ಮುಂದಿನ ವರ್ಷದಿಂದ ಎಐ ಶಾಲಾ ಪಠ್ಯ ವಿಷಯ

ತಿರುವನಂತಪುರ: ಕೃತಕತ ಬುದ್ಧಿ ಮತ್ತೆಯನ್ನು ಮುಂದಿನ ವರ್ಷದಿಂದ ಶಾಲೆಗಳಲ್ಲಿ ಒಂದು ಪಠ್ಯ ವಿಷಯವನ್ನಾ ಗಿಸಲು ಕೇಂದ್ರ ಶಿಕ್ಷಣ ಸಚಿವಾಲಯ ತೀರ್ಮಾನಿಸಿದೆ. ಇದರಂತೆ ೩ನೇ ತರಗತಿಯಿಂದ ಎಐಯನ್ನು ಒಂದು ಪಠ್ಯ ವಿಷಯ ವನ್ನಾಗಿಸುವ ಅಗತದ ತಯಾರಿಯಲ್ಲಿ ಕೇಂದ್ರ ಸರಕಾರ ತೊಡಗಿದೆ. ಪರೀಕ್ಷಣಾರ್ಥವಾಗಿ ತರಗತಿಗಳಲ್ಲಿ ಪಠ್ಯ ವಿಷಯಗಳನ್ನು ಮಂಡಿಸುವ  ನೋಟ್ ಪುಸ್ತಕಗಳನ್ನು ಎಐ ಟೂಲ್‌ಗಳ ಸಹಾಯದೊಂದಿಗೆ ತಯಾರಿಸುವ ಕ್ರಮವನ್ನು ಆರಂಭಿಸ ಲಾಗಿದೆ. ಇದನ್ನು ಅಧ್ಯಾಪಕರಿಗೆ ಲಭಿಸುವಂತೆ ಮಾಡುವ ಕ್ರಮ ಕೈಗೊಳ್ಳಲಾಗುತ್ತಿದೆ. ಜ್ಯಾರಿಯಲ್ಲಿ ಹೆಚ್ಚು ಕಡಿಮೆ 18,000 ಸಿಬಿಎಸ್‌ಇ ಶಾಲೆಗಳಲ್ಲಿ ಹೆಚ್ಚುವರಿ …

ಸ್ಥಳೀಯಾಡಳಿತ ಚುನಾವಣೆ: ಜಿಲ್ಲೆಯ ಗ್ರಾಮ ಪಂಚಾಯತ್‌ಗಳ ವಾರ್ಡ್ ಮೀಸಲಾತಿ ಪ್ರಕ್ರಿಯೆ ಪೂರ್ಣ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಗೆ ಸಂಬAಧಿಸಿ ಗ್ರಾಮ ಪಂಚಾಯತ್ಗಳ ಮೀಸಲಾತಿ ವಾರ್ಡ್ ವಿಭಜನೆ ಪ್ರಕ್ರಿಯೆ ನಿನ್ನೆ ಪೂರ್ಣಗೊಂಡಿದೆ. ಜಿಲ್ಲಾಧಿಕಾರಿ ಕೆ. ಇಂಭಶೇಖರ್ರ ನೇತೃತ್ವದಲ್ಲಿ ಇದನ್ನು ಪೂರ್ತೀಕರಿಸ ಲಾಯಿತು. ನಿನ್ನೆ ಕಾಸರಗೋಡು, ನೀಲೇಶ್ವರ ಮತ್ತು ಪರಪ್ಪ ಬ್ಲೋಕ್ಗಳ ಗ್ರಾಮ ಪಂಚಾಯತ್ ಮೀಸಲಾತಿ ವಾರ್ಡ್ಗಳನ್ನು ಡ್ರಾ ಮೂಲಕ ಪೂರ್ಣಗೊಳಿಸಲಾಯಿತು. ಸ್ಥಳೀಯಾ ಡಳಿತ ಇಲಾಖೆಯ ಜಂಟಿ ನಿರ್ದೇಶಕ ಆರ್. ಶೈನಿ, ಉಪ ನಿರ್ದೇಶಕ ಕೆ.ವಿ. ಹರಿದಾಸ್, ಇಲೆಕ್ಟ್ರಲ್ ಉಪ ಜಿಲ್ಲಾ ಧಿಕಾರಿ ಎ.ಎನ್. ಗೋಪಕುಮಾರ್, ಡಿ.ಎಲ್.ಆರ್.ಜಿ ಗಳಾದ ಎನ್.ಕೆ. ಸುಬೈರ್, …

ನಿವೃತ್ತ ಮುಖ್ಯೋಪಾಧ್ಯಾಯ ನಿಧನ

ಮುಳ್ಳೇರಿಯ: ಬೆಳ್ಳೂರು ಕಿನ್ನಿಂಗಾರು ಸಮೀಪದ ಚಿಪ್ಲುಕೋಟೆ ನಿವಾಸಿ, ನಿವೃತ್ತ ಮುಖ್ಯೋಪಾಧ್ಯಾಯ ಸಿ.ಎಚ್. ಸಂಜೀವ (75) ನಿಧನ ಹೊಂದಿದರು.  ವಾಣಿನಗರ ಕಲ್ಲಪಳ್ಳಿ, ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅಧ್ಯಾಪಕರಾಗಿದ್ದು ಕಜಂಪಾಡಿ ಶಾಲೆಯಲ್ಲಿ ಮುಖ್ಯೋಪಾ ಧ್ಯಾಯರಾಗಿ ನಿವೃತ್ತರಾಗಿದ್ದರು. ಮೃತರು ಪತ್ನಿ ಹೇಮಲತಾ, ಮಕ್ಕಳಾದ  ನಂದಶ್ರೀ, ನವ್ಯಶ್ರೀ, ನವೀನ, ಸೊಸೆ ಕೀರ್ತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಉಪ್ಪಳ ಮೀನು ಮಾರುಕಟ್ಟೆ ರಸ್ತೆ ದುರಸ್ತಿಗೊಳಿಸಿ ಸಂಚಾರಕ್ಕೆ ತೆರೆದುಕೊಡಲು ಒತ್ತಾಯ

ಉಪ್ಪಳ: ಉಪ್ಪಳ ಬಸ್ ನಿಲ್ದಾಣ ಸಮೀಪದ ಸರ್ವೀಸ್ ರಸ್ತೆಗೆ ಸಂಪರ್ಕವಿರುವ ಉಪ್ಪಳ ಮೀನು ಮಾರುಕಟ್ಟೆಗೆ ಪ್ರವೇಶಿಸುವ ರಸ್ತೆಯನ್ನು  ದುರಸ್ತಿಗೊಳಿಸಿ ಸಂಚಾರಕ್ಕೆ ತೆರೆದುಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ವರ್ಷಗಳ ಹಿಂದೆ  ಉಪ್ಪಳ ಪೇಟೆಯಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ವೇಳೆ ಸರ್ವೀಸ್ ರಸ್ತೆಗೆ ತಾಗಿಕೊಂಡಿರುವ ಮೀನು ಮಾರುಕಟ್ಟೆ ಪ್ರವೇಶಿಸುವ ಪ್ರಧಾನ ರಸ್ತೆಯನ್ನು ಮುಚ್ಚಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡರೂ ಇನ್ನೂ ರಸ್ತೆಯನ್ನು ಸಂಚಾರಕ್ಕೆ ತೆರೆದುಕೊಡದ ಹಿನ್ನೆಲೆಯಲ್ಲಿ ಮೀನು ಮಾರುಕಟ್ಟೆಗೆ  ತೆರಳುವ ಜನರು ಬಸ್ ನಿಲ್ದಾಣದೊಳಗಿನಿಂದ  ಹಾಗೂ ಪತ್ಪಾಡಿ ರಸ್ತೆ ಮೂಲಕ ಸುತ್ತುವರಿದು ಸಂಚರಿಸಬೇಕಾಗಿದೆ. …

ಕುಂಬಳೆಯಲ್ಲಿ ಬಿಎಂಎಸ್ ಜಿಲ್ಲಾ ಕಾಲ್ನಡೆ ಜಾಥಾ

ಕುಂಬಳೆ: ಭಾರತೀಯ ಮಜ್ದೂರ್ ಸಂಘ ಕುಂಬಳೆ ಪಂಚಾಯತ್ ಸಮಿತಿ ಆಶ್ರಯದಲ್ಲಿ ಕೇರಳ ಸರಕಾರದ ಕಾರ್ಮಿಕ ವಿರೋಧಿ ನೀತಿಗೆದುರಾಗಿ ಕಾಲ್ನಡೆ ಜಾಥಾ ಹಮ್ಮಿಕೊಳ್ಳಲಾಯಿತು. ಬಂಬ್ರಾಣ ಚೂರಿತ್ತಡ್ಕದಿಂದ ಆರಂಭಗೊಡ ಜಾಥಾವನ್ನು  ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಉದ್ಘಾಟಿಸಿದರು. ನಂತರ ಕುಂಬಳೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಉದ್ಘಾಟಿಸಿದರು. ಜಾಥಾ ಕ್ಯಾಪ್ಟನ್ ಗಣೇಶ್ ಮುಳಿಗದ್ದೆ ನೇತೃತ್ವ ನೀಡಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಯಶವಂತಿ ಬೆಜ್ಜ, ವಲಯ ಪದಾಧಿಕಾರಿಗಳಾದ ಐತ್ತಪ್ಪ ನಾರಾಯಣಮಂಗಲ, ಶಿವಾನಂದ ರಾವ್, …

ಅಂಗಡಿಮೊಗರು ಸೇವಾ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆ

ಅಂಗಡಿಮೊಗರು: ಅಂಗಡಿ ಮೊಗರು ಸೇವಾ ಸಹಕಾರಿ ಬ್ಯಾಂಕಿನ 2024-25 ವರ್ಷದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಬ್ಯಾಂಕ್ ಬ್ಯಾಂಕ್ ಪರಿಸರ ದಲ್ಲಿ ಜರಗಿತು. ಬ್ಯಾಂಕ್ ನ ಅಧ್ಯಕ್ಷ ರಾಮ್ ಭಟ್ ಅಧ್ಯಕ್ಷತೆ ವಹಿಸಿ, ಬ್ಯಾಂಕ್ ಅಭಿವೃದ್ಧಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು. ಸದಸ್ಯರಾದ ಸುಬ್ಬಣ್ಣ ಆಳ್ವ, ಬಶೀರ್ ಕೊಟ್ಟುಡಲ್, ಪಾಲಾಕ್ಷ ರೈ, ಪ್ರೇಮ, ಸಂಜೀವ ರೈ,ಪದ್ಮನಾಭ ಭಂಡಾರಿ, ಕೊರಗಪ್ಪ, ಅಬ್ದುಲ್ಲ ಕಂಡತ್ತಿಲ್ ಚರ್ಚೆಯಲ್ಲಿ ಭಾಗವಹಿಸಿದರು. ಬ್ಯಾಂಕ್ ನಿರ್ದೇಶಕ ಪಿ.ಬಿ. ಮಹಮ್ಮದ್ ಸ್ವಾಗತಿಸಿ, ಕಾರ್ಯದರ್ಶಿ ವಿಠಲ್ ರೈ ವರದಿ …

ಪಾಲಕ್ಕಾಡ್ ಕಲ್ಲಿಕೋಡ್‌ನಲ್ಲಿ ನೆರೆಮನೆ ನಿವಾಸಿಗಳಾದ ಇಬ್ಬರು ಯುವಕರು ಗುಂಡು ತಗಲಿ ಮೃತ್ಯು

ಪಾಲಕ್ಕಾಡ್: ಕಲ್ಲಿಕೋಡ್ ನೆರೆಮನೆ ನಿವಾಸಿಗಳಾದ ಇಬ್ಬರು ಯುವಕರು ಗುಂಡು ತಗಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಮುನ್ನೆಕಾರ್ ಮರುದಂಕಾಡ್ ನಿವಾಸಿ ಬಿನು, ನಿತಿನ್ ಎಂಬಿವರು ಮೃತಪಟ್ಟರು. ನಿನ್ನೆ ಸಂಜೆ 3 ಗಂಟೆಗೆ ಘಟನೆ ನಡೆದಿದೆ. ಮರುದಂಕಾಡ್ ಸರಕಾರಿ ಶಾಲೆ ಸಮೀಪದ ರಸ್ತೆಯಲ್ಲಿ ಇವರಿಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಿನುವಿನ ಮೃತದೇಹದ ಸಮೀಪದಲ್ಲಿ ನಿತಿನ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಲ್ಲಿಂದ ನಾಡಕೋವಿಯೊಂದನ್ನು ಪತ್ತೆಹಚ್ಚಲಾಗಿದೆ. ನಿತಿನ್‌ನನ್ನು ಕೊಲೆಗೈದ ಬಳಿಕ ಬಿನು ಸ್ವಯಂ ಗುಂಡು ಹಾರಿಸಿ ಮೃತಪಟ್ಟಿರಬೇಕೆಂದು ಸೂಚನೆ ಲಭಿಸಿದೆ. ಪೊಲೀಸರು ಸ್ಥಳಕ್ಕೆ …

ಎಕೆಪಿಎ ಕುಂಬಳೆ ವಲಯ ಸಮ್ಮೇಳನ : ಸಾಧಕ ಛಾಯಾಗ್ರಾಹಕರಿಗೆ ಸನ್ಮಾನ

ಬದಿಯಡ್ಕ: ಆಲ್ ಕೇರಳ ಫೋ ಟೋಗ್ರಾರ‍್ಸ್ ಅಸೋಸಿ ಯೇಶನ್ ಕುಂಬಳೆ ವಲಯ ಸಮ್ಮೇಳನ ಸೂರಂಬೈಲು ಕೋಓಪರೇಟಿವ್ ಬ್ಯಾಂಕ್‌ನ ಸಮನ್ವಯ ಸಭಾಂಗಣದ `ಚಿದಾನಂದ ನಗರಿ’ಯಲ್ಲಿ ನಿನ್ನೆ ಜರಗಿತು. ಎಕೆಪಿಎ ಜಿಲ್ಲಾ ಕಾರ್ಯ ದರ್ಶಿ ಹರೀಶ್ ಪಾಲಕುನ್ನು ಉದ್ಘಾಟಿ ಸಿದರು.ಎಕೆಪಿಎ ಕುಂಬಳೆ ವಲಯ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಸುಗುಣನ್ ಇರಿಯ, ಕಾರ್ಯದರ್ಶಿ ರಾಜೆಂದ್ರನ್, ಕೋಶಾದಿsಕಾರಿ ಪ್ರಜಿತ್ ಕಾಞಂ ಗಾಡು, ಉಪಾಧ್ಯಕ್ಷ ವೇಣು ವಿ.ವಿ., ಜಿಲ್ಲಾ ವೆಲ್‌ಫೇರ್ ಸಮಿತಿ ಸಂಚಾಲಕ ವಿಜಯನ್, ಜಿಲ್ಲಾಸಮಿತಿ ಸದಸ್ಯ ನಿತ್ಯಪ್ರಸಾದ್ …

ವಿ.ಹಿಂ.ಪ. ಬದಿಯಡ್ಕ ಪ್ರಖಂಡ ಗೋಪೂಜೆ 20ರಂದು: ಆಮಂತ್ರಣ ಪತ್ರಿಕೆ ಬಿಡುಗಡೆ

ಬದಿಯಡ್ಕ:- ವಿಶ್ವ ಹಿಂದು ಪರಿಷತ್ ಬದಿಯಡ್ಕ ಪ್ರಖಂಡ ವತಿಯಿಂದ ಅಕ್ಟೋಬರ್ 20 ರಂದು ನಡೆಯುವ ಗೋ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಗಣೇಶ ಮಂದಿರದಲ್ಲಿ ಪ್ರಖಂಡ ಅಧ್ಯಕ್ಷ ಸುನೀಲ್ ಕಿನ್ನಿಮಾಣಿ ಅವರ ಅಧ್ಯಕ್ಷತೆಯಲ್ಲಿ ಜರಗಿತು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ಹರಿಪ್ರಸಾದ್ ರೈ ಪುತ್ರಕಳ ಪತ್ರಿಕೆ ಬಿಡುಗಡೆ ಗೊಳಿಸಿದರು. ಉತ್ಸವ ಸಮಿತಿ ಉಪಾಧ್ಯಕ್ಷ ತನಿಯಪ್ಪ ಬದಿಯಡ್ಕ, ನಗರಾಧ್ಯಕ್ಷ ಶರತ್ ಶೆಟ್ಟಿ, ಪಂಚಾಯತ್ ಸಮಿತಿ ಅಧ್ಯಕ್ಷ ನಾರಾಯಣ.ಪಿ ಪೆರಡಾಲ, ಉಪಾಧ್ಯಕ್ಷ ಇಂದುಶೇಖರ ವಾಂತಿಚಾಲ್, ಹರಿರಾಮ, ಶಿವಪ್ರಸಾದ್, ಭಜರಂಗದಳ ಬದಿಯಡ್ಕ …

ತುಳು ಅಕಾಡೆಮಿ ಸಭಾಂಗಣದಲ್ಲಿ ಪುವೆಂಪು ನೆನಪು ಉದ್ಘಾಟನೆ

ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ, ಡಾ.ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (ಪುವೆಂಪು) ಪ್ರತಿಷ್ಠಾನ ಕಾಸರಗೋಡು ಹಾಗೂ ಕೇರಳ ತುಳು ಅಕಾಡೆಮಿ ಮಂಜೇಶ್ವರ, ಕೇರಳ ಸರ ಕಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ತುಳುರತ್ನ, ಬಹುಭಾಷಾ ವಿದ್ವಾಂಸ ಡಾ. ಪಿ.ವೆಂಕಟರಾಜ ಪುಣಿಂಚಿತ್ತಾಯರ ‘ಪುವೆಂಪು ನೆನಪು-2025’ ಕಾರ್ಯ ಕ್ರಮ ಇಂದು ಬೆಳಿಗ್ಗೆ ಹೊಸಂಗಡಿ ಸಮೀಪದ ದುರ್ಗಿ ಪಳ್ಳದಲ್ಲಿರುವ ಕೇರಳ ತುಳು ಅಕಾಡೆಮಿ ಸಭಭಾಂಗಣದಲ್ಲಿ ಉದ್ಘಾಟನೆಗೊಂಡಿತು. ಭಾವ ಗಾಯನ, ನೃತ್ಯ ವೈಭವ, ಪ್ರಶಸ್ತಿ ವಿತರಣೆ ಸಮಾರಂಭ ನಡೆಯಿತು. ಎಡನೀರು …