ನಾಡಿನಾದ್ಯಂತ ಗಣೇಶೋತ್ಸವ ಸಂಭ್ರಮ
ಕಾಸರಗೋಡು: ವಿದ್ಯಾ ಬುದ್ಧಿ ಸಿದ್ಧಿದಾಯಕ ಪ್ರಥಮ ವಂದ್ಯಾ ಸಿದ್ದಿವಿನಾಯಕನ ಜನ್ಮದಿನವಾದ ಗಣೇಶ ಚತುರ್ಥಿ ಹಬ್ಬಕ್ಕೆ ಅಬ್ಬರದ ಮಳೆಯ ನಡುವೆಯೂ ವೈಭವದ ಕಳೆ ಕಂಡು ಬರುತ್ತಿದೆ. ವಿಘ್ನ ನಿವಾರಕನಾದ ವಿಘ್ನೇಶ್ವರನ ಉತ್ಸವಾಚರಣೆಯ ಸಂಭ್ರಮಕ್ಕೆ ತೊಡಕೆಂದೂ ಉಂಟಾಗಲ್ಲ ಎಂಬ ಭಕ್ತರ ಮನೋಭಿಲಾಷೆಗೆ ಸೋನೆ ಮಳೆಯು ಹೂಮಳೆಯಾಗಿ ಪರಿಣಮಿಸಿದೆ. ನಾಡಿನ ಪ್ರಸಿದ್ಧ ಗಣಪತಿ ದೇವಾಲಯಗಳಾದ ಮಧೂರು, ಶರವು, ಸೌತಡ್ಕ, ಹಟ್ಟಿಯಂಗಡಿ, ಇಡಗುಂಜಿ, ಕುಂಭಾಶಿ, ಗೋಕರ್ಣ ಮೊದಲಾದ ದೇವಸ್ಥಾನಗಳಲ್ಲದೆ ಸ್ಥಳೀಯ ಹೆಚ್ಚಿನ ದೇವಸ್ಥಾನಗಳಿಗೆ ಭಕ್ತರು ಭೇಟಿ ನೀಡಿ ಸೇವೆ ಸಲ್ಲಿಸಿ ಸಂತೃಪ್ತಿ ಪಡೆದುಕೊಳ್ಳುತ್ತಿದ್ದಾರೆ. …