ಮರಗಳಿಗೆ ತಾಗಿಕೊಂಡು ವಿದ್ಯುತ್ ತಂತಿಗಳು: ಕುಂಬಳೆ ಪೇಟೆಯಲ್ಲಿ ಅಪಾಯಭೀತಿ

ಕುಂಬಳೆ: ಕುಂಬಳೆ ಪೇಟೆ ಮಧ್ಯದಲ್ಲೇ ಅಪಾಯಕ್ಕೆ ಕಾರಣವಾಗುವ ಮರಗಳು ಹಾಗೂ ವಿದ್ಯುತ್ ತಂತಿಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳ್ಯಾರೂ ಅತ್ತ ಕಣ್ಣುಹಾಯಿಸುತ್ತಿಲ್ಲವೆಂಬ ಆರೋಪ ಕೇಳಿಬರುತ್ತಿದೆ. ಕುಂಬಳೆ ಪೇಟೆಯ ಆಟೋ ಸ್ಟಾಂಡ್‌ನ ಹಿಂಭಾಗದಲ್ಲಿ  ಕಾಲುದಾರಿಯಿದ್ದು, ಅದರ ಪಕ್ಕದಲ್ಲೇ ಎರಡು ಮರಗಳಿವೆ. ಆ ಮರಗಳಿಗೆ ಸ್ಪರ್ಶಿಸಿಕೊಂಡು ಎಚ್‌ಟಿ ವಿದ್ಯುತ್ ಲೈನ್ ಹಾದುಹೋಗಿದೆ. ಶಾಲಾ ವಿದ್ಯಾರ್ಥಿಗಳ ಸಹಿತ ಹಲವಾರು ಮಂದಿ ಈ ದಾರಿಯಲ್ಲಿ  ಪ್ರತಿದಿನ ನಡೆದಾಡುತ್ತಿದ್ದು ಇವರು ಆತಂಕಪಡಬೇಕಾಗಿ ಬರುತ್ತಿದೆ.  ಗಾಳಿ ಬೀಸುವ ವೇಳೆ ಮರದ ರೆಂಬೆಗಳು ವಿದ್ಯುತ್ ತಂತಿಗೆ ಸ್ಪರ್ಶಿಸುತ್ತಿರುವು ದಾಗಿಯೂ ಇದರಿಂದ …

ಸಿ.ಎನ್.ಜಿ ಅನಿಲ ಸಾಗಿಸುವ ವೇಳೆ ಸೋರಿಕೆ: ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆಯಿಂದ ತಪ್ಪಿದ ಅನಾಹುತ

ಕಾಸರಗೋಡು: ಲಾರಿಯಲ್ಲಿ ಸಿಎನ್‌ಜಿ ಅನಿಲ ಸಿಲಿಂಡರ್‌ಗಳನ್ನು ಹೇರಿ ಸಾಗಿಸುತ್ತಿದ್ದ ವೇಳೆ ಆಂತರಿಕ ಒತ್ತಡದಿಂದಾಗಿ ಅದರಲ್ಲಿ ಎರಡು ಸಿಲಿಂಡರ್‌ಗಳ ಫಿಲ್ಲಿಂಗ್ ಪೈಪ್‌ನ ವಾಷರ್ ಸಡಿಲುಗೊಂಡು ಹೊರಕ್ಕೆ ಬಂದು ಅದರಿಂದ ಅನಿಲ ಸೋರಿಕೆ ಉಂಟಾಗಿ ಅಗ್ನಿಶಾಮಕ ದಳದವರು ನಡೆಸಿದ ಸಕಾಲಿಕ ಕಾರ್ಯಾಚರಣೆಯಿಂದ ಸಂಭಾವ್ಯ ಅನಾಹುತ ತಪ್ಪಿಹೋದ ಘಟನೆ ನಡೆದಿದೆ. ಅದಾನಿ ಗ್ರೂಪ್‌ನ ಸಿಎನ್‌ಜಿ ಅನಿಲ ತುಂಬಿಸಲಾದ ಸಿಲಿಂಡರ್‌ಗಳನ್ನು ಲಾರಿಯಲ್ಲಿ ಹೊಸದುರ್ಗ ಮಾವುಂಗಾಲ್‌ನಿಂದ ಕಾಸರಗೋಡಿಗೆ ಸಾಗಿಸುತ್ತಿದ್ದ ದಾರಿ ಮಧ್ಯೆ ತೃಕ್ಕನ್ನಾಡ್ ಶಾಲೆ ಬಳಿ ತಲುಪಿದಾಗ ಅದರಲ್ಲಿ ಎರಡು ಸಿಲಿಂಡರ್‌ಗಳಲ್ಲಿ ಅನಿಲ ಸೋರಿಕೆ …

ಕಾರುಣ್ಯ ಲಾಟರಿ: ಮಧು ಲಾಟರಿ ಏಜೆನ್ಸೀಸ್ ಮಾರಾಟಗೈದ ಟಿಕೆಟ್‌ಗೆ 1 ಕೋಟಿ ರೂ. ಬಹುಮಾನ

ಕಾಸರಗೋಡು: ಕಳೆದ ಶನಿವಾರ ನಡೆದ ಕಾರುಣ್ಯ ಲಾಟರಿ ಡ್ರಾದಲ್ಲಿ ಕಾಸರಗೋಡಿನ ಮಧು ಲಾಟರಿ ಮಾರಾಟಗೈದ ಟಿಕೆಟ್‌ಗೆ ಪ್ರಥಮ ಬಹುಮಾನವಾದ 1 ಕೋಟಿ ರೂಪಾಯಿ ಲಭಿಸಿದೆ. ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯ ಮಧು ಲಾಟರಿ ಏಜೆನ್ಸಿಸ್ ಮಾರಾಟಗೈದ  ಕೆ.ಝಡ್ 445643 ನಂಬ್ರದ ಟಿಕೆಟ್‌ಗೆ ಈ ಬಹುಮಾನ ಲಭಿಸಿದೆ. ಈ ಹಿಂದೆಯೂ ಹಲವು ಮಂದಿ ಮಧು ಲಾಟರಿ ಏಜೆನ್ಸೀಸ್‌ನಿಂದ ಲಾಟರಿ ಟಿಕೆಟ್ ಖರೀದಿಸಿ ಲಕ್ಷಾಧಿಪತಿಗಳಾಗಿದ್ದಾರೆ.

ಬಸ್ ನೌಕರರ ಸಮಸ್ಯೆಗಳಿಗೆ ಪರಿಹಾರ ಕ್ರಮ ಕೈಗೊಳ್ಳಬೇಕು-ಬಿಎಂಎಸ್

ಕಾಸರಗೋಡು: ಕೋವಿಡ್ ಮಹಾಮಾರಿ ಬಳಿಕ ಕಾರ್ಮಿಕ ವಲಯದಲ್ಲಿ ಅತೀ ಹೆಚ್ಚು ಸಂದಿಗ್ಧತೆ ಎದುರಿಸಬೇಕಾಗಿ ಬಂದಿರುವುದು ಬಸ್ ನೌಕರರಾಗಿದ್ದಾರೆ. ಆದ್ದರಿಂದ ಬಸ್ ನೌಕರರು ಎದುರಿಸುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಬೇಕೆಂದು ಕಾಸರಗೋಡು ಬಿಎಂಎಸ್ ಕಚೇರಿಯಲ್ಲಿ ನಡೆದ ಬಸ್ ಆಂಡ್ ಹೆವಿ ವೆಹಿಕಲ್ ಮಜ್ದೂರ್ ಸಂಘದ ವಾರ್ಷಿಕ ಸಮ್ಮೇಳನ ಒತ್ತಾಯಿಸಿದೆ. ಕೋವಿಡ್‌ನ ಬಳಿಕ ಸಾವಿರಾರು ಮಂದಿ ಬಸ್ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಕಾರ್ಮಿಕರು ಕಾರಣವಲ್ಲದಿದ್ದರೂ ಅವರ ವಿರುದ್ಧ ಕೇಸು ದಾಖಲಿಸುವಂತಹ ಘಟನೆಗಳು ನಡೆಯುತಿದೆಯೆಂದು ಸಮ್ಮೇಳನ ತಿಳಿಸಿದೆ. ಪಿಸಿಸಿ ಸರ್ಟಿಫಿಕೇಟ್ ಕಡ್ಡಾಯಗೊಳಿಸಕೂಡದೆಂದು …

ಹಿರಿಯರ ಕನಸುಗಳಿಗೆ ತಣ್ಣೀರೆರಚಿದ ಛಿದ್ರ ಶಕ್ತಿಗಳ ವಿರುದ್ಧ ಕಾಂಗ್ರೆಸ್ ಹೋರಾಟ- ರಮಾನಾಥ ರೈ

ಉಪ್ಪಳ: ವಿದೇಶಿ ಗುಲಾಮಗಿರಿ ಯಿಂದ ದೇಶವನ್ನು ಸ್ವತಂತ್ರಗೊಳಿಸಿದ ತ್ಯಾಗಮಯಿ ಕಾಂಗ್ರೆಸ್ ನಾಯಕರು ಕಂಡ ಶಾಂತ ಸುಂದರ ಭಾರತದ ಕನಸನ್ನು ಭಗ್ನಗೊಳಿಸಿದ ಮತೀಯ ಶಕ್ತಿಗಳ ವಿರುದ್ಧ ನೈಜ ದೇಶಪ್ರೇಮಿಗಳಾದ ಕಾಂಗ್ರೆಸಿಗರು ಸಂಧಿಯಿಲ್ಲದ ಹೋರಾಟ ನಡೆಸುವ ಮೂಲಕ ದೇಶದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಗೊಳಿಸಲು ಶ್ರಮಿಸಬೇಕಿದೆ. ಇದರ ಜೊತೆಗೆ ಮಾದಕ ದ್ರವ್ಯ ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ಧವೂ ಹೋರಾಟ ನಡೆÀಸಬೇಕು ಎಂದು ಕರ್ನಾಟಕದ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷರಾದ ಬಿ.ರಮಾನಾಥ ರೈ ಕರೆ ನೀಡಿದ್ದಾರೆ. ಅವರು ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ …

ದೇಶವನ್ನು ಆಳ್ವಿಕೆ ನಡೆಸುವವರು ಜಾತ್ಯಾತೀತ ಮೌಲ್ಯವನ್ನು ಬುಡಮೇಲುಗೊಳಿಸುತ್ತಿದ್ದಾರೆ- ಎಂ.ವಿ. ಜಯರಾಜನ್

ಉಪ್ಪಳ: ಬಿಜೆಪಿಯ ಆಡಳಿತದ ಮೂಲಕ ದೇಶದಲ್ಲಿ ಜಾತ್ಯತೀತ ಮೌಲ್ಯಗಳು ಇಲ್ಲದಾಗುತ್ತಿದೆ ಎಂದು ಸಿಪಿಎಂ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಎಂ ವಿ ಜಯರಾಜನ್ ಹೇಳಿದರು. ಉಪ್ಪಳದಲ್ಲಿ ಡಿವೈಎಫ್‌ಐ ನಡೆಸಿದ ಸಮರ ಸಂಗಮ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತ ನಾಡಿದರು. ಜಾತ್ಯತೀತದ ಕೇಂದ್ರವಾದ ಕೇರಳವನ್ನು ರಾಜ್ಯಪಾಲರು ವಿಭಜನೆ ಮಾಡಲು ಶ್ರಮಿಸುತ್ತಿದ್ದಾರೆ. ರಾಜೇಂದ್ರ ಅರ್ಲೇಕರ್ ಅವರ ವಿಭಜನ ನೀತಿ ಕೇರಳದಲ್ಲಿ ನಡೆಯಲ್ಲ ಎಂದು ಅವರು ಹೇಳಿದರು. ಅಬೂಬಕ್ಕರ್ ಸಿದ್ದೀಕ್ ಹುತಾತ್ಮ ಮಂದಿರದ ಶಿಲಾನ್ಯಾಸವÀನ್ನು ಎಂ.ವಿ ಜಯರಾಜನ್ ನಿರ್ವಹಿಸಿದರು. ಆಕಾಶ್ …

ಪಚ್ಲಂಪಾರೆಯಲ್ಲಿ ಆಟಿಡ್ ಒಂಜಿ ದಿನ, ಸಾಧಕರಿಗೆ ಸನ್ಮಾನ

ಉಪ್ಪಳ: ಪಚ್ಲಂಪಾರೆ ಬ್ರಹ್ಮಶ್ರೀ ಮೊಗೇರ ಮಹಾಂಕಾಳಿ ದೈವಸ್ಥಾನದ ವತಿಯಿಂದ ಪಚ್ಲಂಪಾರೆಯಲ್ಲಿ ಪಟ್ಟತ ಮೊಗರು ಅರಸು ವೇದಿಕೆ ಯಲ್ಲಿ ಆಟಿಡ್ ಒಂಜಿ ದಿನ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಮತ್ತು ಕ್ರೀಡಾಕೂಟ ನಡೆಯಿತು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದೈವಸ್ಥಾನದ ಗೌರವಾಧ್ಯಕ್ಷ ಬಾಬು. ಯು. ಪಚ್ಲಂಪಾರೆ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆಯನ್ನು ದೈವಸ್ಥಾನದ ಗುರಿಕಾರರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮೋಹನ. ಯು. ಮಂಜೇಶ್ವರ, ಮಹೇಶ್ ಬಂಗ್ಲೆಗುಡ್ಡೆ ಸುಳ್ಯ, ಕರಿಯ ಉಪ್ಪಳ. ಭಾಸ್ಕರ ಬಲ್ಮಠ, ಗುರುವಪ್ಪ ಟೈಲರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ …

ಲಯನ್ಸ್ ಕ್ಲಬ್ ವತಿಯಿಂದ ನೀರೊಳಿಕೆ ಆಶ್ರಮಕ್ಕೆ ಸಹಾಯ ಹಸ್ತಾಂತರ

ಉಪ್ಪಳ: ಲಯನ್ಸ್ ಕ್ಲಬ್ ಮಂಜೇಶ್ವರ ಉಪ್ಪಳ ಇದರ ವತಿಯಿಂದ ವರ್ಕಾಡಿ ನೀರೊಳಿಕೆಯ ಶ್ರೀ ಮಾತಾ ಬಾಲಿಕಾಶ್ರಮಕ್ಕೆ ವಸ್ತು ರೂಪದಲ್ಲಿ ದಿನಸು ಮತ್ತು ಸಹಾಯಧನ ಕೊಡಲಾಯಿತು. ಕ್ಲಬ್ ಅಧ್ಯಕ್ಷ ಲಯನ್ ಕಮಲಾಕ್ಷ ಪಂಜ, ಲಯನ್ ಚರಣ್ ಬಂದ್ಯೋಡ್, ಲಯನ್ ಮಾಧವ. ಕೆ, ಲಯನ್ ಲಕ್ಷ್ಮಣ ಕುಂಬ್ಳೆ, ಲಯನ್ ಅಶೋಕ್ ಉಪ್ಪಳ, ಲಯನ್ ವಿಜಯನ್ ನಾಯರ್ ಶೃಂಗಾರ್, ಲಯನ್ ಪ್ರವೀಣ್ ಪಕ್ಕಳ, ಲಯನ್ ಉದಯ ಶೆಟ್ಟಿ, ಲಯನ್ ತಿಮ್ಮಪ್ಪ ಭಂಡಾರಿ ಉಪಸ್ಥಿತರಿದ್ದರು.

ಮುಳಿಯಾರು ಎಬಿಸಿ ಕೇಂದ್ರಕ್ಕೆ ಕೇಂದ್ರ ತಂಡ ಭೇಟಿ

ಕಾಸರಗೋಡು:  ಬೀದಿ ನಾಯಿ ಗಳನ್ನು  ಸಂತಾನಹರಣ ಶಸ್ತ್ರಚಿಕಿತ್ಸೆಗೊಳಪ ಡಿಸಲು ಮುಳಿಯಾರಿನಲ್ಲಿ ಸ್ಥಾಪಿಸಿದ ಎಬಿಸಿ ಕೇಂದ್ರ ತಂಡ ಇಂದು ಸಂದರ್ಶಿ ಸಲಿದೆ.  ಕೇಂದ್ರದ ಚಟುವಟಿಕೆಗೆ ಅಗತ್ಯದ ಅನುಮತಿ ಲಭಿಸಲು ರಾಷ್ಟ್ರೀಯ ಮೃಗ ಕ್ಷೇಮ ಮಂಡಳಿಯ ಪ್ರತ್ಯೇಕ  ಪರಿಶೀಲನೆಗಾಗಿ  ಕೇಂದ್ರ ತಂಡ ಇಲ್ಲಿಗೆ ಆಗಮಿಸಲಿದೆಯೆಂದು ತಿಳಿದುಬಂದಿದೆ. ಈ ತಂಡದ ಪರಿಶೀಲನೆ ಬಳಿಕ ಅನುಮತಿ ಲಭಿಸಿದರೆ ಮಾತ್ರವೇ  ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಬಹು ದಾಗಿದೆ. ಬೀದಿ ನಾಯಿಗಳ ಉಪಟಳ ತೀವ್ರಗೊಂಡ ಹಿನ್ನೆಲೆಯಲ್ಲಿ ಎಬಿಸಿ ಕೇಂದ್ರದ ಚಟುವಟಿಕೆ ಆರಂಭಿಸಬೇಕೆಂಬ ಬೇಡಿಕೆ  …

ಎಡನೀರು ಮಠದಲ್ಲಿ ರೆಮೋನಾ ಇವೆಟ್ಟ್ ಪೆರೇರಾರಿಗೆ ಅಭಿನಂದನೆ, ಸಾಧನಾ ಪುರಸ್ಕಾರ ಪ್ರದಾನ

ಬದಿಯಡ್ಕ: ಕಲೆ, ಸಂಸ್ಕೃತಿಗಳು ಈ ಮಣ್ಣಿನ ಸತ್ತ÷್ವದ ಸಂಕೇತಗಳು. ಅದನ್ನು ಕರಗತಮಾಡಿಕೊಳ್ಳುವುದು ಜೀವಮಾನ ಸಾಧನೆಯಾಗಿದ್ದು, ಅದರಲ್ಲೂ ವಿಶ್ವ ದಾಖಲೆ ನಿರ್ಮಿಸುವುದು ಅತ್ಯಪೂರ್ವ. ದೇವರ ಅನುಗ್ರಹ, ಸಂಕಲ್ಪ ಶಕ್ತಿಗಳಿಂದ ವ್ಯಕ್ತಿ ಶಕ್ತಿಯಾಗುವುದೇ ಬದುಕಿನ ಸಾರ್ಥಕತೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ನುಡಿದರು.ಶ್ರೀಮಠದಲ್ಲಿ ಶ್ರೀಗಳ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ನಡೆಯುತ್ತಿರುವ ಸಾಂ ಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯದಲ್ಲಿ ಸಾಧನೆಗೈದ ಮಂಗಳೂರಿನ ರೆಮೋನಾ ಇವೆಟ್ಟ್ ಪೆರೇರಾ ಅವರನ್ನು ಅಭಿನಂದಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.ಮುಖ್ಯ ಅತಿಥಿಗಳಾಗಿ …