ಕುಂಬಳೆ ಪಂ. ಕಟ್ಟಡದಲ್ಲಿ ಬೀಫ್ ಸ್ಟಾಲ್ ತೀವ್ರ ಚಳವಳಿಗೆ ಬಿಜೆಪಿ ನಿರ್ಧಾರ

ಕುಂಬಳೆ: ಕುಂಬಳೆ ಗ್ರಾಮ ಪಂಚಾ ಯತ್‌ನ ಮಾರುಕಟ್ಟೆ ಸಮೀಪವಿರುವ ಪಂಚಾಯತ್ ಕಟ್ಟಡದಲ್ಲಿರುವ ಬೀಫ್ ಸ್ಟಾಲ್ ಅನಧಿಕೃತವಾಗಿ ಕಾರ್ಯಾ ಚರಿಸುತ್ತಿದ್ದು, ಇದರ ವಿರುದ್ಧ ತೀವ್ರ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ತಿಳಿಸಿದೆ. ಪಂಚಾಯತ್‌ನ ನಿಯಮ ಪ್ರಕಾರ ಯಾವುದೇ ರೀತಿಯ ಮಾಂಸದ ಅಂಗಡಿಯನ್ನು ತರಕಾರಿ, ದೀನಸಿ, ಹಣ್ಣು ಹಂಪಲು ಅಂಗಡಿ ಸಮೀಪ ತೆರೆಯ ಕೂಡದ್ದಾಗಿದೆ. ಕಳೆದ 12 ವರ್ಷಗಳಿಂದ ಈ ಕಾನೂನು ಜ್ಯಾರಿಯಲ್ಲಿದೆ. ಆದರೆ ಇದೀಗ ಪಂಚಾಯತ್‌ನ ಅಧೀನದ ಕಟ್ಟಡದಲ್ಲಿ ಬೀಫ್ ಸ್ಟಾಲ್ ತೆರೆಯಲು ಪಂಚಾಯತ್ ಅಧಿಕಾರಿಗಳು ಅನುಮತಿ ನೀಡಿರುವುದಾಗಿ ಬಿಜೆಪಿ …

ವರ್ಕಾಡಿ ಕುಟುಂಬ ಆರೋಗ್ಯ ಕೇಂದ್ರವನ್ನು ಆರೋಗ್ಯ ಇಲಾಖೆ, ಪಂಚಾಯತ್ ನಿರ್ಲಕ್ಷಿಸುತ್ತಿದೆ-ಮುಸ್ಲಿಂ ಲೀಗ್

ವರ್ಕಾಡಿ: ವರ್ಕಾಡಿ ಗ್ರಾಮ ಪಂಚಾಯತ್ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಅಗತ್ಯದಷ್ಟು ವೈದ್ಯರು ಹಾಗೂ ಸಿಬ್ಬಂದಿಗಳು ಇಲ್ಲದೆ ಹಲವು ತಿಂಗಳುಗಳಿAದ ಕಾರ್ಯ ನಿರ್ವಹಿಸುತ್ತಿದ್ದು, ಸಿಪಿಎಂ ಮತ್ತು ಬಿಜೆಪಿ ನೇತೃತ್ವದ ಆಡಳಿತ ಸಮಿತಿ ಹಾಗೂ ಆರೋಗ್ಯ ಇಲಾಖೆ ಕುಟುಂಬ ಆರೋಗ್ಯ ಕೇಂದ್ರ ವನ್ನು ನಿರ್ಲಕ್ಷಿಸುತ್ತಿದೆ ಎಂದು ಮುಸ್ಲಿಂ ಲೀಗ್ ವರ್ಕಾಡಿ ಪಂಚಾಯತ್ ಸಭೆ ಆರೋಪಿಸಿದೆ. ಮೂರು ವೈದ್ಯರು ಬೇಕಾದಲ್ಲಿ ಪ್ರಸ್ತುತ ಒಬ್ಬರು ವೈದ್ಯ ಮಾತ್ರ ಇದ್ದಾರೆ. ನಾಲ್ಕು ಸ್ಟಾಫ್ ನರ್ಸ್ಗಳು ಬೇಕಾದಲ್ಲಿ ಇಬ್ಬರು ಮಾತ್ರ. ಎರಡು ಲ್ಯಾಬ್ ಟೆಕ್ನಿಷಿಯನ್‌ಗಳು ಬೇಕಾದರೆ …

ಸೋಂಕಾಲ್ ಜಂಕ್ಷನ್‌ನಲ್ಲಿ ಒಬಿಸಿ ಮೋರ್ಚಾದಿಂದ ಮೋದಿ ಜನ್ಮ ದಿನಾಚರಣೆ

ಉಪ್ಪಳ: ನರೇಂದ್ರ ಮೋದಿ ಜಗತ್ತು ಕಂಡ ಶ್ರೇಷ್ಠ ನಾಯಕನಾಗಿದ್ದು, ಯುವ ಪೀಳಿಗೆ ನರೇಂದ್ರ ಮೋದಿಯವರ ಮಾರ್ಗವನ್ನು ಅನುಸರಿಸಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮುರಳೀ ಧರ್ ಯಾದವ್ ನುಡಿದರು. ಅವರು ಒಬಿಸಿ ಮೋರ್ಚಾ ಕಾಸರಗೋಡು ಇದರ ಆಶ್ರಯದಲ್ಲಿ ಮಂಗಲ್ಪಾಡಿ ಸೋಂಕಾಲ್ ಜಂಕ್ಷನ್‌ನಲ್ಲಿ ನರೇಂದ್ರ ಮೋದಿಯವರ ೭೫ನೇ ಹುಟ್ಟುಹಬ್ಬ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಒಬಿಸಿ ಮಾರ್ಚ್ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ, ಬಿಜೆಪಿ ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ …

ಕುಂಬಳೆ ಟೋಲ್ ಬೂತ್ ವಿರುದ್ಧ ಚಳವಳಿ: ಬಿಜೆಪಿ ಕೋಮು ಭಾವನೆಯಿಂದ ಕಾಣುತ್ತಿದೆ- ಕ್ರಿಯಾ ಸಮಿತಿ

ಕುಂಬಳೆ: ಕುಂಬಳೆಯಲ್ಲಿ ಕಾನೂನು ವಿರುದ್ಧವಾಗಿ ನಿರ್ಮಿಸುವ ಟೋಲ್ ಬೂತ್ ವಿರುದ್ಧ ನಡೆಸುವ ಚಳವಳಿಯನ್ನು ಬಿಜೆಪಿ ಕೋಮುಭಾವನೆಯಿಂದ ಕಾಣುತ್ತಿದೆಯೆಂದು ಜನಪರ ಕ್ರಿಯಾ ಸಮಿತಿ ಆರೋಪಿಸಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಮರೆಯಲ್ಲಿ 22 ಕಿಲೋ ಮೀಟರ್ ಅಂತರದಲ್ಲಿ ಕುಂಬಳೆ ಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಥಾರಿಟಿ ಸ್ಥಾಪಿಸುವ ಟೋಲ್ ಬೂತ್ ವಿರುದ್ಧ ಜನಪರ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆಯುವ ಚಳವಳಿಯಲ್ಲಿ ಎಲ್ಲಾ ವಿಭಾಗದ ಜನರು ಭಾಗವಹಿಸು ತ್ತಿದ್ದಾರೆ. ಈ ಸಂದರ್ಭದಲ್ಲಿ ಅದನ್ನು ಕೋಮು ಭಾವನೆಯಿಂದ ಕಾಣುವ ಪ್ರಯತ್ನದಿಂದ ಬಿಜೆಪಿ ಹಿಂಜರಿಯಬೇ ಕೆಂದು …

ಸಿಪಿಎಂ ಮುಖಂಡ ಸಿ.ಎ ಸುಬೈರ್‌ರ ತಾಯಿ ನಿಧನ

ಕುಂಬಳೆ: ಕೊಡ್ಯಮ್ಮೆ ಚೀರ್ತೋ ಡಿಯ ದಿ| ಅಬ್ದುಲ್ಲ ಮುಸ್ಲಿಯಾರ್‌ರ ಪತ್ನಿ ಹಾಗೂ ಸಿಪಿಎಂ ಕುಂಬಳೆ ಏರಿಯಾ ಕಾರ್ಯ ದರ್ಶಿ ಸಿ.ಎ ಸುಬೈರ್‌ರ ತಾಯಿ ಬೀಫಾತಿಮ್ಮ (85) ನಿಧನ ಹೊಂದಿ ದರು. ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತರು ಇತರ ಮಕ್ಕಳಾದ  ಅಬ್ಬಾಸ್, ಮುಹಮ್ಮದ್ ಕುಂಞಿ, ಖಾದರ್, ಹನೀಫ್, ನಫೀಸ, ಸೈನಬ, ಸಕೀನ, ಸೊಸೆಯಂದಿರಾದ ಜಮೀಲ, ಮೈಮೂನ, ಜಮೀಲ, ಶಾನು, ಅಸ್‌ರಿಫ್, ಅಳಿಯಂದಿರಾದ ಮುಹಮ್ಮದ್, ಅಶ್ರಫ್  ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಅಳಿಯ ಅಬ್ದುಲ್ಲ ಈ ಹಿಂದೆ …

ಬಾಲಕನಿಗೆ ಕಿರುಕುಳ: ಸೆರೆಗೀಡಾದ ಬೇಕಲ ಎಇಒ ಅಮಾನತು

ಕಾಸರಗೋಡು: 16ರ ಹರೆಯದ ಬಾಲಕನಿಗೆ ಸಲಿಂಗರತಿ ಕಿರುಕುಳ ನೀ ಡಿದ ಪ್ರಕರಣದಲ್ಲಿ  ನೀಲೇಶ್ವರ ಪೊಲೀ ಸರು ಬಂಧಿಸಿದ ಬೇಕಲ ಉಪಜಿಲ್ಲಾ ಶಿಕ್ಷಣ ಅಧಿಕಾರಿ  ವಿ.ಕೆ. ಸೈನುದ್ದೀನ್ ನನ್ನು ತನಿಖಾ ವಿಧೇಯವಾಗಿ ಶಿಕ್ಷಣ ಡೆಪ್ಯುಟಿ ಡೈರೆಕ್ಟರ್ ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಶಿಕ್ಷಣ ಖಾತೆ ಸಚಿವ ವಿ. ಶಿವನ್ ಕುಟ್ಟಿಯವರ ನಿರ್ದೇಶ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ. ಪಡನ್ನ ನಿವಾಸಿಯೂ, ಪಡನ್ನಕ್ಕಾಡ್‌ನಲ್ಲಿ ವಾಸಿಸುವ ಸೈನುದ್ದೀನ್‌ನನ್ನು ನೀಲೇಶ್ವರ ಪೊಲೀಸರು ಪೋಕ್ಸೋ ಪ್ರಕಾರ ನಿನ್ನೆ ಬಂಧಿಸಿದ್ದರು. ಆರೋಪಿಗೆ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ …

ಬಾಲಕನಿಗೆ ಕಿರುಕುಳ: ಸೆರೆಗೀಡಾದವರ ಸಂಖ್ಯೆ 10ಕ್ಕೆ; ತಲೆಮರೆಸಿಕೊಂಡ ಯೂತ್‌ಲೀಗ್ ನೇತಾರನ ಪತ್ತೆಗಾಗಿ ಶೋಧ

ಕಾಸರಗೋಡು: ಡೇಟಿಂಗ್ ಆಪ್ ಮೂಲಕ ಪರಿಚಯಗೊಂಡ 16ರ ಹರೆಯದ ಬಾಲಕನಿಗೆ ಸಲಿಂ ಗರತಿ ಕಿರುಕುಳ ನೀಡಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಪಯ್ಯನ್ನೂರು ಕೋರೋತ್‌ನಲ್ಲಿ ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ನೌಕರನಾದ ಗಿರೀಶ್ (47) ಎಂಬಾತನನ್ನು ಪ್ರತ್ಯೇಕ ತನಿಖಾ ತಂಡ ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಸೆರೆಗೀಡಾದವರ ಸಂಖ್ಯೆ 10ಕ್ಕೇರಿದೆ. ಬೇಕಲ ಎಇಒ ಪಡನ್ನದ ವಿ.ಕೆ. ಸೈನುದ್ದೀನ್ (52), ಪಡನ್ನಕ್ಕಾಡ್‌ನ ರಂಸಾನ್ (64), ಆರ್‌ಪಿಎಫ್ ನೌಕರ ಪಿಲಿಕ್ಕೋಡ್ ಎರವ್‌ನ ಚಿತ್ರರಾಜ್ (48), ತೃಕ್ಕರಿಪುರ ವಳುವಕ್ಕಾಡ್‌ನ ಕುಂಞಹಮ್ಮದ್ (55), ಚಂದೇರದ ಅಪ್ಸಲ್ …

ಪ್ರಧಾನಿ ಮೋದಿಗೆ 75: ಬಿಜೆಪಿಯಿಂದ ದೇಶಾದ್ಯಂತ ಸೇವಾ ಕಾರ್ಯಕ್ರಮ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು 75 ವಸಂತಕ್ಕೆ ಕಾಲಿರಿಸಿದ್ದು, ಇದರ ಅಂಗವಾಗಿ ಬಿಜೆಪಿಯು ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹುಟ್ಟುಹಬ್ಬದ ಸಲುವಾಗಿ ಕೇಂದ್ರ ಸರಕಾರವು ಇಂದಿನಿಂದ ಪೋಷಣ್ ಮಾಹ್ ಜೊತೆಗೆ ಸ್ವಸ್ಥನಾರಿ, ‘ಸಶಕ್ತ್ ಪರಿವಾರ್’ ಅಭಿಯಾನಕ್ಕೂ ಚಾಲನೆ ನೀಡಿದೆ. ಇದರ ಹೊರತಾಗಿ ಬಿಜೆಪಿ ಮತ್ತು ಯುವಮೋರ್ಚಾದ ನೇತೃತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು, ರಕ್ತದಾನದಿಂದ ಹಿಡಿದು ಹಲವು ಕಾರ್ಯಕ್ರಮಗಳನ್ನು ಹುಟ್ಟುಹಬ್ಬದಂಗವಾಗಿ ದೇಶಾದ್ಯಂತವಾಗಿ ಹಮ್ಮಿಕೊಳ್ಳಲಾಗಿದೆ. ಇನ್ನು ಬಿಜೆಪಿ ನೇತೃತ್ವದಲ್ಲಿರುವ ರಾಜ್ಯಗಳಲ್ಲಿ ವಿವಿಧ  ಕಾರ್ಯಕ್ರಮಗಳನ್ನೂ ಇಂದಿನಿಂದ ಆರಂಭಿಸಲಾಗಿದ್ದು, ಇದು ಅಕ್ಟೋಬರ್ …

ಶಾಲಾ ಬಸ್-ಸ್ಕೂಟರ್ ಢಿಕ್ಕಿ : ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಉಪ್ಪಳ: ಶಾಲಾ ಬಸ್ ಹಾಗೂ ಸ್ಕೂಟರ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರರಾದ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಸಂಭವಿಸಿದೆ. ಇಂದು ಬೆಳಿಗ್ಗೆ 7.45 ರ ವೇಳೆ ಬಾಯಾರು ಪೆಟ್ರೋಲ್ ಪಂಪ್ ಸಮೀಪ ರಸ್ತೆಯಲ್ಲಿ ಅಪಘಾತವುಂಟಾಗಿದೆ. ಬಾಯಿಕಟ್ಟೆ ಕಳಾಯಿ ನಿವಾಸಿ ಮೊಹಮ್ಮದ್ ಸಾದಿಕ್ ಹಾಗೂ ಭಂಡಾರ ಕಳಾಯಿಯ ಮೊಹಮ್ಮದ್ ಮೊನುದ್ದೀನ್ ಎಂಬಿವರು ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಈ ಇಬ್ಬರು ಬಾಯಿಕಟ್ಟೆಯಲ್ಲಿರುವ ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡೆಮಿಯ ವಿದ್ಯಾರ್ಥಿಗಳಾಗಿದ್ದಾರೆ. ಇವರು ಪೈವಳಿಕೆಯಿಂದ ಬಾಯಾರು ಭಾಗಕ್ಕೆ  ಸ್ಕೂಟರ್‌ನಲ್ಲಿ ತೆರಳುತ್ತಿದ್ದಾರ …

ಕಾರು ಖರೀದಿಸಿ ಹಣ ನೀಡದೆ ವಂಚನೆ: ಓರ್ವ ಸೆರೆ

ಮಂಜೇಶ್ವರ :ಕಾರು ಖರೀದಿಸಿ ಬಳಿಕ ಹಣ ನೀಡದೆ ವಂಚಿಸಿ ಬೆದರಿಕೆಯೊಡ್ಡಿದ ಆರೋಪದಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡ ಐವರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಲಾಗಿದೆ. ಉಳಿಯತ್ತಡ್ಕ ಎಸ್‌ಪಿ ನಗರದ ಅಬ್ದುಲ್ ಅಶ್ಪಾಕ್ (31) ಎಂಬಾತನನ್ನು ಬಂಧಿಸಲಾಗಿದ್ದು, ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಹೊಸಬೆಟ್ಟು ಕಟ್ಟೆಬಜಾರ್ ಪಾಂಡ್ಯಾಲ ನಿವಾಸಿ ಮಜೀದ್ ಎಂಬವರು ನೀಡಿದ ದೂರಿನಂತೆ ಅಬ್ದುಲ್ ಅಶ್ಪಾಕ್ ಸಹಿತ ಐದು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಆರೋಪಿಗಳು ಇತ್ತೀಚೆಗೆ ಮದುವೆ ಅಗತ್ಯಕ್ಕೆಂದು ತಿಳಿಸಿ ಮಜೀದ್‌ರ ಕಾರನ್ನು ಖರೀದಿಸಿ …