ಅನಧಿಕೃತ ಪಟಾಕಿ ವಶ

ಉಪ್ಪಳ: ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮಾರಾ ಟಕ್ಕಿರಿಸಿದ್ದ ಪಟಾಕಿಗಳನ್ನು ಮಂ ಜೇಶ್ವರ ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಸಂಬಂಧ ಮಂಜೇಶ್ವರ ಮಿತ್ತಕನಿಲದ ಭರತ್ (36) ವಿರುದ್ಧ ಕೇಸು ದಾಖಲಿಸ ಲಾಗಿದೆ. ನಿನ್ನೆ ಸಂಜೆ ಹೊಸಂ ಗಡಿಯ ಸಾರ್ವಜನಿಕ ಸ್ಥಳದಲ್ಲಿ ಪಟಾಕಿ ಮಾರಾಟ ನಡೆಯುತ್ತಿರು ವುದರ ಬಗ್ಗೆ ಮಾಹಿತಿ ಲಭಿಸಿದ ಎಸ್.ಐ. ಉಮೇಶ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಚೈನೀಸ್ ಪಟಾಕಿ ಸೇರಿ 37 ವಿಧದ ಪಟಾಕಿ ಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೋಳಿ ವ್ಯಾಪಾರಿಯ ಸರ ಅಪಹರಣ: ಕಾಪಾ ಕಾಯ್ದೆ ಉಲ್ಲಂಘಿಸಿದ ಆರೋಪಿ ವಿರುದ್ಧ ಕೇಸು

ಕುಂಬಳೆ: ಕಾಪಾ ಕಾಯ್ದೆ ಉಲ್ಲಂಘಿಸಿ ಜಿಲ್ಲೆಗೆ ಅನಧಿಕೃತವಾಗಿ ತಲುಪಿ  ಸರ ಅಪಹರಣ ನಡೆಸಿದ ವ್ಯಕ್ತಿ ವಿರುದ್ಧ  ಕುಂಬಳೆ ಪೊಲೀಸರು ಇನ್ನೊಂದು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಬಂದ್ಯೋಡು ಅಡ್ಕ ವೀರನಗರದ ಅಬ್ದುಲ್ ಲತೀಫ್ ಯಾನೆ ತೋಕ್ ಲತೀಫ್ (29) ಎಂಬಾತನ ವಿರುದ್ಧ ಕೇಸು ದಾಖಲಿ ಸಲಾಗಿದೆ.   ಬೇರೆ ಪ್ರಕರಣಕ್ಕೆ ಸಂಬಂಧಿಸಿ ಈತನ ವಿರುದ್ಧ ಕಾಪಾ ಪ್ರಕಾರ ಕೇಸು ದಾಖಲಿಸಲಾಗಿತ್ತು. ಇದರಂತೆ 2025 ಜನವರಿ 31 ರಿಂದ  ಒಂದು ವರ್ಷ ಕಾಲ ಜಿಲ್ಲೆಗೆ ಪ್ರವೇಶಿಸುವುದಕ್ಕೆ ಈತನಿಗೆ  ನಿಷೇಧ ಹೇರಲಾಗಿತ್ತು. ಅದನ್ನು …

ತೋಟದ ಕಟ್ಟಡದಲ್ಲಿ ದಾಸ್ತಾನು ಇರಿಸಿದ್ದ 2 ಟನ್ ರಬ್ಬರ್ ಹಾಲು ಕಳವು

ಪೈವಳಿಕೆ: ತೋಟದ ಹಿತ್ತಿಲ ಕಟ್ಟಡದಲ್ಲಿ ದಾಸ್ತಾನಿರಿಸಿದ್ದ ಎರಡು ಟನ್ ರಬ್ಬರ್ ಹಾಲು ಕಳವುಗೈದ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ. ಬಾಯಿಕಟ್ಟೆ ಪೆರಿಯಪ್ಪಾಡಿ ಯಲ್ಲಿ ಶಿಹಾಬ್ ಎಂಬವರು ಗೇಣಿ ರೂಪದಲ್ಲಿ ಪಡೆದು ನಡೆಸುತ್ತಿರುವ ತೋಟದಲ್ಲಿ ದಾಸ್ತಾನು ಇರಿಸಿದ್ದ ಮಾಲನ್ನು ಈ ರೀತಿ ಕಳವುಗೈಯ್ಯಲಾಗಿದೆ. ಈ ತೋಟ ನಡೆಸುತ್ತಿರುವ ಶಿಹಾಬ್ ಅಕ್ಟೋಬರ್ 12ರಂದು ಸಂಜೆ ತಮ್ಮ ಊರಿಗೆ ಹೋಗಿದ್ದರು. ಅ. ೧೮ರಂದು ಅವರು ಹಿಂತಿರುಗಿ ಬಂದಾಗಲಷ್ಟೇ ಕಳವು ನಡೆದ ವಿಷಯ ಅವರಗಮನಕ್ಕೆ ಬಂದಿದೆ. ತೋಟದ ಗೇಟು ಮತ್ತು ಕಟ್ಟಡದ …

ಮರ ಕಡಿಯುವ ವೇಳೆ ಬಿದ್ದು ಕಾರ್ಮಿಕ ಸಾವು

ಕಾಸರಗೋಡು: ರಬ್ಬರ್ ಮರ ಕಡಿಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದು ಕಾರ್ಮಿಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮರ ಕಡಿಯುವ ಕಾರ್ಮಿಕ ವೆಳ್ಳರಿಕುಂಡು ನಾಟುಕ್ಕಲ್ಲಿನ ಪುಲಿಕೋಡನ್ ವಿಜಯನ್ (56) ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ಮಧ್ಯಾಹ್ನ ಅಲ್ಲೇ ಪಕ್ಕದ ರಬ್ಬರ್ ಮರದ ರೆಂಬೆಗಳನ್ನು ಕಡಿಯುತ್ತಿದ್ದ ವೇಳೆ  ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದರು. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿ ತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.  ದಿವಂಗತರಾದ ಕಾಮಲತ್ ಕೃಷ್ಣನ್-ಕಮ್ಮಾಡತ್ತ್ ದಂಪತಿ ಪುತ್ರನಾಗಿರುವ ಮೃತರು ಪತ್ನಿ …

ಕ್ಷೇತ್ರ ಅಂಗಳ ಗುಡಿಸುತ್ತಿದ್ದ ಗೃಹಿಣಿ ಮರದ ರೆಂಬೆ ಬಿದ್ದು ಸಾವು

ಕಲ್ಲಿಕೋಟೆ: ಕ್ಷೇತ್ರ ಅಂಗಳ ಗುಡಿಸುತ್ತಿದ್ದಾಗ ಮರದ ರೆಂಬೆ ಮುರಿದು ತಲೆಗೆ ಬಿದ್ದು ಗೃಹಿಣಿ ಮೃತಪಟ್ಟ ಘಟನೆ ನಡೆದಿದೆ. ಕಲ್ಲಿಕೋಟೆ ಪನ್ನಿಯಂಕರ ನಿವಾಸಿ ಶಾಂತ ಎಂಬವರು ಮೃತ ದುರ್ದೈವಿ. ಮಾಯಂಪಳ್ಳಿ ಶ್ರೀದೇವಿ ಕ್ಷೇತ್ರ ಸಮೀಪ ಇಂದು ಬೆಳಿಗ್ಗೆ ಘಟನೆ ನಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಶಾಂತರನ್ನು ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ.

ಮೀನು ಹಿಡಿಯುತ್ತಿದ್ದ ವೇಳೆ ಹೊಳೆಗೆ ಬಿದ್ದು ನಾಪತ್ತೆಯಾದ ಬೆಸ್ತನ ಮೃತದೇಹ ಪತ್ತೆ

ಕಾಸರಗೋಡು: ಮೀನು ಹಿಡಿಯುತ್ತಿದ್ದ ವೇಳೆ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ಬೆಸ್ತನ ಮೃತದೇಹ ಪತ್ತೆಯಾಗಿದೆ. ತೃಕ್ಕರಿಪುರ ಸಮೀಪದ ವಲಿಯಪರಂಬ ಸೇತುವೆ ಬಳಿ ನಿವಾಸಿ ಎನ್.ವಿ. ತಂಬಾನ್ (63) ನಾಪತ್ತೆಯಾದ ವ್ಯಕ್ತಿ. ಇವರು ಕಳೆದ ಭಾನುವಾರ ಬೆಳಿಗ್ಗೆ ವಲಿಯಪರಂಬ ಸೇತುವೆ ಬಳಿ ಹೊಳೆಯಿಂದ  ಮೀನು ಹಿಡಿಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿ  ಹೊಳೆಗೆ ಬಿದ್ದು ನೀರಿನ ಸೆಳೆತಕ್ಕೊಳಗಾಗಿ ನಾಪತ್ತೆಯಾಗಿದ್ದರು.   ಊರವರು, ಅಗ್ನಿಶಾಮಕದಳ ವ್ಯಾಪಕ ಶೋಧ ನಡೆಸಿದ್ದು ಈ ಮಧ್ಯೆ  ನಿನ್ನೆ ಅಲ್ಲೇ ಸಮೀಪದಲ್ಲಿ ಮೃತದೇಹ ಪತ್ತೆಯಾಗಿದೆ. ಚಂದೇರ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು …

ಪಂಚಾಯತ್ ಚುನಾವಣೆ: ಕುಂಬಳೆಯಲ್ಲಿ ಲೀಗ್‌ಗೆ ಬಹುಮತ ಲಭಿಸಿದರೆ ಅಧ್ಯಕ್ಷ ಯಾರು? ಚರ್ಚೆ ಬಿರುಸು

ಕುಂಬಳೆ: ರಾಜ್ಯದಲ್ಲಿ ಸ್ಥಳೀಯಾ ಡಳಿತ ಚುನಾವಣೆ ಶೀಘ್ರ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ  ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಇದೇ ವೇಳೆ ಕೆಲವು ಪಂಚಾಯತ್‌ಗಳಲ್ಲಿ ತಮ್ಮ ಪಕ್ಷಕ್ಕೆ ಬಹುಮತ ಲಭಿಸಿದರೆ  ಅಧ್ಯಕ್ಷರು ಯಾರಾಗಿರಬಹುದು ಎಂಬ ಲೆಕ್ಕಾಚಾರ ದಲ್ಲೂ ನೇತಾರರು ತೊಡಗಿಕೊಂಡಿ ದ್ದಾರೆ. ಅದೇ ರೀತಿ ಕುಂಬಳೆ ಪಂಚಾ ಯತ್‌ನಲ್ಲೂ ಮುಸ್ಲಿಂ ಲೀಗ್‌ಗೆ, ಯುಡಿಎಫ್‌ಗೆ ಬಹುಮತ ಲಭಿಸಿದರೆ  ಪಂಚಾಯತ್ ಅಧ್ಯಕ್ಷ ಯಾರಾಗಿರ ಬಹುದು  ಎಂದು ಪರಿಶೀಲಿಸುವ ಮೊದಲೇ ಕಾರ್ಯಕರ್ತರು ಈ ಬಗ್ಗೆ  ಪ್ರಶ್ನೆಗಳನ್ನು ಮುಂದಿಡತೊಡಗಿದ್ದಾರೆ. ಎ.ಕೆ ಆರಿಫ್ …

ಆರಿಕ್ಕಾಡಿ ಟೋಲ್ ಬೂತ್‌ನಲ್ಲಿ ವಾಹನ ನಿಯಂತ್ರಣ, ಹಂಪ್ ನಿರ್ಮಾಣ: ನಾಗರಿಕರಿಂದ ಪ್ರತಿಭಟನೆ

ಕುಂಬಳೆ: ಆರಿಕ್ಕಾಡಿ ಟೋಲ್ ಬೂತ್ ನಿರ್ಮಾಣದ ಹೆಸರಲ್ಲಿ ರಸ್ತೆಗೆ ತಡೆಯೊಡ್ಡಿ ಟೋಲ್ ಬೂತ್‌ನ ಎರಡೂ ಭಾಗದಲ್ಲಿ ಹಂಪ್‌ಗಳನ್ನು ಸ್ಥಾಪಿಸಿದ್ದು, ಅದರಿಂದ ಆಂಬುಲೆನ್ಸ್ ಸಹಿತ ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡಿ ರುವುದರಿಂದ ಕ್ರಿಯಾ ಸಮಿತಿ ಪದಾಧಿಕಾರಿಗಳ ನೇತೃತ್ವದಲ್ಲಿ ನಿನ್ನೆ ನಾಗರಿಕರು ರಸ್ತೆ ತಡೆಯಲಿರುವ ಕಾಮಗಾರಿಗೆ ತಡೆಯೊಡ್ಡಿದ್ದಾರೆ.  ವಾಹನ ಸಂಚಾರಕ್ಕೆ ತಡೆಯೊಡ್ಡಲು ಇರಿಸಿದ್ದ ಅಡಚಣೆಗಳನ್ನು ನಾಗರಿಕರು ತೆರವು ಗೊಳಿಸಿದ್ದಾರೆ. ಈ ವೇಳೆ ಗುತ್ತಿಗೆ ಕಂಪೆನಿ ನೌಕರರು ಹಾಗೂ ಚಳವಳಿಗಾರರ ಮಧ್ಯೆ ವಾಗ್ವಾದ ನಡೆಯಿತು. ವಿಷಯ ತಿಳಿದು ತಲುಪಿದ ಪೊಲೀಸರು ಎರಡೂ ತಂಡಗಳನ್ನು …

ಹಿರಿಯ ಯಕ್ಷಗಾನ ಕಲಾವಿದ ನಿಧನ

ಉಪ್ಪಳ: ಜೋಡುಕಲ್ಲು ಕೊರತಿ ಮೂಲೆ ನಿವಾಸಿ, ಹಿರಿಯ ಯಕ್ಷಗಾನ ಕಲಾವಿದ ರಾಮ ಜೋಗಿ (75) ನಿಧನ ಹೊಂದಿದರು. ಮೃತರು ಪತ್ನಿ ವೇದಾ ವತಿ, ಮಕ್ಕಳಾದ ಸತ್ಯಾವತಿ, ಶ್ಯಾಮಲ, ಯಶೋದ, ಸೋಮನಾಥ, ಅಳಿಯಂ ದಿರಾದ ಮೋಹನ, ರವಿ, ವಿನಯ, ಸೊಸೆ ಸುಭಾಷಿಣಿ, ಸಹೋದರ ಸಹೋದರಿಯ ರಾದ ಅನಂತ, ಜಯಂತ, ಸುಂದರಿ, ಕಮಲ, ಲಕ್ಷ್ಮೀ, ದೇವಕಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕ್ಷೇಮ ಪಿಂಚಣಿ 1800 ರೂ.ಗೇರಿಸಲು  ಸಾಧ್ಯತೆ

ತಿರುವನಂತಪುರ: ರಾಜ್ಯದಲ್ಲಿ ಕ್ಷೇಮಪಿಂಚಣಿ ಹೆಚ್ಚಿಸಲು ಚಿಂತಿಸಲಾಗಿದೆ. ೨೦೦ ರೂ. ಹೆಚ್ಚಿಸಲಿರುವ ನಿರ್ದೇಶ ವಿತ್ತಖಾತೆಯ ಪರಿಗಣನೆಯಲ್ಲಿದೆ. 1800 ರೂ.ಗೇರಿಸಲು ಈಗ ಆಲೋಚಿಸಲಾ ಗುತ್ತಿದೆ. ಸ್ಥಳೀಯಾಡಳಿತ ಚುನಾವಣೆಯ ಮುಂಚಿತವಾಗಿ ಈ ತೀರ್ಮಾನ ಉಂಟಾಗಬಹುದೆಂದು ಮಾಹಿತಿಯಿದೆ. ಪ್ರಥಮ ಪಿಣರಾಯಿ ವಿಜಯನ್ ಸರಕಾರದ ಕೊನೆಯ ಹಂತದಲ್ಲಿ 2021ರಲ್ಲಿ  ಅಂತಿಮವಾಗಿ ಪಿಂಚಣಿ ಹೆಚ್ಚಿಸಿ 1600 ರೂ. ಮಾಡಲಾಗಿತ್ತು. ಪಿಂಚಣಿ 2500 ರೂ.ವನ್ನಾಗಿ ಮಾಡುವುದಾಗಿ ಎಡರಂಗ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಆದರೆ 1800 ರೂ. ಎಂಬ ಘೋಷಣೆ ಕೂಡಲೇ ಉಂಟಾಗಲಿದೆ. ರಾಜ್ಯ ತೀವ್ರ ಆರ್ಥಿಕ ಸಂದಿಗ್ಧತೆಯ …