ಅಕ್ರಮ ಭೂ ಕಬಳಿಕೆ: ಕಬಳಿಸಿದ್ದು 1341 ದೇವಸ್ಥಾನಗಳ 24,693 ಎಕ್ರೆ ಜಮೀನು, ಮೀಸಲು ಫಂಡ್ ಅಕೌಂಟ್ ಸಮಿತಿ ಹೊರಬಿಟ್ಟ ಸ್ಫೋಟಕ ಮಾಹಿತಿ
ಕಾಸರಗೋಡು: ಮಲಬಾರ್ ಮುಜರಾಯಿ ಮಂಡಳಿಗೆ ಸೇರಿದ 1341 ದೇವಸ್ಥಾನಗಳಿಗೆ ಸೇರಿದ 24,693 ಎಕ್ರೆ ಜಮೀನನ್ನು ಅಕ್ರಮವಾಗಿ ಕಬಳಿಸಲಾಗಿದೆಯೆಂಬ ಸ್ಫೋಟಕ ಮಾಹಿತಿಯನ್ನು ವಿಧಾನಸಭೆಯ ಲೋಕಲ್ ಫಂಡ್ ಅಕೌಂಟ್ಸ್ ಸಮಿತಿ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.ಅAದರೆ ಮಲಬಾರ್ ಮುಜರಾಯಿ ಮಂಡಳಿ ವ್ಯಾಪ್ತಿಗೊಳಪಟ್ಟ ದೇವಸ್ಥಾನ ಗಳಿಗೆ ಸೇರಿದ ಒಟ್ಟು ಜಮೀನಿನ ಪೈಕಿ ಶೇ. 87ರಷ್ಟನ್ನು ಈ ರೀತಿ ಅಕ್ರಮವಾಗಿ ಕಬಳಿಸಲಾಗಿದೆ. ಆದರೆ ಇದನ್ನು ಮರು ಸ್ವಾಧೀನಪಡಿಸುವ ವಿಷಯದಲ್ಲಿ ಮುಜರಾಯಿ ಮಂಡಳಿ ನಿರ್ಲಕ್ಷ್ಯ ಹಾಗೂ ನಿರಾಸಕ್ತಿ ತೋರಿದೆಯೆಂದೂ ಸಮಿತಿಯ ವರದಿಯಲ್ಲಿ ಹೇಳಲಾಗಿದ್ದು, ಈ ವಿಷಯವನ್ನು ಸರಕಾರದ …