ಬಾಲಕಿಗೆ ಲೈಂಗಿಕ ಕಿರುಕುಳ: ಜಾಮೀನಿನಲ್ಲಿ ಬಿಡುಗಡೆಗೊಂಡು ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಕಾಸರಗೋಡು:   ಪ್ರಾಯ ಪೂರ್ತಿಯಾಗದ  ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ  ಜಾಮೀನಿನಲ್ಲಿ ಬಿಡುಗಡೆಗೊಂಡು ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಸೆರೆಗೀಡಾಗಿದ್ದಾನೆ. ನೆಲ್ಲಿಕುಂಜೆ ಕಡಪ್ಪುರ ನಿವಾಸಿಯಾದ ರತೀಶ್ (42) ಎಂಬಾತ ಸೆರೆಗೀಡಾದ ಆರೋಪಿ.  ಮಹಿಳಾ ಪೊಲೀಸ್ ಠಾಣೆ ಎಸ್‌ಐ ಕೆ. ಅಜಿತರ ನೇತೃತ್ವದಲ್ಲಿ ಮಲಪ್ಪುರಂ ಕುಟ್ಟಿಪ್ಪುರದಿಂದ  ಅತೀ ಸಾಹಸಿಕವಾಗಿ ಆರೋಪಿಯನ್ನು ಸೆರೆಹಿಡಿಯಲಾಗಿದೆ. ಕಾಸರಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಕಿಗೆ ಆರೋಪಿ ಕಿರುಕುಳ ನೀಡಿದಾನ. ೨೦೨೦ರಲ್ಲಿ ಹಾಗೂ ಬಳಿಕ ಹಲವು ಬಾರಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಪ್ರಕರಣದಲ್ಲಿ ತಿಳಿಸಲಾಗಿದೆ. ೨೦೨೧ರಲ್ಲಿ  ದಾಖಲಿಸಿಕೊಂಡ …

ಕುಸಿದು ಬಿದ್ದು ನಿಧನ

ಬದಿಯಡ್ಕ: ಮೂಲತಃ ಮೊಗ್ರಾಲ್ ಪುತ್ತೂರು ನಿವಾಸಿ ಹಾಗೂ ಈಗ ಬೇಳ ಸಮೀಪದ ಮಜೀರ್ಪಳ್ಳ ಕಟ್ಟೆಯಲ್ಲಿರುವ ರಾಘವ (56) ಕುಸಿದು ಬಿದ್ದು ನಿಧನ ಹೊಂದಿದರು. ಬೇಳ ಕೌಮುದಿ ನೇತ್ರಾಲಯದಲ್ಲಿ ಉದ್ಯೋಗಿಯಾಗಿ ದ್ದರು. ಮಾನ್ಯದ ತೋಟವೊಂದಕ್ಕೆ ತೆರಳಿದ ವೇಳೆ ಕುಸಿದು ಬಿದ್ದಿದ್ದಾರೆ ನ್ನಲಾಗಿದೆ. ಇವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ಮೋಹಿನಿ, ಮಕ್ಕಳಾದ ನವಿನಾಶ್, ನವ್ಯ, ಸೊಸೆ ಮೀನಾಕ್ಷಿ, ಅಳಿಯ ಸಜಿತ್, ಸಹೋದರರಾದ ಮಣಿಕಂಠನ್, ಸುಧಾಕರನ್, ಉಮೇಶ್, ಬಾಲಕೃಷ್ಣ, ಚಂದ್ರಶೇಖರ, ಜಗದೀಶ್, ಸಹೋದರಿ ಚಂದ್ರಾವತಿ …

ಆಟೋದಲ್ಲಿ ಗಾಂಜಾ ಸಾಗಿಸಲು ಯತ್ನ: ಓರ್ವ ಸೆರೆ

ಕಾಸರಗೋಡು: ಉದುಮ ನಂಬ್ಯಾರ್‌ಕೀಚಲ್‌ನಲ್ಲಿ ಅಬಕಾರಿ ದಳ ನಡೆಸಿದ ದಾಳಿಯಲ್ಲಿ ಆಟೋದಲ್ಲಿ ಸಾಗಿಸಲು ಯತ್ನಿಸಿದ 1.100 ಕಿಲೋ ಗ್ರಾಂ ಗಾಂಜಾ ಸೆರೆಹಿಡಿಯಲಾಗಿದೆ. ಘಟನೆಗೆ ಸಂಬಂಧಿಸಿ ಕೂಡ್ಲು ಚೌಕಿ ಆಜಾದ್‌ನಗರದ ಎಂ. ಅಹಮ್ಮದ್ ನನ್ನು ಬಂಧಿಸಲಾಗಿದೆ. ನಿನ್ನೆ ಮಧ್ಯಾಹ್ನ 2 ಗಂಟೆ ವೇಳೆ ಹೊಸದುರ್ಗ ಅಬಕಾರಿ ಸರ್ಕಲ್ ಇನ್ಸ್‌ಪೆಕ್ಟರ್ ವಿ.ವಿ. ಪ್ರಸನ್ನ ಕುಮಾರ್ ಹಾಗೂ ತಂಡ ನಡೆಸಿದ ವಾಹನ ತಪಾಸಣೆಯಲ್ಲಿ ಈತನನ್ನು ಸೆರೆ ಹಿಡಿಯಲಾಗಿದೆ. ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಶಂಕೆ ತೋರಿದ ಅಬಕಾರಿ ಅಧಿಕಾರಿಗಳು ಆಟೋವನ್ನು ಪರಿಶೀಲಿಸಿ ಕಸ್ಟಡಿಗೆ …

ಯುವಕರು,ವಿದ್ಯಾರ್ಥಿಗಳಿಗೆ ವಿತರಿಸಲು ಗಾಂಜಾ ಸಾಗಾಟ: ಯುವಕ ಬಂಧನ

ಕಾಸರಗೋಡು: ಕ್ರಿಸ್ಮಸ್, ಹೊಸ ವರ್ಷದಂಗವಾಗಿ ಅಬಕಾರಿ ಅಧಿಕಾರಿಗಳು  ಆರಂಭಿಸಿದ ಸ್ಪೆಷಲ್ ಡ್ರೈವ್‌ನ ವೇಳೆ ಮಂಜೇಶ್ವರ ಚೆಕ್‌ಪೋಸ್ಟ್‌ನಲ್ಲಿ ನಡೆಸಿದ ತಪಾಸಣೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ಯುವಕನನ್ನು ಸೆರೆಹಿಡಿಯಲಾಗಿದೆ. ಉತ್ತರ ಪ್ರದೇಶದ ಮೊರಾದಾಬಾದ್ ಮಹ್ಲಾಕ್‌ಪುರ್ ಮಾಫಿ ನಿವಾಸಿಯಾದ ನಾಜಿರ್ (35) ಎಂಬಾತ ಸೆರೆಗೀಡಾದ ವ್ಯಕ್ತಿ.ನಿನ್ನೆ ಬೆಳಿಗ್ಗೆ ೧೦ ಗಂಟೆ ವೇಳೆ ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನ ಇನ್‌ಸ್ಪೆಕ್ಟರ್ ಸಂತೋಷ್ ಕುಮಾರ್ ಹಾಗೂ ತಂಡ ನಡೆಸಿದ ಕಾರ್ಯಾಚರಣೆ ವೇಳೆ ಗಾಂಜಾ ಸಾಗಾಟ ಪತ್ತೆಯಾಗಿದೆ.  ಮಂಜೇಶ್ವರ, ಕುಂಬಳೆ ಭಾಗದ ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ …

ಸೈಕಲ್ ಅಂಗಡಿ ಮಾಲಕ ನಿಧನ

ಉಪ್ಪಳ: ಮಂಗಲ್ಪಾಡಿ ಕುಕ್ಕಾರ್‌ನಲ್ಲಿ ಹಲವು ವರ್ಷಗಳಿಂದ ಶ್ರೀರಾಮ ಸೈಕಲ್ ಅಂಗಡಿ ನಡೆಸುತ್ತಿದ್ದ ಪರಮೇಶ್ವರ ಶೆಟ್ಟಿಗಾರ್ (79) ನಿಧನ ಹೊಂದಿದರು. ಚೆರುಗೋಳಿ ಶ್ರೀರಾಮ ನಿಲಯ ನಿವಾಸಿಯಾದ ಇವರು ಇತ್ತೀಚೆಗಿನಿಂದ ನಯಾಬಜಾರ್‌ನಲ್ಲಿ ಸೈಕಲ್ ಅಂಗಡಿ ಆರಂಭಿಸಿದ್ದು, ಕಾರವಲ್ ಏಜೆಂಟ್ ಕೂಡಾ ಆಗಿದ್ದರು. ಕಳೆದ ಒಂದು ವಾರದಿಂದ ಅಸೌಖ್ಯ ತೀವ್ರಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ. ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ ಸುಂದರಿ, ಮಕ್ಕಳಾದ ಮಹಾಲಕ್ಷ್ಮಿ, ಉಷಾಕುಮಾರಿ, ಚಂದ್ರಕಲಾ, ಜಯರಾಮ, ರಾಮಕೃಷ್ಣ, ಅಳಿಯಂದಿರಾದ ಜಯರಾಮ, …

ಬಿರುಕು ಬಿಟ್ಟು ಶೋಚನೀಯ ಸ್ಥಿತಿಯಲ್ಲಿರುವ ಪೈವಳಿಕೆ ವಿಲೇಜ್ ಕಚೇರಿ ಕಟ್ಟಡ: ದಾಖಲೆ ಪತ್ರ ಸಂರಕ್ಷಣೆಗೆ ಸಮಸ್ಯೆ

ಪೈವಳಿಕೆ: ಕಾಸರಗೋಡು ಜಿಲ್ಲೆಯೆಲ್ಲೆಡೆ ವಿಲೇಜ್ ಕಚೇರಿಗಳು ಅಭಿವೃದ್ದಿ ಪಥದತ್ತ ಸಾಗುತ್ತಿದ್ದರೂ ಪೈವಳಿಕೆ ವಿಲೇಜ್ ಕಚೇರಿ ಕಟ್ಟಡ ಬಿರುಕು ಬಿಟ್ಟು ಶೋಚನೀಯಾವಸ್ಥೆಯಲ್ಲಿದೆ. ಅಭಿವೃದ್ಧಿಗೊಳಿಸಲು ಅಧಿಕಾರಿಗಳು ನಿರ್ಲಕ್ಷ÷್ಯ ವಹಿಸು ತ್ತಿರುವುದಕ್ಕೆ ಸಾರ್ವಜನಿಕರಲ್ಲಿ ಅಸಮÁಧಾನ ಉಂಟÁಗಿದೆ. ವರ್ಷಗಳ ಹಿಂದೆ ಅಧಿಕಾರಿಗಳು ತಲುಪಿ ಸ್ಮಾರ್ಟ್ ವಿಲೇಜ್ ಕಚೇರಿ ನಿರ್ಮಿಸಲು ಸ್ಥಳ ಪರಿಶೋಧನೆ ನಡೆಸಿದ್ದರು. ಆದರೆ ಇದುವರೆಗೂ ಯಾವುದೇ ಮಾಹಿತಿಯಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಮಲೆನಾಡ ಹೆದ್ದಾರಿ ಬದಿಯಲ್ಲಿರುವ ಈ ವಿಲೇಜ್ ಕಚೇರಿ 62 ಸೆಂಟ್ಸ್ ವಿಸ್ತೀರ್ಣವಾದ ಸ್ಥಳ ಹೊಂದಿದೆ. ಇಲ್ಲಿ ಈ ಹಿಂದೆ ಹಳೇಯದಾದ …

ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ಉಬ್ರಂಗಳದಲ್ಲಿ ಸಾಹಿತ್ಯಾಮೃತ ಕಾರ್ಯಕ್ರಮ

ಉಬ್ರಂಗಳ: ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾ ನದಲ್ಲಿ ಪಾಟು ಉತ್ಸವ, ಭೂತಬಲಿ ಉತ್ಸವದ ಪ್ರಯುಕ್ತ ಡಾ.ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಸಾಹಿತ್ಯಾಮೃತ ಸಾಂಸ್ಕೃ ತಿಕ ಕಾರ್ಯಕ್ರಮ ಜರಗಿತು. ಡಾ. ವಾಣಿಶ್ರೀ ಪ್ರಸ್ತುತ ಪಡಿಸಿದರು. ಗಾನಾಮೃತ ಕಾರ್ಯಕ್ರಮ ದಲ್ಲಿ ಸಂಸ್ಥೆಯ ಮಧುಲತಾ ಪುತ್ತೂರು, ವಿಶ್ವನಾಥ ಪುತ್ತಿಗೆ, ರತ್ನಾಕರ ಒಡಂಗಲ್ಲು, ಮುರಳಿ ನೀರ್ಚಾಲ್, ಈಶ್ವರ ಸೂರಂಬೈಲ್ ಮುಂತಾದ ಕಲಾವಿದರು ಹಾಡಿ ರಂಜಿಸಿದರು. ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ, ಪುಸ್ತಕಗಳನ್ನು …

ಉದ್ಯೋಗ ಖಾತರಿ ಯೋಜನೆ: ಕೇಂದ್ರ ನಿಲುವು ಪ್ರತಿಭಟಿಸಿ ಐಎನ್‌ಟಿಯುಸಿ ಮುಷ್ಕರ

ಕಾಸರಗೋಡು: ಉದ್ಯೋಗ ಖಾತರಿ ಯೋಜನೆಯನ್ನು ರದ್ದುಗೊಳಿ ಸಲು, ಗಾಂಧೀಜಿಯ ಹೆಸರನ್ನು ಯೋ ಜನೆಯಿಂದ ತೆರವುಗೊಳಿಸಲಿರುವ  ಕೇಂದ್ರ ಸರಕಾರದ ಕ್ರಮದ ವಿರುದ್ಧ ಐಎನ್‌ಟಿಯುಸಿ ಕಾಸರಗೋಡು ವಿಧಾನಸಭಾ ಮಂಡಲ ಸಮಿತಿ ಪ್ರಧಾನ ಅಂಚೆ ಕಚೇರಿ ಎದುರಲ್ಲಿ ಮುಷ್ಕರ ಆಯೋಜಿಸಿತು. ಐಕ್ಯರಂಗದ ಜಿಲ್ಲಾ ಕಾರ್ಯದರ್ಶಿ ಎ. ಗೋ ವಿಂದನ್ ನಾಯರ್ ಉದ್ಘಾಟಿಸಿದರು. ವಿಧಾನಸಭಾ ಮಂಡಲ ಸಮಿತಿ ಅಧ್ಯಕ್ಷ ಸಿ.ಜಿ. ಟೋನಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಟಿ.ವಿ. ಕುಂಞಿರಾಮನ್, ಅರ್ಜುನನ್ ತಾಯಲಂಗಾಡಿ, ಪಿ.ಕೆ. ವಿಜಯನ್, ಶಿವಶಂಕರನ್, ಉಷಾ ಎಸ್, ವಿದ್ಯಾಶ್ರೀ, ಶಾಂತ …

ಮೀಂಜದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಅಭಿನಂದನೆ

ಮೀಂಜ: ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳನ್ನು ಬಿಜೆಪಿ ಮೀಂಜ ಪಂಚಾಯತ್ ಸಮಿತಿ ಆಶ್ರಯದಲ್ಲಿ ಅಭಿನಂದಿಸಲಾಯಿತು. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ಮಂಜೇಶ್ವರ ಬ್ಲೋಕ್‌ನ ಕೆಲವು ವಾರ್ಡ್‌ಗಳಲ್ಲಿ ಬಿಜೆಪಿಯನ್ನು ಸೋಲಿಸಲು ಎಡ-ಬಲ ಒಕ್ಕೂಟಗಳು ಪ್ರತ್ಯಕ್ಷ ಹೊಂದಾಣಿಕೆ ನಡೆಸಿರುವುದಕ್ಕೆ ಪುರಾವೆಯಾಗಿದೆ ಈ ಬಾರಿಯ ಚುನಾವಣೆಯ ಫಲಿತಾಂಶವೆಂದು ಅಶ್ವಿನಿ ಆರೋಪಿಸಿದರು. ಕೇಂದ್ರ ಸರಕಾರದ ಜನಕ್ಷೇಮ ಯೋಜನೆಗಳ ಪ್ರಯೋಜನ ಗರಿಷ್ಠವಾಗಿ ಗ್ರಾಹಕರಿಗೆ ಲಭ್ಯಗೊಳಿಸಲು ಹೊಸತಾಗಿ ಆಯ್ಕೆಯಾದ ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಅಶ್ವಿನಿ ಕರೆ ನೀಡಿದರು. ಮೀಜ ಪಂಚಾಯತ್ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ …

ಕರಂದಕ್ಕಾಡ್ ಶಾಂತಿನಗರದ ಕೆ. ಶಾರದಾ ನಿಧನ

ಕಾಸರಗೋಡು: ಕರಂದಕ್ಕಾಡು ಶಾಂತಿ ನಗರ ಶಾರದಾಚಂದಂ ನಿವಾಸ್‌ನ ದಿ| ಚಂದ ಭಂಡಾರಿ ಯವರ ಪತ್ನಿ ಶಾರದಾ ಕೆ. (86) ನಿಧನ ಹೊಂದಿದರು. ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು. ಇಂದು ಬೆಳಿಗ್ಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಮೃತರು ಮಕ್ಕಳಾದ  ಕೆ. ವಿಜಯ (ನಿವೃತ್ತ ಬ್ಯಾಂಕ್ ಉದ್ಯೋಗಿ), ಕೆ. ಕಸ್ತೂರಿ, ಕೆ. ನಿರ್ಮಲ (ಮಾಜಿ ನಗರಸಭಾ ಕೌನ್ಸಿಲರ್), ಕೆ. ಅಶೋಕ (ಕಾರವಲ್), ಅಳಿಯಂದಿ ರಾದ ರಾಧಾಕೃಷ್ಣ, ದಾಮೋದರ, ಸೊಸೆ ಉಮಾವತಿ, ಸಹೋದರಿಯರಾದ ಅನಸೂಯ, ಅಹಲ್ಯ  ಹಾಗೂ ಅಪಾರ ಬಂಧು-ಮಿತ್ರರನ್ನು …