ಮನೆಯಿಂದ ಹಣ, ಚಿನ್ನಾಭರಣ ಸಹಿತ ತೆರಳಿದ ಯುವತಿ ಕೊಲೆಗೀಡಾದ ಪ್ರಕರಣ: ಪ್ರೇತಬಾಧೆ ಹೋಗಲಾಡಿಸುವುದಾಗಿ ತಿಳಿಸಿ 30 ಪವನ್ ಚಿನ್ನ ಲಪಟಾಯಿಸಿದ ಮಂತ್ರವಾದಿ ಬಂಧನ
ಕಣ್ಣೂರು: ಇರಿಕ್ಕೂರು ಕಲ್ಯಾಟ್ ಎಂಬಲ್ಲಿರುವ ಪತಿ ಮನೆಯಿಂದ ಕರ್ನಾ ಟಕದ ಹುಣಸೂರು ನಿವಾಸಿಯಾದ ದರ್ಶಿತ ಎಂಬಾಕೆ ಕಳವು ನಡೆಸಿದ 30 ಪವನ್ ಚಿನ್ನಾಭರಣಗಳನ್ನು ಲಪಟಾ ಯಿಸಿರುವುದು ಮಂತ್ರವಾದಿಯಾಗಿದ್ದಾನೆಂದು ಸಾಬೀತುಗೊಂಡಿದೆ. ಈ ಹಿನ್ನೆಲೆಯಲ್ಲಿ ಮಂತ್ರವಾದಿಯಾದ ಹಾಸನ ತಟ್ಟೇಕರ ಸಿಂಗಪಟ್ಟಣದ ಮಂಜುನಾಥ (39) ಎಂಬಾತನನ್ನು ಇರಿಕ್ಕೂರು ಪೊಲೀಸರು ಬಂಧಿಸಿದ್ದಾರೆ. ಪ್ರೇತಬಾಧೆ ಹೋಗಲಾಡಿಸುವುದಾಗಿ ತಿಳಿಸಿ ದರ್ಶಿತಳ ಕೈಯಿಂದ 2ಲಕ್ಷ ರೂ. ಹಾಗೂ 30 ಪವನ್ ಚಿನ್ನಾಭರಣಗ ಳನ್ನು ಮಂತ್ರವಾದಿ ಪಡೆದುಕೊಂಡಿರು ವುದಾಗಿ ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 22ರಂದು ಇರಿಕ್ಕೂರು ಕಲ್ಯಾಟ್‌ನ ಸುಭಾಷ್‌ರ …