ಬಿಜೆಪಿ ಕಚೇರಿಗೆ ಕಟ್ಟಡ ನೀಡಿದ ಮಹಿಳೆಯ ಮನೆಗೆ ಬಾಂಬೆಸೆತ
ಕಣ್ಣೂರು: ಬಿಜೆಪಿ ಕಚೇರಿಗಾಗಿ ಬಾಡಿಗೆಗೆ ಕಟ್ಟಡ ನೀಡಿದ ಮಹಿಳೆಯ ಮನೆಗೆ ದುಷ್ಕರ್ಮಿಗಳು ಬಾಂಬೆಸೆದ ಘಟನೆ ಕಣ್ಣೂರು ಸಮೀಪದ ಪೆರಳಶ್ಶೇರಿಯಲ್ಲಿ ನಡೆದಿದೆ. ಪೆರಳಶ್ಶೇರಿ ಪಳ್ಯ ಎಂಬಲ್ಲಿನ ಶ್ಯಾಮಲ ಎಂಬವರ ಮನೆಗೆ ನಿನ್ನೆ ರಾತ್ರಿ ಸುಮಾರು 10.30ರ ವೇಳೆ ದುಷ್ಕರ್ಮಿಗಳು ಬಾಂಬ್ ಎಸೆದಿದ್ದಾರೆ. ಬಾಂಬ್ ಮನೆಯ ಎದುರುಗಡೆ ಸ್ಫೋಟಗೊಂಡಿದೆ. ಅದರ ರಭಸಕ್ಕೆ ಸಮೀಪದಲ್ಲಿರುವ ರಸ್ತೆಯ ತಡೆಗೋಡೆಗೂ ಹಾನಿ ಉಂಟಾಗಿದೆ. ದ್ವಿಚಕ್ರ ವಾಹನದಲ್ಲಿ ತಲುಪಿದ ದುಷ್ಕರ್ಮಿಗಳು ಬಾಂಬ್ ಎಸೆದಿರುವುದಾಗಿಯೂ, ಅವರು ಸಿಪಿಎಂ ಕಾರ್ಯಕರ್ತರಾಗಿ ದ್ದಾರೆಂದು ಇದೇ ಸಂದರ್ಭದಲ್ಲಿ ಬಿಜೆಪಿ ನೇತಾರರು ಆರೋಪಿಸಿದ್ದಾರೆ. …
Read more “ಬಿಜೆಪಿ ಕಚೇರಿಗೆ ಕಟ್ಟಡ ನೀಡಿದ ಮಹಿಳೆಯ ಮನೆಗೆ ಬಾಂಬೆಸೆತ”