ಮುಳ್ಳೇರಿಯದಲ್ಲಿ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಚಾಲನೆ
ಮುಳ್ಳೇರಿಯ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಇಂದು ಬೆಳಿಗ್ಗೆ ಮುಳ್ಳೇರಿಯ ಜಿವಿಎಚ್‌ಎಸ್‌ಎಸ್‌ನಲ್ಲಿ ಆರಂಭಗೊಂಡಿತು. ಇಂದು ಬೆಳಿಗ್ಗೆ ಶಾಲಾ ಪ್ರಾಂಶುಪಾಲೆ ಸುಧಾ ಎ.ವಿ. ಧ್ವಜಾರೋಹಣ ನಡೆಸುವ ಮೂಲಕ ಕಲೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪಿಟಿಎ ಅಧ್ಯಕ್ಷ ಸತೀಶ್, ಕಾರ್ಯಕ್ರಮದ ಜನರಲ್ ಕನ್ವೀನರ್ ಶಾಹುಲ್ ಹಮೀದ್ ಮಾಸ್ಟರ್, ವಿಎಚ್‌ಎಸ್‌ಇ ಪ್ರಾಂಶುಪಾಲ ಕುರಿಯನ್, ಎಸ್‌ಎಂಸಿ ಚೆಯರ್‌ಮೆನ್ ಮೋಹನ್ ಮೊದಲಾದವರು ಉಪಸ್ಥಿತ ರಿದ್ದರು. ಉಪಜಿಲ್ಲೆಯ 98 ಶಾಲೆಗಳಿಂದ 6000ದಷ್ಟು ಮಕ್ಕಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಂಗವಾಗಿ ನಿನ್ನೆ ಮುಳ್ಳೇರಿಯ ಪೇಟೆಯಲ್ಲಿ ಡಂಗುರ ಮೆರವಣಿಗೆ ನಡೆಯಿತು. …
Read more “ಮುಳ್ಳೇರಿಯದಲ್ಲಿ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಚಾಲನೆ”