ಪುತ್ತಿಗೆಯಲ್ಲಿ ನಕಲಿ ಮತ ಚಲಾಯಿಸಲೆತ್ನಿಸಿದ ವ್ಯಕ್ತಿ ಸೆರೆ: ಆರೋಪಿಯನ್ನು ಪ್ರಕರಣದಿಂದ ಹೊರತುಪಡಿಸುವಂತೆ ಸಿಪಿಎಂ ಒತ್ತಡ
ಕುಂಬಳೆ: ನಿನ್ನೆ ನಡೆದ ಸ್ಥಳೀಯಾಡಳಿತ ಚುನಾವಣೆ ವೇಳೆ ಪುತ್ತಿಗೆಯಲ್ಲಿ ನಕಲಿ ಮತ ಚಲಾಯಿಸಲೆತ್ನಿಸಿದ ಓರ್ವ ಸೆರೆಗೀಡಾಗಿದ್ದಾನೆ. ಮಂಗಲಡ್ಕ ನಿವಾಸಿ ಸಹದ್ ಎಂಬಾತ ಸೆರೆಗೀಡಾದ ವ್ಯಕ್ತಿಯೆಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ 5.50 ರ ವೇಳೆ ಪುತ್ತಿಗೆ ಪಂಚಾಯತ್‌ನ ಚೆನ್ನಿಕ್ಕೋಡಿ ಒಂದನೇ ವಾರ್ಡ್ ಮತಗಟ್ಟೆಯಾದ ಧರ್ಮತ್ತಡ್ಕ ಶಾಲೆಯಲ್ಲಿ ಸಹದ್ ನಕಲಿ ಮತ ಚಲಾಯಿಸಲೆತ್ನಿಸಿದ್ದಾನೆ. ಮತದಾನ ಕೊನೆಗೊಳ್ಳಲು 10 ನಿಮಿಷ ಮಾತ್ರವೇ ಬಾಕಿಯಿರುವಾಗ ಮತಗಟ್ಟೆಗೆ ತಲುಪಿದ ಸಹದ್ ಮತ ಚಲಾಯಿಸಲು ಯತ್ನಿಸಿದ್ದನು. ಈತ ಮತ ಚಲಾಯಿ ಸಲು ಬೇರೆ …