ಪನಯಾಲ್ ನಿವಾಸಿಯ 8 ಲಕ್ಷ ರೂ. ಲಪಟಾವಣೆ: ವೀಸಾ ವಂಚನೆ ಆರೋಪಿ ವಿರುದ್ಧ ಬೇಕಲ ಠಾಣೆಯಲ್ಲೂ ಕೇಸು
ಕಾಸರಗೋಡು: ವೀಸಾ ಭರವಸೆಯೊಡ್ಡಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಪ್ರಕರಣದಲ್ಲಿ ಸೆರೆಗೀಡಾದ ನೀಲೇಶ್ವರ ಚಿರಪ್ಪುರಂ ಪಾಲಕ್ಕಾಟ್‌ನ ಉಲ್ಲಾಸ್ ಕುಞಂಬು (40) ಎಂಬಾತನ ವಿರುದ್ಧ ಬೇಕಲ ಪೊಲೀಸ್ ಠಾಣೆಯಲ್ಲೂ ಕೇಸು ದಾಖಲಿಸಲಾಗಿದೆ. ಪನಯಾಲ್ ದೇವನ್‌ಪೊಡಿಚ್ಚಪ್ಪಾರದ ಎಂ. ಗೋಪ ಕುಮಾರ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಫಿನ್‌ಲ್ಯಾಂಡ್ ವೀಸಾ ನೀಡುವುದಾಗಿ ತಿಳಿಸಿ ಹಲವು ಬಾರಿಯಾಗಿ 8 ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿರುವುದಾಗಿ ಗೋಪ ಕುಮಾರ್ ಆರೋಪಿಸಿದ್ದಾರೆ. 2023 ಸೆಪ್ಟಂಬರ್‌ನಿಂದ ಹಲವು ಬಾರಿಯಾಗಿ ಬ್ಯಾಂಕ್ ಖಾತೆ ಹಾಗೂ ಗೂಗಲ್ …
Read more “ಪನಯಾಲ್ ನಿವಾಸಿಯ 8 ಲಕ್ಷ ರೂ. ಲಪಟಾವಣೆ: ವೀಸಾ ವಂಚನೆ ಆರೋಪಿ ವಿರುದ್ಧ ಬೇಕಲ ಠಾಣೆಯಲ್ಲೂ ಕೇಸು”