ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ-ಸಣ್ಣಿ ಜೋಸೆಫ್
ಕಾಸರಗೋಡು: ರಾಜ್ಯವನ್ನು ಅಭಿವೃದ್ಧಿಯತ್ತ ಸಾಗಿಸಲು ಇಲ್ಲಿನ ಎಡ ರಂಗ ಸರಕಾರಕ್ಕೆ ಸಾಧ್ಯವಾಗಿಲ್ಲವೆಂದು ಕೆಪಿಸಿಸಿ ಅಧ್ಯಕ್ಷ ಸಣ್ಣಿ ಜೋಸೆಫ್ ಆರೋಪಿಸಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಂಗವಾಗಿ ಕಾಸರಗೋಡು ಪ್ರೆಸ್ ಕ್ಲಬ್ ಇಂದು ಬೆಳಿಗ್ಗೆ ಹಮ್ಮಿಕೊಂಡ ‘ಮೀಟ್‌ದ ಪ್ರೆಸ್’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ರಾಜ್ಯದ ಎಲ್ಲಾ ವಲಯಗಳು ಸ್ತಬ್ದಗೊಂಡಿದೆ. ಕೃಷಿ ವಲಯ ನಾಶದತ್ತ ಸಾಗಿದೆ. ವನ್ಯ ಮೃಗಗಳ ಹಾವಳಿಯಿಂದ ಜನರು ತತ್ತರಿಸಿದ್ದಾರೆ. ಎಕ್ರೆಗಟ್ಟಲೆ ಕೃಷಿ ನಾಶಗೊಂಡಿದ್ದರೂ ವನ್ಯ ಮೃಗಗಳ ಹಾವಳಿ ತಡೆಗಟ್ಟುವಲ್ಲಿ ಸರಕಾರ ವಿಫಲಗೊಂಡಿದೆಯೆಂದೂ ಸಣ್ಣಿ ಜೋಸೆಫ್ ಆರೋಪಿಸಿದ್ದಾರೆ. ರಾಜ್ಯದ ವಿದ್ಯಾವಂತರು …