ಮೀಂಜದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಅಭಿನಂದನೆ
ಮೀಂಜ: ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳನ್ನು ಬಿಜೆಪಿ ಮೀಂಜ ಪಂಚಾಯತ್ ಸಮಿತಿ ಆಶ್ರಯದಲ್ಲಿ ಅಭಿನಂದಿಸಲಾಯಿತು. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ಮಂಜೇಶ್ವರ ಬ್ಲೋಕ್‌ನ ಕೆಲವು ವಾರ್ಡ್‌ಗಳಲ್ಲಿ ಬಿಜೆಪಿಯನ್ನು ಸೋಲಿಸಲು ಎಡ-ಬಲ ಒಕ್ಕೂಟಗಳು ಪ್ರತ್ಯಕ್ಷ ಹೊಂದಾಣಿಕೆ ನಡೆಸಿರುವುದಕ್ಕೆ ಪುರಾವೆಯಾಗಿದೆ ಈ ಬಾರಿಯ ಚುನಾವಣೆಯ ಫಲಿತಾಂಶವೆಂದು ಅಶ್ವಿನಿ ಆರೋಪಿಸಿದರು. ಕೇಂದ್ರ ಸರಕಾರದ ಜನಕ್ಷೇಮ ಯೋಜನೆಗಳ ಪ್ರಯೋಜನ ಗರಿಷ್ಠವಾಗಿ ಗ್ರಾಹಕರಿಗೆ ಲಭ್ಯಗೊಳಿಸಲು ಹೊಸತಾಗಿ ಆಯ್ಕೆಯಾದ ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಅಶ್ವಿನಿ ಕರೆ ನೀಡಿದರು. ಮೀಜ ಪಂಚಾಯತ್ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ …