ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ: ಮನೆ ಕೆಡಹಲು ಬಂದ ಅಧಿಕಾರಿಗಳ ಮುಂದೆ ಆತ್ಮಹತ್ಯೆ ಬೆದರಿಕೆಯೊಡ್ಡಿದ ಕುಟುಂಬ, ಸೃಷ್ಟಿಯಾದ ಸಂಘರ್ಷ ವಾತಾವರಣ
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಾಗಿ ಭೂಸ್ವಾಧೀನಗೊಳಿಸುವ ಕ್ರಮದಂತೆ ಮನೆಯನ್ನು ಕೆಡಹಲು ಬಂದ ಅಧಿಕಾರಿಗಳ ಮುಂದೆ ಆ ಮನೆಯವರು ಆತ್ಮಹತ್ಯಾಬೆದರಿಕೆಯೊಡ್ಡಿದ ಅದು ಅಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಸಿದ ಘಟನೆ ಚೆರ್ಕಳ ಸಮೀಪದ ಬೇವಿಂಜೆಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಂತೆ ಬೇವಿಂಜೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಎಂ.ಟಿ. ಅಬ್ದುಲ್ ಬಶೀರ್ ಎಂಬವರ ದ್ವಿ ಅಂತಸ್ತು ಮನೆಯ ಎದುರುಗಡೆ ಭಾಗವನ್ನು ಕೆಡಹಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಧಿಕಾರಿಗಳ ತಂಡ ನಿನ್ನೆ ಆ ಮನೆಗೆ ಬಂದಿತ್ತು. ಪ್ರಸ್ತುತ ಯೋಜನೆ …