ಕುಂಬಳೆ ಪಂ.ನಲ್ಲಿ ಯುಡಿಎಫ್‌ಗೆ ಲಭಿಸಿದ ಗೆಲುವು 5 ವರ್ಷ ಕಾಲ ನಡೆದ ಅಭಿವೃದ್ಧಿ ಯೋಜನೆಗಳಿಗೆ ಜನರು ನೀಡಿದ ಅಂಗೀಕಾರ- ತಾಹಿರಾ ಯೂಸಫ್
ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನಲ್ಲಿ ಯುಡಿಎಫ್‌ಗೆ ಲಭಿಸಿದ ಅಭೂತಪೂರ್ವ ಗೆಲುವು ಕಳೆದ ಐದು ವರ್ಷಗಳ ಕಾಲ ಪ್ರಸ್ತುತ ಪಂಚಾಯತ್‌ನಲ್ಲಿ ನಡೆದ ಆಡಳಿತಕ್ಕೆ ಜನರು ನೀಡಿದ ಅಂಗೀ ಕಾರವಾಗಿದೆ ಎಂದು ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರಾ ಯೂಸಫ್ ತಿಳಿಸಿದ್ದಾರೆ. ಕಳೆದ ಐದು ವರ್ಷ ಕಾಲದಲ್ಲಿ ಹಲವು ಯೋಜನೆಗಳನ್ನು ಪಂಚಾಯತ್‌ನ ಆಡಳಿತ ಮಂಡಳಿ ಜ್ಯಾರಿಗೊಳಿಸಿದೆ. ಇದೇ ವೇಳೆ ವಿರೋಧ ಪಕ್ಷಗಳು ಹೊರಿಸಿದ ಭ್ರಷ್ಟಾಚಾರ ಆರೋಪ ವನ್ನು ಜನರು ತಿರಸ್ಕರಿಸಿದ್ದಾರೆ ಎಂದು ಅವರು ‘ಕಾರವಲ್’ಗೆ ತಿಳಿಸಿದ್ದಾರೆ. ಪಂಚಾಯತ್ ವ್ಯಾಪ್ತಿಯ ಹೊಯ್ಗೆ ಕಡವಿನ …