ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಮಿಕರ ಮಧ್ಯೆ ಘರ್ಷಣೆ ಇಬ್ಬರಿಗೆ ಇರಿತ; ಆರೋಪಿಗಳೆನ್ನಲಾದ ತಂದೆ, ಪುತ್ರ ನಾಪತ್ತೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗಾಗಿ ತಲುಪಿದ ಕಾರ್ಮಿಕರ ಮಧ್ಯೆ ನಡೆದ ಘರ್ಷಣೆಯಲ್ಲಿ ಇಬ್ಬರಿಗೆ ಇರಿತ ಉಂಟಾಗಿದೆ. ಮೇಘ ಕನ್‌ಸ್ಟ್ರಕ್ಷನ್ ಕಂಪೆನಿಯ ಮೈಲಾಟಿಯಲ್ಲಿರುವ ಲೇಬರ್ ಕ್ಯಾಂಪ್‌ನಲ್ಲಿ ನಿನ್ನೆ ಸಂಜೆ ಘರ್ಷಣೆ ನಡೆದಿದೆ. ಉತ್ತರ ಭಾರತ ನಿವಾಸಿಗಳಾದ ಯತಿವೀಂದರ್ ಸಿಂಗ್, ಗುರ್ಬಾ ಸಿಂಗ್ ಎಂಬಿವರು ಇರಿತದಿಂದ ಗಾಯಗೊಂಡಿದ್ದಾರೆ. ಈ ಪೈಕಿ ಓರ್ವನನ್ನು ಮಂಗಳೂರಿನ ಆಸ್ಪತ್ರೆಯಲ್ಲೂ, ಇನ್ನೋರ್ವನನ್ನು ಕಾಞಂಗಾಡ್‌ನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಾರ್ಮಿಕರ ಮಧ್ಯೆ ನಡೆದ ವಾಗ್ವಾದವೇ ಘರ್ಷಣೆಯಲ್ಲಿ ಕೊನೆಗೊಂಡಿದೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿದು ಬೇಕಲ ಪೊಲೀಸರು ಸ್ಥಳಕ್ಕೆ …

ಕೊಲೆಯತ್ನ ಪ್ರಕರಣದ ಆರೋಪಿಗೆ ಸಂರಕ್ಷಣೆ ನೀಡಿದ ಯುವತಿ ಸೇರಿ ಕರ್ನಾಟಕದ ಇಬ್ಬರ ಸೆರೆ

ಕಾಸರಗೋಡು: ಕೊಲೆಯತ್ನ ಪ್ರಕರಣದ ಆರೋಪಿಗಳ ಪೈಕಿ ಓರ್ವನಿಗೆ ತಲೆಮರೆಸಿಕೊಳ್ಳಲು ಸಂರಕ್ಷಣೆ ಒದಗಿಸಿದ ಆರೋಪದಂತೆ ಯುವತಿ ಸೇರಿ ಇಬ್ಬರನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಕಡಬ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಉಪ್ಪಿನಂಗಡಿ ನಿವಾಸಿಗಳಾದ ರುಬೀನಾ (27) ಮತ್ತು ಅಬೂಬಕ್ಕರ್ ಸಿದ್ದೀಕ್ ಸಿ.ಕೆ. (41) ಬಂಧಿತರಾದ ಆರೋಪಿಗಳು. ಉಪ್ಪಿನಂಗಡಿಯಿಂದ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಚೆಂಗಳ ಗ್ರಾಮ ಚೆರ್ಕಳ ನೋರ್ತ್‌ನ ಕೋಳಿಕ್ಕರ ಹೌಸಿನ ಮೊಹಮ್ಮದ್ ನವಾಸ್ (32) ಎಂಬವರನ್ನು ಕಳೆದ ಜುಲೈ ೨೪ರಂದು ರಾತ್ರಿ ಕಾರಿನಲ್ಲಿ ಬಂದ ನಾಲ್ವರ ತಂಡ ಚೆರ್ಕಳ …

ಎಸ್‌ಬಿಐ ಬ್ಯಾಂಕ್ ದರೋಡೆ: ಎಂಟು ಕೋಟಿ, 50 ಕಿಲೋ ಚಿನ್ನಾಭರಣ ಅಪಹರಣ

ಬೆಂಗಳೂರು: ವಿಜಯಪುರ ಜಿಲ್ಲೆಯ ಮನಗುಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ನೆನಪಿಂದ ಮಾಸುವ ಮೊದಲೇ ಮತ್ತೊಂದು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಕಳವು ನಡೆಸಲಾಗಿದೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನಿಂದ ದರೋಡೆ ನಡೆಸಲಾಗಿದೆ. ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್, ಮಾರಕಾಸ್ತ್ರ ತೋರಿಸಿ ಬ್ಯಾಂಕ್‌ನ ಮೆನೇಜರ್, ಕ್ಯಾಶಿಯರ್, ಸಿಬ್ಬಂದಿಯ ಕೈಕಾಲುಗಳನ್ನು ಕಟ್ಟಿಹಾಕಿ ದರೋಡೆ ನಡೆಸಲಾಗಿದೆ. ಮುಸುಕುದಾರಿಗಳಾದ ಐದು ಮಂದಿಯ ತಂಡ ನುಗ್ಗಿ ದರೋಡೆ ನಡೆಸಿದ್ದು, ಬ್ಯಾಂಕ್‌ನಿಂದ ಸುಮಾರು 8 ಕೋಟಿ ರೂ., …

ಕನ್ನಡಿಗರ ಶೈಕ್ಷಣಿಕ ಸಹಿತ ವಿವಿಧ ಸಮಸ್ಯೆಗೆ ಪರಿಹಾರ ಆಗ್ರಹಿಸಿ ಕರ್ನಾಟಕ ಗಡಿ ಪ್ರಾಧಿಕಾರ ನೇತೃತ್ವದಲ್ಲಿ ಮುಖ್ಯಮಂತ್ರಿ ಭೇಟಿ

ಕಾಸರಗೋಡು: ಕಾಸರಗೋಡಿನಲ್ಲಿ ಅಲ್ಪಸಂಖ್ಯಾತ ಕನ್ನಡಿಗರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಾಣಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನಿಯೋಗವೊಂದು ತಿರುವನಂತಪುರದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೇ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು, ಶೈಕ್ಷಣಿಕ ಉದ್ಯೋಗ ನೇಮಕಾತಿಯಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ನಿಯಮಾನುಸಾರ ಮೀಸಲು ಕಲ್ಪಿಸಬೇಕು, ಪಡಿತರ ಚೀಟಿ, ಮತದಾರರ ಗುರುತು ಚೀಟಿಗಳಲ್ಲಿ ಕನ್ನಡ ಭಾಷೆ ಅಳವಡಿಸಬೇಕು, ಬದಿಯಡ್ಕದ ಕಯ್ಯಾರು ಕಿಞ್ಞಣ್ಣ ರೈ ಕನ್ನಡ ಭವನಕ್ಕೆ …

ಜಿಲ್ಲೆಯಲ್ಲಿ ತೀವ್ರಗೊಂಡ ಕಡಲ್ಕೊರೆತ ತಡೆಗಟ್ಟಲು ವಿವಿಧ ಯೋಜನೆ ಜ್ಯಾರಿಗೊಳಿಸುವುದಾಗಿ ನೀರಾವರಿ ಸಚಿವ

ಕಾಸರಗೋಡು: ಜಿಲ್ಲೆಯಲ್ಲಿ ತೀವ್ರಗೊಂಡಿರುವ ಕಡಲ್ಕೊರೆತವನ್ನು ತಡೆಗಟ್ಟಲು ವಿವಿಧ ಯೋಜನೆಗಳನ್ನು ಜ್ಯಾರಿಗೊಳಿಸುವುದಾಗಿ ಶಾಸಕ ಸಿ.ಎಚ್.ಕುಞಂಬು ಮಂಡಿಸಿದ ಸಬ್‌ಮಿಶನ್‌ಗೆ ಉತ್ತರವಾಗಿ ನೀರಾವರಿ ಸಚಿವ  ರೋಶಿ ಅಗಸ್ಟಿನ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 2025ರಲ್ಲಿ ತೀವ್ರ ಕಡಲ್ಕೊರೆತ ಕಂಡುಬಂದಿದ್ದು, 87.65 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಜಿಲ್ಲೆಯ ತೀರಪ್ರದೇಶಗಳಲ್ಲಿ ಕಡಲ್ಕೊರೆತ ಬೆದರಿಕೆ ಉಂಟಾಗಿದ್ದು, ನಾಶ ನಷ್ಟ ಸಂಭವಿಸಿದೆ. ಕಡಲ್ಕೊರೆತ ತೀವ್ರವಾದ ಕಣ್ವತೀರ್ಥ, ಮುಸೋಡಿ, ಉಪ್ಪಳದ ಹನುಮಾನ್ ನಗರ, ಐಲ ಕಡಪ್ಪುರ, ಮಣಿಮುಂಡ, ಕೊಯಿಪ್ಪಾಡಿ, ಕಾವುಗೋಳಿ, ಕೀಯೂರು, ಚೆಂಬರಿಕ, ತೃಕನ್ನಾಡ್, ಅಜಾನೂರು, ವಲಿಯಪರಂಬ ಎಂಬೆಡೆಗಳಲ್ಲಿ ತೀರ …

ಲಾಲ್‌ಬಾಗ್-ಕುರುಡಪದವು ಶೋಚನೀಯ ರಸ್ತೆ ಅಭಿವೃದ್ಧಿಗೆ ಚಾಲನೆ

ಪೈವಳಿಕೆ: ಹದಗೆಟ್ಟು ಶೋಚನೀ ಯಾವಸ್ಥೆಯಲ್ಲಿರುವ, ಊರವರ ಪ್ರತಿಭಟನೆಗೆ ಕಾರಣವಾಗಿದ್ದ ಲಾಲ್‌ಬಾಗ್- ಕುರುಡಪದವು ರಸ್ತೆಯನ್ನು ಅಭಿವೃದ್ಧಿಗೊಳಿಸಲು ಅಧಿಕಾರಿ ವರ್ಗ ಕೊನೆಗೂ ಮುಂದಾಗಿದೆ. ಪ್ರಥಮ ಹಂತದಲ್ಲಿ ಲಾಲ್‌ಬಾಗ್ ನಿಂದ ಚಿಪ್ಪಾರು ಅಮ್ಮೇರಿ ತನಕ ಸುಮಾರು ಮೂರುವರೆ ಕಿಲೋ ಮೀಟರ್ ರಸ್ತೆಯನ್ನು ಅಭಿವೃ ದ್ಧಿಗೊಳಿಸಲು ತೀರ್ಮಾನಿಸಲಾಗಿದೆ. ರಸ್ತೆಯನ್ನು ಅಗಲೀಕರಣಗೊಳಿಸುವ ಕಾಮಗಾರಿ ಒಂದು ವಾರದಿಂದ ನಡೆಯುತ್ತಿದೆ. ಕುಂಬಳೆ ನಿವಾಸಿಯೋ ರ್ವರು ಗುತ್ತಿಗೆ ಪಡೆದುಕೊಂಡಿದ್ದಾರೆ. ಸುಮಾರು ನಾಲ್ಕೂವರೆ ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಈ …

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಡಿಸೆಂಬರ್‌ನಲ್ಲಿ ಕೇರಳಕ್ಕೆ

ಕೊಚ್ಚಿ: ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಡಿಸೆಂಬರ್ನಲ್ಲಿ ಕೇರಳಕ್ಕೆ ಆಗಮಿಸುವರು. ಆರ್‌ಎಸ್‌ಎಸ್‌ನ ಶತಮಾನೋತ್ಸವ ಅಂಗವಾಗಿ ನಡೆಯುವ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವರು. ಆರ್‌ಎಸ್‌ಎಸ್ ಉತ್ತರ ಕೇರಳ ಪ್ರಾಂತ್ಯದ ನೇತೃತ್ವದಲ್ಲಿ ಡಿ. 7ರಂದು ತೃಶೂರು ಹಾಗೂ ದಕ್ಷಿಣ ಕೇರಳ ಪ್ರಾಂತ್ಯದ ನೇತೃತ್ವದಲ್ಲಿ 8ರಂದು ತಿರುವನಂತಪರದಲ್ಲಿ ಪ್ರತಿನಿಧಿಗಳ ಸಭೆ ನಡೆಯಲಿದೆ. ಈ ವರ್ಷ ವಿಜಯ ದಶಮಿ ದಿನದಿಂದ 2026 ವಿಜಯದಶಮಿವರೆಗೆ ಆರ್‌ಎಸ್‌ಎಸ್ ಶತಮಾನೋತ್ಸವ ಕಾರ್ಯಕ್ರಮಗಳು ನಡೆಯಲಿದೆ.

ಬಡಗಿ ನಿಧನ

ಕುಂಬಳೆ: ಸೀತಾಂಗೋಳಿ ಪಳ್ಳತ್ತಡ್ಕ ನಿವಾಸಿ ಪೆರ್ಣೆ ಜನಾರ್ದನ ಆಚಾರ್ಯ (71) ನಿಧನ ಹೊಂದಿದರು. ಇವರು ಬಡಗಿ ವೃತ್ತಿ ನಡೆಸುತ್ತಿದ್ದರು. ಇತ್ತೀಚೆಗೆ ಹೃದಯಾಘಾತವುಂಟಾದ ಇವರನ್ನು ಪರಿಯಾರಂನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಮಧ್ಯೆ ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ಮೃತರು ಪತ್ನಿ ಲಲಿತ, ಮಕ್ಕಳಾದ ಚಿತ್ರಲೇಖ, ವಿಜಯಲಕ್ಷ್ಮಿ, ಗಣೇಶ, ಮೋಹನ, ಭವ್ಯಶ್ರೀ, ಅಳಿಯ-ಸೊಸೆಯಂದಿರಾದ ಅಶೋಕ್ ಆಚಾರ್ಯ ಮೀಪುಗುರಿ, ಪುರೋಹಿತ ಕುಡಾಲ್ ದೇವಿಪ್ರಸಾದ್ ಶರ್ಮ ಮಂಜೇಶ್ವರ, ಮಹೇಶ್ ಆಚಾರ್ಯ ಪುತ್ತೂರು, ಅನಿತ, ದಿವ್ಯಶ್ರೀ, ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. …

ಛಾಯಾಗ್ರಹಣ ವಲಯದಲ್ಲಿ 40 ವರ್ಷ ಪೂರ್ತಿಗೊಳಿಸಿದ ಸದಸ್ಯರಿಗೆ ಎಕೆಪಿಎಯಿಂದ ಗೌರವರ್ಪಣೆ

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇ ಶನ್ ಜಿಲ್ಲಾ ಸಮಿತಿ ವತಿಯಿಂದ ಎಕೆಪಿಎ ಸ್ಥಾಪಕ ದಿನಾಚರಣೆಯಂಗವಾಗಿ ಜಿಲ್ಲೆಯ ಛಾಯಾಗ್ರಹಣ ಸಂಬಂಧಪಟ್ಟ ವಲಯದಲ್ಲಿ 40 ವರ್ಷಕ್ಕಿಂತ ಹೆಚ್ಚು ದುಡಿಯುತ್ತಿದ್ದ ಸದಸ್ಯರನ್ನು ಗೌರವಿಸಲಾಯಿತು. ಕಾಸರಗೋಡು ಎಕೆಪಿಎ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ಸುಗುಣನ್ ಇರಿಯಾರ ಅಧ್ಯಕ್ಷತೆಯಲ್ಲಿ ಕೇಂದ್ರ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ.ವಿ. ಕುಮಾರನ್ ಮಾಸ್ತರ್ ಉದ್ಘಾಟಿಸಿದರು. ಎಕೆಪಿಎ ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು ಮುಖ್ಯ ಅತಿಥಿಯಾಗಿದ್ದರು. ಛಾಯಾಗ್ರಹಣ ವಲಯದಲ್ಲಿ ೪೦ ವರ್ಷ ಪೂರ್ತಿಗೊಳಿಸಿದವರನ್ನು ಕುಮಾರನ್ ಮಾಸ್ತರ್ …

ಟೋಲ್ ಬೂತ್ ಕ್ರಿಯಾಸಮಿತಿ: ಸಿಪಿಎಂ ಏರಿಯಾ ಕಾರ್ಯದರ್ಶಿಯ ಚಟುವಟಿಕೆ ಏಕಪಕ್ಷೀಯ-ಎಸ್‌ಡಿಪಿಐ

ಕುಂಬಳೆ: ಕುಂಬಳೆಯಲ್ಲಿ ನಿರ್ಮಾಣ ನಡೆಯುತ್ತಿರುವ ಟೋಲ್ ಬೂತ್ ವಿರುದ್ಧ ರೂಪೀಕರಿಸಲಾದ ಟೋಲ್ ವಿರುದ್ಧ ಕ್ರಿಯಾ ಸಮಿತಿಯಲ್ಲಿ ಸಿಪಿಎಂ ಏರಿಯಾ ಸೆಕ್ರೆಟರಿ ಸಿ.ಎ. ಸುಬೈರ್ ಏಕಾಧಿಪತ್ಯ ಚಟುವಟಿಕೆ ನಡೆಸುತ್ತಿದ್ದಾರೆಂದು ಎಸ್‌ಡಿಪಿಐ ಕುಂಬಳೆ ಪಂಚಾಯತ್ ಸಮಿತಿ ಅಧ್ಯಕ್ಷ ನಾಸರ್ ಬಂಬ್ರಾಣ ಆರೋಪಿಸಿದ್ದಾರೆ. ಸೋಮವಾರ ಮಧ್ಯಾಹ್ನ ಕುಂಬಳೆ ಪಂಚಾಯತ್ ಹಾಲ್‌ನಲ್ಲಿ ಕ್ರಿಯಾ ಸಮಿತಿ ಕನ್ವೀನರ್ ಯು.ಪಿ. ತಾಹಿರರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್‌ಡಿಪಿಐಯನ್ನು ಕ್ರಿಯಾಸಮಿತಿಯಿಂದ ಹೊರ ಹಾಕುವ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಚಳವಳಿಯ ಭವಿಷ್ಯದ ಕುರಿತು ಚರ್ಚೆ ನಡೆಸಿ ೨೪ರಿಂದ …