮಕ್ಕಳು ಆಟವಾಡುವ ಮೈದಾನದಿಂದ ಒಂದಿಂಚು …

ಜಿಲ್ಲಾ ಭೂಹಕ್ಕುಪತ್ರ ವಿತರಣೆ ಸಚಿವರಿಂದ ಚಾಲನೆ

ಕಾಸರಗೋಡು: ಎಲ್ಲರಿಗೂ ಜಮೀನು, ಎಲ್ಲರಿಗೂ ಭೂದಾಖಲುಪತ್ರ ಹಾಗೂ ಎಲ್ಲಾ ಸೇವೆಗಳೂ ಸ್ಮಾರ್ಟ್ ಎಂಬ ಯೋಜನೆಯನ್ನು ಸಮರ್ಪಕ ರೀತಿಯಲ್ಲಿ ಜ್ಯಾರಿಗೊಳಿಸುವ ಸಲುವಾಗಿ ಆರಂಭಿಸಲಾದ ಭೂಹಕ್ಕುಪತ್ರ ವಿತರಣಾ ಕಾರ್ಯಕ್ರಮದಂತೆ ಕಾಸರಗೋಡು ಜಿಲ್ಲಾ ಮಟ್ಟದ ಕಾರ್ಯಕ್ರಮ ಕಾಸರಗೋಡು ಟೌನ್ ಹಾಲ್‌ನಲ್ಲಿ  ಇಂದು ಬೆಳಿಗ್ಗೆ ಆರಂಭಗೊಂಡಿತು. ರಾಜ್ಯ ಕಂದಾಯ ಖಾತೆ ಸಚಿವ  ಕೆ. ರಾಜನ್ ಉದ್ಘಾಟಿಸಿದರು. ಮಾತ್ರವಲ್ಲ ಜಿಲ್ಲೆಯಲ್ಲಿ ಅರ್ಹರಾದ 1497 ಮಂದಿಗೆ ಭೂಹಕ್ಕು ಪತ್ರಗಳ ವಿತರಣೆಗೆ ಸಚಿವರು  ಚಾಲನೆ ನೀಡಿದರು.  ಕಡು ಬಡವರಿಲ್ಲದ ಕೇರಳ ಯೋಜನೆಯಲ್ಲಿ ಒಳಗೊಂಡವರೂ ಭೂಹಕ್ಕುಪತ್ರ ಪಡೆಯುವವರಲ್ಲಿ ಒಳಗೊಂಡಿದ್ದಾರೆ. …

ಆಪರೇಶನ್ ಪಿ. ಹಂಟ್: ಐದು : ಮೊಬೈಲ್ ಫೋನ್ ವಶ

ಕಾಸರಗೋಡು: ಆಪರೇಶನ್ ‘ಪಿ-ಹಂಟ್’ ನಂತೆ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಪರಿಶೀಲನೆಯಲ್ಲಿ ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಲಾಗಿದೆ. ಇಂಟರ್‌ನೆಟ್ ಮೂಲಕ ಮಕ್ಕಳ ನಗ್ನ ಚಿತ್ರ ಹಾಗೂ ವೀಡಿಯೋಗಳನ್ನು ವೀಕ್ಷಿಸುವಿಕೆ ಹಾಗೂ ಅದನ್ನು ಇತರರಿಗೆ ಹಸ್ತಾಂತರಿಸುವಿಕೆ ನಡೆಸಿದುದಕ್ಕೆ ಸಂಬಂಧಿಸಿ ಪೊಲೀಸರು ಇಂತಹ ಕ್ರಮ ಕೈಗೊಂಡಿದ್ದಾರೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಯತ್ನಗಳು ಇತ್ತೀಚೆಗಿನಿಂದ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಉದ್ದೇಶದಿಂದ ಪೊಲೀಸ್ ಇಲಾಖೆ ಆಪರೇಶನ್ ಪಿ ಹಂಟ್ ಕಾರ್ಯಾಚರಣೆ ನಡೆಸುತ್ತಿದೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್‌ಭರತ್ ರೆಡ್ಡಿಯವರ …

ಪೆರಿಯಾದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ

ಕಾಸರಗೋಡು: ಪೆರಿಯಾದಲ್ಲಿ ರುವ  ಕೇರಳ ಕೇಂದ್ರ ವಿಶ್ವವಿದ್ಯಾ ಲಯ ಕ್ಯಾಂಪಸ್‌ನಲ್ಲಿ ಚಿರತೆ ಮತ್ತೊಮ್ಮೆ ಕಾಣಿಸಿಕೊಂ ಡಿರುವುದಾಗಿ ವರದಿಯಾಗಿದೆ. ಇದೀಗ ಮತ್ತೆ ಚಿರತೆ ಕಂಡುಬಂ ದಿರುವುದಾಗಿ ವಿದ್ಯಾರ್ಥಿ ಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ತಲುಪಿ ಪರಿಶೀಲನೆ ನಡೆಸಿದ್ದಾರೆ. ಆದರೆ ಚಿರತೆ ಕಂಡುಬಂದಿಲ್ಲ. ಪದೇ ಪದೇ ಚಿರತೆ ಕಂಡುಬರುತ್ತಿರುವುದರಿಂದ ವಿ.ವಿ. ಕ್ಯಾಂಪಸ್‌ನಲ್ಲಿ ಬೋನು ಇರಿಸುವ ಬಗ್ಗೆ ಅರಣ್ಯಾಧಿಕಾರಿಗಳು ಆಲೋ ಚಿಸುತ್ತಿದ್ದಾರೆ. ಇತ್ತೀಚೆಗೆ ಇಲ್ಲಿ ಚಿರತೆ ಕಂಡುಬಂದ ಬಗ್ಗೆ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಯಾಂಪಸ್‌ನಲ್ಲಿ ಕ್ಯಾಮರಾ ಅಳವಡಿಸಲಾಗಿತ್ತು. ಆದರೆ ಅದರಲ್ಲಿ …

ಶಾಲಾ ವಿದ್ಯಾರ್ಥಿ ನೀರಿನ ಸೆಳೆತಕ್ಕೆ ಸಿಲುಕಿ ಸಾವು

ಕಾಸರಗೋಡು: ಶಾಲಾ ವಿದ್ಯಾರ್ಥಿಯೋರ್ವ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ಚೆರ್ಕಳ ಬಳಿಯ ಪಾಡಿಯಲ್ಲಿ ಸಂಭವಿಸಿದೆ. ಮುಟ್ಟತ್ತೋಡಿ ವಿಲ್ಲೇಜ್‌ನ ಕಲ್ಲಕಟ್ಟ ಬೆಳ್ಳೂರಡ್ಕದ ಹಸೈನಾರ್‌ರ ಪುತ್ರ ಮಿಥ್‌ಲಾಜ್ (11) ಮೃತಪಟ್ಟ ದುರ್ದೈವಿ. ಈತ ಆಲಂಪಾಡಿ ಶಾಲೆಯ ೬ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಮೊನ್ನೆ ಸಂಜೆ ಸ್ನೇಹಿತರೊಂದಿಗೆ ತೋಡಿನಲ್ಲಿ ಸ್ನಾನಕ್ಕೆಂದು ತೆರಳಿದ್ದಾನೆನ್ನಲಾಗಿದೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದನು. ಅಗ್ನಿಶಾಮದಳ, ವಿದ್ಯಾನಗರ ಪೊಲೀಸ್ ಹಾಗೂ ನಾಗರಿಕರು ಸೇರಿ ನಡೆಸಿದ ಶೋಧ ವೇಳೆ ಬಾಲಕನ ಮೃತದೇಹ ಪತ್ತೆಯಾಗಿದೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ …

ಕುಂಬಳೆ ಪೊಲೀಸರು ಕಾನೂನು ಉಲ್ಲಂಘಿಸಿ ವಾಹನಗಳಿಗೆ ದಂಡ ಹೇರುತ್ತಿರುವುದಾಗಿ ಮಾನವ ಹಕ್ಕು ಕಾರ್ಯಕರ್ತನಿಂದ ದೂರು

ಕುಂಬಳೆ: ಕುಂಬಳೆ ಪೊಲೀಸರು ಕಾನೂನು ಉಲ್ಲಂಘಿಸಿ ವಾಹನಗಳಿಗೆ ದಂಡ ಹೇರುತ್ತಿರುವುದಾಗಿ ಮಾಹಿತಿ ಹಕ್ಕು ಕಾರ್ಯಕರ್ತ ಎನ್. ಕೇಶವ ನಾಯ್ಕ್ ಕುಂಬಳೆ ಪ್ರೆಸ್ ಫಾರಂನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಅಂಗಡಿಗಳಿಂದ ಸಾಮಗ್ರಿಗಳನ್ನು ಖರೀದಿಸಲು, ಔಷಧಿಗಳನ್ನು ಖರೀದಿಸಲು ಬರುವವರ ವಾಹನಗಳಲ್ಲಿ ದಂಡ ನೋಟೀಸ್ ಲಗತ್ತಿಸುತ್ತಾರೆ. ಟ್ರಾಫಿಕ್ ಪರಿಷ್ಕಾರ ದಂಗವಾಗಿ ಕುಂಬಳೆ ಪೇಟೆಯಲ್ಲಿ ಅಧಿಕಾರಿಗಳು ಎಲ್ಲಿಯೂ ನೋ ಪಾರ್ಕಿಂಗ್ ಬೋರ್ಡ್‌ಗಳನ್ನು ಸ್ಥಾಪಿಸಿಲ್ಲ.  ಅಂಗಡಿಗಳ ಮುಂದೆ ವಾಹನಗಳನ್ನು ನಿಲುಗಡೆಗೊಳಿಸುವು ದರಿಂದಾಗಿ ಯಾವುದೇ ರೀತಿಯ ಸಾರಿಗೆ ತಡೆ ಉಂಟಾಗುತ್ತಿರುವುದಾಗಿ ವ್ಯಾಪಾರಿಗಳು ಕೂಡಾ ದೂರು ನೀಡಿಲ್ಲ. …

ಪ್ಲಸ್‌ಟು ವಿದ್ಯಾರ್ಥಿ ಅಪಘಾತದಲ್ಲಿ ಸಾವಿಗೀಡಾದ ಪ್ರಕರಣ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ತೀವ್ರ

ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ತಪಾಸಣೆ ತೀವ್ರಗೊಳಿಸಲಾಗಿದೆ. ಮಾವಿನಕಟ್ಟೆಯಲ್ಲಿ ಇತ್ತೀಚೆಗೆ ಪ್ಲಸ್‌ಟು ವಿದ್ಯಾರ್ಥಿ ಸ್ಕೂಟರ್ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ  ಅಪಘಾತ ಗಳನ್ನು ತಡೆಗಟ್ಟುವ ಅಂಗವಾಗಿ ವಾಹನ ತಪಾಸಣೆ ತೀವ್ರಗೊಳಿಸುವಂತೆ ಇನ್‌ಸ್ಪೆಕ್ಟರ್ ಕೆ.ಪಿ. ಜಿಜೀಶ್ ನಿರ್ದೇಶ ನೀಡಿದ್ದಾರೆ. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನಗಳಲ್ಲಿ ಸಂಚಾರ, ಇಬ್ಬರಿಗಿಂತ ಹೆಚ್ಚು ಮಂದಿ ಪ್ರಯಾಣಿಸುವುದು, ಲೈಸನ್ಸ್ ಇಲ್ಲದೆ ವಾಹನ ಚಲಾಯಿ ಸುವುದು, ಪ್ರಾಯಪೂರ್ತಿಯಾಗದ ಮಕ್ಕಳು ವಾಹನ ಚಲಾಯಿಸುವುದು, ಅಪರಿಚಿತ ವೇಗದಲ್ಲಿ ಸಂಚಾರ ಮೊದಲಾದ ಕಾನೂನು ಉಲ್ಲಂಘನೆಗಳ ವಿರುದ್ಧ ಇಂದಿನಿಂದ …