ಜಿರಳೆನಾಶಕ ಚೋಕ್ ಸೇವಿಸಿ ಅಸ್ವಸ್ಥಗೊಂಡ ಬಾಲಕ

ಕಾಸರಗೋಡು: ಜಿರಳೆಗಳನ್ನು ಓಡಿಸಲು ಉಪಯೋಗಿಸುವ ಚೋಕ್ ಸೇವಿಸಿ ಅಸ್ವಸ್ಥಗೊಂಡ ೧೫ರ ಹರೆಯದ ಬಾಲಕನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮುಳಿಯಾರು ಪಂಚಾಯತ್‌ನಲ್ಲಿ ವಾಸಿಸುವ ವಿದ್ಯಾರ್ಥಿ ಅಸ್ವಸ್ಥಗೊಂಡಿದ್ದು, ಈತನನ್ನು ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವಿಷಾಂಶವುಳ್ಳ  ಚೋಕ್  ಬಾಲಕನ ಹೊಟ್ಟೆಗೆ ಹೇಗೆ ತಲುಪಿದೆ ಎಂದು ತಿಳಿದು ಬಂದಿಲ್ಲ. ಈ ಬಗ್ಗೆ ಆದೂರು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮಕ್ಕಳಿಲ್ಲದ ಮನೆಯಲ್ಲಿ 26 ದಿನದ ಮಗು ಪತ್ತೆ: ನಿಗೂಢತೆ ವ್ಯಕ್ತಪಡಿಸಿದ ನಾಗರಿಕರು; ಪೊಲೀಸ್ ತನಿಖೆ ಆರಂಭ

ಕಾಸರಗೋಡು: ಮಕ್ಕಳಿಲ್ಲದ ಮನೆಯಲ್ಲಿ ೨೬ ದಿನ ಪ್ರಾಯದ ಮಗು ಕಂಡುಬಂದಿರುವುದು ನಾಗರಿಕರಲ್ಲಿ ಆಶ್ಚರ್ಯ ಮೂಡಿಸಿದೆ. ಈ ವಿಷಯ ನಾಡಿನಾದ್ಯಂತ ಸುದ್ಧಿಯಾಗುವುದರೊಂದಿಗೆ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಮಗುವಿನ ಸ್ವಂತ ತಾಯಿ ಹಾಗೂ ಸಾಕುತಾಯಿಯನ್ನು ಪೊಲೀಸರು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದ ಬಳಿಕ ಮಗುವನ್ನು ಸ್ವಂತ ತಾಯಿಗೆ ನೀಡಿ ಕಳುಹಿಸಿರುವುದಾಗಿ ತಿಳಿದು ಬಂದಿದೆ. ಮಗುವನ್ನು ಮಾರಾಟಗೈಯ್ಯಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಗುವನ್ನು ಮಾರಾಟಗೈದ ಹಾಗೂ ಖರೀದಿಸಿದ ಬಗ್ಗೆ ಯಾವುದೇ ದೂರುಗಳು ಲಭಿಸಿಲ್ಲ. ಅಲ್ಲದೆ ಈ ವಿಷಯದಲ್ಲಿ ದೂರು …

116 ಕಿಲೋ ಗಾಂಜಾ ವಶ ಪ್ರಕರಣ: ಮುಖ್ಯ ಆರೋಪಿ ಎಂದು ಸಂಶಯಿಸುವ ವ್ಯಕ್ತಿ ಪೊಲೀಸ್ ಬಲೆಯಲ್ಲಿ

ಮಂಜೇಶ್ವರ: ವರ್ಕಾಡಿ ಕೊಡ್ಲಮೊಗರು ಬಳಿಯ ಸುಳ್ಯಮೆಯಿಂದ 116 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಮುಖ್ಯ ಆರೋಪಿಯೆಂದು ಸಂಶಯಿಸುವ ವ್ಯಕ್ತಿ ಪೊಲೀಸ್ ಬಲೆಯಲ್ಲಿದ್ದಾನೆ. ಈತನನ್ನು ಪೊಲೀಸರು ಸಮಗ್ರ ತನಿಖೆಗೊಳಪಡಿಸುತ್ತಿರುವುದಾಗಿ ಮಾಹಿತಿ ಲಭಿಸಿದೆ. ಅಕ್ಟೋಬರ್ ೮ರಂದು ರಾತ್ರಿ 12.30ರ ವೇಳೆ ಶೆಡ್‌ವೊಂದರಲ್ಲಿ ಬಚ್ಚಿಟ್ಟಿದ್ದ ಗಾಂಜಾ ಪತ್ತೆಯಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಗೆ ಲಭಿಸಿದ ಗುಪ್ತ ಮಾಹಿತಿಯ ಆಧಾರದಲ್ಲಿ ಮಂಜೇಶ್ವರ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಗಾಂಜಾ ಪತ್ತೆಯಾಗಿತ್ತು. ಶೆಡ್‌ನಲ್ಲಿ ನಾಲ್ಕು ಗೋಣಿ ಚೀಲಗಳಲ್ಲಾಗಿ ಗಾಂಜಾ ತುಂಬಿಸಿಡಲಾಗಿತ್ತು. …

ಕರ್ನಾಟಕದ ಕುವೆಂಪು ಕರಾವಳಿಗೆ ಪುವೆಂಪು: ಸಾಹಿತ್ಯ, ಸಂಶೋಧನೆಯಲ್ಲಿ ಪುಣಿಂಚಿತ್ತಾಯರ ಕೊಡುಗೆ ಅನರ್ಘ್ಯ-ಬಸವರಾಜ ಎಸ್. ಹೊರಟ್ಟಿ

ಮಂಜೇಶ್ವರ: ಸಮಗ್ರ ಕರ್ನಾ ಟಕಕ್ಕೊಬ್ಬ ಕುವೆಂಪು ಇದ್ದಂತೆ, ಕರಾವಳಿ ಕರ್ನಾಟಕದಲ್ಲಿ ಪುವೆಂಪು. ಅವರು ಸಾಹಿತ್ಯ, ಸಂಶೋಧನೆ, ಭಾಷಾಂತರ ಮೊದಲಾದ ವಿವಿಧ ವಲಯಗಳಲ್ಲಿ ನೀಡಿರುವ ಅನರ್ಘ್ಯ ಕೊಡುಗೆಗಳು ಅಪಾರವಾದುದು. ಅವರ ಸಾಹಿತ್ಯ ಮೌಲ್ಯಯುತವಾಗಿ ಚತುರ್ಭಾಷಾ ವಲಯದ ವಿಶಿಷ್ಟ ಧ್ರುವನಕ್ಷತ್ರ ಪುಂಡೂರು ವೆಂಕಟ ರಾಜ ಪುಣಿಂಚಿತ್ತಾಯರೆAದು ಕರ್ನಾಟಕ ವಿಧಾನಪರಿಷತ್ತು ಸಭಾಪತಿ ಬಸವರಾಜ ಎಸ್.ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.ಕರ್ನಾಟಕ ಗಡಿ ಪ್ರದೇಶಾ ಭಿವೃದ್ಧಿ ಪ್ರಾಧಿಕಾರ, ಡಾ.ಪುಂಡೂರು ವೆಂಕಟ ರಾಜ ಪುಣಿಂಚಿತ್ತಾಯ (ಪುವೆಂಪು) ಪ್ರತಿಷ್ಠಾನ ಕಾಸರಗೋಡು, ಕೇರಳ ತುಳು ಅಕಾಡೆಮಿ ಮಂಜೇಶ್ವರ ಇವುಗಳ ಸಂಯುಕ್ತ …

ಲಾರಿ ಢಿಕ್ಕಿ ಹೊಡೆದು ಗಾಯಗೊಂಡ ಸ್ಕೂಟರ್ ಸವಾರ ಮೃತ್ಯು

ಕಾಸರಗೋಡು: ಸರಕು ಲಾರಿ ಢಿಕ್ಕಿ ಹೊಡೆದು ಗಾಯಗೊಂಡಿದ್ದ ಸ್ಕೂಟರ್ ಪ್ರಯಾಣಿಕ ಮೃತಪಟ್ಟರು.  ಚೆಂಬರಿಕ ತುರುತ್ತಿ ನಿವಾಸಿ ಟಿ.ಎಂ. ಅಬ್ದುಲ್ ರಹ್ಮಾನ್ (62) ಮೃತಪಟ್ಟ ವ್ಯಕ್ತಿ. ಮಂಗಳವಾರ ಮಧ್ಯಾಹ್ನ ಮೇಲ್ಪರಂಬ ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸಿತ್ತು. ಟಿ.ಎಂ. ಅಬ್ದುಲ್ ರಹ್ಮಾನ್ ಚಲಾಯಿಸಿದ ಸ್ಕೂಟರ್‌ಗೆ ಕಾಸರಗೋಡಿಗೆ ತೆರಳುತ್ತಿದ್ದ ಲಾರಿ ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಸಂಜೆ ನಿಧನ ಸಂಭವಿಸಿದೆ. ಮದ್ರಸಾ ಅಧ್ಯಾಪಕನಾಗಿಯೂ, ಕಾಸರಗೋಡು ಖಾಸಗಿ ಆಸ್ಪತ್ರೆಯ ಪಿಆರ್‌ಒ ಆಗಿಯೂ ಇವರು ಕೆಲಸ ನಿರ್ವಹಿಸಿದ್ದರು. ಮುಸ್ಲಿಂ …

ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ಮೇಳ ಸಮಾರೋಪ

ವರ್ಕಾಡಿ: ಮಂಜೇಶ್ವರ ಉಪ ಜಿಲ್ಲಾ ವಿಜ್ಞಾನ ಮೇಳದ ಸಮಾರೋಪ ಸಮಾರಂಭ ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು. ಕಾಸರಗೋಡು ಜಿಲ್ಲಾ ಪಂ ಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿ ಮಾತನಾಡಿದರು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ್ಷೆ ಸಮೀನಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು.ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಮೊಹಮ್ಮದ್ ಹನೀಫ್ ಪಿ ಕೆ, ಬ್ಲಾಕ್ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್, ಬ್ಲಾಕ್ ಪಂಚಾಯತ್ ಸದಸ್ಯ ರಾಧಾಕೃಷ್ಣ ಕೆ ವಿ, ಡಾಕ್ಟರ್ ಮುರಳಿ ಪಿ ಎಸ್, …

ಹಿರಿಯ ಕೃಶಿಕ ನಿಧನ

ಮುಳ್ಳೇರಿಯ: ಕಿನ್ನಿಂಗಾರು ಬಳಿಯ ಬೆಳೇರಿ ನಿವಾಸಿ ಹಿರಿಯ ಕೃಷಿಕ ಕೃಷ್ಣ ಮಣಿಯಾಣಿ (87) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನ ಹೊಂದಿದರು.  ಮೃತರು ಪತ್ನಿ ಬೆಳ್ತಮ್ಮ, ಮಕ್ಕಳಾದ ಯಶೋಧ, ಲೀಲಾವತಿ, ಪದ್ಮಾವತಿ, ಶೀಲಾವತಿ, ಉಮಾಶ್ರೀ, ನಿವೃತ್ತ ಅಧ್ಯಾಪಕ ಕುಂಞಿರಾಮ ಮಾಸ್ತರ್,  ಅಳಿಯಂದಿರಾದ ಚಂದ್ರ, ಮಾಲಿಂಗ, ವೇಣು, ಸೊಸೆ ಶ್ರೀಲತಾ ಟೀಚರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನಿಬ್ಬರು ಅಳಿಯಂದಿರಾದ ಕುಂಞಿರಾಮ, ಮಾಲಿಂಗ ಎಂಬಿವರು ಈ ಹಿಂದೆ ನಿಧನ ಹೊಂದಿದ್ದಾರೆ.

ಅಟ್ಟೆಗೋಳಿ ಯೂತ್ ಕ್ಲಬ್ ಗ್ರಂಥಾಲಯ, ವಾಚನಾಲಯ ನೂತನ ಪದಾಧಿಕಾರಿಗಳ ಆಯ್ಕೆ

ಪೈವಳಿಕೆ: ಕಯ್ಯಾರು ಗ್ರಾಮದ ಅಟ್ಟೆಗೋಳಿ ಯೂತ್ ಕ್ಲಬ್  ಗ್ರಂಥಾಲಯ ಹಾಗೂ ವಾಚನಾಲಯ ಆಡಳಿತ ಸಮಿತಿಯನ್ನು ಕೇರಳ ರಾಜ್ಯ ಲೈಬ್ರೆರಿ ಕೌನ್ಸಿಲ್‌ನ ನಿರ್ದೇಶದ ಪ್ರಕಾರ ಮೂರು ವರ್ಷದ ಕಾಲಾವಧಿಗೆ ರೂಪೀಕರಿಸಲಾಗಿದೆ. ಈ ಸಂಬಂಧ ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಅಧ್ಯಕ್ಷರಾಗಿ ಕುಶಲ, ಉಪಾಧ್ಯಕ್ಷರಾಗಿ ಮೊಹಮ್ಮದ್ ಬಶೀರ್ ಮಾಸ್ತರ್, ಕಾರ್ಯದರ್ಶಿಯಾಗಿ ಉಮೇಶ ಎ, ಜತೆ ಕಾರ್ಯದರ್ಶಿಯಾಗಿ ರಮೇಶ್ ಎ.ಎಸ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಹಮ್ಮದ್ ಹುಸೈನ್ ಮಾಸ್ತರ್, ಪ್ರೊಫೆಸರ್ ಪಿ.ಎನ್. ಮೂಡಿತ್ತಾಯ, ಅಬ್ದುಲ್ ಗಫೂರ್, ಸಂಧ್ಯಾ, ಮೊಹಮ್ಮದ್ ಪೊಡಿಮೋನು, ಲಿನೆಟಾ ಕ್ರಾಸ್ತ, …

ಜೋಯಿಂಟ್ ಕೌನ್ಸಿಲ್ ಜಿಲ್ಲಾ ಮಹಿಳಾ ಸಮಿತಿಯಿಂದ ಕಲೆಕ್ಟ್ರೇಟ್ ಮಾರ್ಚ್

ಕಾಸರಗೋಡು: ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯ ತಡೆಗಟ್ಟಬೇಕು, ಮೂಢನಂಬಿಕೆ ಮರೆಯಲ್ಲಿ  ಮಹಿಳೆಯರ ವಿರುದ್ಧ ಚಟುವಟಿಕೆಯನ್ನು ತಡೆಯಬೇಕು ಮೊದಲಾದ ಬೇಡಿಕೆ ಮುಂದಿರಿಸಿ ಜೋಯಿಂಟ್ ಕೌನ್ಸಿಲ್ ಜಿಲ್ಲಾ ಮಹಿಳಾ ಸಮಿತಿ ಕಲೆಕ್ಟ್ರೇಟ್‌ಗೆ ಮಾರ್ಚ್ ನಡೆಸಿತು. ಮಾರ್ಚ್‌ಗೆ ಜೋಯಿಂಟ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ನರೇಶ್ ಕುಮಾರ್ ಕುನ್ನಿಯೂರ್ ಧ್ವಜ ಹಾರಿಸಿ ಚಾಲನೆ ನೀಡಿದರು. ಮಹಿಳಾ ಸಂಘದ ಜಿಲ್ಲಾ ಕಾರ್ಯದರ್ಶಿ ಪಿ. ಭಾರ್ಗವಿ ಉದ್ಘಾಟಿಸಿದರು. ಮಹಿಳಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಕೆ. ಪ್ರೀತ, ರಾಜ್ಯ ಸಮಿತಿ ಸದಸ್ಯೆ ಯಮುನಾ ರಾಘವನ್, ಜಿಲ್ಲಾ ಕಾರ್ಯದರ್ಶಿ  …

ಕಾಡ ಮಲ್ಲಿಗೆ ಪರಿಮಳದ ಖ್ಯಾತ ಭಾಗವತ ದಿನೇಶ್ ಅಮ್ಮಣ್ಣಾಯ ಇನ್ನಿಲ್ಲ

ಮ೦ಗಳೂರು: ಯಕ್ಷಗಾನ ಹಿರಿಯ ಭಾಗವತ ಗಾನ ಕೋಗಿಲೆ ದಿನೇಶ್ ಅಮ್ಮಣ್ಣಾಯ (೬೫) ಬೆಳ್ತಂಗಡಿಯ ಅರಸಿನಮಕ್ಕಿಯ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ ತೆಂಕುತಿಟ್ಟು ಯಕ್ಷಗಾನ ಪರಂಪರೆಯ ಹಿರಿಯ ಭಾಗವತರಾಗಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕಲಾ ಸೇವೆ ಸಲ್ಲಿಸಿದ್ದ ಅಮ್ಮಣ್ಣಾಯ ‘ರಸರಾಗ ಚಕ್ರರ‍್ತಿ’ ಎಂಬ ಬಿರುದು ಹೊ೦ದಿದ್ದರು. ದಾಮೋದರ ಮಂಡೆಚ್ಚರ ಗರಡಿಯಲ್ಲಿ ಆರಂಭದಲ್ಲಿ ಪುತ್ತೂರು ಮೇಳದಲ್ಲಿ ಚ೦ಡೆ ಮತ್ತು ಮದ್ದಳೆ ವಾದಕರಾಗಿ ಯಕ್ಷಗಾನ ಲೋಕಕ್ಕೆ ಕಾಲಿಟ್ಟ ಇವರು ನಂತರ ಭಾಗವತಿಕೆಯತ್ತ ಆಸಕ್ತಿ ಬೆಳೆಸಿ ಪ್ರಖ್ಯಾತ ಭಾಗವತರಾಗಿ ಹೊರಹೊಮ್ಮಿದರು.ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರಾದ, …