ಅಂತ್ಯಸಂಸ್ಕಾರಕ್ಕೆ ಸಿದ್ಧತೆ ವೇಳೆ ಉಸಿರಾಟ ಕಂಡುಬಂದ ವ್ಯಕ್ತಿ ಕೊನೆಗೂ ನಿಧನ

ಕುಂಬಳೆ:   ಚಿತೆ ಸಿದ್ದಪಡಿಸಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಂತೆ  ದೇಹ ಕಂಪಿಸಿದ ಹಿನ್ನೆಲೆಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಿದ್ದ ವ್ಯಕ್ತಿ ಮೃತಪಟ್ಟರು. ಕುಂಬಳೆ ಕಂಚಿಕಟ್ಟೆ ರಾಮನಗರದ ರಾಮನಾಥ ಗಟ್ಟಿ (70) ಎಂಬವರು ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಇಂದು ಮಧ್ಯಾಹ್ನ ಕುಂಟಂಗೇರಡ್ಕ ಸಾರ್ವಜನಿಕ ಸ್ಮಶಾನದಲ್ಲಿ  ಅಂತ್ಯಸಂಸ್ಕಾರ ನಡೆಯಲಿದೆ.  ಮಧುಮೇಹ, ರಕ್ತದೊತ್ತಡ ಮೊದಲಾದ ಅಸೌಖ್ಯ ನಿವಾರಣೆಗೆ ಔಷಧಿ ಸೇವಿಸುತ್ತಿದ್ದ ರಾಮನಾಥ ಗಟ್ಟಿಯವರು ಒಂದು ವಾರ ಹಿಂದೆ  ಕುಸಿದು ಬಿದ್ದಿದ್ದರು.  ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಇವರನ್ನು ಪೂರ್ವಸ್ಥಿತಿಗೆ ಮರಳಿಸಲು ಸಾಧ್ಯವಿಲ್ಲ ವೆಂದು …

ಕಾರಿನಲ್ಲಿ  ತ್ಯಾಜ್ಯ  ಕೊಂಡೊಯ್ದು ಹೆದ್ದಾರಿ ಬದಿ ಎಸೆದ ವ್ಯಕ್ತಿಗೆ 25 ಸಾವಿರ ರೂ. ದಂಡ ವಿಧಿಸಿದ ಪಂಚಾಯತ್

ಕುಂಬಳೆ:  ಕಾರಿನಲ್ಲಿ ತ್ಯಾಜ್ಯ ಕೊಂಡೊಯ್ದು ರಾಷ್ಟ್ರೀಯ ಹೆದ್ದಾರಿ ಬದಿ ಉಪೇಕ್ಷಿಸಿದ ವ್ಯಕ್ತಿಗೆ  ಪಂಚಾಯತ್ ಕಾರ್ಯದರ್ಶಿ 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.  ಮುಟ್ಟಂ ನಿವಾಸಿ ಮೋಣು ಎಂಬಾತನಿಗೆ ದಂಡ ವಿಧಿಸಿರುವುದಾಗಿ ಮಂಗಲ್ಪಾಡಿ ಪಂಚಾಯತ್ ಕಾರ್ಯದರ್ಶಿ ಶ್ರೀನಿವಾಸನ್ ತಿಳಿಸಿದ್ದಾರೆ. ಮೊನ್ನೆ ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನೋವಾ ಕಾರಿನಲ್ಲಿ ಸಂಚರಿಸಿದ ಮೋಣು ಶಿರಿಯ ಬಳಿಗೆ ತಲುಪಿದಾಗ ತ್ಯಾಜ್ಯವನ್ನು ಕಾರಿನಿಂದ ಹೊರಕ್ಕೆ ಎಸೆದಿ ದ್ದನೆನ್ನಲಾಗಿದೆ. ಇದನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸಿದ ಇತರರು ವೀಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು …

ಭದ್ರತಾ ವೈಫಲ್ಯ: ಹೆಲಿಪ್ಯಾಡ್‌ನ ಕಾಂಕ್ರೀಟ್‌ನಲ್ಲಿ ಹೂತು ಹೋದ ರಾಷ್ಟ್ರಪತಿ ಸಂಚರಿಸಿದ ಹೆಲಿಕಾಪ್ಟರ್

ಪತ್ತನಂತಿಟ್ಟ: ಶಬರಿಮಲೆ ದೇಗುಲದ ಸಂದರ್ಶನಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಬೆಳಿಗ್ಗೆ ಬಂದ ಹೆಲಿಕಾಪ್ಟರ್‌ನ ಚಕ್ರ ಹೆಲಿಪ್ಯಾಡ್ನ ಕಾಂಕ್ರೀಟ್‌ನಲ್ಲಿ ಹೂತು ಹೋಗಿದೆ. ರಾಷ್ಟ್ರಪತಿ ಪ್ರಯಾಣಿಸುವ ಹೆಲಿಕಾಪ್ಟರ್‌ನ್ನು ನಿಲೈಕಲ್‌ನ ಹೆಲಿಪ್ಯಾಡ್‌ನಲ್ಲಿ ಇಳಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಬಳಿಕ ಅದನ್ನು ಪತ್ತನಂತಿಟ್ಟ ಪ್ರಮಾಡಂ ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ ಹೆಲಿಪ್ಯಾಡ್‌ನಲ್ಲಿ ಇಂದು ಬೆಳಿಗ್ಗೆ ಇಳಿದ ರಾಷ್ಟ್ರಪತಿಯವರು ನಂತರ ಕಾರಿನಲ್ಲಿ ಬಿಗಿ ಭದ್ರತೆಯೊಂದಿಗೆ ಪಂಪಾಕ್ಕೆ ಪ್ರಯಾಣ ಮುಂದುವರಿಸಿದರು. ಅದಾದ ಬಳಿಕ ಹೆಲಿಕಾಪ್ಟರ್‌ನ ಚಕ್ರ ಹೆಲಿಪ್ಯಾಡ್‌ನ ಕಾಂಕ್ರೀಟ್‌ನಲ್ಲಿ ಹೂತು ಹೋಗಿದೆ. ಇದರಿಂದ  ಹೆಲಿಕಾಪ್ಟರನ್ನು ಮುಂದಕ್ಕೆ …

ಸರಕಾರಿ ಕಾಲೇಜು ಮಾಜಿ ಪ್ರಾಂಶುಪಾಲ ಪ್ರೊ. ವಿ. ಗೋಪಿನಾಥನ್ ನಿಧನ

ಕಾಸರಗೋಡು: ಕಾಸರಗೋಡಿನಲ್ಲಿ ಸರ್ವ ವಲಯಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಪ್ರೊಫೆಸರ್ ವಿ. ಗೋಪಿನಾಥನ್ (71) ನಿಧನ ಹೊಂದಿದರು. ಅಧ್ಯಯನ ಪ್ರವಾಸ ತಂಡದೊಂದಿಗೆ ಮಲಪ್ಪುರಂಗೆ ತೆರಳಿದ್ದ ಇವರಿಗೆ ನಿನ್ನೆ ರಾತ್ರಿ 12 ಗಂಟೆ ವೇಳೆ ಉಸಿರಾಟ ತೊಂದರೆ ಕಂಡುಬಂದಿತ್ತು. ಜೊತೆಗಿದ್ದವರು ಕೂಡಲೇ ವಂಡೂರು ನಿಮ್ಸ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಕಾಸರಗೋಡು ಟ್ರಾವಲ್ ಕ್ಲಬ್‌ನ ಮಲಪ್ಪುರಂ ಜಿಲ್ಲಾ ಅಧ್ಯಯನ ಪ್ರವಾಸಕ್ಕಾಗಿ ನಿನ್ನೆ ಬೆಳಿಗ್ಗೆ ಇವರು ತಂಡದೊಂದಿಗೆ  ಮಲಪ್ಪುರಂಗೆ ತೆರಳಿದ್ದರು. ಪತ್ನಿ ಪ್ರೊಫೆಸರ್ ಹಾಗೂ ಕಾಸರಗೋಡು ಸರಕಾರಿ ಕಾಲೇಜಿನ ಮಾಜಿ ಪ್ರಾಂಶುಪಾಲೆಯಾದ …

ಮಹಿಳಾ ಫಾರೆಸ್ಟ್ ವಾಚರ್‌ಗೆ ಕಿರುಕುಳ:  ಅರಣ್ಯ ಇಲಾಖೆ ಅಧಿಕಾರಿ ಬಂಧನ

ತೃಶೂರು: ಆದಿರಪಳ್ಳಿಯಲ್ಲಿ ಬಿಎಫ್‌ಒಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಯನ್ನು ಬಂಧಿಸಲಾಗಿದೆ. ಬುಡಕಟ್ಟು ಜನಾಂಗ ಮಹಿಳಾ ಫಾರೆಸ್ಟ್ ವಾಚರ್‌ಗೆ ಕಿರುಕುಳ ನೀಡಿದ ಆರೋಪದಂತೆ ಪಿ.ಪಿ. ಜೋನ್ಸನ್ ಎಂಬಾತನನ್ನು ಸೆರೆಹಿಡಿಯಲಾಗಿದೆ. ಮುಕ್ಕಂಪುಳ ಎಂಬಲ್ಲಿಂದ ಈತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಜೋನ್ಸನ್ ವರ್ಗಾವಣೆಗೊಂಡು ಬಂದ ಮೊದಲ ದಿನವೇ ಮಹಿಳಾ ವಾಚರ್‌ಗೆ ಕಿರುಕುಳ ನೀಡಿರುವು ದಾಗಿ ದೂರಲಾಗಿದೆ. ಘಟನೆ ಬಳಿಕ ಜೋನ್ಸನ್ ತಲೆಮರೆಸಿ ಕೊಂಡಿದ್ದನು. ಚಾಲಕ್ಕುಡಿ ಡಿವೈಎಸ್‌ಪಿ ನೇತೃತ್ವದ ತಂಡ ಈತನನ್ನು ಬಂಧಿಸಿದೆ. ಅಕ್ಟೋಬರ್ ೬ರಂದು ಪ್ರಕರ ಣಕ್ಕೆ ಕಾರಣವಾದ …

ಸ್ಥಳ ಸೌಕರ್ಯದ ಕೊರತೆ: ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ ಸಮಸ್ಯೆಗಳಿಂದ ಬಂಧಿ

ಹೊಸಂಗಡಿ: ಜಿಲ್ಲೆಯಲ್ಲೇ ಅತ್ಯಂತ ಹೆಚ್ಚು ಅನಧಿಕೃತ ಸಾಗಾಟವಾಗುತ್ತಿರುವ ಮಾದಕ ಪದಾರ್ಥ, ಕಾಳಧನಗಳನ್ನು ಸೆರೆ ಹಿಡಿಯುವ ಅಬಕಾರಿ ಚೆಕ್‌ಪೋಸ್ಟ್ ಅಸೌಕರ್ಯಗಳ ಕೊರತೆಯಿಂದ ತೊಳಲಾಡುತ್ತಿದೆ. ಕರ್ನಾಟಕದಿಂದ ಬರುವ ವಾಹನಗಳಲ್ಲಿ ಭಾರೀ ಪ್ರಮಾಣದಲ್ಲಿ ಮಾದಕಪದಾರ್ಥ, ಕಾಳಧನ ಸಾಗಾಟ ನಡೆಯುತ್ತಿದ್ದು, ಇಲ್ಲಿನ ಅಧಿಕಾರಿಗಳು ಇತ್ತೀಚೆಗೆ ವಶಪಡಿಸಿದ ಘಟನೆ ನಡೆದಿತ್ತು. ಆದರೆ ಸ್ಥಳಾವಕಾಶದ ಕೊರತೆ ಸಮಸ್ಯೆಯಾಗುತ್ತಿದೆ. ಈ ಮೊದಲು ಅಬಕಾರಿ ಚೆಕ್‌ಪೋಸ್ಟ್ ಕಚೇರಿ ವಾಮಂಜೂರು ಹೆದ್ದಾರಿ ಬದಿ ಕಾರ್ಯಾಚರಿಸುತ್ತಿತ್ತು. ಹೆದ್ದಾರಿ ನವೀಕರಣೆ ಕಾಮಗಾರಿ ಆರಂಭಗೊಳ್ಳುವ ಮೊದಲೇ ಈ ಕಚೇರಿಯನ್ನು ಈ ಪರಿಸರದಲ್ಲಿದ್ದ ಮಾರಾಟ ತೆರಿಗೆ …

ಕಲ್ಲೆಸೆದು ಕೆಎಸ್‌ಆರ್‌ಟಿಸಿ ಬಸ್‌ನ ಗಾಜು ಪುಡಿಗೈದ ಪ್ರಕರಣ: ಆರೋಪಿಗೆ ಸಜೆ, ಜುಲ್ಮಾನೆ

ಕಾಸರಗೋಡು: ಕಲ್ಲೆಸೆದು ಕೆಎಸ್‌ಆರ್‌ಟಿಸಿ ಬಸ್ಸಿನ ಗಾಜು ಪುಡಿಗೈದು ಅದರ ಚಾಲಕ ಗಾಯಗೊಂಡ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಧೀಶೆ ಕೆ. ಪ್ರಿಯಾ ನಾಲ್ಕು ವರ್ಷ ಸಜೆ ಹಾಗೂ 40,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಆಲಂಪಾಡಿ ಸುಬ್ಬತ್ತೊಟ್ಟಿ ಹೌಸ್‌ನ ಇಬ್ರಾಹಿಂ ಬಾದ್‌ಶಾ (27) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿ ದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿ ದೆಯೆಂದು  ತೀರ್ಪಿನಲ್ಲಿ ತಿಳಿಸಲಾಗಿದೆ. 2019 ಡಿಸೆಂಬರ್ 17ರಂದು …

ಬಿದ್ದು ಸಿಕ್ಕಿದ ಹಣ, ದಾಖಲೆ ಪತ್ರ ಮರಳಿಸಿ ಮಾದರಿಯಾದ ಪೊಲೀಸ್: ಮಾನ್ಯದ ಆಟೋ ಚಾಲಕನಿಗೆ ನೆಮ್ಮದಿ

ಕಾಸರಗೋಡು: ಪ್ರಯಾಣ ವೇಳೆ ಕಾಣೆಯಾದ ದಾಖಲೆಪತ್ರಗಳು ಹಾಗೂ ಹಣ ಮರಳಿ ಲಭಿಸುವುದರೊಂದಿಗೆ ಮಾನ್ಯದ ಆಟೋಚಾಲಕ ಅಬ್ದುಲ್ ಮನಾಫ್‌ರ ಆತಂಕ ದೂರವಾಯಿತು. ಕಾಣೆಯಾದ ದಾಖಲೆ ಪತ್ರಗಳು ಲಭಿಸದಿದ್ದಲ್ಲಿ ಉಂಟಾಗಬಹುದಾದ ಸಮಸ್ಯೆಗಳ ಕುರಿತು ಆಲೋಚಿಸುತ್ತಿರುವಾ ಗಲೇ ಮೇಲ್ಪರಂಬ ಪೊಲೀಸ್ ಇನ್ಸ್‌ಪೆಕ್ಟರ್ ಎ. ಸಂತೋಷ್ ಕುಮಾರ್‌ರ ಫೋನ್ ಕರೆ ಮನಾಫ್‌ಗೆ ಲಭಿಸಿದೆ. ನಿಮ್ಮದೆಂದು ಸಂಶಯಿಸುವ ಒಂದು ಪರ್ಸ್ ಬಿದ್ದು ಸಿಕ್ಕಿದೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದರು. ಕೂಡಲೇ ಅಬ್ದುಲ್ ಮನಾಫ್ ಮೇಲ್ಪರಂಬ ಪೊಲೀಸ್ ಠಾಣೆಗೆ ತಲುಪಿ ಪುರಾವೆ ಗಳನ್ನು ತಿಳಿಸಿದರು. ಬಳಿಕ ಪರ್ಸ್‌ನಲ್ಲಿದ್ದ …

ಕಾಸರಗೋಡು ಜಿಲ್ಲಾ ಪಂಚಾಯತ್‌ನ ಮೀಸಲಾತಿ ಡಿವಿಶನ್‌ಗಳು

ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯತ್‌ನ ಮೀಸಲಾತಿ ಡಿವಿಶನ್‌ಗಳನ್ನು ನಿರ್ಣಯಿಸಲಾಗಿದೆ. ಇದರಂತೆ ಜಿಲ್ಲಾ ಪಂಚಾಯತನ ಮೂರನೇ ಡಿವಿಶನ್ ಆಗಿರುವ ಬದಿಯಡ್ಕವನ್ನು   ಪರಿಶಿಷ್ಟ ಜಾತಿ ಮೀಸಲಾತಿ ಡಿವಿಶನ್ ಆಗಿ ಆರಿಸಲಾಗಿದೆ. ಇದರ ಹೊರತಾಗಿ ಎಂಟನೇ ಡಿವಿಶನ್ ಆಗಿರುವ ಕಯ್ಯೂರನ್ನು ಪರಿಶಿಷ್ಟ ಪಂಗಡದ ಮಹಿಳೆಯ ರಿಗಾಗಿ ಮೀಸಲಿರಿಸಲಾಗಿದೆ. ಉಳಿದಂತೆ ದೇಲಂಪಾಡಿ (ಡಿವಿಶನ್ 4), ಕಳ್ಳಾರು (6), ಚಿತ್ತಾರಿಕ್ಕಲ್ (7), ಪೆರಿಯ (12), ಬೇಕಲ (13), ಉದುಮ (14), ಚೆಂಗಳ (15) ಮತ್ತು ಮಂಜೇಶ್ವರ (18)ವನ್ನು ಮಹಿಳಾ ಡಿವಿಶನ್‌ಗಳನ್ನಾಗಿ ನಿರ್ಣಯಿಸಲಾಗಿದೆ. ಕಲೆಕ್ಟರೇಟ್‌ನ ಮಿನಿ …

ಜಿಲ್ಲಾ ಕರಾಟೆ ಚಾಂಪ್ಯನ್ ಶಿಪ್: ಎರಡನೇ ತರಗತಿ ವಿದ್ಯಾರ್ಥಿಗೆ ಚಿನ್ನ

ಹೊಸದುರ್ಗ: ಕೋಟ್ಟಪ್ಪುರಂ ಇಎಂಎಸ್ ಮಿನಿ ಕಾನ್ಫರೆನ್ಸ್ ಹಾಲ್‌ನಲ್ಲಿ ಜಿಲ್ಲಾ ಕರಾಟೆ  ಡೋ ಅಸೋಸಿಯೇಶನ್ ಹಮ್ಮಿಕೊಂಡ ಹದಿಮೂರನೇ ಜಿಲ್ಲಾ ಕರಾಟೆ ಚಾಂಪ್ಯನ್‌ಶಿಪ್‌ನಲ್ಲಿ ಎರಡನೇ ತರಗತಿ ವಿದ್ಯಾರ್ಥಿ ಗೆಲುವು ಸಾಧಿಸಿದ್ದಾನೆ. ನೀಲೇಶ್ವರ ಪಾಲಕ್ಕಾಡ್‌ನ ಆರುಶ್ ಶ್ರೀರಾಜ್ ಈ ಸಾಧನೆಗೈದಿದ್ದಾನೆ. 25 ಕಿಲೋ ಕುಮಿಟೆ ವಿಭಾಗದಲ್ಲಿ ಆರುಶ್ ಶ್ರೀರಾಜ್‌ಗೆ ಚಿನ್ನದ ಪದಕ ಲಭಿಸಿದೆ. ಜಿಲ್ಲೆಯ ವಿವಿಧ  ಭಾಗಗಳಿಂದಾಗಿ ೩೫೦ರಷ್ಟು ಮಂದಿ ಸ್ಪರ್ಧಾಳುಗಳು ಚಾಂಪ್ಯನ್ ಶಿಪ್‌ನಲ್ಲಿ ಭಾಗವಹಿಸಿದ್ದಾರೆ. ನವಂಬರ್ ೧೫,೧೬ರಂದು ಎರ್ನಾಕುಳಂ ರಾಜೀವ್ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ನಡೆಯುವ ಕರಾಟೆ ಕೇರಳ ಅಸೋಸಿಯೇಶನ್ …