ಮೂರು ರಸ್ತೆಗಳಿಗೆ 8 ಕೋಟಿ 96 ಲಕ್ಷ ರೂ.ಮಂಜೂರು-ಶಾಸಕ ಎನ್.ಎ

ಕಾಸರಗೋಡು: ಬೋವಿಕ್ಕಾನ-ಬೇವಿಂಜೆ ರಸ್ತೆ ಅಭಿವೃದ್ಧಿಗೆ ೪ಕೋಟಿ ೮೦ ಲಕ್ಷ ರೂ. ಮಂಜೂರು ಮಾಡಿರುವುದಾಗಿ ಶಾಸಕ ಎನ್.ಎ. ನೆಲ್ಲಿಕುನ್ನು ತಿಳಿಸಿದ್ದಾರೆ. ಚೌಕಿ ಕುನ್ನಿಲ್-ಮಜಲ್-ಉಜಿರೆಕೆರೆ ರಸ್ತೆ, ಕೋಟೆಗುಡ್ಡೆ-ಮೊಗರ್ ಮಸೀದಿ ರಸ್ತೆ ಎಂಬಿವುಗಳ ಅಭಿವೃದ್ಧಿಗೆ ಕಾಸರ ಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ ಮೊತ್ತ ಮಂಜೂರು ಮಾಡಲಾಗಿದೆ. ಈ ಮೂರೂ ರಸ್ತೆಗಳಿಗಾಗಿ 8 ಕೋಟಿ 96 ಲಕ್ಷ ರೂ. ಮಂಜೂರು ಮಾಡಿರುವುದಾಗಿ ಶಾಸಕರು ತಿಳಿಸಿ ದ್ದಾರೆ. ಉಜಿರೆಕೆರೆ ರಸ್ತೆಗೆ 1 ಕೋಟಿ 93 ಲಕ್ಷ, ಮೊಗರ್ ರಸ್ತೆಗೆ 2 ಕೋಟಿ 23 ಲಕ್ಷ ರೂ. …

ಮಂಜೇಶ್ವರ ಪಾಲಿಯೇಟಿವ್ ಸ್ನೇಹ ಸಂಗಮ

ಮಂಜೇಶ್ವರ:  ನೋವು ಅನುಭವಿಸುವವರಿಗೆ, ಏಕಾಂತವಾ ಗಿರುವವರಿಗೆ  ಸ್ನೇಹಸ್ಪರ್ಶ, ಸಂತೃಪ್ತ ಆರೈಕೆ ಎಂಬ ಗುರಿಯೊಂದಿಗೆ ರೋಗಿಗಳನ್ನು ಹಾಗೂ ಶಯ್ಯಾವಲಂ ಬಿಯಾದವರ ಮಾನಸಿಕ ಅಸ್ವಸ್ಥತೆ ಕಡಿಮೆಗೊಳಿಸಲು ಮಂಜೇಶ್ವರ ಪಂಚಾಯತ್ ಬ್ಲೋಕ್ ಫ್ಯಾಮಿಲಿ ಹೆಲ್ತ್ ಸೆಂಟರ್ ಪಾಲಿಯೇಟಿವ್ ಸ್ನೇಹ ಸಂಗಮ ನಡೆಸಿತು.  ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೋ ಉದ್ಘಾ ಟಿಸಿದರು. ಉಪಾಧ್ಯಕ್ಷ ಮುಹಮ್ಮದ್ ಸಿದ್ದಿಕ್ ಅಧ್ಯಕ್ಷತೆ ವಹಿಸಿದರು. ಡಾ| ಪ್ರಭಾಕರ ರೈ ಸ್ವಾಗತಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷರಾದ  ರಾಧಾ, ಯಾದವ ಬಡಾಜೆ, ಮುಮ್ತಾಸ್ ಸಮೀರ, ಪಂಚಾಯತ್ ಕಾರ್ಯದರ್ಶಿ ಸುಮೇಶ್, ಡಾ| …

ಸೀತಾಂಗೋಳಿ-ಕಾವೇರಿಕಾನ ರಸ್ತೆ ಉದ್ಘಾಟನೆ

ಸೀತಾಂಗೋಳಿ: ಶಾಸಕರ ಆಸ್ತಿ ಅಭಿವೃದ್ಧಿ ನಿಧಿಯಿಂದ 17 ಲಕ್ಷ ರೂ. ವೆಚ್ಚಮಾಡಿ ನಿರ್ಮಿಸಿದ ಪುತ್ತಿಗೆ ಪಂಚಾಯತ್‌ನ ಸೀತಾಂಗೋಳಿ-ಮದನಡ್ಕ-ಕಾವೇರಿಕಾನ ರಸ್ತೆಯ ಉದ್ಘಾಟನೆಯನ್ನು ಶಾಸಕ ಎಕೆಎಂ ಅಶ್ರಫ್ ನಿರ್ವಹಿಸಿದರು. ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷೆ ಜಯಂತಿ, ಸದಸ್ಯರಾದ ಕಾವ್ಯ,ಅನಿತ, ಆಸಿಫಲಿ ಕಂದಲ್, ಪ್ರೇಮ, ಕೇಶವ ಪುತ್ತಿಗೆ,  ವಿವಿಧ ರಾಜಕೀಯ, ಸಾಮಾಜಿಕ ಪ್ರತಿನಿಧಿಗಳಾದ ಅಬ್ದುಲ್ಲ ಕಂಡತ್ತಿಲ್, ಸುಲೈಮಾನ್ ಊಜಂಪದವು, ಇ.ಕೆ.ಮುಹಮ್ಮದ್ ಕುಂಞಿ, ಶಾನಿದ್ ಕಯ್ಯಾಂಕೂಡಲ್, ಚಂದ್ರನ್ ಕಟ್ಟತ್ತಡ್ಕ, ಸ್ಟಾನಿ ಡಿ’ಸೋಜಾ, ಸವಾದ್ ಅಂಗಡಿಮೊ ಗರು, ಕುಂಞು ಕಯ್ಯಾಂಕೂಡಲ್, …

ಪೋಕ್ಸೋ ಪ್ರಕರಣ: ಬೆಳ್ಳೂರು, ಈಶ್ವರಮಂಗಲ ನಿವಾಸಿಗಳು ಬಂಧನ

ಮುಳ್ಳೇರಿಯ: ಬೆಳ್ಳೂರು ಹಾಗೂ ಕರ್ನಾಟಕದ ಈಶ್ವರಮಂಗಲ ನಿವಾಸಿಗಳಾದ ಇಬ್ಬರನ್ನು ಆದೂರು ಪೊಲೀಸರು ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದಾರೆ. ಬೆಳ್ಳೂರಿನ ಮೀನು ವ್ಯಾಪಾರಿ ರಫೀಕ್ (45), ಈಶ್ವರಮಂಗಲ  ಮೈಂದನಡ್ಕದ ನಾಸಿರ್ (42) ಎಂಬಿವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಫೀಕ್ ಇತ್ತೀಚೆಗೆ 16ರ ಹರೆಯದ ವಿದ್ಯಾರ್ಥಿಗೆ ಸಲಿಂಗರತಿ ಕಿರುಕುಳ ನೀಡಿರುವುದಾಗಿ ದೂರ ಲಾಗಿದೆ. ಘಟನೆ ಬಳಿಕ ಶಾಲೆಯಲ್ಲಿ ನಡೆದ ಕೌನ್ಸಿಲಿಂಗ್‌ನಲ್ಲಿ ಬಾಲಕ ಕಿರುಕುಳ ಬಗ್ಗೆ ತಿಳಿಸಿದ್ದನು. ಈ ಬಗ್ಗೆ ಲಭಿಸಿದ ದೂರಿನಂತೆ ಕೇಸು ದಾಖಲಿ ಸಿಕೊಂಡ ಪೊಲೀಸರು ರಫೀಕ್‌ನನ್ನು ಬಂಧಿಸಿದ್ದಾರೆ. …

ಕುಂಬಳೆಯಲ್ಲಿ ಟ್ರಾಫಿಕ್ ಪರಿಷ್ಕಾರ: ಲೀಗ್ ಪಂಚಾಯತ್ ಆಡಳಿತ ಸಮಿತಿ ವಿರುದ್ಧ ಲೀಗ್ ವ್ಯಾಪಾರಿ ನೇತಾರನ ನೇತೃತ್ವದಲ್ಲಿ ಚಳವಳಿಗೆ ಸಿದ್ಧತೆ

ಕುಂಬಳೆ: ಪಂಚಾಯತ್ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಕುಂಬಳೆಯಲ್ಲಿ ಲೀಗ್ ಪಂಚಾಯತ್ ಆಡಳಿತ ಸಮಿತಿ ವಿರುದ್ಧ ಲೀಗ್ ನೇತಾರನಾದ ವ್ಯಾಪಾರಿ ನೇತಾರ ಚಳವಳಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಪಂಚಾಯತ್ ಆಡಳಿತ ಸಮಿತಿ ಕುಂಬಳೆ ಪೇಟೆಯಲ್ಲಿ ಜ್ಯಾರಿಗೊಳಿಸಿದ ಟ್ರಾಫಿಕ್ ಪರಿಷ್ಕರಣೆ ವಿರುದ್ಧ ಮರ್ಚೆಂಟ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಸತ್ತಾರ್ ಆರಿಕ್ಕಾಡಿ ಅವರ ಉಪಸ್ಥಿತಿಯಲ್ಲಿ ಸೇರಿದ ಸಭೆ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಸಲು ಹಾಗೂ ಹರತಾಳ ನಡೆಸಲು ತೀರ್ಮಾನಿಸಿದೆ. ಟ್ರಾಫಿಕ್ ಪರಿಷ್ಕಾರಕ್ಕೆ ಸಂಬಂಧಿಸಿ ಸಾರ್ವಜನಿಕರು ಹಾಗೂ ವ್ಯಾಪಾರಿಗಳು ನೀಡಿದ ದೂರುಗಳನ್ನು ಚರ್ಚೆ ನಡೆಸಲು ಕರೆದ …

ಪಿಎಂಶ್ರೀ ಯೋಜನೆ: ನಿಲುವಿನಲ್ಲಿ ಸಡಿಲಿಕೆಗೆ ಮುಂದಾದ ಸರಕಾರ

ತಿರುವನಂತಪುರ: ಕೇಂದ್ರ ಸರಕಾರದ ಪಿಎಂಶ್ರೀ ಯೋಜನೆಗೆ ಕೇರಳ ಸರಕಾರ ಸಹಿ ಹಾಕಿರುವುದನ್ನು ವಿರೋಧಿಸಿ ಎಡರಂಗದ ಘಟಕ ಪಕ್ಷವಾದ ಸಿಪಿಐ ರಂಗಕ್ಕಿಳಿದಿರುವ ಹಿನ್ನೆಲೆಯಲ್ಲಿ ಪಿಎಂಶ್ರೀ ಯೋಜನೆಯ  ಮಾನದಂಡಗಳಲ್ಲಿ ಕೆಲವೊಂದು ಸಡಿಲಿಕೆ ತರಲು ರಾಜ್ಯ ಸರಕಾರ ಮುಂದಾಗಿದೆ.  ಇದರಂತೆ ಕೇಂದ್ರ ಸರಕಾರಕ್ಕೆ ಈ ಕುರಿತು ಪತ್ರ ಬರೆಯಲು ಸರಕಾರ ತೀರ್ಮಾನಿಸಿದೆ. ಆ ಮೂಲಕ ಸಿಪಿಐಯ ರೋಷವನ್ನು ತಗ್ಗಿಸಲು ಸರಕಾರ ಯತ್ನ ಆರಂಭಿಸಿದೆ. ಇದೇ ಸಂದರ್ಭದಲ್ಲಿ  ರಾಜ್ಯ ಸಚಿವ ಸಂಪುಟದ ಅತೀ ನಿರ್ಣಾಯಕ ಸಭೆ ಇಂದು ಅಪರಾಹ್ನ ೩.೩೦ಕ್ಕೆ ನಡೆಯಲಿದೆ. ಇದು …

ಯುವತಿಯನ್ನು ಬಸ್‌ನಿಂದ ಇಳಿಸಿ ಅಪಹರಿಸಿ ಕುತ್ತಿಗೆ, ಹೊಟ್ಟೆಗೆ ಚಾಕು ಇರಿಸಿ ಬೆದರಿಕೆ: ಯೋಧನ ವಿರುದ್ಧ ಕೇಸು

ಕಾಸರಗೋಡು: ಯುವತಿಯನ್ನು ಬಸ್‌ನಿಂದ ಒತ್ತಾಯಿಸಿ ಇಳಿಸಿ ಸ್ಕೂಟರ್‌ನಲ್ಲಿ ಅಪಹರಿಸಿಕೊಂಡೊಯ್ದು ಕ್ವಾರೆಗೆ ಸಮೀಪ ತಲುಪಿಸಿ ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕು ಇರಿಸಿ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಘಟನೆ ನಡೆದಿರುವುದು ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಾದುದರಿಂದ ಪ್ರಕರಣವನ್ನು ಅಲ್ಲಿಗೆ ಸ್ಥಳಾಂತರಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 29ರ ಹರೆಯದ ಯುವತಿಯ ದೂರಿನ ಪ್ರಕಾರ ಕೊಡಕ್ಕಾಡ್ ನಿವಾಸಿ ಹಾಗೂ ಯೋಧನಾದ ಅನೀಶ್ ಕುಮಾರ್  ಎಂಬಾತನ ವಿರುದ್ಧ ಪೊಲೀಸರು ಕೇಸು …

ಕಾನತ್ತೂರು ಪಯರ್‌ಪಳ್ಳದಲ್ಲೂ ಚಿರತೆ ಶೆಡ್‌ನಲ್ಲಿ ಕಟ್ಟಿಹಾಕಿದ ಸಾಕುನಾಯಿ ಬಲಿ

ಕಾಸರಗೋಡು: ಇರಿಯಣ್ಣಿ, ಪಯದಲ್ಲಿ ಮನೆ ಅಂಗಳಕ್ಕೆ ತಲುಪಿದ ಚಿರತೆ ಸಾಕುನಾಯಿಯನ್ನು ಕೊಂದ ಘಟನೆಯ ಬಳಿಕ ಕಾನತ್ತೂರು ಪಯರ್‌ಪಳ್ಳದಲ್ಲೂ ಚಿರತೆ ಕಂಡು ಬಂದಿದೆ. ನಿನ್ನೆ ರಾತ್ರಿ ಚಿರತೆ ಮನೆ ಸಮೀಪದ ಶೆಡ್‌ನಲ್ಲಿ ಸಂಕೋಲೆಯಲ್ಲಿ ಕಟ್ಟಿಹಾಕಿದ್ದ ಸಾಕುನಾಯಿಯನ್ನು ಕೊಂದು ತಿಂದಿದೆ. ನಿವೃತ್ತ ಆರೋಗ್ಯ ಇಲಾಖೆ ಅಧಿಕಾರಿ ರಾಜನ್‌ರ ಸಾಕು ನಾಯಿಯನ್ನು ಚಿರತೆ ಕೊಂದಿದೆ. ಇಂದು ಬೆಳಿಗ್ಗೆ ಎದ್ದು ನೋಡುವಾಗ ಘಟನೆ ತಿಳಿದು ಬಂದಿರುವುದಾಗಿ ರಾಜನ್ ತಿಳಿಸಿದ್ದಾರೆ.  ಮೂರು ನಾಯಿಗಳನ್ನು ಈ ಮನೆಯಲ್ಲಿ ಸಾಕುತ್ತಿದ್ದಾರೆ. ಇವುಗಳಲ್ಲಿ ಎರಡನ್ನು ಗೂಡಿನೊಳಗೂ, ಒಂದನ್ನು ಮನೆಯಂಗಳ …

ಪಿಟ್‌ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಇಬ್ಬರ ಸೆರೆ

ಕಾಸರಗೋಡು: ಪಿಟ್‌ಎನ್‌ಡಿ ಪಿಎಸ್ ಆಕ್ಟ್ ಪ್ರಕಾರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.  ಚೆರ್ಕಳ ಬಂಬ್ರಾ ಣಿನಗರದ ನಿವಾಸಿ ಹಾಗೂ ಚೆರ್ಕಳ ಎರಿಯಪ್ಪಾಡಿಯಲ್ಲಿ  ವಾಸಿಸುತ್ತಿರುವ  ಜಾಬೀರ್ ಕೆ.ಎಂ (33) ಎಂಬಾತ ನನ್ನು ಈ ಪ್ರಕಾರ ವಿದ್ಯಾನಗರ ಪೊಲೀಸರು ಹಾಗೂ ಈಗ ನೆಕ್ರಾಜೆ ನೆಲ್ಲಿಕಟ್ಟೆ ನಾರಂಪಾಡಿ ಕೋಟೇಜ್ ನಿವಾಸಿ ಮಹಮ್ಮದ್ ಆಸಿಫ್ ಪಿ.ಎ (31) ಎಂಬಾತನನ್ನು ಈ ಆಕ್ಟ್ ಪ್ರಕಾರ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಹಲವು ಮಾದಕದ್ರವ್ಯ ಪ್ರಕರಣಗಳ ಆರೋಪಿಗಳಾಗಿ ದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಆ ಮೂಲಕ ಪ್ರಸ್ತುತ ಆಕ್ಟ್ …

ಯುವ ದೈವ ಕಲಾವಿದ ನಿಧನ

ಅಡೂರು: ಯುವ ದೈವ ಕಲಾವಿದ ವಿಜಯನ್ ಪಾಂಡಿ ಬಯಲು (45) ಹೃದಯಾಘಾತದಿಂದ ನಿಧನ ಹೊಂದಿದರು. ಕರ್ನಾಟಕದ ವಿಟ್ಲದಲ್ಲಿ ವಾಸಿ ಕಂಪೆನಿಯೊಂದರಲ್ಲಿ ಇವರು ಕೆಲಸ ನಿರ್ವಹಿಸುತ್ತಿದ್ದರು. ವಿಟ್ಲದಲ್ಲಿ ಇವರಿಗೆ ಹೃದಯಾಘಾತವುಂಟಾಗಿ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ನಿನ್ನೆ ರಾತ್ರಿ ಪಾಂಡಿ ಬಯಲಿಗೆ ತಂದು ಅಂತ್ಯ ಸಂಸ್ಕಾರ ನಡೆಸಲಾಯಿತು.  ಹಿರಿಯ ದೈವ ಕಲಾವಿದ ಕರಿಯ  ಎಂಬವರ ಪುತ್ರನಾದ ಮೃತರು ತಾಯಿ ಸೀತು, ಪತ್ನಿ ವಾಣಿ, ಸಹೋದರ ಸಹೋದರಿ ಯರಾದ ಹರೀಶ್, ಮೀನಾಕ್ಷಿ, …