1ರಿಂದ 10ನೇ ತರಗತಿ ತನಕ ಮಲಯಾಳ ಕಲಿಕೆ ಕಡ್ಡಾಯ ವಿಧೇಯಕಕ್ಕೆ ವಿಧಾನಸಭೆ ಅನುಮೋದನೆ: ಕನ್ನಡ ಭಾಷಾ ಅಲ್ಪಸಂಖ್ಯಾತರಲ್ಲಿ ಕಳವಳ
ತಿರುವನಂತಪುರ: ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆರಂಭ ಗೊಂಡು ಹತ್ತನೇ ತರಗತಿ ತನಕ ಮಲಯಾಳಂ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸುವ ವಿಧೇಯಕಕ್ಕೆ ರಾಜ್ಯ ವಿಧಾನಸಭೆ ಅನುಮೋದನೆ ನೀಡಿದೆ. ಹೊರ ರಾಜ್ಯಗಳಲ್ಲಿ ಕಲಿತು ಬಳಿಕ ಕೇರಳದಲ್ಲಿ ೯ ಮತ್ತು ೧೦ನೇ ತರಗತಿಗೆ ಸೇರುವ ವಿದ್ಯಾರ್ಥಿಗಳಿಗೆ ಈ ಮಸೂದೆಯಲ್ಲಿ ಮಲಯಾಳಂ ಭಾಷಾ ಕಲಿಕೆ ಕಡ್ಡಾಯಗೊಳಿಸಲಾಗಿಲ್ಲ. ಇಂತಹ ವಿದ್ಯಾರ್ಥಿಗಳು ಇಚ್ಛಿಸಿದಲ್ಲಿ ಅವರು ಮಲಯಾಳಂ ಭಾಷೆ ಆಯ್ಕೆ ಮಾಡಬಹುದೆಂದು ಈ ವಿಧಯಕದಲ್ಲಿ ತಿಳಿಸಲಾಗಿದೆ. ಇದೇ ಸಂದರ್ಭದಲ್ಲಿ ಕಾಸg ಗೋಡು ಜಿಲ್ಲೆಯ …