ಚುನಾವಣೆ: ಅನಧಿಕೃತ ಪ್ರಚಾರ ಬ್ಯಾನರ್, ಫ್ಲೆಕ್ಸ್ ಪತ್ತೆ : 25,000 ರೂ. ದಂಡ ಹೇರಿದ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್
ಕಾಸರಗೋಡು: ಸ್ಥಳೀಯಾ ಡಳಿತ ಸಂಸ್ಥೆಗಿರುವ ಚುನಾವಣೆಗೆ ಸಂಬಂಧಿಸಿ ವಿವಿಧ ಮುದ್ರಣ ಸಂಸ್ಥೆಗಳಿಗೆ ಜಿಲ್ಲಾ ಎನ್‌ಫೋರ್ಸ್ ಮೆಂಟ್ ತಂಡ ದಾಳಿ ನಡೆಸಿ ತಪಾಸಣೆ ನಡೆಸಿದೆ. ಅನಧಿಕೃತವಾಗಿ ಸಂಗ್ರಹಿಸಿಟ್ಟ ಮೆಟೀರಿಯಲ್‌ಗಳನ್ನು ಪತ್ತೆಹಚ್ಚಿ ಸಂಸ್ಥೆಯ ಮಾಲಕರಿಗೆ ದಂಡ ಹೇರಲಾಗಿದೆ. ಮುದ್ರಣ ಸಂಸ್ಥೆಗಳಿಂದ ರಾಜಕೀಯ ಪಕ್ಷಗಳಿಗಾಗಿ, ಅಭ್ಯರ್ಥಿಗಳಿಗಾಗಿ ಮುದ್ರಿಸಿ ಇರಿಸಿದ್ದ ನಿಷೇಧಿತ ಪಿವಿಸಿ ಫ್ಲೆಕ್ಸ್ ಬ್ಯಾನರ್‌ಗಳನ್ನು, ಮೆಟೀರಿಯಲ್‌ಗಳನ್ನು ವಶಪಡಿಸಿ ಸಂಸ್ಥೆಯ ಮಾಲಕನಿಗೆ ೨೫,೦೦೦ ರೂ. ದಂಡ ಹೇರಲಾಗಿದೆ. ಮುದ್ರಣಕ್ಕೆ ಅನುಮತಿ ನೀಡಿದ ವಸ್ತುಗಳಲ್ಲಿಯೂ ಕ್ಯೂಆರ್ ಕೋಡ್, ರೀಸೈಕ್ಲಿಂಗ್ ಲೋಗೊ, ಸಂಸ್ಥೆಯ ವಿಳಾಸ ಮುದ್ರಿಸಲಾಗಿರಲಿಲ್ಲ. …