ಕಾಸರಗೋಡು ಜಿಲ್ಲಾ ಪಂಚಾಯತ್‌ನ ಮೀಸಲಾತಿ ಡಿವಿಶನ್‌ಗಳು

ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯತ್‌ನ ಮೀಸಲಾತಿ ಡಿವಿಶನ್‌ಗಳನ್ನು ನಿರ್ಣಯಿಸಲಾಗಿದೆ. ಇದರಂತೆ ಜಿಲ್ಲಾ ಪಂಚಾಯತನ ಮೂರನೇ ಡಿವಿಶನ್ ಆಗಿರುವ ಬದಿಯಡ್ಕವನ್ನು   ಪರಿಶಿಷ್ಟ ಜಾತಿ ಮೀಸಲಾತಿ ಡಿವಿಶನ್ ಆಗಿ ಆರಿಸಲಾಗಿದೆ. ಇದರ ಹೊರತಾಗಿ ಎಂಟನೇ ಡಿವಿಶನ್ ಆಗಿರುವ ಕಯ್ಯೂರನ್ನು ಪರಿಶಿಷ್ಟ ಪಂಗಡದ ಮಹಿಳೆಯ ರಿಗಾಗಿ ಮೀಸಲಿರಿಸಲಾಗಿದೆ. ಉಳಿದಂತೆ ದೇಲಂಪಾಡಿ (ಡಿವಿಶನ್ 4), ಕಳ್ಳಾರು (6), ಚಿತ್ತಾರಿಕ್ಕಲ್ (7), ಪೆರಿಯ (12), ಬೇಕಲ (13), ಉದುಮ (14), ಚೆಂಗಳ (15) ಮತ್ತು ಮಂಜೇಶ್ವರ (18)ವನ್ನು ಮಹಿಳಾ ಡಿವಿಶನ್‌ಗಳನ್ನಾಗಿ ನಿರ್ಣಯಿಸಲಾಗಿದೆ. ಕಲೆಕ್ಟರೇಟ್‌ನ ಮಿನಿ …

ಜಿಲ್ಲಾ ಕರಾಟೆ ಚಾಂಪ್ಯನ್ ಶಿಪ್: ಎರಡನೇ ತರಗತಿ ವಿದ್ಯಾರ್ಥಿಗೆ ಚಿನ್ನ

ಹೊಸದುರ್ಗ: ಕೋಟ್ಟಪ್ಪುರಂ ಇಎಂಎಸ್ ಮಿನಿ ಕಾನ್ಫರೆನ್ಸ್ ಹಾಲ್‌ನಲ್ಲಿ ಜಿಲ್ಲಾ ಕರಾಟೆ  ಡೋ ಅಸೋಸಿಯೇಶನ್ ಹಮ್ಮಿಕೊಂಡ ಹದಿಮೂರನೇ ಜಿಲ್ಲಾ ಕರಾಟೆ ಚಾಂಪ್ಯನ್‌ಶಿಪ್‌ನಲ್ಲಿ ಎರಡನೇ ತರಗತಿ ವಿದ್ಯಾರ್ಥಿ ಗೆಲುವು ಸಾಧಿಸಿದ್ದಾನೆ. ನೀಲೇಶ್ವರ ಪಾಲಕ್ಕಾಡ್‌ನ ಆರುಶ್ ಶ್ರೀರಾಜ್ ಈ ಸಾಧನೆಗೈದಿದ್ದಾನೆ. 25 ಕಿಲೋ ಕುಮಿಟೆ ವಿಭಾಗದಲ್ಲಿ ಆರುಶ್ ಶ್ರೀರಾಜ್‌ಗೆ ಚಿನ್ನದ ಪದಕ ಲಭಿಸಿದೆ. ಜಿಲ್ಲೆಯ ವಿವಿಧ  ಭಾಗಗಳಿಂದಾಗಿ ೩೫೦ರಷ್ಟು ಮಂದಿ ಸ್ಪರ್ಧಾಳುಗಳು ಚಾಂಪ್ಯನ್ ಶಿಪ್‌ನಲ್ಲಿ ಭಾಗವಹಿಸಿದ್ದಾರೆ. ನವಂಬರ್ ೧೫,೧೬ರಂದು ಎರ್ನಾಕುಳಂ ರಾಜೀವ್ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ನಡೆಯುವ ಕರಾಟೆ ಕೇರಳ ಅಸೋಸಿಯೇಶನ್ …

ಕನ್ನಡ ಮಾಧ್ಯಮ ಅಧ್ಯಾಪಕ ಸಂಘದಿಂದ ಕ್ಲಸ್ಟರ್ ಬಹಿಷ್ಕಾರ, ಮನವಿ ಸಲ್ಲಿಕೆ

ಉಪ್ಪಳ: ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಲ್ಲಿನ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಾಂವಿಧಾನಿಕ ಮತ್ತು ಭಾಷಾ ಹಕ್ಕುಗಳನ್ನು ಮರಳಿ ಸ್ಥಾಪಿಸುವ ಉದ್ದೇಶದಿಂದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ನೇತೃತ್ವದಲ್ಲಿ ಕ್ಲಸ್ಟರ್ ಬಹಿಷ್ಕಾರ ನಡೆಸಲಾಯಿತು. ಬಳಿಕ ಮಂಜೇಶ್ವರ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಉಪಜಿಲ್ಲಾ ಕಚೇರಿಗೆ ಭೇಟಿ ನೀಡಿ ಶಿಕ್ಷಕರ ಕೈಪಿಡಿಗಳನ್ನು ಒದಗಿಸಬೇಕು, ವಿಜ್ಞಾನೋತ್ಸವ ಮತ್ತು ಕಲೋತ್ಸವಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೂ ಸಮಾನ ಅವಕಾಶಗಳನ್ನು ನೀಡಬೇಕು, ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂರಕ್ಷಣೆ ಮಾಡಬೇಕು, ದ್ವಿ ಭಾಷಾ …

ವರ್ಕಾಡಿ: ಕೊಂಡೆವೂರು ಶ್ರೀ ಅನಂತಪದ್ಮನಾಭ ದೇವಸ್ಥಾನ ಮಹಾಸಭೆ, ಅಭಿವೃದ್ಧಿ ಸಮಿತಿ ರೂಪೀಕರಣ

ವರ್ಕಾಡಿ: ಕೊಂಡೆವೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಇದರ ಮಹಾಸಭೆ ಇತ್ತೀಚೆಗೆ ದೇವಸ್ಥಾನದ ವಠಾರದಲ್ಲಿ ನಡೆಯಿತು. ಸೇವಾ ಟ್ರಸ್ಟ್ನ ಅಧ್ಯಕ್ಷ ಸೋಮನಾಥ ಕಾರಂತ ಅಧ್ಯಕ್ಷತೆ ವಹಿಸಿದರು. ಆಡಳಿತ ಮೊಕ್ತೇಸರ ಐತಪ್ಪ ಶೆಟ್ಟಿ ದೇವಂದಪಡ್ಪು,  ಟ್ರಸ್ಟ್ನ ಸದಸ್ಯ ದೇವಪ್ಪ ಶೆಟ್ಟಿ ಚಾವಡಿಬೈಲು ಗುತ್ತು, ಪಾವೂರು ಪೊಯೈ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಮನೋಹರ ಶೆಟ್ಟಿ ಕೆದುಂಬಾಡಿ, ಹಿರಿಯರಾದ ಶ್ಯಾಮ್ ಭಟ್ ಕೆದುಂ ಬಾಡಿ, ಚಂದ್ರಹಾಸ ಪೂಜಾರಿ ಮುಡಿಮಾರು, ಆನಂದ ಬಳ್ಳೂರು, ಪದ್ಮನಾಭ ಅಡ್ಯಂತಾಯ ಕಾಪು, ಅರುಣ್ ಕುಮಾರ್ ಶೆಟ್ಟಿ …

ಕುಂಬಳೆ ಉಪಜಿಲ್ಲಾ ಮಟ್ಟದ ಗಣಿತ ಮೇಳ ಉದ್ಘಾಟನೆ

ಸೂರಂಬೈಲು : ಕುಂಬಳೆ ಉಪಜಿಲ್ಲಾ ಮಟ್ಟದ ಗಣಿತ ಮೇಳ ಸೂರಂಬೈಲು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್ ಉದ್ಘಾಟಿಸಿದರು. ಪುತ್ತಿಗೆ ಪಂಚಾಯತ್ ಸದಸ್ಯೆ ಅನಿತಾಶ್ರೀ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತಿಗೆ ಪಂಚಾಯತ್ ಸದಸ್ಯರಾದ ಜನಾರ್ದನ ಪೂಜಾರಿ, ಜಯಂತಿ, ಕುಂಬಳೆ ಎಚ್ ಎಂ ಫಾರಂ ಕಾರ್ಯದರ್ಶಿ ಸುರೇಂದ್ರನ್ ಎಂ ವಿ, ಪಿಟಿಎ ಅಧ್ಯಕ್ಷ ಮೊಯಿದು ಸೀತಾಂಗೋಳಿ, ಎಂಪಿಟಿಎ ಅಧ್ಯಕ್ಷೆ ರಾಜಿ ರಾಜೇಶ್, ಪಿಟಿಎ ಉಪಾಧ್ಯಕ್ಷ ರಮೇಶ್ …

ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿದ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ವೇಳೆ ಜೀವಂತ

ಕುಂಬಳೆ: ಚಿಕಿತ್ಸೆಗಾಗಿ  ದಾಖ ಲಾಗಿದ್ದ ವ್ಯಕ್ತಿ ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಮನೆಗೆ ತಲುಪಿಸಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಂತೆ ವ್ಯಕ್ತಿ ಜೀವಂ ತವಾಗಿರುವುದು ತಿಳಿದು ಬಂದಿದೆ. ಇದರಿಂದ ವ್ಯಕ್ತಿಯನ್ನು ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದು, ಇದೀಗ  ಚಿಕಿತ್ಸೆ ಯಲ್ಲಿದ್ದಾರೆ. ಕುಂಬಳೆ ಕಂಚಿಕಟ್ಟೆ ರಾಮ್‌ನಗರ ನಿವಾಸಿ ರಾಮ್ ನಾಥ್ ಗಟ್ಟಿ (70) ಎಂಬವರಿಗೆ ಒಂದು ವಾರ ಹಿಂದೆ ೨೪ ಗಂಟೆ ಕಾಲ ವಿದ್ಯುತ್ ಮೊಟಕುಗೊಂಡ ಸಂದರ್ಭದಲ್ಲಿ  ಮನೆಯಲ್ಲಿ ಅಸೌಖ್ಯ ಕಾಣಿಸಿಕೊಂಡಿತ್ತು. ಇದರಿಂದ ಇವರನ್ನು …

ದೀಪಾವಳಿ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದ ಯುವಕ ಶಾಕ್ ತಗಲಿ  ಮೃತ್ಯು

ಕುಂಬಳೆ: ದೀಪಾವಳಿ ಆಚರಣೆಯಂಗವಾಗಿ ಅಲಂಕಾರ ದೀಪ ಅಳವಡಿಸುತ್ತಿದ್ದಾಗ ವಿದ್ಯುತ್ ಶಾಕ್ ತಗಲಿ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪುತ್ತಿಗೆ ಆಚಾರಿಮೂಲೆಯ ನಾಗೇಶ್ ಆಚಾರ್ಯ ಎಂಬವರ ಪುತ್ರ ರಾಜೇಶ್ ಆಚಾರ್ಯ (37) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ರಾತ್ರಿ ೯.೩೦ರ ವೇಳೆ ಈ ದಾರುಣ ಘಟನೆ ಸಂಭವಿಸಿದೆ. ಮನೆಯಲ್ಲಿ ವಿದ್ಯುತ್ ದೀಪಗಳನ್ನು ನೇತಾಡಿಸುತ್ತಿದ್ದಾಗ ರಾಜೇಶ್‌ಗೆ ಶಾಕ್ ತಗಲಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡ ಅವರನ್ನು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು   ಮರಣೋತ್ತರ ಪರೀಕ್ಷೆಗಾಗಿ …

ಮನೆಗೆ ತಲುಪಿ ಬಾಲಕಿಯನ್ನು ಬಿಗಿದಪ್ಪಿಕೊಂಡ ವ್ಯಕ್ತಿ ಪೋಕ್ಸೋ ಪ್ರಕಾರ ಬಂಧನ

ಕಾಸರಗೋಡು: ಮಸೀದಿಯ ಹಣ ಸಂಗ್ರಹವೆಂದು ತಿಳಿಸಿ ಮನೆಗೆ ತಲುಪಿ 9ರ ಹರೆಯದ ಬಾಲಕಿಯನ್ನು ಬಿಗಿದಪ್ಪಿಕೊಂಡ  ವ್ಯಕ್ತಿಯನ್ನು ನಾಗರಿಕರು  ಸೆರೆಹಿಡಿದು ಶಾಸ್ತಿ ಮಾಡಿದ ಬಳಿಕ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಕೊಡಕ್ಕಾಡ್ ವೆಳ್ಳಚ್ಚೇರಿ ಹೌಸ್‌ನ ಖಾಲಿದ್ ಮುಸ್ಲಿಯಾರ್ (59) ಎಂಬಾತನನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈತನನ್ನು ನೀಲೇಶ್ವರ ಎಸ್‌ಐ ಜಿಷ್ಣು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ. ಕಳೆದ ದಿನ ನೀಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಸೀದಿಯ ಹಣ ಸಂಗ್ರಹಕ್ಕೆಂದು ತಿಳಿಸಿ ಖಾಲಿದ್ ಮುಸ್ಲಿಯಾರ್ ಒಂದು ಮನೆಗೆ ತಲುಪಿದ್ದನು. ಈಸಂದರ್ಭದಲ್ಲಿ ತಾಯಿ ಮನೆಯಲ್ಲಿಲ್ಲವೆಂದೂ, …

ಶಬರಿಮಲೆ: ಹೈಕೋರ್ಟ್‌ಗೆ ಮಧ್ಯಂತರ ತನಿಖಾ ವರದಿ ಸಲ್ಲಿಸಿದ ಎಸ್‌ಐಟಿ

ಕೊಚ್ಚಿ: ಶಬರಿಮಲೆ ದೇಗುಲದಲ್ಲಿ ಚಿನ್ನ ನಾಪತ್ತೆಯಾಗಿರುವುದು ಕಳವೇ ಆಗಿದೆಯೆಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಬೆಳಿಗ್ಗೆ ಹೈಕೋರ್ಟ್‌ಗೆ ಸಲ್ಲಿಸಿದ ತನಿಖೆಯ ಪ್ರಗತಿಯ ಕುರಿತಾದ ಮಧ್ಯಂತರ ವರದಿಯಲ್ಲಿ ತಿಳಿಸಿದೆ. ಪ್ರಸ್ತುತ ಪ್ರಕರಣದ ತನಿಖೆಯ ಪ್ರಗತಿಯ ಕುರಿತಾದ  ವರದಿಯನ್ನು ಹಂತಹಂತವಾಗಿ ಸಲ್ಲಿಸುವಂತೆ ಹೈಕೋ ರ್ಟ್ ತನಿಖಾ ತಂಡಕ್ಕೆ ನಿರ್ದೇಶ ನೀಡಿತ್ತು. ಅದರಂತೆ ಈತನಕ ನಡೆಸ ಲಾದ ತನಿಖೆಯ  ವರದಿಯನ್ನು ಎಸ್‌ಐಟಿ ಇಂದು ಹೈಕೋರ್ಟ್‌ಗೆ ಸಲ್ಲಿಸಿದೆ. ಹೈಕೋರ್ಟ್‌ನ ಮುಚ್ಚಿದ ಕೊಠಡಿಯಲ್ಲಿ ಸಂಬಂಧಪಟ್ಟ ನ್ಯಾಯ ಮೂರ್ತಿಗಳು …

ಲೇಡಿಸ್ ಹಾಸ್ಟೆಲ್‌ಗೆ ನುಗ್ಗಿದ ಯುವಕ ಸೆರೆ

ಕಣ್ಣೂರು: ಲೇಡಿಸ್ ಹಾಸ್ಟೆಲ್‌ಗೆ ಅತಿಕ್ರಮಿಸಿ ನುಗ್ಗಿದ ಯುವಕನನ್ನು ಸೆಕ್ಯೂರಿಟಿ ನೌಕರರು ಕೈಯಾರೆ ಸೆರೆಹಿಡಿದ ಘಟನೆ ನಡೆದಿದೆ. ನಿನ್ನೆ ರಾತ್ರಿ 10 ಗಂಟೆ ವೇಳೆ ತಾವಕ್ಕರದಲ್ಲಿ ಕಾರ್ಯಾಚರಿಸುವ ಮಹಿಳಾ ಹಾಸ್ಟೆಲ್‌ಗೆ ಯುವಕ ಅತಿಕ್ರಮಿಸಿ ನುಗ್ಗಿದ್ದನು. ಕಣ್ಣೂರು ನಗರ ವ್ಯಾಪ್ತಿಯಲ್ಲಿ ವಾಸಿಸುವ ಯುವಕ ಹಾಸ್ಟೆಲ್‌ಗೆ ನುಗ್ಗಿದ್ದು, ಈ ವಿಷಯ ತಿಳಿದು ಹಾಸ್ಟೆಲ್ ನೌಕರರು  ಆತನನ್ನು ಸೆರೆ ಹಿಡಿದಿದ್ದಾರೆ.ಜೀಪೊಂದರಲ್ಲಿ ತಲುಪಿದ ವ್ಯಕ್ತಿ ಹಾಸ್ಟೆಲ್ ಸಮೀಪ ನಿಲ್ಲಿಸಿ ಆವರಣಗೋಡೆ ದಾಟಿ ಹಾಸ್ಟೆಲ್‌ನೊ ಳಗೆ ನುಗ್ಗಿದ್ದಾನೆನ್ನಲಾಗಿದೆ. ಹಾಸ್ಟೆಲ್‌ನಲ್ಲಿದ್ದ  ಕೆಲವು ಹೆಣ್ಮಕ್ಕಳು ಈತನನ್ನು ಕಂಡು ವಾರ್ಡನ್‌ಗೆ …