ವ್ಯಕ್ತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ವ್ಯಕ್ತಿಯೊಬ್ಬರು  ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೋಳಿಯಡ್ಕ ಕುನ್ನುಪ್ಪಾರ ನಿವಾಸಿ  ದಾಮೋದರನ್ (52) ಮೃತಪಟ್ಟ ವ್ಯಕ್ತಿ.ನಿನ್ನೆ ಸಂಜೆ ಇವರ ಮನೆ ಸಮೀಪದ ಬೇರೊಬ್ಬರ ಜನವಾಸ ವಿಲ್ಲದ ಮನೆಯಲ್ಲಿ ಇವರು  ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.  ದಾಮೋದರನ್‌ರ ಓರ್ವ ಪುತ್ರ ಧನುಷ್ ಎರಡು ತಿಂಗಳ ಹಿಂದೆ ನೇಣು ಬಿಗಿದು ಸಾವಿಗೀಡಾಗಿದ್ದನು. ಇದರಿಂದ ಮನನೊಂದು ದಾಮೋ ದರನ್ ನೇಣು ಬಿಗಿದಿರಬಹುದೆಂದು ಸಂಶಯಿಸಲಾಗುತ್ತಿದೆಯೆಂದು ಸಂಬಂಧಿಕರು ತಿಳಿಸುತ್ತಿದ್ದಾರೆ. ದಿ| ಕೃಷ್ಣನ್ ಎಂಬವರ ಪುತ್ರನಾದ ದಾಮೋದರನ್ ತಾಯಿ ಕೊರಪ್ಪಾಳು, ಪತ್ನಿ ಗೀತಾ, …

ಕೋಟಿಕುಳಂನಲ್ಲಿ ಪತ್ತೆಹಚ್ಚಿದ ಪ್ರಾಚ್ಯ ವಸ್ತು ಸಂಗ್ರಹದಲ್ಲಿ ವಿದೇಶಿ ವಸ್ತುಗಳು ಅಡಕವಾಗಿದೆ ಎಂದು ವರದಿ: ಜಿಲ್ಲಾಧಿಕಾರಿಯಿಂದ ಮುಂದಿನ ಕ್ರಮಕ್ಕೆ ಸಲ್ಲಿಕೆ

ಕಾಸರಗೋಡು: ಕೋಟಿಕುಳಂನಲ್ಲಿ ವ್ಯಕ್ತಿಯೋರ್ವರ ಮಾಲಕತ್ವದಲ್ಲಿರುವ ಕಟ್ಟಡಗಳಿಂದ ಪತ್ತೆಹಚ್ಚಿದ ಪ್ರಾಚ್ಯವಸ್ತು ಸಂಗ್ರಹದಲ್ಲಿ ಅಮೂಲ್ಯ ವಸ್ತುಗಳು, ವಿದೇಶದಿಂದ ತಂದ ಸಾಮಗ್ರಿಗಳು ಇದೆ ಎಂದು ಖಚಿತಪಡಿಸಲಾಗಿದೆ. ಆರ್ಕಿಯೋಲಜಿಕಲ್ ಸರ್ವೆ ಆಫ್ ಇಂಡಿಯದ ತೃಶೂರ್ ವಲಯ ಕಚೇರಿ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಈ ವಿಷಯ ಖಚಿತಪಡಿಸಲಾಗಿದೆ. ಬಂದೂಕುಗಳು, ತಲವಾರುಗಳು, ವಿವಿಧ ಪಾತ್ರೆಗಳು ಸಹಿತ ಹಲವಾರು ಸಾಮಗ್ರಿಗಳನ್ನು ದಿ| ಮುಹಮ್ಮದ್ ಕುಂಞಿಯ ಮಾಲಕತ್ವದಲ್ಲಿರುವ ಮನೆ ಹಾಗೂ ಕೊಠಡಿಯೊಂದರಿಂದ ಪತ್ತೆಹಚ್ಚಲಾಗಿತ್ತು. ಇವುಗಳಲ್ಲಿ ಕೆಲವು ಸಾಮಗ್ರಿಗಳು ವಿದೇಶ ನಿರ್ಮಿತವಾಗಿದೆ ಎಂದು, ಕೊಲ್ಲಿ ಅಥವಾ ಇತರ ದೇಶಗಳಿಂದ ಇದನ್ನು …

ಕುಂಬಳೆ: ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳ ಬಂಧನ

ಕುಂಬಳೆ: ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿ ತಲೆಮರೆಸಿಕೊಂಡ ಆರೋಪಿಗಳ ಪತ್ತೆಗಾಗಿ  ಕುಂಬಳೆ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಇದರಂತೆ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಸೂರಂಬೈಲ್ ಅಂಬೇಡ್ಕರ್ ಕಾಲನಿಯ ರಾಧಾಕೃಷ್ಣನ್, ಪೆರಿಯಡ್ಕದ ಹನೀಫ,  ಬಡಾಜೆ ಪಾರಪ್ಪಳ್ಳಿಯ ಮುಹಮ್ಮದ್ ಸಲಿಯಾರ್ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಪೈಕಿ ರಾಧಾಕೃಷ್ಣನ್ 2018ರಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ  ಆರೋಪಿಯಾಗಿದ್ದಾನೆ. ಹನೀಫ 2007ರಲ್ಲಿ ದಾಖಲಾದ ಅಬಕಾರಿ ಪ್ರಕರಣದ ಆರೋಪಿಯಾಗಿದ್ದಾನೆ. ಮುಹಮ್ಮದ್ ಸಲಿಯಾರ್ ಮನೆಯೊಂದಕ್ಕೆ ನುಗ್ಗಿ 2000 ರೂ. ಕಳವುಗೈದ ಪ್ರಕರಣದ ಆರೋಪಿಯಾಗಿದ್ದಾನೆಂದು …

ಪಿ.ಎಂ.ಶ್ರೀ ವಿವಾದ: ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ ಸಿಪಿಐ ಸಚಿವರು; ಎಡರಂಗದಲ್ಲಿ ಸ್ಫೋಟಕ ಸ್ಥಿತಿ ನಿರ್ಮಾಣ

ತಿರುವನಂತಪುರ: ಕೇಂದ್ರ ಸರಕಾರದ ಪಿ.ಎಂ.ಶ್ರೀ ಯೋಜನೆಯ ಒಪ್ಪಂದ ಪತ್ರಕ್ಕೆ ರಾಜ್ಯ ಸರಕಾರ ಸಹಿ ಹಾಕಿದ ಹೆಸರಲ್ಲಿ ಎಡರಂಗದಲ್ಲಿ ಭುಗಿಲೆದ್ದ ವಿವಾದ ಈಗ ಸ್ಫೋಟಕ ಸ್ಥಿತಿಗೆ ತಲುಪುವಂತೆ ಮಾಡಿದೆ. ಸಚಿವ ಸಂಪುಟ ಸಭೆಯಲ್ಲಾಗಲಿ, ಎಡರಂಗ ಸಭೆಯಲ್ಲಾಗಲಿ ಸರಿಯಾದ ಚರ್ಚೆ ನಡೆಸದೆ ಪಿ.ಎಂ.ಶ್ರೀ ಯೋಜನೆಯ ಒಪ್ಪಂದ ಪತ್ರಕ್ಕೆ ರಾಜ್ಯ ಸರಕಾರ ಸಹಿ ಹಾಕಿತ್ತು. ಈ ಹಿನ್ನೆಲೆಯಲ್ಲಿ ಸಿಡಿದೆದ್ದ ಸಿಪಿಐ ಸರಕಾರದ ಅಂತಹ ಕ್ರಮದ ವಿರುದ್ಧ ರಂಗಕ್ಕಿಳಿದಿದೆ. ಈ ವಿಷಯದ ಬಗ್ಗೆ  ಚರ್ಚಿಸಲು ನಿನ್ನೆ ಸಿಪಿಐ ಸೆಕ್ರೆಟರಿಯೇಟ್ ಸಭೆ ಕರೆಯಲಾಗಿತ್ತು. ಇದೇ …

ಯುವಕನಿಗೆ ಕಡಿದ ಪ್ರಕರಣ: ಸಹೋದರ ಸೆರೆ

ಕಾಸರಗೋಡು: ಯುವಕನನ್ನು ಕಡಿದು ಗಾಯಗೊಳಿಸಿದ ಪ್ರಕರಣ ದಲ್ಲಿ ಆತನ ಸಹೋದರನನ್ನು ಹೊಸ ದುರ್ಗ ಪೊಲೀಸರು ಬಂಧಿಸಿದ್ದಾರೆ. ಚಿತ್ತಾರಿ ರಾವಣೇಶ್ವರ ಪಾಣಂತೋಡು ನಿವಾಸಿ ಶೈಜು ಬಂಧಿತ ಆರೋಪಿ. ಕಳೆದ ಗುರುವಾರ ಮದ್ಯದಮಲಿನಲ್ಲಿ ತನ್ನ ಸಹೋದರ ಶಾಜಿ (47) ನೊಂದಿಗೆ ಜಗಳವಾಡಿ ಕತ್ತಿಯಿಂದ ಆತನ ತಲೆಗೆ ಕಡಿದು ಗಾಯ ಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಶೈಜುವನ್ನು ಬಂಧಿಸಲಾ ಗಿದೆ. ಗಂಭೀರ ಗಾಯಗೊಂಡ ಶಾಜಿಯನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ನೆಲ್ಲಿಕುಂಜೆಗುತ್ತುನಲ್ಲಿ ಮುರಿದು ಬಿದ್ದ ಕಾಲುಸಂಕ ವಿದ್ಯಾರ್ಥಿಗಳ ಸಹಿತ ಸಂಚಾರಕ್ಕೆ ಸಮಸ್ಯೆ

ಉಕ್ಕಿನಡ್ಕ: ಕಾಲುಸಂಕ ಮುರಿದು ಬಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರು ಸಂಕಷ್ಟ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬದಿಯಡ್ಕ ಪಂಚಾಯತ್‌ನ ಹಳೆಯ 5ನೇ ವಾರ್ಡ್ (ಈಗ 9ನೇ ವಾರ್ಡ್) ನೆಲ್ಲಿಕುಂಜೆಗುತ್ತು ಎಂಬಲ್ಲಿ ನಿರ್ಮಿಸಿದ್ದ ಕಾಲು ಸಂಕ ಮುರಿದು ಬಿದ್ದಿದೆ. ೨೦೦೦-೨೦೦೫ನೇ ವರ್ಷದ ಯೋಜನೆಯಲ್ಲಿ ಈ ಕಾಲುಸಂಕ ನಿರ್ಮಿಸಲಾಗಿತ್ತು. ತೋಡಿನ ಬದಿಯ ತಡೆಗೋಡೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಸಂಕದ ಸ್ಲ್ಯಾಬ್ ಕೆಳಗೆ ಬಿದ್ದಿದೆ. ಇದರಿಂದಾಗಿ ನೆಲ್ಲಿಕುಂಜೆ, ಕಜಂಪಾಡಿ ಸಹಿತ ವಿವಿಧ ಪ್ರದೇಶದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಪ್ರದೇಶದಿಂದ ಉಕ್ಕಿನಡ್ಕ, …

ದೃಶ್ಯ ಮಾದರಿ ಕೊಲೆ ಪ್ರಕರಣ: ಜಾಮೀನಿನಲ್ಲಿ ಹೊರ ಬಂದ ಬಳಿಕ ತಲೆಮರೆಸಿಕೊಂಡ ಆರೋಪಿಯನ್ನು ಸಾಹಸಿಕವಾಗಿ ಸೆರೆ

ಕಣ್ಣೂರು: ಊರನ್ನೇ ತಲ್ಲಣಗೊಳಿಸಿದ ದೃಶ್ಯ ಮಾದರಿ  ಕೊಲೆಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದು ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಸಾಹಸಿಕವಾಗಿ ಸೆರೆ ಹಿಡಿದಿದ್ದಾರೆ. ಪರೇಶ್‌ನಾಥ್ ಮಂಡಳಿಯನ್ನು ಇರಿಟ್ಟಿ ಡಿವೈಎಸ್‌ಪಿ ಪಿ.ಕೆ. ಧನಂಜಯ ಬಾಬುರ ನಿರ್ದೇಶದಂತೆ ಇರಿಕ್ಕೂರ್ ಇನ್ಸ್‌ಪೆಕ್ಟರ್ ರಾಜೇಶ್ ಆಯೋಡನ್‌ರ ಮೇಲ್ನೋಟದಲ್ಲಿ ಬಾಂಗ್ಲಾ ದೇಶದ ಗಡಿಯಿಂದ ಎಎಸ್‌ಐ ಸದಾನಂದನ್ ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ನಿವಾಸಿ ಅಶಿಕುಲ್ ಇಸ್ಲಾಂ (26)ನನ್ನು ಕೊಂದು ಹೂತುಹಾಕಿದ ಪ್ರಕರಣದ ಮುಖ್ಯ ಆರೋಪಿಯಾಗಿದ್ದಾನೆ ಪರೇಶ್‌ನಾಥ್ ಮಂಡಲ್. 2021 ಜೂನ್ 28ರಂದು ಅಶಿಕುಲ್ …

ಅಪಘಾತದಲ್ಲಿ ಸೊಂಟದಿಂದ ಕೆಳಗೆ ಚಲನಶಕ್ತಿ ಕಳೆದುಕೊಂಡ ಉದುಮ ನಿವಾಸಿ ಸಂಗೀತಳನ್ನು ‘ಸಿದ್ಧ’ ವಶೀಕರಿಸಿದ್ದು ಬ್ರೈನ್‌ವಾಶ್ ಮೂಲಕ: ಸಿಪಿಎಂ ಮುಖಂಡನಾದ ತಂದೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು

ಕಾಸರಗೋಡು: ರಸ್ತೆ ಅಪಘಾತದಲ್ಲಿ ಬೆನ್ನೆಲುಬಿಗೆ ಗಂಭೀರ ಗಾಯಗೊಂಡು ಸೊಂಟದಿಂದ ಕೆಳಗೆ ಚಲನಶಕ್ತಿ ಇಲ್ಲದೆ ಶಯ್ಯಾವಲಂಬಿಯಾಗಿ ಸಂಕಷ್ಟ ಜೀವನ ನಡೆಸುತ್ತಿರುವ ಪುತ್ರಿಯನ್ನು  ಸಂಕಷ್ಟದಿಂದ ಪಾರು ಮಾಡಲು ಸಹಾಯ ಮಾಡಬೇಕೆಂದು ಆಗ್ರಹಿಸಿ ತಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಉದುಮದ ಸಿಪಿಎಂ ಮುಖಂಡ ಪಿ.ವಿ. ಭಾಸ್ಕರನ್ ಗುರುವಾರ ಸಂಜೆ ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರಿಗೆ ದೂರು ನೀಡಿದ್ದಾರೆ. ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ತಿಂಗಳುಗಳ ಕಾಲ ಚಿಕಿತ್ಸೆ ನೀಡಿದರೂ ಫಲವಿಲ್ಲದ ಹಿನ್ನೆಲೆಯಲ್ಲಿ ಮನೆಗೆ …

ಬಿಜೆಪಿ ಮುಖಂಡ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ಬಿಜೆಪಿ ಮುಖಂಡ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಅರವಂಜಾಲ್ ಪನೆಯಂದಟ್ಟ ತಂಬಾನ್ (57) ಮೃತಪಟ್ಟವರು. ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯನಾಗಿದ್ದಾರೆ. ಇಂದು ಬೆಳಿಗ್ಗೆ ಪಯ್ಯನ್ನೂರು ಮೇಲ್ಪಾಲದ ಸಮೀಪ ರೈಲ್ವೇ ಟ್ರಾಕ್‌ನಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ತಲುಪಿ ಮೃತದೇಹವನ್ನು ಶವಾಗಾರಕ್ಕೆ ಕೊಂಡೊಯ್ದಿದ್ದಾರೆ. ಮೃತರು ಪತ್ನಿ ಶ್ಯಾಮಲ, ಮಕ್ಕಳಾದ ಶ್ವೇತ, ಕೃಷ್ಣ, ಮದುಲ್‌ಲಾಲ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕುರುಡಪದವು ರಸ್ತೆ ಅಭಿವೃದ್ಧಿಗೆ ಚಾಲನೆ: ಕಾಮಗಾರಿ ಆರಂಭ

ಪೈವಳಿಕೆ: ಶೋಚನೀಯÁವಸ್ಥೆ ಯಲ್ಲಿರುವ, ಊರವರ ಪ್ರತಿಭಟನೆಗೆ ಕಾರಣವಾಗಿದ್ದ ಲಾಲ್‌ಭಾಗ್- ಕುರುಡಪದವು ರಸ್ತೆ ಅಭಿವೃದ್ದಿಗೆ ಕೊನೆಗೂ ಅಧಿಕಾರಿ ವರ್ಗ ಮುಂ ದಾಗಿದೆ. ಪ್ರಥಮ ಹಂತದಲ್ಲಿ ಲಾಲ್ ಭಾಗ್‌ನಿಂದ ಚಿಪ್ಪಾರು ಅಮ್ಮೇರಿ ತನಕ ಸುಮಾರು ಮೂರುವರೆ ಕಿಲೋ ಮೀಟರ್ ರಸ್ತೆಯನ್ನು ಅಭಿವೃದ್ದಿಗೊಳಿಸಲು ತೀರ್ಮಾನಿಸ ಲಾಗಿದೆ.ರಸ್ತೆ ಅಗಲೀಕರಣಗೊಳಿ ಸುವ ಕಾಮಗಾರಿ ಕಳೆದ ಒಂದು ತಿಂಗಳಿAದ ನಡೆಯುತ್ತಿದೆ. ಆದರೆ ಮಳೆಯಿಂದಾಗಿ ಕಾಮಗಾರಿಗೆ ಅಡಚಣೆ ಉಂಟಾಗುತ್ತಿದ್ದು, ರಸ್ತೆ ಕೆಸರುಗದ್ದೆಯಂತಾಗಿ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಕುಂಬಳೆ ನಿವಾಸಿಯೋರ್ವರು ಗುತ್ತಿಗೆ ಪಡೆದುಕೊಂಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಈ …