ಬಿಜೆಪಿಯಿಂದ ಧರಣಿ ಮುಷ್ಕರ: ರಾಜ್ಯದಲ್ಲಿ ಅತೀ ಹೆಚ್ಚು ವಿಜಿಲೆನ್ಸ್ ತನಿಖೆ ಎದುರಿಸುತ್ತಿರುವುದು ಕಾಸರಗೋಡು ನಗರಸಭೆ-ವಿ.ಕೆ. ಸಜೀವನ್
ಕಾಸರಗೋಡು: ಬಿಜೆಪಿಯ ಕಾಸರ ಗೋಡು ನಗರ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಮುನಿಸಿಪಾಲಿಟಿ ಟೌನ್ ಹಾಲ್ ಪರಿಸರದಲ್ಲಿ ನಿನ್ನೆ ಧರಣಿ ಮುಷ್ಕರ ಹೂಡಲಾಯಿತು. ಬಿಜೆಪಿ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ.ಕೆ. ಸಜೀವನ್ ಉದ್ಘಾಟಿಸಿದರು. ಕೇರಳದಲ್ಲಿ ಅತೀ ಹೆಚ್ಚು ವಿಜಿಲೆನ್ಸ್ ತನಿಖೆ ಎದುರಿಸುತ್ತಿರುವುದು ಕಾಸರಗೋಡು ನಗರಸಭೆಯಾಗಿದೆ. ಅಲ್ಲಿ ಭ್ರಷ್ಟಾಚಾರ ಮತ್ತು ಭಾರೀ ಅವ್ಯವಹಾರಗಳೂ ನಡೆಯುತ್ತಿವೆ. ವಿವಿಧ ಯೋಜನೆಗಳಿಗೆ ಸಂಬಂಧಿಸಿ ನಗರಸಭೆಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು ಆ ಬಗ್ಗೆ ಹಲವು ರೀತಿಯ ತನಿಖೆಗಳನ್ನು ನಗರಸಭೆ ಎದುರಿಸುತ್ತಿದೆ. ಕಾಸರಗೋಡು ಜನರಲ್ ಆಸ್ಪತ್ರೆ ಎದುರಿಸುತ್ತಿರುವ …