ಆಲಂಪಾಡಿ ನಿವಾಸಿಯನ್ನು ತಡೆದು ನಿಲ್ಲಿಸಿ ಪರ್ಸ್, ಎಟಿಎಂ ಕಾರ್ಡ್ ವಶ: ಕೊಲೆ ಬೆದರಿಕೆಯೊಡ್ಡಿ 1 ಲಕ್ಷ ರೂ. ಲಪಟಾವಣೆ

ಕಾಸರಗೋಡು: ಆಲಂಪಾಡಿ ನಿವಾಸಿಯನ್ನು ತಡೆದು ನಿಲ್ಲಿಸಿದ ತಂಡವೊಂದು ಪರ್ಸ್ ಹಾಗೂ ಎಟಿಎಂ ಕಾರ್ಡ್ ಅಪಹರಿಸಿ 1,01,000 ರೂಪಾಯಿ ಲಪಟಾಯಿಸಿರುವುದಾಗಿ ದೂರಲಾಗಿದೆ. ಮುಟ್ಟತ್ತೋಡಿ ಆಲಂಪಾಡಿ ಮಿಹ್ರಾಜ್ ಹೌಸ್‌ನ ಪಿ.ಎಂ. ಖಮರುದ್ದೀನ್ ಎಂಬವರು ನೀಡಿದ ದೂರಿನಂತೆ ಅನಸ್ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇತರ ಮೂರು ಮಂದಿ ವಿರುದ್ಧ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ 9.30ರ ವೇಳೆ ನೆಲ್ಲಿ ಕುಂಜೆಯಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಖಮರುದ್ದೀನ್‌ರನ್ನು ತಡೆದು ನಿಲ್ಲಿಸಿದ ತಂಡ ಕೊಲೆಗೈಯ್ಯು ವುದಾಗಿ ಬೆದರಿಕೆಯೊಡ್ಡಿದ …

ಪಂಚಾಯತ್ ಅಧ್ಯಕ್ಷ ಸ್ಥಾನ: ಕುಂಬಳೆಯಲ್ಲಿ ಮೊದಲು ಅಬ್ದುಲ್ ಖಾದರ್, ಮಂಗಲ್ಪಾಡಿಯಲ್ಲಿ ಗೋಲ್ಡನ್ ರಹ್ಮಾನ್, ಮಂಜೇಶ್ವರದಲ್ಲಿ ಬಷೀರ್ ಕನಿಲ

ಕುಂಬಳೆ: ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿ ಮುಸ್ಲಿಂಲೀಗ್‌ನಲ್ಲಿ ಒಪ್ಪಂದಕ್ಕೆ ಬರಲಾಗಿದೆ. ಮುಸ್ಲಿಂಲೀಗ್‌ಗೆ ಬಹುಮತವುಳ್ಳ ಪಂಚಾಯತ್‌ಗಳಲ್ಲಿ ಮೊದಲ ಎರಡು ವರ್ಷ ಒಬ್ಬರು, ಅನಂತರದ ಮೂರು ವರ್ಷ ಇನ್ನೊಬ್ಬರು ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ. ಈ ನಿರ್ಧಾರ ಕೈಗೊಳ್ಳುವುದರೊಂದಿಗೆ ಎಲ್ಲರನ್ನು ಸಮಾಧಾನಪಡಿಸಲು ಪಕ್ಷಕ್ಕೆ ಸಾಧ್ಯವಾಗಿದೆ. ನಿರ್ಧಾರ ಪ್ರಕಾರ ಕುಂಬಳೆಯಲ್ಲಿ ಮೊದಲ ಎರಡು ವರ್ಷ ವಿ.ಪಿ. ಅಬ್ದುಲ್ ಖಾದರ್ ಅಧ್ಯಕ್ಷರಾಗುವರು. ಅನಂತರದ ಮೂರು ವರ್ಷ ಎ.ಕೆ. ಹರೀಫ್ ಆ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ. ಲೀಗ್ ಜಿಲ್ಲಾ ಪಾರ್ಲಿಮೆಂಟರಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. …

ಅಸೌಖ್ಯ: ನಿಧನ

ಮೀಂಜ: ಬೆಜ್ಜ ಅಗ್ರಾಲ ನಿವಾಸಿ ದೇವರಾಜ್ ಶೆಟ್ಟಿಯವರ ಪತ್ನಿ ಶಾಂಭವಿ ಶೆಟ್ಟಿ (52) ನಿಧನ ಹೊಂದಿದರು. ಅಸೌಖ್ಯ ಬಾಧಿಸಿದ್ದ ಇವರನ್ನು ಕಳೆದ ಒಂದು ತಿಂಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿಲಾಗಿತ್ತು. ನಿನ್ನೆ ಸಂಜೆ ನಿಧನ ಸಂಭವಿಸಿದೆ. ಮೃತರು ಪತಿ, ಮಕ್ಕಳಾದ ಮಾನಸ, ಧನುಷ್, ಮನೀಷ, ಅಳಿಯ ರಮೇಶ್ ಶೆಟ್ಟಿ, ಸಹೋದರಿಯರಾದ ಗುಲಾಬಿ, ಚಂದ್ರಾವತಿ ಹಾಗೂ ಅಪಾರ  ಬಂಧು ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಶ್ರೀನಿವಾಸ ಎಂಬವರು ಈ ಹಿಂದೆ ನಿಧನರಾಗಿದ್ದಾರೆ. ಶಾಂಭವಿ ಶೆಟ್ಟಿಯವರ ನಿಧನಕ್ಕೆ ಬಿಜೆಪಿ ಮೀಂಜ ಪಂಚಾಯತ್ …

ರಾಜ್ಯದಲ್ಲಿ ಆಡಳಿತಕ್ಕೇರಲು ಯುಡಿಎಫ್‌ನಿಂದ ತೀವ್ರ ಪ್ರಯತ್ನ : ಉದುಮದಲ್ಲಿ ರಾಜ್‌ಮೋಹನ್ ಉಣ್ಣಿತ್ತಾನ್‌ರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪರಿಗಣನೆ

ಕಾಸರಗೋಡು: ಎರಡು ಬಾರಿ ಕೈತಪ್ಪಿ ಹೋದ ರಾಜ್ಯ ಆಡಳಿತವನ್ನು ಈ ಬಾರಿಯಾದರೂ ಮರಳಿ ವಶಪಡಿಸಲು ಕಾಂಗ್ರೆಸ್ ಸಹಿತ ಯುಡಿಎಫ್ ದೃಢ ನಿರ್ಧಾರ ಕೈಗೊಂ ಡಿದ್ದು, ಅದಕ್ಕಾಗಿ ತೀವ್ರ ಪ್ರಯತ್ನ ನಡೆಸುತ್ತಿದೆ. ಈ ಬಾರಿ ಆಡಳಿತ ಹಿಡಿಯಲು ಸಾಧ್ಯವಾಗದಿದ್ದಲ್ಲಿ ಒಕ್ಕೂಟಕ್ಕೆ ಭಾರೀ ಸವಾಲು ಎದು ರಾಗಲಿದೆ  ಎಂಬ ಆತಂಕ ಹುಟ್ಟಿ ಕೊಂಡಿದೆ.  ಇದೇ ವೇಳೆ ಸ್ಥಳೀಯಾ ಡಳಿತ ಚುನಾವಣೆಯಲ್ಲಿ ಲಭಿಸಿದ ಗೆಲುವು ಯುಡಿಎಫ್‌ನ ಈಗಿನ ನಿರ್ಧಾರಕ್ಕೆ ಶಕ್ತಿ ತುಂಬುತ್ತಿದೆ. ರಾಜ್ಯದ ಉತ್ತರದ ತುದಿಯಲ್ಲಿರುವ ಮಂಜೇ ಶ್ವರ, ಕಾಸರಗೋಡು ವಿಧಾನಸಭಾ …

ಅಸೌಖ್ಯ: ನಿಧನ

ಉಪ್ಪಳ: ಮೂಲತಃ ಮಾಯಿಪ್ಪಾಡಿ ನಿವಾಸಿ ಕುಂಬಳೆ ಬಳಿಯ ಸೀತಾಂಗೋಳಿಯಲ್ಲಿ ವಾಸವಾಗಿದ್ದ ದೇವರಾಜ್ ಆಚಾರ್ಯರ ಪತ್ನಿ ಹೇಮಲತಾ (60) ನಿಧನಹೊಂದಿದರು. ಹಲವು ವರ್ಷಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಇವರಿಗೆ ನಿನ್ನೆ ರಾತ್ರಿ 7 ಗಂಟೆಗೆ ರೋಗ ಉಲ್ಭಣಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತಿ, ಮಕ್ಕಳಾದ ಅಮೃತ, ಅಕ್ಷಿತ, ಅಳಿಯಂದಿರಾದ ನಳಿನಾಕ್ಷ ಆಚಾರ್ಯ, ಧನುಷ್ ಆಚಾರ್ಯ, ಸಹೋದರ-ಸಹೋ ದರಿಯರಾದ ಗೋಪಾಲ ಆಚಾ ರ್ಯ, ಜನಾರ್ದನ ಆಚಾರ್ಯ, ಮೀನಾಕ್ಷಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ವಿವಿಧೆಡೆ ಕ್ರಿಸ್ಮಸ್ ಆಚರಣೆ: ಕಯ್ಯಾರ್ ಚರ್ಚ್‌ನಲ್ಲಿ ದಿವ್ಯ ಬಲಿಪೂಜೆ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕ್ರೈಸ್ತ ಬಾಂಧವರು ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.ಕಯ್ಯಾರ್ ಕ್ರಿಸ್ತ ರಾಜ ದೇವಾಲಯದ ದಲ್ಲಿ ನಡೆದ ಬಲಿಪೂಜೆ ಯನ್ನು ರಾಂಚಿ ಸೆಮಿನರಿಯ ನಿರ್ದೇಶಕ ಫಾದರ್ ಜೋನ್ ಕ್ರಾಸ್ತ ನೆರವೇರಿಸಿದರು. ದೇವಾಲಯದ ಧರ್ಮಗುರು ಫಾದರ್ ವಿಶಾಲ್ ಮೋನಿಸ್ ವಿಧಿ ವಿಧಾನ ನೆರವೇರಿಸಿದರು . ಬಳಿಕ ವಿವಿಧ ಸಾಂಸ್ಕೃ ತಿಕ ಕಾರ್ಯಕ್ರಮಗಳು ಜರಗಿತು.ವಿವಿಧ ಚರ್ಚ್ಗಳಲ್ಲಿ ಕ್ರಿಸ್ಮಸ್‌ನ್ನು ಸಂಭ್ರಮ ದಿಂದ ಆಚರಿಸಲಾಯಿತು. ದಿವ್ಯ ಬಲಿಪೂಜೆಯಲ್ಲಿ ಅಪಾರ ಭಕ್ತರು ಪಾಲ್ಗೊಂಡಿದ್ದರು. ಗೋದಲಿ, ನಕ್ಷತ್ರ ಸೇರಿದಂತೆ ದೀಪಾಲಂಕಾರ ಗಳಿಂದ …

ಸೂರ್ಯನಿಗೇ ಸವಾಲು: ಮಂಗಲ್ಪಾಡಿ ಪಂ. ವ್ಯಾಪ್ತಿಯಲ್ಲಿ ಹಗಲಿಡೀ ಉರಿಯುತ್ತಿರುವ ಬೀದಿ ದೀಪಗಳು

ಉಪ್ಪಳ: ಹಗಲಿನ ಸೂರ್ಯ ಪ್ರಕಾಶಕ್ಕೆ ಸವಾಲೊಡ್ಡುವ ರೀತಿಯಲ್ಲಿ ಮಂಗಲ್ಪಾಡಿ ಪಂಚಾಯತ್‌ನ ವಿವಿಧ ಕಡೆಗಳಲ್ಲಿ ಬೀದಿ ದೀಪಗಳು ಉರಿಯುತ್ತಿರುವುದು ಕಂಡುಬಂದಿದೆ. ಹಗಲೂರಾತ್ರಿ ತಿಂಗಳುಗಳಿಂದ ಸತತವಾಗಿ  ಲೋ ಮಾಸ್ಟ್ ಬೀದಿ ದೀಪಗಳು ಉರಿಯುತ್ತಿದ್ದು ಇದನ್ನು ನಿಯಂತ್ರಿಸಲು ಪಂಚಾಯತ್‌ನಲ್ಲಿ ಯಾರೂ ಮುಂದಾಗದಿರುವುದು ಕಂಡು ಬಂದಿದೆ. ಪೆರಿಂಗಡಿ ರಸ್ತೆಯ ಜನಪ್ರಿಯ ಎಂಬಲ್ಲಿ ಸರ್ವೀಸ್ ರಸ್ತೆ ಬದಿಯಲ್ಲಿ ಹಾಗೂ ಕುಬಣೂರು ರಸ್ತೆಯ ಪುಳಿಕುತ್ತಿ ಸ್ಮಶಾನದ ಬಳಿ ಕಳೆದ ಒಂದು ತಿಂಗಳಿಂದ ಸತತವಾಗಿ  ಲೋ ಮಾಸ್ಟ್ ಬೀದಿ ದೀಪ ಉರಿಯುತ್ತಿದೆ. ಇದೇ ರೀತಿ ಪಂಚಾಯತ್ ವ್ಯಾಪ್ತಿಯ …

ಕೇರಳದ ಎಲ್ಲಾ ಸರಕಾರಿ ಸೇವೆಗಳಿಗಾಗಿ ಬರಲಿದೆ ಖಾಯಂ ರಾಜ್ಯ ಗುರುತು ಚೀಟಿ

ತಿರುವನಂತಪುರ: ಕೇರಳದ ಎಲ್ಲಾ ಸರಕಾರಿ ಸೇವೆಗಳಿಗಾಗಿ ಬರಲಿದೆ ಖಾಯಂ ಗುರುತುಚೀಟಿ. ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಈ ವಿಷಯ ತಿಳಿಸಿದ್ದಾರೆ. ಕೇರಳದಲ್ಲಿ ಜನಿಸಿದವರೆಂಬುವುದನ್ನು ಸಾಬೀತುಪಡಿಸಲು ಒಂದು ಅಧಿಕೃತ ಗುರುತು ಚೀಟಿಯಾಗಿ ಫೋಟೋ ಲಗತ್ತಿಸಿದ ಇಂತಹ ನೇಟಿವಿಟಿ ಕಾರ್ಡ್ ವಿತರಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಆದರೆ ಇದು ಒಂದು ಕಾನೂನಾತ್ಮಕ ದಾಖಲುಪತ್ರವಲ್ಲವೆಂದೂ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಈ ಕಾರ್ಡನ್ನು ಸರಕಾರದ ಎಲ್ಲಾ ಸೇವೆಗಳಿಗಾಗಿ ಉಪಯೋಗಿಸಬಹುದಾಗಿದೆ. ನೇಟಿವಿಟಿ ಸರ್ಟಿಫಿಕೇಟಿನ ಪರ್ಯಾಯವಾಗಿ ಇದನ್ನು …

ಬದಿಯಡ್ಕ ಪಂ. ವಿಜೇತ ಬಿಜೆಪಿ ಅಭ್ಯರ್ಥಿಗಳಿಂದ ಎಡನೀರು ಶ್ರೀ ಭೇಟಿ

 ಬದಿಯಡ್ಕ: ಇತ್ತೀಚೆಗೆ ನಡೆದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ವಿಜೇತ ಬಿಜೆಪಿ ಅಭ್ಯರ್ಥಿಗಳು ಎಡನೀರು ಮಠಕ್ಕೆ ಭೇಟಿ ನೀಡಿ  ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದುಕೊಂಡರು. ಪಕ್ಷದ ಪ್ರಮುಖ ಡಿ.ಕೆ. ನಾರಾಯಣನ್ ನಾಯರ್, ಜಿಲ್ಲಾ ಪಂಚಾಯತ್ ಬದಿಯಡ್ಕ ಡಿವಿಶನ್ ಅಭ್ಯರ್ಥಿ ರಾಮಪ್ಪ ಮಂಜೇಶ್ವರ, ನೀರ್ಚಾಲು ಬ್ಲೋಕ್ ಸದಸ್ಯ ಮಹೇಶ್ ವಳಕ್ಕುಂಜ, ಬದಿಯಡ್ಕ ಪಂ. ಅರ್ಥಿಗಳಾದ ಡಿ. ಶಂಕರ, ಅಶ್ವಿನಿ ಕೆ.ಎಂ., ಹರೀಶ, ಶ್ಯಾಮಪ್ರಸಾದ ಸರಳಿ, ಮಧುಸೂದನ, ಉಷಾ ಪಳ್ಳತ್ತಡ್ಕ, ರಜನಿ ಸಂದೀಪ್, ಬಿಂದ್ಯಾ ಕಾರ್ತಿಕ್ ಜೊತೆಗಿದ್ದರು.

ರೈಲ್ವೇ ದರ ಹೆಚ್ಚಳ: ಡಿವೈಎಫ್‌ಐಯಿಂದ ರೈಲು ನಿಲ್ದಾಣಕ್ಕೆ ಮಾರ್ಚ್

ಕಾಸರಗೋಡು: ರೈಲ್ವೇ ಹೆಚ್ಚಿಸಿದ  ದರವನ್ನು ಹಿಂತೆಗೆಯಬೇಕು, ಆಗಾಗ ಪ್ರಯಾಣ ದರವನ್ನು ಹೆಚ್ಚಿಸುವ ರೈಲ್ವೇಯ  ನಿಲುವು ಪ್ರತಿಭಟಿಸಿ  ಡಿವೈಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ರೈಲ್ವೇ ನಿಲ್ದಾಣಕ್ಕೆ ಪ್ರತಿಭಟನಾ ಮಾರ್ಚ್ ನಡೆಸಲಾಯಿತು. ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಳ್ಳಾಡ್ ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಪಿ. ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದರು. ಜ್ಯೋತಿ ಚೆನ್ನಿಕ್ಕರೆ, ರಂಜಿನಿ ಕಾರಡ್ಕ, ಪ್ರವೀಣ್ ಪಾಡಿ, ಇಮ್ಯಾನುವೆಲ್ ಮಾತನಾಡಿದರು. ಜಿಲ್ಲಾ ಸೆಕ್ರೆಟರಿ ಯೇಟ್ ಸದಸ್ಯ ಸುಭಾಷ್ ಪಾಡಿ ಸ್ವಾಗತಿಸಿದರು. ತಾಯಲಂಗಾಡಿ ಯಿಂದ ಮೆರವಣಿಗೆ ಆರಂಭಗೊಂಡಿತು.